ಬಾಲಿವುಡ್‌ನ‌ಲ್ಲಿ ಮಿಂಚಿದ ತಾಪಸಿ 

Team Udayavani, Feb 24, 2017, 3:50 AM IST

23-YUVA-5.jpg

ಹಣೆಬರಹ ಬದಲಾಯಿಸಲು ಒಂದೇ ಒಂದು ಚಿತ್ರ ಸಾಕು ಎನ್ನುವುದಕ್ಕೊಂದು ತಾಜಾ ಉದಾಹರಣೆ ತಾಪಸಿ ಪನ್ನು. ಪಿಂಕ್‌ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ತಾಪಸಿ ಈಗ ಬಾಲಿವುಡ್‌ ನಿರ್ದೇಶಕರ ಕಣ್ಮಣಿ. ಈ ವರ್ಷ ತಾಪಸಿ ನಾಯಕಿಯಾಗಿರುವ ಕನಿಷ್ಠ ಐದು ಚಿತ್ರಗಳು ಬಿಡುಗಡೆಯಾಗಲಿವೆ. ಎರಡು ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ನಿತ್ಯ ನಿರ್ಮಾಪಕರು ಮತ್ತು ನಿರ್ದೇಶಕರು ಆಕೆಯ ಕಾಲ್‌ಶೀಟ್‌ಗಾಗಿ ಸಾಲುಗಟ್ಟಿ ಬರುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಪಿಂಕ್‌ ಯಶಸ್ಸು. ಪಿಂಕ್‌ ನಲ್ಲಿ ಲೈಂಗಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಹೆಣ್ಣಾಗಿ ಸ್ಮರಣೀಯ ಅಭಿನಯ ನೀಡಿದ ಬಳಿಕ ನಿರ್ದೇಶಕರು ತಾಪಸಿಯನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. 

ತಮಿಳು-ತೆಲುಗಿನಲ್ಲಿ ಬರೀ ನಾಯಕನ ಜತೆಗೆ ಡ್ಯುಯೆಟ್‌ ಹಾಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತಾಪಸಿ ಈಗ ಬಾಲಿವುಡ್‌ನ‌ಲ್ಲಿ ಕಂಗನಾ ರಣಾವತ್‌ ಲೆವೆಲಿನಲ್ಲಿದ್ದಾಳೆ. ಕೆಲವು ವಿಚಾರಗಳಲ್ಲಿ ಇಬ್ಬರ ನಡುವೆ ಕೆಲವೊಂದು ಸಾಮ್ಯತೆಗಳಿವೆ. ಕಂಗನಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದ ನಟಿ. ಯಾವುದೇ ಸಿನೆಮಾ ಹಿನ್ನೆಲೆ ಇಲ್ಲದಿದ್ದರೂ ಎರಡೆರಡು ರಾಷ್ಟ್ರಪ್ರಶಸ್ತಿ ವಿಜೇತೆ. ತಾಪಸಿ ಕೂಡ ಇದೇ ಹಾದಿಯಲ್ಲಿದ್ದಾಳೆ. ಪಿಂಕ್‌  ಈ ಸಲ ಪ್ರಶಸ್ತಿಗಳಿಗೆ ಪ್ರಬಲ ಸ್ಪರ್ಧೆ ಕೊಡುವ  ಸಾಧ್ಯತೆಯಿದೆ. ತಾಪಸಿ ನಟಿಸಿದ ಘಾಜಿ ಅಟ್ಯಾಕ್‌ ಮತ್ತು ರನ್ನಿಂಗ್‌ ಶಾದಿ ಚಿತ್ರಗಳು ಒಂದೇ ವಾರ ಬಿಡುಗಡೆಯಾಗಿವೆ. ತಡಾR, ನಾಮ್‌ ಶಬನಾ ಮತ್ತು ಜುಡ್ವಾ 2 ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ಈ ಪೈಕಿ ಜುಡ್ವಾ 2  ಕೆಲವು ವರ್ಷಗಳ ಹಿಂದೆ ಸಲ್ಮಾನ್‌ ನಾಯಕನಾಗಿ ನಟಿಸಿದ್ದ ಸೂಪರ್‌ ಹಿಟ್‌ ಚಿತ್ರ ಜುಡ್ವಾದ ಸೀಕ್ವೆಲ್‌. ಎರಡನೇ ಭಾಗದಲ್ಲಿ ವರುಣ್‌ ಧವನ್‌ ನಾಯಕ. ಈ ಚಿತ್ರದ ಮೇಲೆ ಕಂಗನಾ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾಳೆ. ಎಲ್ಲ ಸರಿಯಾದರೆ ಇನ್ನೂ ಎರಡು ಚಿತ್ರಗಳಿಗೆ ತಾಪಸಿ ಸಹಿ ಹಾಕಲಿದ್ದಾಳೆ. ಅಲ್ಲಿಗೆ 2017 ಬಾಲಿವುಡ್‌ನ‌ಲ್ಲಿ ತಾಪಸಿಯ ವರ್ಷ ಎನ್ನಬಹುದು. ಹೊಸಬರಿಗೆ ಈ ರೀತಿ ಅವಕಾಶ ಸಿಗಬೇಕು ಎನ್ನುವುದು ತಾಪಸಿಯ ಅಭಿಪ್ರಾಯ. ಪಾತ್ರ ನೋಡಿಕೊಂಡು ಕಾಲ್‌ಶೀಟ್‌ ಕೊಡುತ್ತೇನೆ ಎನ್ನುವುದೆಲ್ಲ ಅವಕಾಶ ಸಿಗದವರ ಬೊಗಳೆ ಮಾತುಗಳು. ಬೆನ್ನುಬೆನ್ನಿಗೆ ನಟಿಸುತ್ತಾ ಇದ್ದರೆ ಮಾತ್ರ ಇಲ್ಲಿ ಗಟ್ಟಿಯಾಗಿ ತಳವೂರಲು ಸಾಧ್ಯ ಎನ್ನುವುದನ್ನು ತಾಪಸಿ ದಕ್ಷಿಣದ ಚಿತ್ರರಂಗದ ನಾಲ್ಕೆ ç ದು ವರ್ಷಗಳ ಅನುಭವದಿಂದ ಕಂಡುಕೊಂಡಿದ್ದಾಳೆ.

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.