ಗಟ್ಟಿ ಮಾಡಿದ ಮಗ್ಗಿ ಮರೆತು ಹೋಗುತ್ತಿತ್ತು…


Team Udayavani, Nov 20, 2018, 6:00 AM IST

primary-education.jpg

ಪ್ರಾಥಮಿಕ ಶಾಲೆಯ ಮಾಸ್ತರರಾಗಿದ್ದ ಮಲ್ಲಿಕಾರ್ಜುನ ಸರ್‌, ನಮಗೆ ನೂರು ಸಾರಿ ಮಗ್ಗಿ ಬರೆದುಕೊಂಡು ಬರಲು ಹೇಳುತ್ತಿದ್ದರು. ಬೆಳಗ್ಗೆ 10 ಗಂಟೆಗೆ ಬರುತ್ತಿದ್ದ ಜಯ ಬಸ್‌ನಲ್ಲಿ ಅವರು ಬಂದಿಳಿದರೆ ಸಾಕು; ನಮ್ಮ ಎದೆ, ಶಾಲೆಯ ಬೆಲ್‌ನಂತೆ ಹೊಡೆದುಕೊಳ್ಳುತ್ತಿತ್ತು. 

ಎರಡೊಂದ್ಲ ಎರಡು, ಎರಡೆರಡ್ಲ ನಾಕು… ಹೀಗೆ ಮಗ್ಗಿ ಹೇಳದೆ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದವರಿಲ್ಲ. ಶಾಲೆಯಲ್ಲಿ ಪ್ರತಿಯೊಬ್ಬರೂ ಸರದಿ ಪ್ರಕಾರವಾಗಿ ಮಗ್ಗಿಯ ಪಠಣ ಮಾಡಲೇಬೇಕಿತ್ತು. ಪ್ರಾಥಮಿಕ ಶಾಲೆಯ ಮಾಸ್ತರರಾಗಿದ್ದ ಮಲ್ಲಿಕಾರ್ಜುನ ಸರ್‌, ನಮಗೆ ನೂರು ಸಾರಿ ಮಗ್ಗಿ ಬರೆದುಕೊಂಡು ಬರಲು ಹೇಳುತ್ತಿದ್ದರು. ಬೆಳಗ್ಗೆ 10 ಗಂಟೆಗೆ ಬರುತ್ತಿದ್ದ ಜಯ ಬಸ್‌ನಲ್ಲಿ ಅವರು ಬಂದಿಳಿದರೆ ಸಾಕು; ನಮ್ಮ ಎದೆ, ಶಾಲೆಯ ಬೆಲ್‌ನಂತೆ ಹೊಡೆದುಕೊಳ್ಳುತ್ತಿತ್ತು. ಪ್ರಾರ್ಥನೆ ಹೇಳುವ ಸಂದರ್ಭದಲ್ಲಿ ಎಲ್ಲರೂ ಮನಸ್ಸಿನಲ್ಲೇ ಮಗ್ಗಿ ಅಭ್ಯಾಸ ಮಾಡುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಶಾಲೆಯ ಪಕ್ಕದಲ್ಲೇ ಇರುವ ಕಾಳಿಂಗೇಶ್ವರ ದೇವರಿಗೆ ದಿನಾ ನಮಸ್ಕರಿಸಿ, “ಇವತ್ತು ಸಾರ್‌ ಮಗ್ಗಿ ಕೇಳದೇ ಇರಲಿ’ ಎಂದು ಹರಕೆ ಹೊತ್ತುಕೊಳ್ಳುವ ಗೆಳೆಯ ಗುರುಮೂರ್ತಿಗೆ, ಯಾವತ್ತೂ ಮಗ್ಗಿ ನೆನಪಿಗೆ ಬರುತ್ತಿರಲಿಲ್ಲ. ಆದರೂ, ಆತನ ಹರಕೆ ಫ‌ಲ ನೀಡಿ ಕೆಲವೊಮ್ಮೆ ಮೇಷ್ಟ್ರು ಕ್ಲಾಸ್‌ನಲ್ಲಿ ಮಗ್ಗಿ ಹೇಳಿಸದೆ, ಮೀಟಿಂಗ್‌, ಟ್ರೆ„ನಿಂಗ್‌ ಎಂದು ಹೋಗಿದ್ದಿದೆ. ಆದರೆ ಕೆಲವೊಮ್ಮೆ ನಮ್ಮ ಪ್ರಾರ್ಥನೆ ಉಲ್ಟಾ ಹೊಡೆದು, ಮೀಟಿಂಗ್‌ ಮುಗಿಸಿ ಮತ್ತೆ ಕ್ಲಾಸ್‌ಗೆ ಬಂದು, “ಮಗ್ಗಿ ಹೇಳಿ’ ಎಂದಾಗ ಜೀವ ಬಾಯಿಗೆ ಬಂದಿರುತ್ತಿತ್ತು. 

ಮಲ್ಲಿಕಾರ್ಜುನ ಮಾಸ್ತರ್‌ ಕುರಿತು ನನಗೆ ಎಷ್ಟು ಹೆದರಿಕೆ ಇತ್ತೆಂದರೆ, ನೂರು ಸಾರಿ ಹೇಳಿ ಗಟ್ಟು ಹೊಡೆದಿದ್ದ ಮಗ್ಗಿ ಕೂಡ ಅವರ ಮುಂದೆ ಮರೆತು ಹೋಗುತ್ತಿತ್ತು. ಇದನ್ನೆಲ್ಲ ಬಿಟ್ಟು ಎಮ್ಮೆ ಕಾಯೋಣ ಅಂತ ಅನ್ನಿಸಿದ್ದಿದೆ. ಆದರೆ, ಅವತ್ತಿನ ಸಂದರ್ಭದಲ್ಲಿ, ನಮ್ಮ ಮನೆಯಲ್ಲಿ ಆ ಕೆಲಸವೂ ಖಾಲಿ ಇರಲಿಲ್ಲ. ಆ ಕೆಲಸವನ್ನು ಅಪ್ಪನೇ ಮಾಡುತ್ತಿದ್ದರು. “ನಾನು ಶಾಲೆಗೆ ಹೋಗಲ್ಲ, ಎಮ್ಮೆ ಕಾಯ್ತಿàನಿ’ ಅಂದಿದ್ದಕ್ಕೆ ಅಪ್ಪನಿಂದ ಎರಡು ಕಜಾjಯ ಬಿತ್ತು ನೋಡಿ! ಅವತ್ತಿನಿಂದ ಎಮ್ಮೆ ಮೇಯಿಸುವ ಬಗ್ಗೆ ಯೋಚನೆಯನ್ನೂ ಮಾಡಲಿಲ್ಲ. 
ನಾನು ಹೋಂ ವರ್ಕ್‌ ಬರೆಯುತ್ತಿದ್ದ ವಿದ್ಯಾ ನೋಟ್‌ಬುಕ್‌ಗಳನ್ನೆಲ್ಲ, ತಾತ ಅವರ ಟ್ರಂಕ್‌ನಲ್ಲಿ ಎತ್ತಿಟ್ಟಿದ್ದದ್ದು ನನಗೆ ಗೊತ್ತೇ ಇರಲಿಲ್ಲ. ಒಮ್ಮೆ ಹಬ್ಬದ ಪ್ರಯುಕ್ತ ಮನೆಯನ್ನೆಲ್ಲ ಸ್ವತ್ಛಗೊಳಿಸುವಾಗ ಅವೆಲ್ಲಾ ನನ್ನ ಕೈಗೆ ಸಿಕ್ಕಿದ್ದವು. ಜೊತೆಗೆ ಹಳೆಯ ಆಟದ ಸಾಮಾನುಗಳೂ ಇದ್ದವು. ನೆಲ ಅಗೆಯುವಾಗ ನಿಧಿ ಸಿಕ್ಕರೆ ಎಷ್ಟು ಖುಷಿಯಾಗುತ್ತದೋ, ಅವತ್ತು ನನಗೆ ಅದಕ್ಕಿಂತಲೂ ಜಾಸ್ತಿ ಖುಷಿಯಾಗಿತ್ತು. ಒಂದು ಕ್ಷಣ ಬಾಲ್ಯದ ದಿನಗಳು ಕಣ್ಮುಂದೆ ಕುಣಿದವು. 

– ಈ. ಪ್ರಶಾಂತ್‌ಕುಮಾರ್‌, ಸೊರಬ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.