ಆರ್‌ಬಿಐ ನೂತನ ನಿಯಮ; ನಾಳೆ ಕಡೆಯ ದಿನ

ಆನ್‌ಲೈನ್‌ ವ್ಯವಹಾರಕ್ಕೆ ಬಳಸದ ಕಾರ್ಡ್‌ ಬ್ಲಾಕ್‌!

Team Udayavani, Mar 15, 2020, 7:15 AM IST

Debit-card

ಸಾಂದರ್ಭಿಕ ಚಿತ್ರ

ಡೆಬಿಟ್‌ /ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಜನವರಿಯಲ್ಲಿ ಹೊಸ ನಿಯಮ ಪರಿಚಯಿಸಿತ್ತು. ಸುರಕ್ಷಿತ ವಹಿವಾಟು ನಡೆಸುವ ಸಲುವಾಗಿ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದ್ದ ಆರ್‌ಬಿಐ, ಭಾರತದಲ್ಲಿ ಕಾರ್ಡ್‌ ನೀಡುವ ಸಮಯದಲ್ಲಿ ATM ಹಾಗೂ PoSಗಳ ಮೇಲೆ ಕೇವಲ ಡೊಮೆಸ್ಟಿಕ್‌ ಕಾರ್ಡ್‌ ಬಳಕೆಗೆ ಅನುಮತಿ ನೀಡುವಂತೆ ಹೇಳಿತ್ತು. ಜತೆಗೆ ಅಂತಾರಾಷ್ಟ್ರೀಯ ವ್ಯವಹಾರ, ಕಾರ್ಡ್‌ ರಹಿತ ವ್ಯವಹಾರ, ಆನ್‌ಲೈನ್‌ ವ್ಯವಹಾರ ಮತ್ತು ಕಾಂಟಾಕ್ಟ್ ಲೆನ್ಸ್‌ ವ್ಯವಹಾರಕ್ಕೆ ಪ್ರತ್ಯೇಕ ವ್ಯವಸ್ಥೆ ನಾಳೆಯಿಂದ ಜಾರಿಯಾಗಲಿದೆ.

ವಹಿವಾಟುಗಳಲ್ಲಿ ಬದಲಾವಣೆ
ಕಾರ್ಡ್‌ದಾರರು ದೇಶಿ ಅಥವಾ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್‌ ಗಳನ್ನು ಬಳಸದೆ ವಹಿವಾಟು ನಡೆಸಲು, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್‌ ಬಳಸಿ ವಹಿವಾಟು ನಡೆಸಲು ಮತ್ತು ಚಿಪ್‌ ಕಾರ್ಡ್‌ ಅಥವಾ ಕಾಂಟ್ಯಾಕ್ಟೆಸ್‌ ವಹಿವಾಟುಗಳಲ್ಲಿ ತಮಗೆ ಬೇಕಿರು ವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ.

ಕಾರ್ಡ್‌ ಬ್ಲಾಕ್‌ ಆದ ಬಳಿಕ
ಈ ವರೆಗೆ ಯಾವುದೇ ಆನ್‌ಲೈನ್‌ ವಹಿವಾಟು ನಡೆಸದೆಯೇ ಇದ್ದಲ್ಲಿ ಅಂತಹ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳು ನಾಳೆಯಿಂದ ಬ್ಲಾಕ್‌ ಆಗಲಿವೆ. ಒಮ್ಮೆ ಬ್ಲಾಕ್‌ ಆದರೆ ಬಳಕೆದಾರರು ತಮ್ಮ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ ನಗದುರಹಿತ ವಹಿವಾಟು ಪುನರಾ ರಂಭಿಸಲು ಮತ್ತೆ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬೇಕಾಗಿದೆ.

ಯಾರ ಕಾರ್ಡ್‌ ಬ್ಲಾಕ್‌ ?
ಇದು ಎಲ್ಲರಿಗೂ ಅನ್ವಯವಾಗಲಿದೆ. ಬ್ಯಾಂಕ್‌ನಿಂದ ಕಾರ್ಡು ಸ್ವೀಕರಿಸಿ ಆನ್‌ಲೈನ್‌ ವ್ಯವಹಾ ರಗಳಿಗೆ ಬಳಸದೇ ಇದ್ದವರಿಗೆ ಇದು ಅನ್ವಯವಾಗುತ್ತದೆ. ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಬಳಕೆಯಾಗುತ್ತಿರುವ ಸ್ವರೂಪದಲ್ಲಿ ಬದಲಾವಣೆ ತರಲು ಉದ್ಧೇಶಿಸ ಲಾಗಿದೆ. ಕಾರ್ಡ್‌ ವ್ಯವಹಾ ರಗಳಲ್ಲಿ ಭದ್ರತೆ ಯನ್ನು ಹೆಚ್ಚಿಸಲು ಮತ್ತು ಬಳಕೆದಾರ ಸ್ನೇಹಿಯಾಗುವಂತೆ ಮಾಡಲು ಆರ್‌ಬಿಐ ಹಣಕಾಸು ಸಂಸ್ಥೆಗಳಿಗೆ ಹೊಸ ನಿಯಮಗಳನ್ನು ಹೊರಡಿಸಿದೆ.

ಆರ್‌ಬಿಐ ಹೇಳಿದ್ದೇನು?
ಎಟಿಎಂಗಳು ಮತ್ತು ಪಾಯಿಂಟ್‌ ಆಫ್ ಸೇಲ್‌ ಯಂತ್ರಗಳಲ್ಲಿ (ಪಿಒಎಸ್‌) ಮಾತ್ರ ಬಳಸಲು ಬಳಕೆದಾರರಿಗೆ ಅವಕಾಶ ಕೊಡುವ ರೀತಿಯಲ್ಲಿ ಎಲ್ಲ ರೀತಿಯ ಕಾರ್ಡ್‌ಗಳನ್ನು ರೂಪಿಸಬೇಕು. ಕಾರ್ಡ್‌ ಬಳಸದೆ ವಹಿವಾಟು (ದೇಶಿ ಮತ್ತು ಅಂತಾರಾರಾಷ್ಟ್ರೀಯ), ಕಾರ್ಡ್‌ ಬಳಸಿ ವಹಿವಾಟು, ಮತ್ತು ಚಿಪ್‌ ಕಾರ್ಡ್‌ ಅಥವಾ ಕಾಂಟ್ಯಾಕ್ಟೆಲೆಸ್‌ ವಹಿವಾಟುಗಳಲ್ಲಿ ತಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ವನ್ನು ಗ್ರಾಹಕರಿಗೆ ನೀಡಬೇಕು ಎಂದು ಆರ್‌ಬಿಐ ಹೇಳಿದೆ.

ಗ್ರಾಹಕರಿಗೆ ಹೊಸ ಆಯ್ಕೆ
ಕಾರ್ಡ್‌ಗಳನ್ನು ಸಕ್ರಿಯ ಗೊಳಿಸುವ, ಸ್ಥಗಿತಗೊಳಿಸುವ, ಅಂತಾರಾಷ್ಟ್ರೀಯ ವಹಿವಾಟು, ಪಿಓಎಸ್‌, ಎಟಿಎಂ, ಆನ್‌ಲೈನ್‌, ಚಿಪ್‌ ಕಾರ್ಡ್‌ ವಹಿವಾಟುಗಳನ್ನು ನಿರ್ಧರಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಡಿಜಿಟಲ್‌ ವಹಿವಾಟಿನ ಭದ್ರತೆ ಹೆಚ್ಚಿಸಲು ನೆರವಾಗುವ ದೃಷ್ಟಿಯಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಕ್ರಿಯ (ಆನ್‌) ಮತ್ತು ಸ್ಥಗಿತ (ಆಫ್) ಮಾಡುವ ಅವಕಾಶವನ್ನು ಗ್ರಾಹಕನಿಗೆ ನೀಡಲಾಗಿದೆ.

ಸಹಾಯವಾಣಿ ಸೌಲಭ್ಯ
ಮೊಬೈಲ್‌ ಅಪ್ಲಿಕೇಷನ್‌, ಇಂಟರ್ನೆಟ್‌ ಬ್ಯಾಂಕಿಂಗ್‌, ಎಟಿಎಂಗಳು, ಐವಿಆರ್‌ ಅಥವ ಇಂಟರಾಕ್ಟೀವ್‌ ವಾಯ್ಸ… ರೆಸ್ಪಾನ್ಸ್‌ ಮೊದಲಾದವುಗಳನ್ನು ನಿವಾರಿಸಲು 24ಗಿ7 ಸಹಾಯವಾಣಿ ದೊರೆಯಲಿದೆ. ಕಾರ್ಡ್‌ನಲ್ಲಿ ಯಾವುದಾದರೂ ಬದಲಾವಣೆಗಳಾದರೆ ಬಳಕೆದಾರರಿಗೆ ಎಸ್‌ಎಂಎಸ್‌, ಇ-ಮೇಲ್‌ ಮೂಲಕ ಮಾಹಿತಿ ದೊರೆಯಲಿದೆ.

ಮಾರ್ಚ್‌ 16ರಿಂದ
ನೂತನ ನಿಯಮ ಮಾರ್ಚ್‌ 16ರಿಂದ ಜಾರಿಗೆ ಬರಲಿವೆ. ದೇಶದಲ್ಲಿ 80 ಕೋಟಿ ಡೆಬಿಟ್‌ ಕಾರ್ಡ್‌ ಮತ್ತು 5 ಕೋಟಿ ಕ್ರೆಡಿಟ್‌ ಕಾರ್ಡ್‌ಗಳು ಬಳಕೆ ಯಾಗುತ್ತಿವೆ. ಈ ಎಲ್ಲ ಕಾರ್ಡ್‌ಗಳಿಗೂ ಹೊಸ ನಿಯಮ ಅನ್ವಯ ವಾಗಲಿದೆ. ಇತ್ತೀಚೆಗೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಗಳ ಮೂಲಕ ನಡೆಯುವ ವಹಿವಾಟಿನ ಪ್ರಮಾಣ, ಮೌಲ್ಯ ಹೆಚ್ಚಾಗಿದೆ.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.