![ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ](https://www.udayavani.com/wp-content/uploads/2024/06/Kambala-415x277.jpg)
Udupi: ಅಪಘಾತ ತಪ್ಪಿಸಲು ಹೋಗಿ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಮೀನಿನ ಲಾರಿ
Team Udayavani, May 22, 2024, 6:10 PM IST
![Udupi: ಅಪಘಾತ ತಪ್ಪಿಸಲು ಹೋಗಿ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಮೀನಿನ ಲಾರಿ](https://www.udayavani.com/wp-content/uploads/2024/05/ambalapady-620x383.jpg)
ಉಡುಪಿ: ಅಂಬಲಪಾಡಿ ಬಳಿ ಕಾರು ಮತ್ತು ಮೀನಿನ ಲಾರಿ ಮುಖಾಮುಖಿ ಢಿಕ್ಕಿಯಾದ ಘಟನೆ ಬುಧವಾರ ನಡೆದಿದೆ.
ಮೀನಿನ ಟ್ರಕ್ ಕೇರಳದ ಕಡೆಗೆ ಹೋಗುತ್ತಿದ್ದ ವೇಳೆ ಅಂಬಲಪಾಡಿ ಸರ್ವಿಸ್ ರಸ್ತೆಯಿಂದ ಹೆದ್ದಾರಿ ಪ್ರವೇಶಿಸಿದ ಮತ್ತೊಂದು ವಾಹನಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸಲು ಟ್ರಕ್ ಚಾಲಕ ಪ್ರಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಟ್ರಕ್ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅವಘಡದಿಂದ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸ್ಥಳದಲ್ಲಿ ಹೆಚ್ಚಿನ ಅಡೆತಡೆಯಾಗದಂತೆ ಟ್ರಕ್ನಿಂದ ಮೀನುಗಳನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಲಾಯಿತು. ಉಡುಪಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ:KMC ವೈದ್ಯಕೀಯ ಜೆನೆಟಿಕ್ಸ್ ವಿಭಾಗದಿಂದ ಮೇ. 25ರಂದು ʼಓಪನ್ ಡೇʼ ಕಾರ್ಯಕ್ರಮ
ಟಾಪ್ ನ್ಯೂಸ್
![ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ](https://www.udayavani.com/wp-content/uploads/2024/06/Kambala-415x277.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.