ಬಂಟ್ವಾಳ: ಗ್ರಾಹಕರ ಸಂಖ್ಯೆ ಹೆಚ್ಚಳ


Team Udayavani, Mar 28, 2020, 5:01 AM IST

ಬಂಟ್ವಾಳ: ಗ್ರಾಹಕರ ಸಂಖ್ಯೆ ಹೆಚ್ಚಳ

ಬಂಟ್ವಾಳ: ಕೋವಿಡ್‌ 19 ವೈರಸ್‌ ಆತಂಕದಿಂದ ಎಲ್ಲೆಡೆ ಲಾಕ್‌ಡೌನ್‌ ಘೋಷಿಸಲಾಗಿದ್ದು, ಬಂಟ್ವಾಳ ತಾಲೂಕಿನ ಬಂದ್‌ನ ಸ್ಥಿತಿ ಮುಂದುವರಿದಿದೆ. ಶುಕ್ರವಾರ ಬೆಳಗ್ಗಿನ ಹೊತ್ತು ಎಂದಿಗಿಂತ ಕೊಂಚ ಹೆಚ್ಚಿನ ಮಂದಿ ಅಗತ್ಯ ವಸ್ತುಗಳನ್ನು ಖರೀದಿಸಿ ತೆರಳಿದ್ದಾರೆ.

ಪೇಟೆ, ಗ್ರಾಮೀಣ ಭಾಗಗಳಲ್ಲೂ ಬೆಳಗ್ಗಿನ ಹೊತ್ತು ಕೊಂಚ ಚಟುವಟಿಕೆ ಕಂಡು ಬಂದರೂ ಮಧ್ಯಾಹ್ನ 12ರ ಬಳಿಕ ಸಂಪೂರ್ಣ ಸ್ತಬ್ಧವಾಗಿತ್ತು. ಬಳಿಕ ಪೊಲೀಸರು ರೌಂಡ್ಸ್‌ ಹೊಡೆದು ಜನರನ್ನು ಎಚ್ಚರಿಸುವ ಕಾರ್ಯ ನಡೆಸಿದರು.

ಮೆಡಿಕಲ್‌ ಮಳಿಗೆಗಳು ಸಂಜೆವರೆಗೂ ತೆರೆದಿದ್ದರೆ, ಕೆಲವು ಪೆಟ್ರೋಲ್‌ ಬಂಕ್‌ ಮಧ್ಯಾಹ್ನವೇ ಬಂದ್‌ ಆದರೆ ಇನ್ನು ಕೆಲವು ಸಂಜೆವರೆಗೂ ಕಾರ್ಯಚರಿಸಿದ್ದವು. ಬಹು ತೇಕ ಹೊಟೇಲ್‌ಗ‌ಳು ಬಂದ್‌ ಆಗಿದ್ದರೆ, ಒಂದೆರಡು ಮಧ್ಯಾಹ್ನ 12ರ ತನಕ ಪಾರ್ಸೆಲ್‌ ಆಹಾರ ನೀಡಿತ್ತು.

ತಾಲೂಕಿನ ಬಿ.ಸಿ.ರೋಡು, ಬಂಟ್ವಾಳ ಪೇಟೆ, ವಿಟ್ಲ, ಫರಂಗಿಪೇಟೆ ಪೇಟೆ, ಮೆಲ್ಕಾರ್‌, ಕಲ್ಲಡ್ಕ, ಮಾಣಿ, ಸಿದ್ಧಕಟ್ಟೆ, ವಾಮದಪದವು, ಪುಂಜಾಲಕಟ್ಟೆ ಮೊದಲಾದ ಪ್ರದೇಶಗಳು ಸಹಿತ ಗ್ರಾಮೀಣ ಭಾಗಗಳಲ್ಲೂ ಜನತೆ ಆಹಾರ ವಸ್ತುಗಳ ಖರೀದಿ ನಡೆಸಿದರು. ಗ್ರಾಮೀಣ ಭಾಗದಲ್ಲಿ ಅಕ್ಕಿ ಸಹಿತ ದಿನಸಿ ಸಾಮಗ್ರಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಜನತೆ ಅನಿವಾರ್ಯವಾಗಿ ಪೇಟೆ ಕಡೆಗೆ ಹೆಜ್ಜೆ ಹಾಕಿದ್ದರು.

ಪೊಲೀಸ್‌ ಇಲಾಖೆಯ ಜತೆ ಕಂದಾಯ, ಆರೋಗ್ಯ ಇಲಾಖೆ, ಪುರಸಭೆ ಸಹಿತ ಇತರ ಇಲಾಖೆಗಳ ಅಧಿಕಾರಿ, ಸಿಬಂದಿ ಅಹಿತಕರ ಘಟನೆಗಳು, ಜನತೆ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ವಹಿಸುತ್ತಿದ್ದರು.

ಬಂಟ್ವಾಳ ಶಾಸಕರ ಕಚೇರಿಯಲ್ಲಿ ತುರ್ತು ಸ್ಪಂದನ ತಂಡ ಕಾರ್ಯ ಮುಂದುವರಿಸಿದ್ದು, ಕೆಲಸಕ್ಕೆಂದು ಬಂದು ಕಲ್ಲಡ್ಕದಲ್ಲಿ ಬಾಕಿಯಾಗಿದ್ದ ಕುಟುಂಬ ವೊಂದಕ್ಕೆ ಈ ತಂಡದ ಮೂಲಕ ತಹಶೀಲ್ದಾರ್‌ ನೇತೃತ್ವದಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು. ಕಲ್ಲಡ್ಕದಲ್ಲಿ ಟೈಲರ್‌ ಧೀರಜ್‌ ನೇತೃತ್ವದ ಯುವಕರ ತಂಡ ಮಾಸ್ಕ್ ಹೊಲಿದು ವಿತರಿಸುವ ಕಾರ್ಯ ನಡೆಸಿತು.

ಆಶಾ ಕಾರ್ಯಕರ್ತೆಯರ ಮನೆ ಭೇಟಿ ಮುಂದುವರಿದಿದ್ದು, ವಿದೇಶದಿಂದ ಬಂದು ಗೃಹ ಬಂಧನದಲ್ಲಿದ್ದವರ ಕುರಿತು ಪೊಲೀಸ್‌, ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿತ್ತು.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Thumbe: ಅಗೆದಲ್ಲಿ ಕಡೆಗೂ ಡಾಮರು

Thumbe: ಅಗೆದಲ್ಲಿ ಕಡೆಗೂ ಡಾಮರು

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.