Udayavni Special

ಭಾರತದ ಸಾಮರ್ಥ್ಯ ನಿರೂಪಿಸಿದ ಭೇಟಿ

Team Udayavani, Feb 27, 2020, 5:53 AM IST

majji-36

ಜಗತ್ತಿಗೆ ಕಂಟಕವಾಗಿ ಪರಿಣಮಿಸಿರುವುದು ಇಸ್ಲಾಮಿಕ್‌ ಭಯೋತ್ಪಾದನೆ ಎಂಬುದನ್ನು ಘಂಟಾಘೋಷವಾಗಿ ಸಾರಿದ ಟ್ರಂಪ್‌ ಇದೇ ವೇಳೆ ಭಯೋತ್ಪಾದನೆಯ ತವರು ದೇಶವಾದ ಪಾಕಿಸ್ಥಾನ ಭಯೋತ್ಪಾದನೆ ನಿಗ್ರಹಕ್ಕೆ ಪ್ರಯತ್ನಿಸುತ್ತಿದೆ ಎಂದು ಹೇಳುವ ಮೂಲಕ ಆ ದೇಶದ ಬಗ್ಗೆ ತಮಗಿರುವ ಮೃದು ಧೋರಣೆಯನ್ನು ತೋರಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ಪರಿವಾರಕ್ಕೆ ಭಾರತ ಬಹುಕಾಲ ನೆನಪಿಟ್ಟುಕೊಳ್ಳುವಂಥ ಆತಿಥ್ಯವನ್ನು ನೀಡಿದೆ. ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಟ್ರಂಪ್‌ ಭೇಟಿ ಫ‌ಲಪ್ರದವಾಗಿ ಮುಕ್ತಾಯಗೊಂಡಿದೆ. ಎಲ್ಲ ನಿರೀಕ್ಷೆಗಳು ಈಡೇರದಿದ್ದರೂ ಈ ಒಂದು ಭೇಟಿಯಿಂದಾಗಿ ಜಗತ್ತಿನ ಎರಡು ಬೃಹತ್‌ ಪ್ರಜಾತಂತ್ರ ದೇಶಗಳ ನಡುವಿನ ಸಂಬಂಧ ಇನ್ನಷ್ಟು ನಿಕಟವಾಗಿರುವುದು ಸತ್ಯ. ರೋಡ್‌ ಶೋ ಇರಬಹುದು, ಸಬರಮತಿ ಭೇಟಿ ಇರಬಹುದು, ಮೋಟೆರಾದ ನಮಸ್ತೆ ಟ್ರಂಪ್‌ ಕಾರ್ಯಕ್ರಮ ಇರಬಹುದು ಅಥವಾ ತಾಜ್‌ಮಹಲ್‌ ಪ್ರವಾಸ ಇರಬಹುದು. ಈ ಎಲ್ಲ ಸನ್ನಿವೇಶಗಳಲ್ಲಿ ಟ್ರಂಪ್‌ ಭಾರತೀಯರು ಮತ್ತು ಭಾರತೀಯತೆಗೆ ನೀಡಿರುವ ಪ್ರಾಧಾನ್ಯ ಗಮನಾರ್ಹ ಅಂಶವಾಗಿತ್ತು.

ಕೆಲವೊಂದು ವಿಚಾರಗಳಲ್ಲಿ ಉಭಯ ದೇಶಗಳ ನಡುವೆ ಭಿನ್ನಮತವಿರುವುದು ನಿಜ. ಮುಖ್ಯವಾಗಿ ವಾಣಿಜ್ಯ ಸುಂಕ ಮತ್ತು ಎಚ್‌-1ಬಿ ವಿಸಾಕ್ಕೆ ಸಂಬಂಧಿಸಿದಂತೆ ಕೆಲ ಸಮಯದಿಂದ ಶೀತಲವಾದ ತಿಕ್ಕಾಟ ನಡೆಯುತ್ತಿದೆ. ಆದರೆ ಈ ಯಾವ ಅಂಶಗಳು ಭೇಟಿಯ ಮೇಲೆ ನಕರಾತ್ಮಕವಾದ ಪರಿಣಾಮವನ್ನು ಬೀರದಂತೆ ಉಭಯ ನಾಯಕರು ನೋಡಿಕೊಂಡಿದ್ದಾರೆ.

ಮೊಟೆರೊದಲ್ಲಿ ಟ್ರಂಪ್‌ ಮಾಡಿದ ಭಾಷಣದ ಬಹುಭಾಗ ಭಾರತ ಮತ್ತು ಮೋದಿ ಪ್ರಶಂಸೆಗೆ ಮೀಸಲಾಗಿದ್ದರೂ ಅದರ ನಡುವೆಯೇ ಭಯೋತ್ಪಾದನೆ, ಚೀನ , ಪಾಕಿಸ್ಥಾನ ಮತ್ತಿತರ ವಿಚಾರಗಳನ್ನೂ ಪ್ರಸ್ತಾವಿಸಿದ್ದಾರೆ. ಕೆಲವು ದೇಶಗಳು “ಬಲವಂತವಾಗಿ ಮತ್ತು ಸಂಘರ್ಷದಿಂದ’ ಯಶಸ್ಸನ್ನು ಗಳಿಸಲು ಶ್ರಮಿಸುತ್ತಿವೆ ಎಂದಿರುವ ಟ್ರಂಪ್‌ ಮಾತುಗಳು ಪರೋಕ್ಷವಾಗಿ ಬದ್ಧ ಎದುರಾಳಿ ಚೀನಕ್ಕೆ ನೀಡಿದ ಟಾಂಗ್‌ ಆಗಿತ್ತು. ಜಗತ್ತಿಗೆ ಕಂಟಕವಾಗಿ ಪರಿಣಮಿಸಿರುವುದು ಇಸ್ಲಾಮಿಕ್‌ ಭಯೋತ್ಪಾದನೆ ಎಂಬುದನ್ನು ಘಂಟಾಘೋಷವಾಗಿ ಸಾರಿದ ಟ್ರಂಪ್‌ ಇದೇ ವೇಳೆ ಭಯೋತ್ಪಾದನೆಯ ತವರು ದೇಶವಾದ ಪಾಕಿಸ್ಥಾನ ಭಯೋತ್ಪಾದನೆ ನಿಗ್ರಹಕ್ಕೆ ಪ್ರಯತ್ನಿಸುತ್ತಿದೆ ಎಂದು ಹೇಳುವ ಮೂಲಕ ಆ ದೇಶದ ಬಗ್ಗೆ ತಮಗಿರುವ ಮೃದು ಧೋರಣೆಯನ್ನು ತೋರಿಸಿದರು.

ಮೋದಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಯಾವ ರೀತಿ ಬಹುಮುಖ್ಯ ಪಾಲುದಾರರಾಗಿವೆ ಎಂಬ ಅಂಶಕ್ಕೆ ಹೆಚ್ಚಿನ ಒತ್ತು ನೀಡಿದರು. ಟ್ರಂಪ್‌ ಇದನ್ನು ಒಪ್ಪಿಕೊಂಡರೂ ಅವರ ಆದ್ಯತೆ ಭಾರತದ ಜೊತೆಗಿನ ವಾಣಿಜ್ಯ ವ್ಯವಹಾರದ ತಕರಾರನ್ನು ಬಗೆಹರಿಸುವುದಾಗಿತ್ತು.

ಅಪಾಚೆ ಮತ್ತು ಎಂಎಚ್‌-60 ರೋಮಿಯೊ ಸಮರ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಸುಮಾರು 21,000 ಕೋ. ರೂ.ಗಳ ಒಪ್ಪಂದಕ್ಕೆ ಅಂಕಿತ ಹಾಕಿರುವುದು ಈ ದ್ವಿದಿನ ಭೇಟಿಯ ಬಹುಮುಖ್ಯ ಅಂಶಗಳಲ್ಲಿ ಒಂದು. ಈ ಮೂಲಕ ಭಾರತದ ಸೇನೆಯನ್ನು ಆಧುನೀಕರಣಗೊಳಿಸಿ ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಭಾರತ ದಾಪುಗಾಲಿಟ್ಟಿದೆ. ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಮತ್ತು ಎಕ್ಸನ್‌ಮೊಬಿಲ್‌ ನಡುವೆ ಆಗಿರುವ ತೈಲೋದ್ಯಮದ ಒಪ್ಪಂದ ಇನ್ನೊಂದು ಪ್ರಮುಖ ಅಂಶ. ಇದಲ್ಲದೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮೂರು ಒಪ್ಪಂದಗಳನ್ನೂ ಮಾಡಿಕೊಳ್ಳಲಾಗಿದೆ.

ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಿರುವ ಇತ್ತೀಚೆಗಿನ ನಿರ್ಧಾರಗಳಾಗಿರುವ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ಮತ್ತು ಪೌರತ್ವ ಕಾಯಿದೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಂಪ್‌ ತಟಸ್ಥ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ಪ್ರವಾಸದ ಸಂದರ್ಭದಲ್ಲಿಯೇ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರೂ ಟ್ರಂಪ್‌ ಪೌರತ್ವ ಕಾಯಿದೆ ಭಾರತದ ಆಂತರಿಕ ವಿಚಾರ, ಆ ಬಗ್ಗೆ ಮಾತನಾಡುವುದಿಲ್ಲ ಎನ್ನುವ ಮೂಲಕ ನಮ್ಮ ಸಾರ್ವಭೌಮತೆಯನ್ನು ಗೌರವಿಸಿದರು. ಇದೇ ವೇಳೆ ಉಭಯ ದೇಶಗಳು ಬಯಸಿದರೆ ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ತನ್ನ ಹಿಂದಿನ ಕೊಡುಗೆಯನ್ನು ಪುನರುಚ್ಚರಿಸಿದರೂ ಈ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ಈ ಮೂಲಕ ಪ್ರಬುದ್ಧವಾದ ರಾಜತಾಂತ್ರಿಕ ನಡೆಯೊಂದನ್ನು ಪ್ರದರ್ಶಿಸಿದರು.

ಭಾರತ ತನ್ನ ವಿದೇಶಾಂಗ ನೀತಿಯಂಗವಾಗಿ ಒಂದು ದೇಶದ ಮುಖ್ಯಸ್ಥನಿಗಾಗಿ ಇಷ್ಟೊಂದು ಅದ್ದೂರಿ ಕಾರ್ಯಕ್ರಮ ಏರ್ಪಡಿಸಿದ ನಿದರ್ಶನ ಇಲ್ಲ. ಈ ದೃಷ್ಟಿಯಿಂದಲೂ ಇದು ಒಂದು ಐತಿಹಾಸಿಕ ಭೇಟಿ ಆಗುತ್ತದೆ. ಮುಂಬರುವ ನವಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಒಲಿಸಿಕೊಳ್ಳುವ ಪ್ರಯತ್ನ ಇದು ಆಗಿರಲೂಬಹುದು. ಅಂತೆಯೇ ಎರಡು ದಿನದ ಭೇಟಿಗೆ ಆಗಿರುವ ಖರ್ಚುವೆಚ್ಚಗಳು ಇತ್ಯಾದಿಗಳ ಬಗ್ಗೆ ಸಾಕಷ್ಟು ಟೀಕೆಗಳು ಇರಬಹುದು. ಆದರೆ ಈ ಒಂದು ಭೇಟಿಯಿಂದ ಜಾಗತಿಕ ರಾಷ್ಟ್ರಗಳ ಎದುರು ಭಾರತ ತನ್ನ ತಾಕತ್ತು ಮತ್ತು ಸ್ಥಾನಮಾನ ಏನು ಎನ್ನುವುದನ್ನು ತೋರಿಸಿಕೊಟ್ಟಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಎಲ್ಲ ವರ್ಗದವರಿಗೂ ನೆರವು ಅಗತ್ಯ

ಎಲ್ಲ ವರ್ಗದವರಿಗೂ ನೆರವು ಅಗತ್ಯ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

“ಜಿಮ್‌” ಮೇಲೆ ಕೋವಿಡ್-19 ಕರಿನೆರಳು

“ಜಿಮ್‌” ಮೇಲೆ ಕೋವಿಡ್-19 ಕರಿನೆರಳು

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

08-April-25

ಕೊರೊನಾ ತಡೆಗೆ ಕಠಿಣ ಕ್ರಮ ಅನಿವಾರ್ಯ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ