ಅತೀವ ಜಾಗರೂಕತೆ ಅಗತ್ಯ: ಪ್ರತಿರೋಧ ಸಮಿತಿ ಸಭೆ

ಕೊರೊನಾ ವೈರಸ್‌ ಹಾವಳಿ

Team Udayavani, Mar 7, 2020, 12:13 AM IST

kasrogi-corona-1

ಸಾಂದರ್ಭಿಕ ಚಿತ್ರ

ಕಾಸರಗೋಡು: ಕೊರೊನಾ ವೈರಸ್‌ (ಕೋವಿಡ್‌-19) ವಿವಿಧ ದೇಶ ಗಳಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅತೀವ ಜಾಗರೂಕತೆ ನಡೆಸ ಬೇಕು ಎಂದು ಕೋವಿಡ್‌-19 ರೋಗ ಪ್ರತಿರೋಧ ಸಮಿತಿ ಸಭೆ ಆಗ್ರಹಿಸಿದೆ.

ಜಿಲ್ಲಾಧಿಕಾರಿ ಅವರ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅಧ್ಯಕ್ಷತೆ ವಹಿಸಿದ್ದರು. ರೋಗ ಲಕ್ಷಣ ಪ್ರಕಟಿಸುವವರ ಬಗ್ಗೆ ನಿಗಾ ಇರಿಸುವ ನಿಟ್ಟಿನಲ್ಲಿ ಪಂಚಾಯತ್‌- ನಗರಸಭೆಗಳ ವಾರ್ಡ್‌ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವಂತೆ ಜಿಲ್ಲಾಧಿ ಕಾರಿ ಆದೇಶಿಸಿದರು. ಈ ಸಮಿತಿಗಳಲ್ಲಿ ಕುಟುಂಬಶ್ರೀ ಸದಸ್ಯರನ್ನು, ಆಶಾ ಕಾರ್ಯಕರ್ತೆಯರನ್ನು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿ ಧಿಗಳನ್ನು, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿ ಧಿ ಗಳನ್ನು ಸೇರಿಸಿಕೊಳ್ಳಬೇಕು. ಈ ಸಮಿತಿಗಳ ಏಕೀಕರಣದ ಹೊಣೆಯನ್ನು ಆಯಾ ಸ್ಥಳೀಯಾಡಳಿತೆ ಸಂಸ್ಥೆಗಳ ಕಾರ್ಯ ದರ್ಶಿಗಳಿಗಿದೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಎಚ್‌1 ಎನ್‌1, ಡೆಂಗ್ಯೂ, ಹಳದಿಜ್ವರ ಸಹಿತ ಸಾಂಕ್ರಾ ಮಿಕ ರೋಗಗಳು ಹೆಚ್ಚುವರಿ ವರದಿಯಾಗುತ್ತಿರುವ ಹಿನ್ನೆಲೆ ಯಲ್ಲಿ ವ್ಯಕ್ತಿಗತ ಶುಚಿತ್ವ ಮತ್ತು ಪರಿಸರ ಶುಚೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆಗ್ರಹಿಸಿದರು. ಸಭೆಯಲ್ಲಿ ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ
ಡಾ| ಎ.ವಿ.ರಾಮದಾಸ್‌, ಜಿಲ್ಲಾ ಸರ್ವೆಲೆನ್ಸ್‌ ಅಧಿಕಾರಿ ಡಾ| ಎ.ಟಿ. ಮನೋಜ್‌, ಜಿಲ್ಲಾ ಆಸ್ಪತ್ರೆ ವರಿಷ್ಠಾ ಧಿಕಾರಿ ಡಾ| ಕೆ.ವಿ. ಪ್ರಕಾಶ್‌, ಕಾಸರಗೋಡು ಜನರಲ್‌ ಆಸ್ಪತ್ರೆ ವರಿಷ್ಠಾ ಧಿಕಾರಿ ಡಾ| ಕೆ.ಕೆ. ರಾಜಾರಾಂ, ಜಿಲ್ಲಾ ಹೋಮಿಯೋ ಪ್ರಧಾನ ವೈದ್ಯಾಧಿಕಾರಿ ಡಾ| ಟಿ.ಕೆ. ವಿಜಯಕುಮಾರ್‌, ಜಿಲ್ಲಾ ಕ್ಷಯರೋಗ ನಿಯಂತ್ರಣ ಅ ಧಿಕಾರಿ ಡಾ| ಟಿ.ಪಿ. ಆಮಿನಾ, ಡಿ.ವೈ.ಎಸ್‌.ಪಿ. ಹರಿಶ್ಚಂದ್ರ ನಾಯ್ಕ, ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಿ ಕೆ.ವಿ. ಪುಷ್ಪಾ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಬೇಬಿ ಷೈಲಾ, ಜಿಲ್ಲಾ ವಾರ್ತಾ ಧಿಕಾರಿ ಮಧುಸೂದನನ್‌ ಎಂ., ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಆರ್‌.ಬೈಜು ಉಪಸ್ಥಿತರಿದ್ದರು.

ಕೊಂಚ ಜಾಗರೂಕತೆಯಿದ್ದರೆ ಸಾಕು ಕೊರೋನಾ ವಿರುದ್ಧ ಪ್ರತಿರೋಧ ನಡೆಸಬಹುದು. ವಿವಿಧ ದೇಶಗಳಲ್ಲಿ ಕೊರೊನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರತಿರೋಧ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸಾಬೂನು ಬಳಸಿ ಸತತ 20 ಸೆಕೆಂಡ್‌ಗಳ ಕಾಲ ಕೈತೊಳೆಯುವುದು ಕೊರೊನಾ ರೋಗ ಪ್ರತಿರೋಧಕ್ಕೆ ಪೂರಕವಾಗಿರುತ್ತದೆ. ಕೊರೊನಾ ಬಾಧಿ ತರ ಸಹಿತ ಮಂದಿಯಿಂದ ಸಾಕಷ್ಟು ಅಂತರ ಕಾಯ್ದಿಟ್ಟು ಕೊಳ್ಳಬೇಕು. ರೋಗ ಬಾಧೆಯಿರುವ ಸಂಶಯ ವಿದ್ದವರು ಸಾರ್ವಜನಿಕ ಸಮಾರಂಭ ಗಳಿಂದ ದೂರ ಉಳಿಯಬೇಕು. ಮನೆಗಳಲ್ಲಿ ನಿಗಾ ದಲ್ಲಿರುವವರು ಉತ್ತಮ ಬೆಳಕು, ಗಾಳಿ ಯಿರುವ ಕೋಣೆಗಳಲ್ಲಿ ವಾಸಿಸಬೇಕು. ರೋಗಿಗಳೊಂದಿಗೆ ವ್ಯವಹರಿಸುವವರು ವೈಜ್ಞಾನಿಕ ರೀತಿಯ ಪ್ರತಿರೋಧ ಮಾರ್ಗಗಳನ್ನು ಅನುಸರಿಸಬೇಕು.

ಹೆಚ್ಚುವರಿ ಜಾಗರೂಕತೆ ವಹಿಸಿ
ಶಿಕ್ಷಣಾಲಯಗಳಿಂದ ಅಧ್ಯಯನ ಪ್ರವಾಸಕ್ಕೆ ತೆರಳುವುದಕ್ಕೆ ಕಠಿನ ನಿಯಂತ್ರಣ ಹೇರಲಾಗಿದೆ. ಕೊರೊನಾ ಬಾಧೆಯಿರುವ ದೇಶಗಳಿಂದ ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸುವ ವಿದೇಶೀಯರ ಬಗ್ಗೆ ತತ್‌ಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಧಿಕಾರಿ ಆದೇಶ ನೀಡಿದರು. ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಪೊಲೀಸರು ತಪಾಸಣೆ ನಡೆಸುವರು. ವಿದೇಶೀಯರು ಸ್ವಯಂ ತಪಾಸಣೆಗೆ ಒಳಗಾಗಬೇಕು. ಕೆಮ್ಮು, ಸೀನು, ಜ್ವರದ ಲಕ್ಷಣಗಳಿದ್ದಲ್ಲಿ ತತ್‌ಕ್ಷಣ ಜಿಲ್ಲಾ ಆಸ್ಪತ್ರೆಯ ಕೊರೊನಾ ನಿಯಂತ್ರಣ ಘಟಕವನ್ನು (ದೂರ ವಾಣಿ ಸಂಖ್ಯೆ: 9946000493.) ಸಂಪರ್ಕಿ ಸಬೇಕು. ಕೊರೊನಾ ರೋಗ ಚಟುವ ಟಿಕೆಗಳ ಅಂಗವಾಗಿ ಎಲ್ಲ ಇಲಾಖೆ ಗಳೂ ಹೆಚ್ಚುವರಿ ಜಾಗರೂಕತೆ ವಹಿಸಿ ಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.