ಅಂತೂ ಬಯಲಾಗುತ್ತಿವೆ ಚೀನದ ಪ್ರಮಾದಗಳು

ಮೊದಲೇ ಎಚ್ಚರಿಸಿದ್ದರೆ ಜಗತ್ತು ಸಂಕಷ್ಟದಿಂದ ಪಾರು

Team Udayavani, Apr 16, 2020, 3:54 PM IST

ಅಂತೂ ಬಯಲಾಗುತ್ತಿವೆ ಚೀನದ ಪ್ರಮಾದಗಳು

ವುಹಾನ್‌: ಕೋವಿಡ್‌ ವಿರುದ್ಧ ಹೋರಾಡಲು ಹೊರಗಿನಿಂದ ಬಂದ ಆರೋಗ್ಯ ಕಾರ್ಯಕರ್ತರನ್ನು ಭಾವಪೂರ್ಣವಾಗಿ ಬೀಳ್ಕೊಡಲಾಯಿತು.

ಬೀಜಿಂಗ್‌: ಕೋವಿಡ್‌-19 ಕುರಿತಾದ ಮಾಹಿತಿಯನ್ನು ಸಾಕಷ್ಟು ಮುಂಚಿತವಾಗಿ ನೀಡಿದ್ದೇವೆ ಎಂದು ಚೀನ ಎಷ್ಟೇ ಹೇಳಿದರೂ ಆರಂಭದ ದಿನಗಳಲ್ಲಿ ಅದು ಮಾಡಿದ ಪ್ರಮಾದಗಳು ಈಗ ಒಂದೊಂದಾಗಿ ಬಯಲಾಗುತ್ತಿವೆ.

ಕೋವಿಡ್‌-19 ಜಾಗತಿಕ ಪಿಡುಗು ಆಗುವ ವಿಚಾರವನ್ನು ಚೀನ ಆರು ದಿನ ಸಾರ್ವಜನಿಕರಿಂದ ರಹಸ್ಯವಾಗಿಟ್ಟಿತ್ತು. ವೈರಸ್‌ ಹರಡುವಲ್ಲಿ ಈ ಆರು ದಿನಗಳೇ ನಿರ್ಣಾಯಕ ವಾಗಿದ್ದವು. ಒಂದು ವೇಳೆ ಚೀನ ಸರಕಾರ ಮೊದಲೇ ಎಚ್ಚರಿಸಿದ್ದರೆ ಜಗತ್ತು ಇಷ್ಟು ಸಂಕಷ್ಟಗಳನ್ನು ಎದುರಿಸುವ ಪ್ರಮೇಯ ಬರುತ್ತಿರಲಿಲ್ಲ ಎಂದು ದ ಅಸೋಸಿಯೇಟೆಡ್‌ ಪ್ರಸ್‌ ವರದಿ ಮಾಡಿದೆ.

ಚೀನದ ಉನ್ನತ ಅಧಿಕಾರಿಗಳಿಗೆ ಕೋವಿಡ್‌ ಜಾಗತಿಕ ಪಿಡುಗು ಆಗುವ ಸುಳಿವು ಸಿಕ್ಕಿತ್ತು. ಆದರೆ ಚೀನ ಸರಕಾರ ವಿಶ್ವಸಂಸ್ಥೆಗೆ ಈ ವಿಚಾರವನ್ನು ತಿಳಿಸದಂತೆ ಅವರನ್ನು ನಿರ್ಬಂಧಿಸಿತ್ತು. ಕೋವಿಡ್‌-19 ಹರಡುತ್ತಿರುವ ವಿಚಾರ ಗೊತ್ತಿದ್ದೂ ವುಹಾನ್‌ನಲ್ಲಿ ದೊಡ್ಡ ಮಟ್ಟದ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಚೀನಿ ಹೊಸ ವರ್ಷಾಚರಣೆಗಾಗಿ ಜಗತ್ತಿನ ವಿವಿಧೆಡೆಗಳಿಂದ ಜನರು ಬರಲಾರಂಭಿಸಿದ್ದರು.

ಏಳನೇ ದಿನ ಅಂದರೆ ಜ. 20ರಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೋವಿಡ್‌-19 ವಿರುದ್ಧ ಎಚ್ಚರಿಕೆ ಜಾರಿಗೊಳಿಸಿದರು. ಆದರೆ ಅಷ್ಟರಲ್ಲಿ ಬಹಳ ತಡವಾಗಿತ್ತು. ಒಂದು ವೇಳೆ ಈ ಕೆಲಸವನ್ನು ಮೊದಲೇ ಮಾಡಿದ್ದರೆ ಕೋವಿಡ್‌ ವುಹಾನ್‌ಗಷ್ಟೇ ಸೀಮಿತವಾಗುತ್ತಿತ್ತು.

ಜಿನ್‌ಪಿಂಗ್‌ ಎಚ್ಚರಿಕೆ ಜಾರಿಗೊಳಿಸುವಷ್ಟರಲ್ಲಿ 3000ಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗಿದ್ದರು. ಜ.14ರಿಂದ 20 ತನಕ ಚೀನ ಕೋವಿಡ್‌ ಮಾಹಿತಿಯನ್ನು ರಹಸ್ಯವಾಗಿಟ್ಟದ್ದು ಮಹಾ ಪ್ರಮಾದವೇ ಆಗಿತ್ತು. ಹೀಗಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಕೋವಿಡ್‌ ಪಿಡುಗಿಗೆ ಚೀನವನ್ನು ದೂಷಿಸುತ್ತಿರುವುದರಲ್ಲಿ ತಥ್ಯವಿದೆ ಎಂದು ವರದಿ ಹೇಳಿದೆ.

ಚೀನ ಸಾಕಷ್ಟು ಮುಂಚಿತವಾಗಿ ವೈರಸ್‌ ಪ್ರಸರಣವನ್ನು ತಡೆಯಲು ಕ್ರಮ ಕೈಗೊಂಡಿದ್ದರೆ ಇರುವ ವೈದ್ಯಕೀಯ ಸೌಲಭ್ಯವೇ ಸಾಕಾಗುತ್ತಿತ್ತು. ವುಹಾನ್‌ನ ವೈದ್ಯಕೀಯ ಸೌಲಭ್ಯಗಳಿಂದಲೇ ಪರಿಸ್ಥಿತಿಯನ್ನು ನಿಯಂತ್ರಿಸಬಹುದಿತ್ತು ಎನ್ನುತ್ತಾರೆ ಕ್ಯಾಲಿಫೋರ್ನಿಯ ವಿವಿಯ ವೈರಾಣು ತಜ್ಞ ಝುವೊ ಫೆಂಗ್‌ ಝಂಗ್‌.

ಜನರು ಗಾಬರಿಯಾಗುವುದನ್ನು ತಡೆಯಲು ಚೀನ ಸರಕಾರ ಮಾಹಿತಿ ಬಹಿರಂಗಪಡಿಸಲು ತಡ ಮಾಡಿರಬಹುದು. ಆದರೆ ಇದಕ್ಕಾಗಿ ಇಡೀ ಜಗತ್ತು ಬೆಲೆ ತೆರಬೇಕಾಗಿ ಬಂದಿದೆ. ಜ.5ರಿಂದ 17ರ ನಡುವೆ ವುಹಾನ್‌ ಮಾತ್ರವಲ್ಲದೆ ಚೀನದ ಇತರೆಡೆಗಳಲ್ಲೂ ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗಿದ್ದರು. ಆದರೆ ಚೀನ ಸರಕಾರ ಸಾಮಾನ್ಯವಾದ ವೈರಲ್‌ ಜ್ವರವೆಂದೇ ಭಾವಿಸಿತ್ತು.

ಮಾಧ್ಯಮಗಳ ಮೇಲಿನ ಉಡದ ಹಿಡಿತ, ಮಾಹಿತಿ ಹಂಚುವಿಕೆಗೆ ಇರುವ ನಿರ್ಬಂಧಗಳು, ಅಧಿಕಾರಶಾಹಿಯ ಅಡಚಣೆಗಳು, ಕೆಟ್ಟ ಸುದ್ದಿಯನ್ನು ಹಂಚಲು ಇರುವ ಅಂಜಿಕೆ ಇತ್ಯಾದಿ ಕಾರಣಗಳಿಂದ ಚೀನ ಮೊದಲೇ ಎಚ್ಚರಿಕೆ ನೀಡಲು ವಿಫ‌ಲವಾಗಿರುವ ಸಾಧ್ಯತೆಗಳಿವೆ. “ಕೋವಿಡ್‌ ವದಂತಿ’ಗಳನ್ನು ಹರಡಿದ್ದಕ್ಕೆ 9 ವೈದ್ಯರನ್ನು ಜೈಲಿಗಟ್ಟಿದ ಸುದ್ದಿ ಜ.2ರಂದು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾದ ಬಳಿಕವಂತೂ ವೈದ್ಯಕೀಯ ಸಮುದಾಯ ಭೀತಿಯಿಂದ ನಡುಗಿತು.

ಜ.13ರಂದು ಚೀನದ ಹೊರಗಿನ ಮೊದಲ ಪ್ರಕರಣ ಥಾಯ್ಲೆಂಡ್‌ನಿಂದ ವರದಿಯಾಯಿತು. ಆ ಬಳಿಕವೇ ಚೀನ ಸರಕಾರಕ್ಕೆ ಪರಿಸ್ಥಿತಿ ಕೈ ಮೀರಿದೆ ಎಂದು ಅರಿವಾದದ್ದು. ಅನಂತರವೇ ಚೀನ ದೇಶಾದ್ಯಂತ ಟೆಸ್ಟ್‌ ಕಿಟ್‌ಗಳನ್ನು ವಿತರಿಸಲು ತೊಡಗಿದ್ದಲ್ಲದೇ, ಆರೋಗ್ಯಾಧಿಕಾರಿಗಳಿಗೆ ಶಂಕಿತರನ್ನು ಪರೀಕ್ಷಿಸಲು ಆದೇಶಿಸಿತು. ವೈರಸ್‌ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕ್ಸಿ ಜಿನ್‌ಪಿಂಗ್‌ ಬಹಿರಂಗ ಹೇಳಿಕೆ ನೀಡಿದ್ದೇ ಜ.20ರಂದು. ಒಂದು ವೇಳೆ ಒಂದು ವಾರದ ಮೊದಲೇ ಜನರಿಗೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು, ಪ್ರಯಾಣ ನಿರ್ಬಂಧ ಇತ್ಯಾದಿ ಮುನ್ನೆಚ್ಚರಿಕೆಗಳನ್ನು ನೀಡಿದ್ದರೆ ಚೀನವೂ ಕೋವಿಡ್‌ನ‌ ದೊಡ್ಡ ಹೊಡೆತದಿಂದ ಪಾರಾಗುತ್ತಿತ್ತು.

ಟಾಪ್ ನ್ಯೂಸ್

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqweeweqwe

LGBT ಅವಹೇಳನ: ಪೋಪ್‌ ಫ್ರ್ಯಾನ್ಸಿಸ್‌ ಕ್ಷಮಾಪಣೆ

17

Road Mishap: ಅಮೆರಿಕದಲ್ಲಿ ರಸ್ತೆ ಅಪಘಾತ; ತೆಲಂಗಾಣ ಮೂಲದ ಯುವತಿ ಸ್ಥಳದಲ್ಲೇ ಸಾವು

1—-qewqewe

Papua New Guinea ಭೂಕುಸಿತ: ಮೃತರ ಸಂಖ್ಯೆ 2,000ಕ್ಕೇರಿಕೆ

1-eewewqeq

Eye; ಪದೇ ಪದೆ ಕಣ್ಣುಜ್ಜುತ್ತಿದ್ದ ಮಲೇಷ್ಯಾ ವ್ಯಕ್ತಿಗೆ ಕಾರ್ನಿಯಾ ಕಸಿ

xi-jin-ping

Chat Xi PT: ಚೀನಕ್ಕೆ ಪ್ರತ್ಯೇಕ ಚಾಟ್‌ ಜಿಪಿಟಿ ಕೃತಕ ಬುದ್ಧಿಮತ್ತೆ ಟೂಲ್‌

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

1-wqeqewewqewqe

TMCಯ ಶಹಜಹಾನ್‌ ವಿರುದ್ಧ ಕೊಲೆ ಯತ್ನ ಕೇಸು

1-wqeqewqe

Congo;ಭಾರತದ ಮೇಜರ್‌ ರಾಧಿಕಾಗೆ ವಿಶ್ವಸಂಸ್ಥೆಯ ಉನ್ನತ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.