ಸ್ಮಾರ್ಟ್ ಫೋನ್ ಹ್ಯಾಂಗ್ ಆಗುತ್ತಿದೆಯೇ ? ಅದಕ್ಕಿದೆ ಇಲ್ಲಿ ಪರಿಹಾರ

Team Udayavani, Nov 26, 2019, 7:30 PM IST

ಇಂದು ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್‌ಫೋನ್‌ ಎಂಬುದು ಸರ್ವೇಸಾಮಾನ್ಯ. ಸಾಮಾಜಿಕ ಜಾಲತಾಣಗಳ ಬಳಕೆ ಸೇರಿದಂತೆ ಹಲವು ಉಪಯುಕ್ತ ಮತ್ತು ನಿರುಪಯುಕ್ತ ಕಾರ್ಯಗಳಿಗೆ ಈ ನೆರವಾಗುವ ಫೋನ್ ಗಳು ಕೆಲವೊಮ್ಮೆ ತನ್ನ ಸ್ಪೀಡ್ ಅನ್ನು ಕಳೆದುಕೊಳ್ಳುತ್ತದೆ. ಅಂದರೇ ಒಮ್ಮೆಲೇ ತನ್ನ ಕಾರ್ಯವನ್ನು ನಿಲ್ಲಿಸುವುದು, ಅತ್ಯುತ್ತಮ RAM ಸಾಮರ್ಥ್ಯದ ಸ್ಮಾರ್ಟ್‌ ಫೋನ್‌ ಇದ್ದರೂ ಕಾರ್ಯವೈಖರಿಯಲ್ಲಿ ನಿಧಾನಗತಿ ಕಂಡುಬಂದರೇ ಬಳಕೆದಾರರು ಹಲವು ಪ್ರಯತ್ನಗಳ ಮೂಲಕ ಬೂಸ್ಟ್‌ ಮಾಡಲು ಯೋಚಿಸುತ್ತಿರುತ್ತಾರೆ

ಹಲವು ಕಾರಣಗಳಿಂದಾಗಿ ಸ್ಮಾರ್ಟ್‌ ಫೋನ್‌ ಕಾರ್ಯ ನಿರ್ವಹಣೆ ನಿಧಾನಗತಿಯ ಸ್ವರೂಪ ಪಡೆಯುತ್ತದೆ. ಇಂದು ಮುಖ್ಯವಾಗಿ ಸ್ಮಾರ್ಟ್‌ಫೋನ್ ಸ್ಲೋ ಆಗಲು ಫೋನ್ ಮೆಮೊರಿ, ಹೆಚ್ಚಿನ ಅಪ್ಲಿಕೇಶನ್‌ಗಳು, ಅಧಿಕ ಡೇಟಾ ಗೇಮ್ಸ್‌ಗಳು ಹೆಚ್ಚು ಪರಿಣಾಮ ಬೀರುತ್ತವೆ. ಆದರೆ ಬಳಕೆದಾರರು ಕೆಲವು ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಸ್ಲೋ ಆಗಿರುವ ಸ್ಮಾರ್ಟ್‌ಫೋನಿನ ಸ್ಪೀಡ್‌ ಅನ್ನು ಹೆಚ್ಚಿಸಬಹುದಾಗಿದೆ.

ಕಾಲಕಾಲಕ್ಕೆ ಅಪ್ ಡೇಟ್  ಮಾಡಿ:

ಸ್ಮಾರ್ಟ್‌ ಫೋನ್‌ನಲ್ಲಿರುವ ಓಎಸ್‌ ನಿಂದ  ಪದೇ ಪದೇ ಅಪ್‌ಡೇಟ್ ಮಾಡುವಂತೆ ನೋಟಿಫಿಕೇಶನ್ ಗಳು ಬರುತ್ತವೆ.  ಆ ರೀತಿ ಸಂದೇಶ ಬಂದಾಕ್ಷಣ ಅಪ್‌ಡೇಟ್ ಮಾಡಿಕೊಳ್ಳಿರಿ, ಇದು ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಜೊತೆಗೆ ಹೊಸ ಫೀಚರ್ಸ್‌ಗಳಿದ್ದರೇ ಅವುಗಳು ಸಹ ಲಭ್ಯವಾಗುತ್ತವೆ.

ಹೈ-ಸ್ಪೀಡ್‌ ಎಸ್‌ ಡಿ ಕಾರ್ಡ್

ಹೊಸ ಸ್ಮಾರ್ಟ್‌ಫೋನಗಳು ಅತ್ಯಧಿಕ ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿರುತ್ತವೆ. ಅದ್ಯಾಗೂ ಕೆಲವು ಬಳಕೆದಾರರು ಹೆಚ್ಚಿನ ಮೆಮೊರಿಗಾಗಿ ಬಾಹ್ಯವಾಗಿ ಎಸ್‌ ಡಿ ಕಾರ್ಡ್ ಬಳಕೆ ಮಾಡುತ್ತಾರೆ. ಕಡಿಮೆ ಸ್ಪೀಡಿನ ಎಸ್‌ ಡಿ ಕಾರ್ಡ್‌ ಬಳಕೆಯು ಫೋನಿನ ಕಾರ್ಯವೈಖರಿಗೆ ದಕ್ಕೆ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಸ್‌ ಡಿ ಕಾರ್ಡ್‌ ಹೈ ಸ್ಪೀಡ್‌ ಸಾಮರ್ಥ್ಯ ಪಡೆದಿರಲಿ.

ಹೋಮ್‌ ಸ್ಕ್ರೀನ್‌ ಕಂಟ್ರೋಲ್

ಕೆಲವು ಬಳಕೆದಾರರು ಹೆಚ್ಚಾಗಿ widgetsಗಳನ್ನು ಮತ್ತು ಲೈವ್ ವಾಲ್‌ಪೇಪರ್‌ಗಳನ್ನು ಬಳಕೆಮಾಡುತ್ತಿರುತ್ತಾರೆ. ಆದರೆ ಇದು ಸ್ಮಾರ್ಟ್‌ಫೋನ್ ಬ್ಯಾಟರಿ ಕಬಳಿಸುವ ಜತೆಗೆ ಫೋನ್ ಸ್ಪೀಡ್ ಕುಗ್ಗಿಸುತ್ತದೆ. ಹೀಗಾಗಿ ಅನಗತ್ಯವಾಗಿ ಹೋಮ್‌ ಸ್ಕ್ರೀನ್ನಲ್ಲಿ ಹೆಚ್ಚು widgets ಗಳನ್ನು ಮತ್ತು ಲೈವ್‌ ವಾಲ್‌ಪೇಪರ್‌ಗಳನ್ನು ಬಳಕೆ ಮಾಡಬೇಡಿ.

ಬ್ಯಾಕ್‌ ಗ್ರೌಂಡ್‌ ಆ್ಯಪ್ಸ್‌ಗಳು

ಸ್ಮಾರ್ಟ್‌ ಫೋನ್‌ನಲ್ಲಿ ನಾವು ಅನೇಕ ಆ್ಯಪ್ಸ್‌ ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತೇವೆ. ಅವುಗಳಲ್ಲಿ ಕೆಲವು ಆ್ಯಪ್ಸ್‌ ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತೇವೆ. ಆದರೆ ಅವುಗಳು ಬ್ಯಾಕ್‌ ಗ್ರೌಂಡ್‌ನಲ್ಲಿ ರನ್ ಆಗುತ್ತಿರುತ್ತವೆ. ಈ ಬ್ಯಾಕ್‌ ಗ್ರೌಂಡ್‌ ರನ್ ಆಗುವ ಆ್ಯಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಆಟೋ ಸಿಂಕ್(Sync )

ಬಳಕೆದಾರರು ಆಟೋ ಸಿಂಕ್ ಆಯ್ಕೆಯನ್ನು ನಿಲ್ಲಿಸುವುದು  ಒಳಿತು. ಯಾಕೆಂದರೇ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆ ನಿರಂತರವಾಗಿ ಸಕ್ರಿಯವಾಗಿರುತ್ತದೆ. ಇದು ಫೋನಿನ ವೇಗದ ಕುಂಠಿತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಆಟೋ ಸಿಂಕ್ ಆಯ್ಕೆ ಯನ್ನು ರದ್ದುಪಡಿಸಬಹುದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ