ಅವರ ಅಂಗಡಿ ಸೇಫ್ ಇದ್ಯಾ?

Team Udayavani, Jul 8, 2020, 5:11 AM IST

hats centre

ನಮ್ಮ ಬೀದಿಯ ಕೊನೆಯಲ್ಲಿ ಒಂದು ಚಾಟ್ಸ್‌ ಸೆಂಟರ್‌ ಇದೆ. ಈ ಮೊದಲು, ಅಂದರೆ ಕೋವಿಡ್‌ 19 ಬರುವುದಕ್ಕೂ ಮೊದಲು, ಪ್ರತಿದಿನ ಅಲ್ಲಿಗೊಂದು ಭೇಟಿ ಕೊಡುವುದಿತ್ತು. ಒಂದು ದಿನ ಪಾನಿಪುರಿ, ಮರುದಿನ ಭೇಲ್‌ ಪುರಿ, ಕೆಲವು ದಿನ ಮಸಾಲ ಪುರಿ ಜೊತೆಗೆ ದಹಿ ಪುರಿಯೂ… ಆಹಾ, ಎಂಥ ದಿನಗಳವು! ನೆನಪಿಸಿಕೊಂಡರೆ, ಈಗಲೂ ಬಾಯಲ್ಲಿ ನೀರು ಬರುತ್ತದೆ. ಲಾಕ್‌ಡೌನ್‌ಗೂ ಎರಡು ದಿನ ಮೊದಲೇ ಅವರು ಅಂಗಡಿ ಮುಚ್ಚಿಬಿಟ್ಟರು.

ಅಯ್ಯೋ, ನಾಳೆಯಿಂದ ಚಾಟ್ಸ್‌  ತಿನ್ನೋಕೆ ಆಗಲ್ಲ ಅಂತ ಬೇಸರ ಪಡುವಷ್ಟರಲ್ಲಿ, ನಾವೂ ಮನೆಯಿಂದ ಹೊರಗೆ ಹೋಗದಂತೆ ಆಯಿತು. ಭಾನುವಾರ ಮತ್ತು ಹಬ್ಬ ಹರಿದಿನಗಳಂದೂ ಅಂಗಡಿ ತೆರೆದಿರುತ್ತಿದ್ದ ಚಾಟ್ಸ್‌ ಅಂಗಡಿ ಅಣ್ಣ, ಊರಿಗೆ ಹೋಗಿದ್ದು ಒಳ್ಳೆಯದೇ  ಆಯಿತು ಅಂದುಕೊಂಡೆ. ಲಾಕ್‌ಡೌನ್‌ ಮುಗಿದು, ಮೊನ್ನೆಯಷ್ಟೇ ಅವರು ಊರಿನಿಂದ ಬಂದರು. ಹಾಲು ತರಲು ಹೋದಾಗ ಅವರ ಅಂಗಡಿ ತೆರೆದಿರುವುದನ್ನು ನೋಡಿ ಆನಂದವಾಯ್ತು.

ಇವತ್ತು ಸಂಜೆ ಚಾಟ್ಸ್‌ ತಿನ್ನುವುದೇ ಅಂತ  ಖುಷಿಯಿಂದ ಮನೆಗೋಡಿದೆ. “ರೀ, ಚಾಟ್ಸ್‌ ಅಂಗಡಿ ಓಪನ್‌ ಆಗಿದೆ. ಇವತ್ತು ಹೋಗೋಣಾ?’ ಅಂದೆ ಉತ್ಸುಕಳಾಗಿ. “ಏನೂ ಬೇಡ’ ಅಂದರು ಮನೆಯವರು. “ಅವರ ಊರು ಯಾವುದು ಅಂತ ಗೊತ್ತಲ್ವಾ? ಅಲ್ಲಿ ಕೋವಿಡ್‌ 19 ಮಿತಿಮೀರಿ ಹಬ್ಬುತ್ತಿದೆ. ಈಗಷ್ಟೇ ಬಂದಿದ್ದಾರೆ ಊರಿಂದ. ಈಗಲೇ ತಿನ್ನೋಕೆ ಹೋಗೋದು ಬೇಡ.

ಒಂದು ವಾರ ಕಳೆದ ಮೇಲೆ ನೋಡೋಣ’ ಅಂದರು. ಅಯ್ಯೋ, ಹೀಗೆಲ್ಲಾ ಉಂಟಾ! ನಮಗೆ ಗೊತ್ತಿದ್ದವ ರನ್ನೂ ಅನುಮಾನದಿಂದ ನೋಡುವಂ  ತಾಯ್ತಲ್ಲ ಅಂತ ನೊಂದುಕೊಂಡೆ. ಮಾರನೇ ದಿನ ಹಾಲು ತರಲು ಹೋದಾಗ, “ಏನು ಮೇಡಂ ಈ ಕಡೆ ಬಂದೇ ಇಲ್ಲ’ ಅಂತ ಅಂಗಡಿಯ ಅಣ್ಣ ಪ್ರೀತಿಯಿಂದ ಕರೆದರು. ಏನು ಹೇಳಲೂ ತೋಚದೆ ಪೆಚ್ಚಾಗಿ ನಕ್ಕು ಮನೆಗೆ ಬಂದೆ.

* ಪೂರ್ಣಿಮಾ ಎಸ್.

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.