ಟಿಕ್ ಟಾಕ್ ನಲ್ಲಿ ಹಣ ಮಾಡುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ
Team Udayavani, Nov 23, 2019, 11:37 AM IST
ನವದೆಹಲಿ: ಜನಪ್ರಿಯ ಟಿಕ್ ಟಾಕ್ ಆ್ಯಪ್ ದೇಶಾದ್ಯಂತ ಅಪಾರ ಬಳಕೆದಾರರನ್ನು ಹೊಂದಿದೆ. ಯುವ ಜನಾಂಗ ಸೇರಿದಂತೆ ಮಧ್ಯವಯಸ್ಕರು ಕೂಡ ಈ ಆ್ಯಪ್ ನಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದು, ಈಗ ಟಿಕ್ ಟಾಕ್ ತನ್ನ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು ಹಣಗಳಿಸುವ ಮಾರ್ಗವನ್ನು ಕೂಡ ತೋರಿಸಿದೆ.
ಪ್ರತಿನಿತ್ಯ ಕೋಟ್ಯಾಂತರ ವಿಡಿಯೋಗಳು ಟಿಕ್ ಟಾಕ್ ನಲ್ಲಿ ಅಪ್ಲೋಡ್ ಆಗುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಟಿಕ್ ಟಾಕ್ ತನ್ನ ಬಳಕೆದಾರರಿಗೆ ಹಣ ಗಳಿಸುವ ಅವಕಾಶ ಮಾಡಿಕೊಟ್ಟಿದೆ. ಇಂದು ಅನೇಕ ಕಂಪೆನಿಗಳ ಜಾಹೀರಾತುಗಳು ಟಿಕ್ ಟಾಕ್ ನಲ್ಲಿ ರಾರಾಜಿಸುತ್ತಿದೆ. ಇತ್ತೀಚಿಗೆ ಐಟೆಲ್ ಕಂಪೆನಿ ಅಭಿಯಾನವೊಂದು ಕೈಗೊಂಡು ಆ್ಯಶ್ ಟ್ಯಾಗ್ ಬಳಸಿ ಹಾಡನ್ನು ಪ್ರದರ್ಶಿಸಲು ಅವಕಾಶ ನೀಡಿತ್ತು. ಇದಕ್ಕೆ ಪ್ರತಿಯಾಗಿ ಹಣವನ್ನು ಪಾವತಿಸಿದೆ. ಮಾತ್ರವಲ್ಲದೆ ಬಿಂಗೋ, ಅಮೇಜ್ಫಿಟ್, ಮೂವ್ ಕಂಪೆನಿಗಳು ಇಂತಹ ಹಲವು ಅಭಿಯಾನವನ್ನು ಕೈಗೊಂಡು, ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ಕಲ್ಪಿಸಿದೆ.
ಆದರೇ ಗಮನಿಸಬೇಕಾದ ವಿಷಯವೆಂದರೇ ಟಿಕ್ಟಾಕ್ನಲ್ಲಿ ಎಲ್ಲಾ ಬಳಕೆದಾರರಿಗೆ ಹಣಗಳಿಸಲು ಸಾಧ್ಯವಾಗುವುದಿಲ್ಲ. 1 ಲಕ್ಷಕ್ಕಿಂತ ಅಧಿಕ ಫಾಲೊವರರ್ಸ್ ಹೊಂದಿರುವ ಬಳಕೆದಾರ ಕಂಪನಿ ಸಂಪರ್ಕಿಸಿ ಅದರ ಪರ ವಿಡಿಯೋ ಅಪ್ಲೋಡ್ ಮಾಡಬೇಕು. ಅದಕ್ಕೆ ಪ್ರತಿಯಾಗಿ ಹಣ ಪಾವತಿಯಾಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?