ಮನೆಯಲ್ಲಿಯೇ ಮಾಡಿ ಕೃಷಿ ಪ್ರಯೋಗ

Team Udayavani, Aug 17, 2019, 5:00 AM IST

ಕೃಷಿ ಎಂದರೆ ಮಾರುದ್ದ ಹಾರುವ ಈ ಕಾಲದಲ್ಲಿ ಕೃಷಿಕರಾಗುವುದೆಂದರೆ ಎಲ್ಲರೂ ಹಿಂಜರಿಯುತ್ತಾರೆ. ಆದರೆ ಅದನ್ನು ಒಂದು ಆಸಕ್ತಿಯ ವಿಷಯವಾಗಿ ತೆಗೆದುಕೊಂಡರೆ ಅದರಲ್ಲೂ ಹಲವಾರು ಅವಕಾಶಗಳಿವೆ. ಪ್ರತಿಯೊಬ್ಬರೂ ಪ್ರಗತಿಪರ ಕೃಷಿಕರಾಗುವುದು ಸಾಧ್ಯವಿದೆ. ನಮ್ಮ ದೈನಂದಿನ ಜೀವನಕ್ಕೆ ಬೇಕಾದ ತರಕಾರಿಗಳನ್ನು ನಾವೇ ಬೆಳೆದುಕೊಂಡರೆ ಉತ್ತಮ ಆರೋಗ್ಯದ ಜತೆಗೆ ಮನಸ್ಸಿಗೂ ನೆಮ್ಮದಿ ಲಭಿಸುತ್ತದೆ. ಪ್ರತಿಯೊಬ್ಬರೂ ತಮಗಿರುವ ಸಣ್ಣಮಟ್ಟಿನ ಜಾಗದಲ್ಲಿ ಕೃಷಿ ಮಾಡಲು ಆರಂಭಿಸಿದರೆ ಪರಿಸರಕ್ಕೂ ಉತ್ತಮ ಲಾಭವಿದೆ.

ನಗರದ ಮನೆಗಳಲ್ಲಿ ಇರುವುದು ಸ್ವಲ್ಪವೇ ಜಾಗ. ಕೆಲವು ಕ್ರಿಯಾತ್ಮಕ ಚಿಂತನೆಗಳಿದ್ದರೆ ಸಣ್ಣ ಜಾಗದಲ್ಲೂ ಕೃಷಿ ಮಾಡಲು ಸಾಧ್ಯ.

ಸೂಕ್ತ ಜಾಗ ಹುಡುಕಿ
ನಗರದ ಮನೆಯಲ್ಲಿ ಮೊದಲು ನೀವು ಎಲ್ಲಿ ಕೃಷಿ ಮಾಡಬೇಕೆಂಬುದನ್ನು ನಿರ್ಧರಿಸಿ. ಅದೂ ತರಕಾರಿ ತೋಟ, ಹೂದೋಟ ಯಾವುದೂ ಆಗಿರಬಹುದು. ಅದಕ್ಕಾಗಿ ಜಾಗ ಆಯ್ಕೆ ಮಾಡಿ. ಹೆಚ್ಚಾಗಿ ಟೆರೇಸ್‌ ಕೃಷಿಗೆ ಸೂಕ್ತ ಜಾಗ. ಬಿಸಿಲು ಚೆನ್ನಾಗಿ ಬೀಳುವುದಿದ್ದರೆ ಅದೇ ಜಾಗವನ್ನು ಆಯ್ಕೆ ಮಾಡಿ.

ಮನೆಯ ಬಾಲ್ಕನಿಯಲ್ಲಿ ಕೂಡಾ ಕೃಷಿ ಮಾಡಲು ಅವಕಾಶಗಳಿವೆ. ಪಾಟ್ ಹಾಗೂ ಹ್ಯಾಂಗಿಂಗ್‌ ಪಾಟ್‌ಗಳಲ್ಲಿ ಗಿಡ ನೆಡುವ ಮೂಲಕ ಕೃಷಿ ಮಾಡಬಹುದು. ತುಳಸಿ, ಸಾಂಬ್ರಾಣಿಯಂತಹ ಗಿಡಗಳನ್ನು ಪಾಟ್‌ನಲ್ಲಿ ಹಾಕಿ ಮೆಟ್ಟಿಲುಗಳಲ್ಲಿಡಬಹುದು. ಬಳ್ಳಿಯಲ್ಲಿ ಹಬ್ಬುವ ತರಕಾರಿ ಗಿಡಗಳನ್ನು ಹೆಚ್ಚು ಬಿಸಿಲು ಇರುವ ಕಡೆ ನೆಟ್ಟು ಬೆಳೆಸಬಹುದು. ಗಿಡಗಳನ್ನು ಒಂದೇ ಕಡೆ ನೆಟ್ಟು ಬೆಳೆಸಬಹುದು.

ಗಿಡಗಳ ಸಂರಕ್ಷಣೆ ಅಗತ್ಯ
ಯಾವ ಕಾಲ ಯಾವ ಗಿಡಗಳಿಗೆ ಹೆಚ್ಚು ಸೂಕ್ತ ಎಂಬುದನ್ನು ತಿಳಿದಿರಬೇಕು. ಜತೆಗೆ ಕೀಟನಾಶಕಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಜೈವಿಕ ಕೀಟನಾಶಕವಾದರೆ ಇನ್ನೂ ಉತ್ತಮ. ಟೆರೇಸ್‌ನಲ್ಲಿ ಗಿಡಗಳು ಒಂದು ಮತ್ತೂಂದನ್ನು ಆಕ್ರಮಿಸದಂತೆ ನೋಡಿಕೊಳ್ಳಬೇಕು. ಹೀಗೆ ಕೆಲವು ತಂತ್ರಾಂಶಗಳನ್ನು ಅನುಸರಿಸುವುದರಿಂದ ನೀವೂ ಕೃಷಿಕರಾಗಬಹುದು.

•ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ