200 ಕೋಟಿ ಕ್ಲಬ್ ಗೆ ಸೇರಿದ ತಾನಾಜಿ ; ಏನಿದು ಥರ್ಡ್ ಸಂಡೇ ಕಲೆಕ್ಷನ್ ರೆಕಾರ್ಡ್?

ಥರ್ಡ್ ಸಂಡೇ ಕಲೆಕ್ಷನ್ ನಲ್ಲಿ ಪಿಕೆ ಮತ್ತು ಕಬೀರ್ ಸಿಂಗ್ ಚಿತ್ರಗಳ ದಾಖಲೆ ಧೂಳೀಪಟ

Team Udayavani, Jan 28, 2020, 9:17 PM IST

ಮುಂಬಯಿ: ಅಜಯ್ ದೇವಗನ್, ಕಾಜೋಲ್, ಸೈಫ್ ಆಲಿಖಾನ್ ಹಾಗೂ ಶರದ್ ಕೇಲ್ಕರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ತಾನಾಜಿ – ದಿ ಅನ್ ಸಂಗ್ ವಾರಿಯರ್ ಹಿಂದಿ ಚಿತ್ರ ಈ ಹಿಂದಿನ ಹಲವಾರು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.

ತಾನಾಜಿ ಶುಕ್ರವಾರವಷ್ಟೇ 200 ಕೋಟಿ ಕ್ಲಬ್ ಗೆ ಸೇರ್ಪಡೆಗೊಂಡ ಸಾಧನೆಯನ್ನು ಮಾಡಿತ್ತು. ಬಳಿಕ ಚಿತ್ರ ಬಿಡುಗಡೆಗೊಂಡ ಮೂರನೇ ರವಿವಾರ (ಥರ್ಡ್ ಸಂಡೇ) ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಸಾಲಿನಲ್ಲಿ ತಾನಾಜಿ ಮೂರನೇ ಸ್ಥಾನ ಪಡೆದಿದೆ. ಈ ಮೂಲಕ ಥರ್ಡ್ ಸಂಡೇ ಕಲೆಕ್ಷನ್ ನಲ್ಲಿ ಇದುವರೆಗೂ ಮೂರನೇ ಸ್ಥಾನದಲ್ಲಿದ್ದ ಅಮೀರ್ ಖಾನ್ ಅಭಿನಯದ ಬ್ಲಾಕ್ ಬ್ಲಸ್ಟರ್ ಚಿತ್ರ ಪಿಕೆ ನಾಲ್ಕನೇ ಸ್ಥಾನಕ್ಕೆ ಜಾರಿದೆ ಮತ್ತು ಶಾಹೀದ್ ಕಪೂರ್ ಅವರ ಕಬೀರ್ ಸಿಂಗ್ ಚಿತ್ರ ಥರ್ಡ್ ಸಂಡೇ ಕಲೆಕ್ಷನ್ ನಲ್ಲಿ ಐದನೇ ಸ್ಥಾನದಲ್ಲಿದೆ.


ತಾನಾಜಿ ಬಿಡುಗಡೆಗೊಂಡ ಮೂರನೇ ಸಂಡೇ 12.58 ಕೋಟಿ ಕಲೆಕ್ಷನ್ ಮಾಡುವ ಮೂಲಕ ಇದಕ್ಕೂ ಮೊದಲು ಈ ದಾಖಲೆ ಮಾಡಿದ್ದ ಬಾಹುಬಲಿ -2 (ಹಿಂದಿ) (17.75 ಕೋಟಿ) ಮತ್ತು ದಂಗಲ್ (14.33 ಕೋಟಿ) ಚಿತ್ರಗಳ ನಂತರದ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ಈ ದಾಖಲೆಯ ಮೂಲಕ ತಾನಾಜಿ ಚಿತ್ರ ತನ್ನ ಥರ್ಡ್ ಸಂಡೇ ಕಲೆಕ್ಷನ್ ನಲ್ಲಿ ಪಿಕೆ (11.58 ಕೋಟಿ), ಕಬೀರ್ ಸಿಂಗ್ (9.61 ಕೋಟಿ) ಸಂಜು (9.29 ಕೋಟಿ), ಉರಿ (9.20 ಕೋಟಿ), ಭಜರಂಗಿ ಭಾಯ್ ಜಾನ್ (9.07 ಕೋಟಿ), ವಾರ್ (5.60 ಕೋಟಿ), ಬಾಹುಬಲಿ (ಹಿಂದಿ) (5.11 ಕೋಟಿ) ಮತ್ತು ಸುಲ್ತಾನ್ (5.14 ಕೋಟಿ) ಚಿತ್ರಗಳನ್ನು ಹಿಂದಿಕ್ಕಿದ ಸಾಧನೆಯನ್ನು ಸಹ ಮಾಡಿದಂತಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...