ಕಪಟ ಜನರ‌ನ್ನು ಬೆತ್ತಲೆಗೊಳಿಸುತ್ತಿದೆ “ಮಿ ಟೂ’ ಅಭಿಯಾನ


Team Udayavani, Oct 17, 2018, 6:00 AM IST

9.jpg

ಚಿತ್ರರಂಗದ ಕಲಾವಿದೆಯರ ಮೇಲಿನ ಲೈಂಗಿಕ ಪೀಡನೆಯ ವಿರುದ್ಧ ಎಲ್ಲರಿಗಿಂತ ಮೊದಲಿಗೆ ಪ್ರತಿಭಟನೆ ವ್ಯಕ್ತಪಡಿಸಿದವರು, ಸುವಿಖ್ಯಾತ ಹಿಂದಿ ಹಾಗೂ ಮರಾಠಿ ಚಿತ್ರ ನಟಿ-ಗಾಯಕಿ ಶಾಂತಾ ಆಪ್ಟೆ. “ಭಾರತೀಯ ಸಿನೆಮಾರಂಗದ ಪ್ರಪ್ರಥಮ ಬಂಡಾಯ ತಾರೆ’ ಎಂದು ಪರಿಗಣಿಸಲ್ಪಟ್ಟಿರುವ ಈಕೆ ಸೆಟೆದು ನಿಂತುದು, ಚಿತ್ರರಂಗದ ಮೇರು ವ್ಯಕ್ತಿಗಳಲ್ಲೊಬ್ಬರಾದ ವಿ. ಶಾಂತಾರಾಂ ವಿರುದ್ಧ.

“ಮಿ ಟೂ’ ಅಭಿಯಾನದ ಕಾವು ರಾಷ್ಟ್ರಾದ್ಯಂತ ಹಬ್ಬಿದೆ. ಅನೇಕ ಢೋಂಗಿ ಐಡಲ್‌ಗ‌ಳು ಹಾಗೂ ನಕಲಿ ಹೀರೋಗಳು ಸಾರ್ವಜನಿಕವಾಗಿ ಬತ್ತಲಾಗುತ್ತಿದ್ದಾರೆ. ಸಡಿಲ ನೈತಿಕತೆಯ ವ್ಯಕ್ತಿಗಳು ಎಂಬುದಾಗಿ ಇವರನ್ನು ಬಿಂಬಿಸಲಾಗುತ್ತಿದೆ. ಹೀಗಿದ್ದರೂ, ಈ ಆರೋಪವನ್ನು ಹೊತ್ತಿರುವವರಲ್ಲಿ ಒಬ್ಬರಾದ ವಿದೇಶಾಂಗ ಖಾತೆಯ ಸಹಾಯಕ ಸಚಿವ ಎಂ.ಜೆ. ಅಕºರ್‌ ಅವರು ವರ್ಣಿಸಿರುವಂತೆ ಇದು ಬರೇ “ವೈರಲ್‌ ಜ್ವರ’ ಎಂದು ಕರೆದು ಈ ಅಭಿಯಾನವನ್ನು ಅವಗಣಿಸುವ ಹಾಗಿಲ್ಲ. ನಿವೃತ್ತ ಪತ್ರಿಕಾ ಸಂಪಾದಕ ಅಕºರ್‌ರ ಈ ಹೇಳಿಕೆ “ಪತ್ರಕರ್ತನ ಉತ್ಪ್ರೇಕ್ಷೆ’ಯಷ್ಟೇ ಆಗಿದೆ.  ವಾಸ್ತವವಾಗಿ “ಮಿ ಟೂ’ ಅಭಿಯಾನ, ಒಂದು ಧೈರ್ಯ ಕೊಡುವ ಟಾನಿಕ್‌ ಆಗಿ ಪರಿಣಮಿಸಿದೆ. ವಾಸ್ತವವಾಗಿ ಈ ಆಂದೋಲನ, ಲೈಂಗಿಕ ದೌರ್ಜನ್ಯಕ್ಕೆ, ಲೈಂಗಿಕ ಹಲ್ಲೆಗೆ ಹಾಗೂ ಆತ್ಯಾಚಾರಕ್ಕೆ ಬಲಿಯಾಗಿರುವ ಅನೇಕರಿಗೆ ಧೈರ್ಯದಿಂದ ಮುಂದೆ ಬಂದು ತಮಗಾದ ಅನ್ಯಾಯವನ್ನು ವಿವರಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ತಮ್ಮ ಹಿಂದಿನ “ಬಾಸ್‌’ಗಳಿಂದ ತಮ್ಮ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಇಷ್ಟು ದೀರ್ಘ‌ಕಾಲ ಮೌನದಿಂದಿದ್ದು ಹಿಂಸೆ ಅನುಭವಿಸುತ್ತಿದ್ದು, ಈಗ ತುಟಿ ಬಿಚ್ಚುತ್ತಿರುವ ಸುಶಿಕ್ಷಿತ ಮಹಿಳೆಯರು ಹಾಗೂ ವೃತ್ತಿಪರ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇದು ಶ್ಲಾಘನೀಯ ಅಭಿನಂದನೀಯ. ಮೊದಲಿಗೆ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದ್ದ ಈ ಆಂದೋಲನ ಈಗ ಚಲನಚಿತ್ರ ಜಗತ್ತಿಗೆ, ಪತ್ರಿಕಾ ಮಾಧ್ಯಮಕ್ಕೆ ಅದೇ ರೀತಿ ಪರಮಪವಿತ್ರವೆಂದು ಭಾವಿಸಲಾಗಿರುವ ನ್ಯಾಯಾಂಗ ಕ್ಷೇತ್ರಕ್ಕೂ ಹಬ್ಬಿದೆ. ಇದುವರೆಗೆ ಈ ಆಂದೋಲನ ಲೈಂಗಿಕ ದೌರ್ಜನ್ಯದ ದೂರುಗಳನ್ನಷ್ಟೆ ಒಳಗೊಂಡಿದೆ; ಲೈಂಗಿಕ ಹಲ್ಲೆ ಹಾಗೂ ಅತ್ಯಾಚಾರದಂಥ ಪ್ರಕರಣಗಳನ್ನು ಒಳಗೊಂಡಿಲ್ಲ. ಅಂದ ಹಾಗೆ, ಕೇರಳ ಮೂಲದ ಕೆಥೋಲಿಕ್‌ ಬಿಷಪ್ಪರೊಬ್ಬರು ಬಂಧನಕ್ಕೊಳಗಾಗಿರುವ ಪ್ರಕರಣ, ಕೊನೆಯದಾದ ಅತ್ಯಾಚಾರ ಪ್ರಕರಣಗಳ ವರ್ಗದ ವ್ಯಾಪ್ತಿಯಲ್ಲಿ ಬರುತ್ತದೆ.

ಆದರೆ ಅಚ್ಚರಿಯೆಂದರೆ “ಮಿ ಟೂ’ ಆಂದೋಲನದ ಝಳ ನಮ್ಮ ರಾಜಕಾರಣಿಗಳಿಗೆ ತಟ್ಟಿಲ್ಲ. ಇವರಲ್ಲಿ ಅನೇಕರು ತಮ್ಮ ಕ್ರಿಮಿನಲ್‌ ಚಟುವಟಿಕೆಗಳಿಂದ ಸುದ್ದಿ ಮಾಡಿರುವವರು. ಶ್ವೇತ ವಸ್ತ್ರಧಾರಿಗಳಾಗಿ ಮಿಂಚುತ್ತಿರುವ ನಮ್ಮ ರಾಜಕಾರಣಿಗಳು ನಿಜಕ್ಕೂ ನೇಮನಿಷ್ಠೆಯುಳ್ಳ ಮರ್ಯಾದಾ ಪುರುಷೋತ್ತಮರೇ? ಈ ವಿಷಯದಲ್ಲಿ  ಬಲಿಪಶುಗಳಾಗಿರುವ ನಮ್ಮ ಕೆಲ ಮಹಿಳಾ ರಾಜಕಾರಣಿಗಳನ್ನು ಪತ್ರಿಕೆಗಳ ಬಳಿ ಸುಳಿಯದಂತೆ ರಾಜಕೀಯ ಪಕ್ಷಗಳ ಶಿಸ್ತು ಕ್ರಮ ವ್ಯವಸ್ಥೆ ತಡೆಯುತ್ತಿದೆಯೆ? 

ಆದರೆ ಇದಕ್ಕೆ ವ್ಯತಿರಿಕ್ತವಾಗಿ, “ಮಿ ಟೂ’ ಆಂದೋಲನ ಎಲ್ಲಕ್ಕಿಂತ ಮೊದಲಿಗೆ ಆರಂಭಗೊಂಡ ರಾಷ್ಟ್ರವಾದ ಅಮೆರಿಕದಲ್ಲಿ ಪರಿಸ್ಥಿತಿ ಹೇಗಿದೆ ನೋಡಿ. ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಇಂಥ ಆರೋಪಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ, ಟ್ರಂಪ್‌ ಅವರು ಈ ಆಂದೋಲನವನ್ನು ಗೇಲಿ ಮಾಡಿದ್ದರು; ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ಮಹಿಳಾ ಸೆನೆಟರ್‌ ಎಲಿಜಬೆತ್‌ ವಾರೆನ್‌ ಅವರ ಹಳೆ ಚರಿತ್ರೆಯನ್ನು ಮುಂದಿನ ಚುನಾವಣೆ ಬಹಿರಂಗ ಪರಿಸಲಿದೆ ಎಂದು ವ್ಯಂಗ್ಯ ವಾಡಿದ್ದಾರೆ. ಕ್ವಿಝ್ ಕಾರ್ಯಕ್ರಮವೊಂದರಲ್ಲಿ ಭಾಗವಹಿ ಸುವ ಸ್ಪರ್ಧಿಯೊಬ್ಬ ಅಬ್ರಹಾಂ ಲಿಂಕನ್‌ ಅಥವಾ ಜಾನ್‌ ಎಫ್. ಕೆನಡಿ ಇವರುಗಳ ಪತ್ನಿಯರ ಹೆಸರುಗಳನ್ನು ಹೇಳಬಲ್ಲ; ಆದರೆ ಇಂದು “ಶ್ವೇತಭವನದ ಪ್ರಥಮ ಮಹಿಳೆ ಯಾರು?’ ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲದೆ ಮೌನ ವಹಿಸಬೇಕಾಗುತ್ತದೆ. ಹಾಗೆ ನೋಡಿ  ದರೆ ಕೆನಡಿ ಅಥವಾ “ಜಾಕಿ’ ನೈತಿಕ ಮೂರ್ತಿಗಳೇನಲ್ಲ ಎನ್ನು ವವರೂ ಇರಬಹುದು. ಇನ್ನು, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರು ಮೋನಿಕಾ ಲೆವಿನ್‌ಸ್ಕಿ ಎಂಬಾಕೆಯಿಂದ ಅಸಭ್ಯ ನಡವಳಿಕೆಯ ಆರೋಪಕ್ಕೊಳಗಾಗಿ ಜನಪ್ರತಿನಿಧಿ ಸಭೆ (ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌)ಯಿಂದ ದೋಷಾರೋಪಕ್ಕೆ ಗುರಿಯಾದ ಪ್ರಕರಣ ಎಲ್ಲರಿಗೂ ಗೊತ್ತಿದ್ದದ್ದೇ. ಅರ್ಕಾನ್ಸಾಸ್‌ನ ರಾಜ್ಯಪಾಲರಾಗಿದ್ದ ಸಮ ಯ  ದಲ್ಲೂ ಅವರು ಹೀಗೆಯೇ ಅಸಭ್ಯವಾಗಿ ನಡೆದುಕೊಂಡಿದ್ದರೆಂಬ ಆರೋಪವನ್ನು ಇನ್ನೋರ್ವ ಮಹಿಳೆ ಪೌಲಾ ಜೋನ್ಸ್‌ ಅವರು ಮಾಡಿದ್ದು ಸಾಕಷ್ಟು ಸುದ್ದಿಯಾಗಿದೆ. ಕ್ಲಿಂಟನ್‌ ಅವರು ಅತ್ಯಂತ ಪ್ರಬಲ ರಾಷ್ಟ್ರಾಧ್ಯಕ್ಷರಾಗಿದ್ದ ಕಾಲದಲ್ಲೇ ನಡೆದ ದೋಷಾರೋಪ ಪ್ರಕರಣ ಇದು. ಮುಂದೆ ವಾಗ್ಧಂಡನೆಗೆ ಸಂಬಂಧಿಸಿದ ವಿಚಾರಣೆಯ ವೇಳೆ ಅವರನ್ನು ದೋಷಮುಕ್ತಗೊಳಿಸಲಾಯಿತು.

ಮಹಿಳಾ ಸಹೋದ್ಯೋಗಿಗಳನ್ನು ಲೈಂಗಿಕ ಶೋಷಣೆಗೆ ಗುರಿಯಾಗಿಸಿದರೆಂಬ ಆರೋಪವನ್ನು ಮಾಡಲಾಗಿರುವುದು ಪತ್ರಕರ್ತ ಎಂ.ಜೆ. ಅಕºರ್‌ ಅವರ ಮೇಲೆ; ರಾಜಕಾರಣಿ ಎಂ.ಜೆ. ಅಕºರ್‌ ಮೇಲಲ್ಲ. ಅಕºರ್‌, ಕಿಶನ್‌ ಗಂಜ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದವರು. ಮುಂದೆ ಅವರು ಬಿಜೆಪಿ ಸೇರಿದರು; ಹೊಸ ಪಕ್ಷದಲ್ಲಿ “ಪ್ರಾಯೋಗಿಕ ತರಬೇತಿ ಅಭ್ಯರ್ಥಿ’ಯಾಗಿ ದುಡಿಯುವ ಕಷ್ಟಕ್ಕೆ ಒಳಗಾಗದೆ ಅವರು ಒಬ್ಬ ಸಚಿವರೂ ಆದರು. ಅಷ್ಟರಲ್ಲಿ, ಆ ಪಕ್ಷದ ಬಗ್ಗೆ ಹಿಂದೆಲ್ಲ ತಾವೇನು ಬರೆಯುತ್ತ ಬಂದಿದ್ದರೋ ಅದನ್ನೆಲ್ಲ ಮರೆತಿದ್ದರು. ಈಗ ಅವರ ವಿರುದ್ಧ ಆರೋಪ ಮಾಡುತ್ತಿರುವವರು, ಹಿಂದೆ ಅವರು ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ದಿನಪತ್ರಿಕೆಗಳಲ್ಲಿ ತರಬೇತಿ ಪಡೆಯುತ್ತಿದ್ದ ಪತ್ರಕರ್ತೆಯರು.

“ಮಿ ಟೂ’ ಅಭಿಯಾನ ಜನ್ಮ ತಳೆದಿರುವುದು ಅಮೆರಿಕದಲ್ಲಿ; ಆದ್ದರಿಂದ ಆ ರಾಷ್ಟ್ರವನ್ನು ಪ್ರಸ್ತಾವಿಸದೆ ನಮ್ಮಲ್ಲಿನ ಪ್ರಕರಣಗಳನ್ನು ವಿಶ್ಲೇಷಿಸುವುದು ಸಾಧ್ಯವಿಲ್ಲ. ಅಲ್ಲಿ ಈ ಆಂದೋಲನ ಛಲ – ಬಲ ಪಡೆದುಕೊಂಡುದು 2017ರ ಅಕ್ಟೋಬರ್‌ ಹೊತ್ತಿಗೆ, ಸುಪ್ರಸಿದ್ಧ ಸಿನಿಮಾ ಮತ್ತು ಟಿವಿ ಕಾರ್ಯಕ್ರಮ ನಿರ್ಮಾಪಕ ಹಾರ್ವಿ ವಿನ್‌ಸ್ಟೈನ್‌ ಅವರ ವಿರುದ್ಧದ ಲೈಂಗಿಕ ಹಲ್ಲೆಯ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಎಡೆಬಿಡದೆ ಹರಿದಾಡುತ್ತಿದ್ದ ಸಂದರ್ಭದಲ್ಲಿ. ಆದರೆ ಆಂದೋಲನದ ಹೆಸರು (ಮಿ ಟೂ) ಚಾಲ್ತಿಗೆ ಬಂದುದು 2006ರಲ್ಲಿ, ಸಾಮಾಜಿಕ ಹೋರಾಟಗಾರ್ತಿ ಟೆರೇನಾ ಬ್ರೂಕ್‌ ಈ ಹೆಸರನ್ನು ಬಳಸಿದ ಬಳಿಕ.

ಸರಿಯಾಗಿ ಒಂದು ವರ್ಷದೊಳಗೆ ನಾವು ಈ ವಿಷಯದಲ್ಲಿ ಅಮೆರಿಕವನ್ನು ಅನುಸರಿಸುವಂತಾಗಿದೆ. ಇದು ಅಲ್ಲಿ ಮತ್ತೆ ಜೀವ ಪಡೆಯಲು ಕಾರಣ, ಲೈಂಗಿಕ ಅಸಭ್ಯ ನಡವಳಿಕೆಯ ಆರೋಪ ಎದು ರಿ ಸುತ್ತಿದ್ದ ಬ್ರೆಟ್‌ ಕವನಾಫ್ ಅವರು ಅಮೆರಿಕದ ಸುಪ್ರೀಂಕೋರ್ಟಿನ ನ್ಯಾಯಾಧೀಶ ಹುದ್ದೆಗೆ ನೇಮಕಗೊಂಡುದೇ ಎನ್ನಬಹುದೇನೋ. ಅಮೆರಿಕನ್‌ ಸೆನೆಟ್‌ ಅವರ ನೇಮಕವನ್ನು 52-48 ಮತಗಳಿಂದ ಅನುಮೋದಿಸಿತ್ತು. ಅಮೆರಿಕನ್‌ ಸುಪ್ರೀಂ ಕೋರ್ಟಿನ ನ್ಯಾಯಾ ಧೀಶರೊಬ್ಬರು ಇಂಥ ಆರೋಪ ಹೊತ್ತಿರುವುದು ಇದೇ ಮೊದಲ ಸಲವೇನೂ ಅಲ್ಲ. 1991ರಲ್ಲಿ ನ್ಯಾಯಮೂರ್ತಿ ಕ್ಲಾರೆನ್ಸ್‌ ಥಾಮಸ್‌ ಅವರು ಕೂಡ ಇಂಥದೇ ಆರೋಪಕ್ಕೆ ಗುರಿಯಾಗಿದ್ದರು. ಆಫೊ-ಅಮೆರಿಕನ್‌ (ಹಿಂದೆ ಈ ಪದದ ಬದಲಿಗೆ ಕೃಷ್ಣವರ್ಣೀಯ ಎಂಬ ಪದ ಬಳಕೆಯಾಗುತ್ತಿತ್ತು) ಪ್ರಜೆಯಾಗಿರುವ ಕ್ಲಾರೆನ್ಸ್‌ ಇಂದು ಅಲ್ಲಿನ ಸುಪ್ರೀಂಕೋರ್ಟಿನ ದ್ವಿತೀಯ ಸ್ಥಾನಿ ಹಿರಿಯ ನ್ಯಾಯಾಧೀಶರಾಗಿದ್ದು, ಓರ್ವ ಸಂಪ್ರದಾಯ ನಿಷ್ಠ ಬಲಪಂಥೀಯ ನೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಉನ್ನತ ಹುದ್ದೆಗಳಿಗೆ ಅರ್ಹರಾದ ವ್ಯಕ್ತಿಗಳ (ಪುರುಷರ) ವಿರುದ್ಧ ಸುಳ್ಳು ಆಪಾದನೆಗಳನ್ನು ಹೇರುವಂಥ ಕೆಲಸಕ್ಕೆ ಸಾಮಾನ್ಯವಾಗಿ ಮಹಿಳೆಯರನ್ನು ಬಳಸಿಕೊಳ್ಳುವ ವಿಚಾರ ಯಾರ ಗಮನಕ್ಕೂ ಬೀಳದೆ ಹೋಗಿಲ್ಲ! ಅನೇಕ ಬಾರಿ ಇಂಥ ಆಪಾದನೆಗಳು ಆಧಾರ ರಹಿತವಲ್ಲದಿದ್ದರೂ, ತಕ್ಕಷ್ಟು ಪುರಾವೆಯನ್ನು ಹೊಂದಿಲ್ಲವೆಂದು ಬಿಂಬಿಸಲಾಗುತ್ತಿರುವುದು ಸುಳ್ಳಲ್ಲ. ಅಮೆರಿಕನ್‌ ಸಂಸತ್ತು “ಮಿ ಟೂ’ ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದೇ ರೀತಿ, ನಮ್ಮ ದೇಶದಲ್ಲಿ ಆರೋಪಿ ವ್ಯಕ್ತಿಗಳು ನ್ಯಾಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವವರು ಆರೋಪವನ್ನು ಹೇರಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ (ಅನೇಕ ಸಂದರ್ಭಗಳಲ್ಲಿ  ವರ್ಷಗಟ್ಟಲೆ ಅವಧಿಯ ಬಳಿಕ ಬಾಯಿಬಿಟ್ಟಿದ್ದಾರೆ). ನಮ್ಮ ಇನ್ನೋರ್ವ ಪತ್ರಕರ್ತ ತರುಣ ತೇಜ್‌ಪಾಲ್‌ (ತೆಹಲ್ಕಾ ಪತ್ರಿಕೆ) ವಿರುದ್ಧದ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಬಲಿಪಶುವಾಗಿರುವ ತರುಣಿ ಯಾವುದೇ ವಿಳಂಬವಿಲ್ಲದೆ ಈ ಸತ್ಯವನ್ನು ಜನರ ಮುಂದೆ ಬಯಲುಗೊಳಿಸಿದರು. ಕುಟುಕು ಕಾರ್ಯಾಚರಣೆಗಳ ಮೂಲಕ ರಾಜಕಾರಣಿಗಳನ್ನು ಬಲೆಯಲ್ಲಿ ಕೆಡಹುವ ಜಾಣ್ಮೆ ಹೊಂದಿದ್ದ ತೇಜ್‌ಪಾಲ್‌ ಅವರು 2013ರ ನವೆಂಬರ್‌ನಲ್ಲಿ ಗೋವಾ ಪೊಲೀಸರಿಂದ ಬಂಧನಕ್ಕೊಳಗಾದರು. ಇಂಥ ಪ್ರಸಂಗಗಳಲ್ಲಿ ರಹಸ್ಯ ಕಾಪಾಡುವುದೇ ಒಳ್ಳೆಯದೆಂದು ಲೈಂಗಿಕ ಶೋಷಿತ ಮಹಿಳೆಯರು ಬಾಯುಚ್ಚಿ ಕೂರುವುದಕ್ಕೆ ಕಾರಣ, ಬಹುಶಃ ಅನ್ನ ದೊರಕಿಸುವ ಕೆಲಸವೊಂದು ಕೈ ತಪ್ಪುವ ಅಥವಾ ಕೆಲ ವೃತ್ತಿಗಳಲ್ಲಿ ಅವಕಾಶ ಸಿಗದೇ ಹೋದೀತೆಂಬ ಭೀತಿ. ಸರಕಾರಿ ಸೇವೆಯಲ್ಲಿರುವ ಅನೇಕ ಮಹಿಳೆಯರಿಗೆ ಮುಂದೆ ಬಲಿಪಶುವಾಗಬ ಹುದೆಂಬ ಭೀತಿ ಕಾಡುತ್ತಲೇ ಇರುತ್ತದೆ.

ನಮ್ಮ ದೇಶದಲ್ಲಿ “ಮಿ ಟೂ’ ಅಭಿಯಾನಕ್ಕೆ ಚಾಲನೆ ನೀಡಿರುವುದು ಚಿತ್ರ ನಟ – ನಿರ್ದೇಶಕ ನಾನಾ ಪಾಟೇಕರ್‌ ವಿರುದ್ಧ ನಟಿ ತನುಶ್ರೀ ದತ್ತಾ ಅವರ ಆರೋಪವೆಂಬುದು ನಿಜವಾದರೂ, ಈ ವಿದ್ಯಮಾನಕ್ಕೆ ಹಿನ್ನೆಲೆಯಾಗಿ ಒದಗಿರುವುದು ನ್ಯಾ| ಕವನಾಫ್ ಪ್ರಕರಣವೇ. 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣವನ್ನೂ ಇದರ ಹಿನ್ನೆಲೆ ಭೂಮಿಕೆಯೆಂದು ಗುರುತಿಸಬಹುದಾಗಿದೆ. “ಮಿ ಟೂ’ ಆಂದೋಲನ ವಿಪುಲ ಪ್ರಚಾರವನ್ನು ಪಡೆದುಕೊಂಡಿದೆ; ಬೃಹತ್‌ ಪ್ರಮಾಣದಲ್ಲಿ  ಜನರ ಲಕ್ಷ್ಯ ಈ ಅಭಿಯಾನದತ್ತ ಹರಿದಿದೆ. ಕಳೆದೆರಡು ದಶಕಗಳಲ್ಲಿ ಕಾನೂನು – ಕಾಯ್ದೆಗಳು ಏನನ್ನು ಸಾಧಿಸಿವೆಯೋ ಅದಕ್ಕಿಂತ ಹೆಚ್ಚಿನ ಸಾಧನೆ ಈ ಆಂದೋಲನದಿಂದ ಆಗಿದೆ. 1997ರ ವಿಶಾಖಾ ಹಾಗೂ ರಾಜಸ್ಥಾನ ಸರಕಾರದ ನಡುವಿನ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಕಿರುಕುಳದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನೀಡಿರುವ ಮಾರ್ಗದರ್ಶಿ ಸೂತ್ರಗಳು ಕೇವಲ ನ್ಯಾಯಾಂಗ, ನ್ಯಾಯವಾದಿಗಳು ಹಾಗೂ ಸಮಾಜದ ಸುಶಿಕ್ಷಿತ ವರ್ಗಕ್ಕಷ್ಟೇ ಗೊತ್ತು. ವಿಶಾಖಾ ಕೇಸಿನ ಮಾರ್ಗದರ್ಶಿ ಸೂತ್ರಗಳ ಆಧಾರದಲ್ಲಿ ನಮ್ಮ ಸಂಸತ್ತು 2013ರಲ್ಲಿ ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರ ಮೇಲಣ ಲೈಂಗಿಕ ಕಿರುಕುಳ (ನಿಯಂತ್ರಣ, ನಿಷೇಧ ಹಾಗೂ ಪರಿಹಾರ) ಕಾಯ್ದೆಯನ್ನು ರೂಪಿಸಿದೆ. ವಿಶಾಖಾ ಎನ್ನುವುದು ಲಿಂಗ ಸಮಾನತೆಗಾಗಿ ಹೋರಾಟ ನಡೆಸುತ್ತಿರುವ ಒಂದು ಸರಕಾರೇತರ ಸಂಘಟನೆ. 

ಇನ್ನು, 2013ರಲ್ಲಿ ಅತ್ಯಾಚಾರದ ಅಪರಾಧಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯಲ್ಲಿ ಸೂಕ್ತ ತಿದ್ದುಪಡಿ ತರುವ ಸಾಧ್ಯತೆಯನ್ನು ಪರಿಶೀಲಿಸುವ ಉದ್ದೇಶದಿಂದ ನ್ಯಾ| ಜೆ.ಎಸ್‌. ವರ್ಮಾ ನೇತೃತ್ವದ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಸಮಿತಿಯ ಶಿಫಾರಸಿನನ್ವಯ ರೂಪುಗೊಂಡ ಕಾಯ್ದೆಗೆ ನಿರ್ಭಯಾ ಕಾಯ್ದೆ ಎಂಬ ಹೆಸರು ನೀಡಲಾಯಿತು. ಐಪಿಸಿಯ  ಕಕ್ಷೆಗೆ 354 ಎ ಸೆಕ್ಷನನ್ನು ಸೇರ್ಪಡೆಗೊಳಿಸಿದ್ದೂ ಆಯಿತು. ಲೈಂಗಿಕ ಕಿರುಕುಳ/ ಪೀಡನೆಗೆ ಸಂಬಂಧಿಸಿದ  ನಿಯಮಾವಳಿ ಇದು. ನಗ್ನ ದೇಹ ವೀಕ್ಷಣೆ ಅಥವಾ ಲೈಂಗಿಕ ಕ್ರಿಯೆಯಲ್ಲಿರುವ ಜೋಡಿಗಳ ಕಳ್ಳ ವೀಕ್ಷಣೆ ಹಾಗೂ ಹುಡುಗಿಯರಿರುವಲ್ಲಿ ಠಳಾಯಿಸುವುದು, ಕದ್ದು ಮುಚ್ಚಿ ಗಮನಿಸು ವುದು ಮುಂತಾದ ಕೃತ್ಯಗಳನ್ನು ಅಪರಾಧ ಕೃತ್ಯಗಳೆಂದು ಈ ಸೆಕ್ಷನಿನ ಡಿಯಲ್ಲಿ ಗುರುತಿಸಲಾಗಿದೆ ಲೈಂಗಿಕ ಅಪರಾಧಗಳನ್ನೆಸಗಿರುವ ವ್ಯಕ್ತಿಗ ಳನ್ನು ಚುನಾವಣೆಯಲ್ಲಿ  ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೆಂಬುದು ನ್ಯಾ| ವರ್ಮಾ ಸಮಿತಿಯ ಶಿಫಾರಸುಗಳಲ್ಲೊಂದು.

ಭಾರತೀಯ ಚಲನಚಿತ್ರ ರಂಗದ ಕಲಾವಿದೆಯರ ಮೇಲಿನ ಲೈಂಗಿಕ ಕಿರುಕುಳ/ಪೀಡನೆಯ ವಿರುದ್ಧ ಎಲ್ಲರಿಗಿಂತ ಮೊದಲಿಗೆ ಪ್ರತಿಭಟನೆ ವ್ಯಕ್ತಪಡಿಸಿದವರು, ಸುವಿಖ್ಯಾತ ಹಿಂದಿ ಹಾಗೂ ಮರಾಠಿ ಚಿತ್ರ ನಟಿ-ಗಾಯಕಿ ಶಾಂತಾ ಆಪ್ಟೆ. “ಭಾರತೀಯ ಸಿನೇಮಾರಂಗದ ಪ್ರಪ್ರಥಮ ಬಂಡಾಯ ತಾರೆ’ ಎಂದು ಪರಿಗಣಿಸಲ್ಪಟ್ಟಿರುವ ಈಕೆ ಸೆಟೆದು ನಿಂತುದು, ಚಿತ್ರರಂಗದ ಮೇರು ವ್ಯಕ್ತಿಗಳಲ್ಲೊಬ್ಬರಾದ ವಿ. ಶಾಂತಾರಾಂ ವಿರುದ್ಧ. 1934ರಷ್ಟು ಹಿಂದೆಯೇ ಈಕೆ ತನ್ನ ವಿರುದ್ಧ ಅಶ್ಲೀಲ ಅಭಿಪ್ರಾಯ ಹೊಮ್ಮಿಸುವ ಲೇಖನವನ್ನು ಪ್ರಕಟಿಸಿದ್ದ “ಫಿಲ್ಟ್ ಇಂಡಿಯಾ’ದ ಸಿನಿ -ಪತ್ರಕರ್ತ ಬಾಬುರಾವ್‌ ಪಟೇಲ್‌ ಅವರನ್ನು ಥಳಿಸಿದ್ದು, ಘಟನೆಯಿಂದ ಶಾಂತ ಆಪ್ಟೆ ಭಾರೀ ಸುದ್ದಿಯಾಗಿದ್ದರು. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಲೈಂಗಿಕ ಪೀಡನೆಯೆಂಬುದು ನಡೆಯುತ್ತಲೇ ಬಂದಿದೆ; ಆದರೆ ಹೀಗೆ ಕಿರುಕುಳಕ್ಕೊಳಗಾದ ಮಹಿಳೆಯರಲ್ಲಿ  ಹೆಚ್ಚಿನವರು ಇದರ ಬಗ್ಗೆ ದೂರು – ದುಮ್ಮಾನ ದಾಖಲಿಸಿಲ್ಲ. ಈಗ “ಮಿ ಟೂ’ ಅಭಿಯಾನ, ಇಡೀ ವಾತಾವರಣವನ್ನೇ ಬದಲಾಯಿಸಿದೆ; ಬಲಿಪಶುಗಳು ಒಬ್ಬೊಬ್ಬರಾಗಿ ಅವರ ಹೆಸರು ಗಳನ್ನು ಬಯಲುಗೊಳಿಸುತ್ತಿದ್ದಾರೆ.

ಅರಕೆರೆ ಜಯರಾಮ್‌

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.