ಗಿಟಾರ್‌ ಆರಾಧನೆ

Team Udayavani, Jan 15, 2019, 12:30 AM IST

shutterstoc.jpg

ಗಿಟಾರ್‌ ಅನ್ನು ಯಾವುದೋ ಮೂಲೆಯಲ್ಲಿಟ್ಟು ಮಲಗುತ್ತಿದ್ದ, ನನಗೆ ಅಂದು ಆ ಮೂಲೆ ಯಾಕೋ ಬಿಕೋ ಎನ್ನುತ್ತಿದೆ ಅಂತನ್ನಿಸಿತು. ಪ್ರತಿ ಸೆಕೆಂಡಿಗೂ ಗಿಟಾರ್‌ನ ವಿರಹ ಕಾಡುತ್ತಿತ್ತು. “ನನಗೆ ಗಿಟಾರ್‌ ಬೇಕು, ಈಗಲೇ ಅದನ್ನು ನುಡಿಸಬೇಕು’ ಎಂಬ ಹಠ ಮೂಡುತ್ತಿತ್ತು…

ಈ ಭೂಮಿ ಮೇಲೆ ಹುಟ್ಟಿ ಹದಿನೆಂಟು ವಸಂತ ದಾಟಿತು. “ಏನು ಸಾಧಿಸಿದೆ?’ ಅಂತ ನನ್ನನ್ನು ನಾನು ಕೇಳಿಕೊಂಡ್ರೆ, ನನ್ನ ಮುಖ ನನಗೇ ಗೊತ್ತಿಲ್ಲದಂತೆ ಆಕಾಶದತ್ತ ನೋಡುತ್ತಿತ್ತು! ಆದರೂ, ಬಾಲ್ಯದಲ್ಲಿ ನನಗೆ ಮುಂದೆ ದೊಡ್ಡ ಗಿಟಾರಿಸ್ಟ್‌ ಆಗಬೇಕೆಂಬ ಹೆಬ್ಬಯಕೆ ಇತ್ತು. ನನ್ನದೇ ಆಲ್ಬಂ ಸಾಂಗ್‌ ಮಾಡಿ, ರಂಜಿಸಬೇಕೆಂಬ ಕನಸು ಕೈಗೂಡಿಯೇ ಇರಲಿಲ್ಲ.

ಅದೃಷ್ಟವೋ ಏನೋ, ಉಜಿರೆಯಲ್ಲಿ ಹಲವು ವರ್ಷಗಳ ಕಾಲ ನಾನಾ ಕಾರಣಗಳಿಂದ ಮುಚ್ಚಿಹೊಗಿದ್ದ ಗಿಟಾರ್‌ ತರಬೇತಿ ಸಂಸ್ಥೆ ಮತ್ತೆ ತೆರೆದುಕೊಂಡಿತ್ತು. “ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ’ ಎಂಬ ಮಾತಿನಂತೆ ನಾನು ಉತ್ಸಾಹದ ಪಲ್ಲಕ್ಕಿಯನ್ನು ಏರಿಯೇಬಿಟ್ಟೆ. ಹೊಚ್ಚ ಹೊಸ ಗಿಟಾರನ್ನು ಕೊಂಡು, ಅಭ್ಯಾಸಕ್ಕೂ ಅಣಿಯಾದೆ. ಯಾಕೋ ಬರ್ತಾ ಬರ್ತಾ ರಾಯರ ಕುದುರೆ, ಕತ್ತೆ ಆಯ್ತು ಎನ್ನುವಂತೆ ಗಿಟಾರ್‌ ಕಲಿಕೆಯಲ್ಲಿ ಮೊದಲಿದ್ದ ಉತ್ಸಾಹ, ಧಸಕ್ಕನೆ ಕುಸಿಯುತ್ತಾ ಹೋಯ್ತು. ಯಾಕೋ ನನ್ನ ಪ್ರಯತ್ನ ಆರಂಭಶೂರತ್ವ ಆಯಿತೇನೋ ಅಂತನ್ನಿಸಿತು. ಇಂದಿನ ಹುಡುಗರು ಪ್ರತಿ ಕೆಲಸವನ್ನು ಬಹಳ ಜೋಶ್‌ನಿಂದಲೇ ಆರಂಭಿಸುತ್ತೆ. ನಂತರ ಬ್ಯಾಟರಿ ಡಲ್‌ ಆದಂತೆ, ವರ್ತಿಸುತ್ತೆ. ನಾಳೆ ಕಲಿತರಾಯ್ತು ಎನ್ನುವ ಭಾವ, ನಮ್ಮ ಕನಸನ್ನು ಮುಂದೂಡುತ್ತಾ ಹೋಗುತ್ತೆ.

ಯಾಕೋ ಆ ಗಿಟಾರ್‌ಗೆ ನಾನು ಒಗ್ಗಿರಲಿಲ್ಲ. ನಾನೇನೋ ಬಾರಿಸಿದರೆ, ಅದೇನೋ ನುಡಿಯುತ್ತಿತು. ಅದೆಷ್ಟೇ ಸತಾಯಿಸಿದರೂ, ತರಬೇತಿ ಕ್ಲಾಸ್‌ಗೆ ಹೋಗೋದನ್ನು ಮಾತ್ರ ನಾನು ನಿಲ್ಲಿಸಲೇ ಇಲ್ಲ. ಅದೊಂದು ದಿನ ಕ್ಲಾಸ್‌ಗೆ ಹೊರಟಾಗ, ದಾರಿಯಲ್ಲಿ ನನ್ನ ಅಪರೂಪದ ಜೂನಿಯರ್‌ ಗೆಳೆಯ ಸಿಕ್ಕಿದ. ಅವನು ಥಟ್ಟನೆ, “ಅಣ್ಣಾ… ಗಿಟಾರ್‌ ಕಲಿತಿದ್ದೀರಲ್ಲ, ನಿಮ್ಮಿಂದ ಒಂದು ಹೆಲ್ಪ್ ಆಗ್ಬೇಕಿತ್ತು’ ಎಂದು ಅಂಗಲಾಚಿದ. “ನನ್ನ ಕಾಲೇಜಿನಲ್ಲಿ ಕಲ್ಚರಲ್‌ ಪ್ರೋಗ್ರಾಮ್‌ ಆಗ್ತಿದೆ. ನಿಮ್ಮ ಗಿಟಾರ್‌ ಬೇಕಿತ್ತು’ ಎಂದ. 

ಅಂವ ಒಳ್ಳೇ ಹುಡುಗನೇ ಆಗಿದ್ದರೂ, ತುಸು ಹೊತ್ತು ಯೋಚಿಸಿ, ಈತ ಗಿಟಾರ್‌ ಹಾಳು ಮಾಡೋದಿಲ್ಲ ಅನ್ನೋದನ್ನು ನನ್ನೊಳಗೇ ದೃಢಪಡಿಸಿಕೊಂಡೆ. “ಈಗ ಕ್ಲಾಸ್‌ ಇದೆ. ಅರ್ಧ ಗಂಟೆ ಬಿಟ್ಟು, ಕೊಡ್ತೀನಿ’ ಅಂತೆØàಳಿ ಹೊರಟು, ಕ್ಲಾಸ್‌ ಮುಗಿಸಿ ಬಂದಾಗ ಆತ ಅಲ್ಲೇ ಅಡ್ಡಾಡುವುದನ್ನು ಕಂಡೆ. “ಹುಷಾರು, ಸೇಫ್ ಆಗಿ ನೋಡಿಕೋ’ ಎಂದು ಹೇಳಿ, ಗಿಟಾರ್‌ ಕೊಟ್ಟು ಕಳಿಸಿದೆ. ಆತ ನಿಧಿ ಸಿಕ್ಕಿತೇನೋ ಎಂಬಂತೆ ಊರಗಲ ಮುಖ ಮಾಡಿಕೊಂಡು, ಬಗಲಿಗೇರಿಸಿಕೊಂಡು ಹೊರಟ. ಯಾಕೋ ಬರಿಗೈಯಲ್ಲಿ ಹಾಸ್ಟೆಲ್‌ಗೆ ಮರಳುವಾಗ, ಏನೋ ಕಳಕೊಂಡಂತಾಗಿತ್ತು.

ಇನ್ನೊಂದು ವಿಚಾರ ಅಂದ್ರೆ, ನನ್ನ ಗಿಟಾರ್‌ ಅನ್ನು ನನಗಿಂತ ನುಡಿಸ್ತಾ ಇದ್ದಿದ್ದು, ನನ್ನ ಫ್ರೆಂಡು. ಹೊಸ ಹೊಸ ಟ್ಯೂನ್‌ ಹಾಕಿ ಖುಷಿಪಡ್ತಾ ಇದ್ರು. ಕೆಲವೊಮ್ಮೆ ಅದು ಕೇಳಲು ಆಗದಷ್ಟು ಇಂಪಾಗಿರುತ್ತಿತ್ತು! ಆದರೂ ಅದರಲ್ಲಿ ಸಿಗುತ್ತಿದ್ದ ಮನರಂಜನೆ ಮಾತ್ರ ವರ್ಣಿಸಲಸಾಧ್ಯ. ನನ್ನ ಕೈಯಲ್ಲಿ ಗಿಟಾರ್‌ ಇಲ್ಲದ್ದನ್ನು ನೋಡಿ ಅವರೆಲ್ಲರ ಮುಖ ಬಾಡಿತು. ಮನದಲ್ಲಿ ತಳಮಳ, ನಿರುತ್ಸಾಹ, ಅಸಹನೆ ಒಮ್ಮಿಂದೊಮ್ಮೆಲೆ ತಾಂಡವವಾಡುತ್ತಿದ್ದವು. ಗಿಟಾರ್‌ ಇಲ್ಲದ್ದನ್ನು ಕಂಡ ಸ್ನೇಹಿತರು ಇಂದಿನ ಮನರಂಜನೆ ಕಳೆದೇಹೋಯಿತೆಂದು ವಾಚಾಮಗೋಚರವಾಗಿ ಬಯ್ದಾಗ, ನನ್ನ ಕಿವಿ ಬಿಸಿ ಆಯ್ತು.

ಗಿಟಾರ್‌ ಅನ್ನು ಯಾವುದೋ ಮೂಲೆಯಲ್ಲಿಟ್ಟು ಮಲಗುತ್ತಿದ್ದ, ನನಗೆ ಅಂದು ಆ ಮೂಲೆ ಯಾಕೋ ಬಿಕೋ ಎನ್ನುತ್ತಿದೆ ಅಂತನ್ನಿಸಿತು. ಪ್ರತಿ ಸೆಕೆಂಡಿಗೂ ಗಿಟಾರ್‌ನ ವಿರಹ ಕಾಡುತ್ತಿತ್ತು. “ನನಗೆ ಗಿಟಾರ್‌ ಬೇಕು, ಈಗಲೇ ಅದನ್ನು ನುಡಿಸಬೇಕು’ ಎಂಬ ಹಠ ಮೂಡುತ್ತಿತ್ತು. ಯಾರೋ ಆಪ್ತನನ್ನು ಕಳಕೊಂಡ ಭಾವ. ಕಣ್ಣಲ್ಲಿ ನೀರು ಜಿನುಗಿಸುತ್ತಿತ್ತು. ಅಪ್ಪ- ಅಮ್ಮ ಕಷ್ಟಪಟ್ಟು ದುಡಿದು ನೀಡಿದ ಹಣದಲ್ಲಿ ಆಸೆಪಟ್ಟು ಕೊಂಡ ಗಿಟಾರ್‌ ಅನ್ನು ಸರಿಯಾಗಿ ಬಳಸದೇ, ನಿರ್ಲಕ್ಷ್ಯದ ವಸ್ತುವಂತೆ ನೋಡಿದೆನಲ್ಲ ಎಂದು ಅತೀವ ದುಃಖ ಆವರಿಸಿತು. ಈ ಕೂಡಲೇ ಹೋಗಿ, ಆ ಸ್ನೇಹಿತನಿಂದ ಗಿಟಾರನ್ನು ವಾಪಸು ಪಡೆದುಕೊಂಡು ಬರೋಣ ಅಂತ ಮುನ್ನಡಿ ಇಟ್ಟೆ. ಕೊನೆಗೆ ಯಾಕೋ ಸುಮ್ಮನಾದೆ. “ನಾನಂತೂ ಗಿಟಾರನ್ನು ಬಳಸದೇ ನಿರ್ಲಕ್ಷ್ಯ ವಹಿಸಿದೆ. ಆತನಾದರೂ ಶಹಬ್ಟಾಶ್‌ಗಿರಿ ಪಡೆಯಲಿ’ ಎಂದು ನನ್ನನ್ನು ನಾನೇ ಸಮಾಧಾನಿಸಿಕೊಂಡೆ.

ನಿಜವಾಗಿಯೂ ಅಂದು, ಗಿಟಾರಿನ ದನಿ ನನ್ನ ಧಮನಿಯೊಳಗೆ ಬೆರೆತು ಹೋಗಿತ್ತು. ಆಗಲೇ ನನಗೆ ಅನ್ನಿಸಿದ್ದು, ಜೊತೆಗಿದ್ದಾಗ ಯಾವ ವಸ್ತು, ಯಾವ ವ್ಯಕ್ತಿಯ ಬೆಲೆಯೂ ಗೊತ್ತಾಗುವುದಿಲ್ಲ; ಕಳಕೊಂಡಾಗ ಅಥವಾ ದೂರ ಹೋದಾಗಲಷ್ಟೇ ಅವುಗಳ ಮಹತ್ವ ಅರಿವಿಗೆ ಬರುತ್ತೆ ಅಂತ. 

– ಆದರ್ಶ್‌ ಕೆ.ಜಿ., ಉಜಿರೆ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.