ನಾಳೆ “ಪತ್ತನಾಜೆ’: ಉತ್ಸವ, ಯಕ್ಷಗಾನಕ್ಕೆ “ಮಂಗಳ’!

Team Udayavani, May 23, 2024, 7:40 AM IST

ನಾಳೆ “ಪತ್ತನಾಜೆ’: ಉತ್ಸವ, ಯಕ್ಷಗಾನಕ್ಕೆ “ಮಂಗಳ’!

ಮಂಗಳೂರು/ಬೆಳ್ತಂಗಡಿ: ತುಳುನಾಡಿನ ಸಂಪ್ರದಾಯದ ಪ್ರಕಾರ ವೃಷಭ ಮಾಸದ ಹತ್ತನೇ ದಿನ “ಪತ್ತನಾಜೆ’ (ಹತ್ತನಾವಧಿ) ಮಹತ್ವದ ದಿನ. ಈ ವರ್ಷ ಮೇ 24ರಂದು ಪತ್ತನಾಜೆ ಬರುತ್ತಿದ್ದು, ಅಂದಿನಿಂದ ಮಳೆಗಾಲ ಮುಗಿಯುವವರೆಗೆ ಯಾವುದೇ ಉತ್ಸವಗಳು ನಡೆಯು ವುದಿಲ್ಲ. ಯಕ್ಷಗಾನ ಮೇಳಗಳ ಕಲಾವಿದರು ಪ್ರದರ್ಶನ ಮುಗಿಸಿ ಕಾಲಗೆಜ್ಜೆಯನ್ನು ವಿಧಿವತ್ತಾಗಿ ಬಿಚ್ಚುವುದು ಪತ್ತನಾಜೆಯಂದು.

ಸೀಮೆಯ ಪ್ರಧಾನ ದೇವಸ್ಥಾನಗಳ ಕೊಡಿಮರ ಇಳಿಸುವ ಕಾರ್ಯಕ್ರಮವೂ ಪತ್ತನಾಜೆಯ ದಿನವೇ ನಡೆಯುತ್ತದೆ. ಮಳೆಗಾಲದಲ್ಲಿ ಯಾವುದೇ ಜಾತ್ರೆ, ಅಂಕ ಆಯನ, ಉತ್ಸವಾದಿಗಳನ್ನು ನಡೆಸಲು ಸಾಧ್ಯವಾಗದ ಕಾರಣ ಹಾಗೂ ಕೃಷಿ ಸಂಸ್ಕೃತಿ ಮೂಲವಾಗಿರುವ ತುಳುನಾಡಿನಲ್ಲಿ ಮಳೆ ಗಾಲ ಪ್ರಾರಂಭಕ್ಕೆ ಮುನ್ನ ಉತ್ಸವಾದಿಗಳನ್ನು ಪೂರೈಸಿ ಕೃಷಿ ಚಟುವಟಿಕೆಗಳಿಗೆ ತಯಾರಿ ಮಾಡಲು ಪತ್ತನಾಜೆ ದಿನವನ್ನು ಉತ್ಸವಗಳ ಕೊನೆಯ ದಿನವನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಸಂಪ್ರದಾಯ ಈಗಲೂ ಮುಂದುವರಿದಿದೆ.

43 ಮೇಳಗಳ ಒಡ್ಡೋಲಗಕ್ಕೆ “ಮಂಗಳ’!
ಕರಾವಳಿ ಜಿಲ್ಲೆಗಳಲ್ಲಿ 40ಕ್ಕೂ ಅಧಿಕ ಮೇಳಗಳು ಈ ವರ್ಷ ತಿರುಗಾಟ ನಡೆಸಿವೆ. ಸಾವಿರಾರು ಕಲಾವಿದರು ಹಾಗೂ ಇತರರು ಇಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ಮೇಳಗಳು ಈಗಾಗಲೇ ತಮ್ಮ ತಿರುಗಾಟ ನಿಲ್ಲಿಸಿದ್ದರೆ, ಧರ್ಮಸ್ಥಳ, ಕಟೀಲು, ಸಾಲಿಗ್ರಾಮ, ಮಂದಾರ್ತಿ, ಪಾವಂಜೆ, ಹನುಮಗಿರಿ, ಮಾರಣಕಟ್ಟೆ, ಹಾಲಾಡಿ, ಬಪ್ಪನಾಡು ಸಹಿತ ವಿವಿಧ ಮೇಳಗಳ ಆಟ ಇಂದು-ನಾಳೆ ಮುಕ್ತಾಯವಾಗಲಿದೆ. ಮುಂದಿನ ಆರು ತಿಂಗಳು ಕಲಾವಿದರಿಗೆ ರಜೆ ಇರಲಿದೆ.

ಈ ಪೈಕಿ ಕೆಲವು ಮೇಳದ ಕಲಾವಿದರಿಗೆ ರಜಾ ಸಂಬಳ ಮೇಳದಿಂದ ಸಿಗುತ್ತಿದ್ದರೆ, ಉಳಿದ ಕಲಾವಿದರು ರಜೆ ಸಮಯದಲ್ಲಿ ಇತರ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಮಳೆಗಾಲದ ಸಂದರ್ಭ ಮೇಳ ತಿರುಗಾಟ ಇಲ್ಲದಿದ್ದರೂ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ಪ್ರದರ್ಶನ ಕರಾವಳಿಯ ವಿವಿಧ ಕಡೆಗಳಲ್ಲಿ ನಡೆಯುತ್ತದೆ. ಚಿಕ್ಕ ಮೇಳ ತಿರುಗಾಟ ಮನೆ ಮನೆ ವ್ಯಾಪ್ತಿಗೆ ಬರಲಿದೆ.

ಕಟೀಲು ಮೇಳ: 8 ಸಾವಿರಕ್ಕೂ ಅಧಿಕ ಆಟಗಳು ಬುಕ್ಕಿಂಗ್‌!
“ಕಟೀಲಿನ ಆರು ಮೇಳಗಳು ಈ ವರ್ಷ ಸುಮಾರು 1,068 ಯಕ್ಷಗಾನ ಪ್ರದರ್ಶನ ನೀಡಿವೆ. ಮುಂದಿನ ದಿನಗಳಲ್ಲಿ 8 ಸಾವಿರಕ್ಕೂ ಪ್ರದರ್ಶನಕ್ಕೆ ಈಗಾಗಲೇ ಬುಕ್ಕಿಂಗ್‌ ಆಗಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣದಾಸ ಅಸ್ರಣ್ಣ ತಿಳಿಸಿದ್ದಾರೆ.

ನಮ್ಮದು ಕೃಷಿ ಆಧಾರಿತ ಸಮಾಜ. ಹಿಂದೆ ಕಲಾವಿದರು-ಪ್ರೇಕ್ಷಕರು ಕೃಷಿಕರೇ ಆಗಿದ್ದರು. ಹೀಗಾಗಿ ಪತ್ತನಾಜೆಯ ಗಡುವನ್ನು ಇಟ್ಟುಕೊಂಡು-ಆ ವೇಳೆ ಮಳೆ ಬರುವ ಕಾರಣದಿಂದ ಕೃಷಿ ಚಟುವಟಿಕೆ ನಡೆಸಲು ಎಲ್ಲರಿಗೂ ಅವಕಾಶದ ಹಿನ್ನೆಲೆಯಲ್ಲಿ ವಿರಾಮ ಸೂತ್ರ ಪಾಲಿಸಲಾಗಿತ್ತು. ಹೀಗಾಗಿ ಯಕ್ಷಗಾನ, ಉತ್ಸವ ಸಹಿತ ತುಳುನಾಡಿನ ವಿವಿಧ ಆಚರಣೆಗಳು ಪತ್ತನಾಜೆಯ ಬಳಿಕ ನಡೆಯುವುದಿಲ್ಲ ಎಂಬ ಆಚರಣೆ ಜಾರಿಗೆ ಬಂತು.
– ಡಾ| ಎಂ. ಪ್ರಭಾಕರ ಜೋಶಿ, ಹಿರಿಯ ವಿದ್ವಾಂಸರು

ಟಾಪ್ ನ್ಯೂಸ್

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

KSRTC, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

mob

‘Deepfake’ ತಡೆಗೆ ಮಸೂದೆ? 

ಪುತ್ರನ ಬಂಧನ ಎಂದು ಉದ್ಯಮಿಗೆ ಹಣದ ಬೇಡಿಕೆ ಇಟ್ಟ ಅನಾಮಿಕರು !

ಪುತ್ರನ ಬಂಧನ ಎಂದು ಉದ್ಯಮಿಗೆ ಹಣದ ಬೇಡಿಕೆ ಇಟ್ಟ ಅನಾಮಿಕರು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

Mangaluru ಸಿಟಿಬಸ್‌ಗಳಲ್ಲಿ ಶೀಘ್ರ ಯುಪಿಐ ಮುಖಾಂತರವೂ ಟಿಕೆಟ್‌

Mangaluru ಸಿಟಿಬಸ್‌ಗಳಲ್ಲಿ ಶೀಘ್ರ ಯುಪಿಐ ಮುಖಾಂತರವೂ ಟಿಕೆಟ್‌

ಕಡಲಿಗಿಳಿಯುವ ನಾಡದೋಣಿಗಳಿಗೆ ಎನ್‌ಎಂಪಿಎ “ಆಶ್ರಯ’!

ಕಡಲಿಗಿಳಿಯುವ ನಾಡದೋಣಿಗಳಿಗೆ ಎನ್‌ಎಂಪಿಎ “ಆಶ್ರಯ’!

Mangaluru ಖಾಸಗಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು

Mangaluru ಖಾಸಗಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು

National Highway 73: ಸಮಸ್ಯೆಗಳ ನಿವಾರಣೆNational Highway 73: ಸಮಸ್ಯೆಗಳ ನಿವಾರಣೆ

National Highway 73: ಸಮಸ್ಯೆಗಳ ನಿವಾರಣೆ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

KSRTC, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.