ಯುವಕನ ನಗ್ನ ವಿಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದಳು ಯುವತಿ!
Team Udayavani, Jul 19, 2020, 4:51 PM IST
ಬೆಂಗಳೂರು: ಯುವತಿಯೊಬ್ಬಳು ಸ್ನೇಹಿತನಿಗೆ ಕರೆ ಮಾಡಿ ಬೆತ್ತಲೆ ನೋಡಬೇಕೆಂದು ಹೇಳಿ ವಿಡಿಯೋ ಕಾಲ್ ಮಾಡಿಸಿಕೊಂಡು, ಅನಂತರ ಅದೇ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ 22 ಸಾವಿರ ರೂ.ಮೋಸ ಮಾಡಿದ್ದಾಳೆ ಎಂದು ಆರೋಪಿಸಿ ಯುವಕ ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ವೈಟ್ ಫೀಲ್ಡ್ ನ ದೊಡ್ಡನೆಕ್ಕುಂದಿ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಯುವಕ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಏಕಾಂತವಾಗಿರುವಾಗ ಮಹಿಳೆ ಜತೆ ಕಾಲ ಕಳೆಯಲು ಓಕೆ ಕೂಪಿಡ್ ಆ್ಯಪ್ ನಲ್ಲಿ ಹುಡುಕಾಡಿದ್ದ. ಆ್ಯಪ್ ಮೂಲಕ ಯುವತಿಯನ್ನು ಸಂಪರ್ಕಿಸಿದ್ದ. ಕಾಲ ಕ್ರಮೇಣ ಇಬ್ಬರು ಪರಸ್ಪರ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು.
2-3 ದಿನಗಳವರೆಗೆ ವಾಟ್ಸ್ ಆ್ಯಪ್ ನಲ್ಲಿ ಚಾಟಿಂಗ್ ಮಾಡಿದ್ದಾರೆ. ಈ ವೇಳೆ ಯುವಕ ತನ್ನ ಭಾವನೆಯನ್ನು ಮಹಿಳೆಯ ಮುಂದೆ ಹೇಳಿಕೊಂಡಿದ್ದ. ಬಳಿಕ ಆಕೆಯ ಜತೆ ವಾಟ್ಸ್ ಆ್ಯಪ್ ನಲ್ಲಿ ನಗ್ನವಾಗಿ ವಿಡಿಯೋ ಸಂಭಾಷಣೆ ನಡೆಸಿದ್ದ. ಅದೇ ವೇಳೆ ಆಕೆ, ಯುವಕನ ಅರಿವಿಗೆ ಬಾರದಂತೆ ವಿಡಿಯೋ ಸಂಭಾಷಣೆಯ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ರೆಕಾರ್ಡ್ ಮಾಡಿಕೊಂಡಿರುವ ಖಾಸಗಿ ದೃಶ್ಯಗಳನ್ನು ಯುಟ್ಯೂಬ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲಾಕ್ಮೇಲ್ ಮಾಡಿದ್ದಾಳೆ.
ಮಾನಕ್ಕೆ ಹೆದರಿದ ಯುವಕ 22 ಸಾವಿರ ರೂ. ಅನ್ನು ಆಕೆ ಖಾತೆಗೆ ಸಂದಾಯ ಮಾಡಿದ್ದಾನೆ. ಅನಂತರವೂ ಆಕೆ ಹಣಕ್ಕೆ ಬೇಡಿಕೆ ಇಟ್ಟಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್ಒ ಸೇರಿ ಐವರಿಗೆ ನೋಟಿಸ್
ಅಧಿಕಾರಿ ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸಿ: ಯತ್ನಾಳ್
BJP workers: ಸಿಎಂ ಮನೆಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ ಯತ್ನ
Hasana: ಪೈನ್ಡ್ರೈವ್ ಹಂಚಿಕೆ; ಚೇತನ್, ಲಿಖಿತ್ ಗೌಡಗೆ ಜಾಮೀನು
Channagiri ಠಾಣೆ ಧ್ವಂಸ, ಆದಿಲ್ ಸಾವಿನ ಪ್ರಕರಣಗಳ ಹೆಚ್ಚಿನ ತನಿಖೆ: ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Mangaluru ನಮಾಜ್ ಪ್ರಕರಣ: ಬಿ ರಿಪೋರ್ಟ್ ಸಲ್ಲಿಕೆ; ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ
TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್
Norway Chess tournamen: ನಂ. ವನ್ ಕಾರ್ಲ್ಸನ್ ಕೆಡಹಿದ ಪ್ರಜ್ಞಾನಂದ
Boxing World Qualifiers: ಸಚಿನ್, ಅಮಿತ್ ಮುನ್ನಡೆ
French Open ಗ್ರ್ಯಾನ್ ಸ್ಲಾಮ್: ಸ್ವಿಯಾಟೆಕ್ಗೆ ಸ್ಮರಣೀಯ ಗೆಲುವು