ಬಾಳೆ ಹೂವಿನ ಪಲ್ಯ

Team Udayavani, Sep 28, 2019, 5:00 AM IST

ಬೇಕಾಗುವ ಸಾಮಗ್ರಿ
ಬಾಳೆ ಹೂ: ಒಂದು ಕಪ್‌
ಹೆಸರು ಕಾಳು: ಒಂದು ಕಪ್‌
ಅರಶಿಣ:ಒಂದು ಚಿಟಿಕೆ
ಬೆಳ್ಳುಳ್ಳಿ:ನಾಲ್ಕರಿಂದ ಐದು ಎಸಳು
ಈರುಳ್ಳಿ: ಒಂದು
ಖಾರದ ಪುಡಿ: ಎರಡು ಚಮಚ
ಧನಿಯಾ ಪುಡಿ: ಒಂದು ಚಮಚ
ತೆಂಗಿನ ತುರಿ: ಅರ್ಧ ಕಪ್‌
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: ಎರಡು ಚಮಚ
ಕರಿಬೇವು: ಸ್ವಲ್ಪ
ಸಾಸಿವೆ: ಸ್ವಲ್ಪ
ಜಜ್ಜಿದ ಬೆಳ್ಳುಳ್ಳಿ, ಸ್ವಲ್ಪ ಕಡ್ಲೆಬೇಳೆ, ಒಂದು
ಕೆಂಪು ಮೆಣಸಿನ ಕಾಯಿ.

ಮಾಡುವ ವಿಧಾನ: ಮೊದಲಿಗೆ ಬಾಳೆ ಹೂವನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಅರ್ಧ ಲೋಟ ನೀರು, ಸ್ವಲ್ಪ ಅರಿಶಿಣ ಮತ್ತು ಉಪ್ಪು ಹಾಕಿ ಮೂರು ವಿಶಲ್‌ ಬೇಯಿಸಿ ತೆಗೆದಿಟ್ಟುಕೊಳ್ಳಿ ಬಳಿಕ ಒಂದು ಬಾಣಲೆಯನ್ನು ಗ್ಯಾಸ್‌ ಮೇಲಿಟ್ಟು ಬಿಸಿಯಾದ ಬಳಿಕ ಎಣ್ಣೆ ಹಾಕಿ, ಕಾದ ಬಳಿಕ ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಮತ್ತು ಕಡ್ಲೆಬೇಳೆ, ಮೆಣಸಿಕಾಯಿ ಹಾಕಿಚೆನ್ನಾಗಿ ಹುರಿದುಕೊಳ್ಳಿ. ಅನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ವರೆಗೆ ಹುರಿದುಕೊಂಡು ಟೊಮೇಟೊ ಹಾಕಿ ಹತ್ತು ಸೆಕೆಂಡ್‌ ಚೆನ್ನಾಗಿ ಹುರಿಯಿರಿ. ಅನಂತರ ಧನಿಯಾ ಪುಡಿ ಮತ್ತು ಖಾರದ ಪುಡಿಯನ್ನು ಸೇರಿಸಿ ಹುರಿಯಿರಿ. ಇದಾದ ಬಳಿಕ ಬೇಯಿಸಿ ಸೋಸಿ ತೆಗೆದಿಟ್ಟಿರುವ ಬಾಳೆ ಹೂವನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಬೇಯಿಸಿದ ಹೆಸರು ಕಾಳು ಸೇರಿಸಿ ಸರಿಯಾಗಿ ಮಿಕ್ಸ್‌ ಮಾಡಿ ಬಳಿಕ ಅರ್ಧ ಕಪ್‌ ನೀರನ್ನು ಸೇರಿಸಿ ಬೇಯಲು ಬಿಡಿ. ಕೊನೆಯದಾಗಿ ತೆಂಗಿನ ತುರಿ ಸೇರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಾಳೆ ಹೂವಿನ ಪಲ್ಯ ಸವಿಯಲು ಸಿದ್ಧ.

ಆರೋಗ್ಯ ಪ್ರಯೋಜನಗಳು
– ಬಾಳೆ ಹೂವಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್‌ ಮತ್ತು ಫೈಬರ್‌ ಅಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮ.

– ಬಾಳೆ ಹೂವಿನಿಂದ ಮಧುಮೇಹ ಮತ್ತು ಒತ್ತಡವನ್ನು ನಿಯಂತ್ರಿಸಲು ಸಾಧ್ಯ ಹಾಗೆಯೇ ಪಚನಕ್ರಿಯೆ ಸರಾಗವಾಗಿ ಆಗಲು ಸಹಕರಿಸುತ್ತದೆ.

-  ವಿಜಿತಾ, ಬಂಟ್ವಾಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪ್ರತಿದಿನ‌ ಅಸ್ವಾದಿಸಲ್ಪಡುವ ಆಹಾರಗಳಲ್ಲಿ ಚಪಾತಿ ಒಂದು. ಇದನ್ನು "ಇಂಡಿಯನ್‌ ಬ್ರೆಡ್‌' ಎಂದು ಕರೆಯುತ್ತಾರೆ. ಸಂಪೂರ್ಣ ಗೋಧಿ ಹಿಟ್ಟಿನಿಂದ ಮಾಡುವ ಚಪಾತಿ ಇತರ...

  • ಹೋಳಿಗೆಯನ್ನು ನಾವು ಎಲ್ಲ ಕಾರ್ಯಕ್ರಮಗಳಲ್ಲೂ ಬಳಸುತ್ತೇವೆ. ಇದೊಂದು ಹೆಚ್ಚಾಗಿ ಸಿಹಿಯಾದ ಖಾದ್ಯವಾಗಿದ್ದು, ಕೆಲವೊಮ್ಮೆ ಖಾರದ ಹೋಳಿಗೆಯನ್ನೂ ತಯಾರಿಸಲಾಗುತ್ತದೆ....

  • ಧೋಕ್ಲಾ ಗುಜರಾತಿ ಪಾಕಪದ್ಧತಿಯ ವಿಶೇಷತೆಗಳಲ್ಲಿ ಇದು ಒಂದಾಗಿದೆ. ಗುಜರಾತಿ ಪಾಕಪದ್ಧತಿಯಲ್ಲಿ ಸಾಕಷ್ಟು ರುಚಿಯಾದ ಮತ್ತು ಉತ್ತಮ ವಾದ ತಿಂಡಿಗಲ್ಲಿ ಧೋಕ್ಲಾ ಅಗ್ರಸ್ಥಾನ...

  • ಖಾರ ಹೋಳಿಗೆ ಬೇಕಾಗುವ ಸಾಮಗ್ರಿಗಳು ತೊಗರಿಬೇಳೆ- 2 ಕಪ್‌ ಕಡಳೆಬೇಳೆ- 1 ಕಪ್‌ ಹಸಿಮೆಣಸಿನಕಾಯಿ- 5 ಜೀರಿಗೆ - 1 ಚಮಚ ತೆಂಗಿನ ತುರಿ- 1 ಕಪ್‌ ಅರಶಿನ- ಒಂದು ಚಿಟಿಕೆ ಶುಂಠಿ-...

  • ಮಕರ ಸಂಕ್ರಾಂತಿಯು ಹಿಂದೂಗಳ ವಿಶೇಷ ದಿನವಾಗಿದ್ದು, ಈ ದಿನ ಎಲ್ಲ ಊರುಗಳಲ್ಲೂ ವಿಶೇಷ ತಿಂಡಿಗಳನ್ನು ಮಾಡುತ್ತಾರೆ. ದೇವರ ಪ್ರಸಾದವಾಗಿ ಅಥವಾ ಹಬ್ಬದ ಸಂಭ್ರಮಕ್ಕಾಗಿ...

ಹೊಸ ಸೇರ್ಪಡೆ