ಜಾಗೃತಿ ಮೂಡಿಸಿದ ಅನ್ನದಾತ ವಿಮೋಚನೆ

Team Udayavani, Aug 24, 2018, 6:08 PM IST

8.jpg

ರಾಜ್ಯ ಸರಕಾರ, ದ.ಕ. ಜಿ.ಪಂ., ಕೃಷಿ ಇಲಾಖೆ ಬಂಟ್ವಾಳ ವತಿಯಿಂದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ-ಸಮಗ್ರ ಕೃಷಿ ಅಭಿಯಾನ ಪ್ರಯುಕ್ತ ತಾಲೂಕಿನ ವಿವಿಧೆಡೆ ಪ್ರದರ್ಶಿಸಲಾದ “ಅನ್ನದಾತ ವಿಮೋಚನೆ’ ಎಂಬ ಕಿರು ನಾಟಕ ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ.  ರೈತರೇ ದೇಶದ ಬೆನ್ನೆಲುಬು. ಆದರೆ ಅವರೇ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ರೈತರನ್ನು ಮುಕ್ತಿಗೊಳಿಸುವುದು ಹೇಗೆ ಎನ್ನುವ ಸಂದೇಶ ಸಾರುವ ಈ ಕಿರು ನಾಟಕ ರೈತರಿಗೆ ಮಾಹಿತಿಯೊಂದಿಗೆ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶ ಹೊಂದಿ ಯಶಸ್ವಿಯಾಯಿತು. 

ಕಿರು ನಾಟಕದ ವಿಶೇಷತೆಯೆಂದರೆ ಇದರಲ್ಲಿ ಅಭಿನಯಿಸಿದವರು ಹವ್ಯಾಸಿ ಅಥವಾ ವೃತ್ತಿಪರ ನಾಟಕ ಕಲಾವಿದರಲ್ಲ. ಬದಲಾಗಿ ಯಕ್ಷಗಾನ ಕಲಾವಿದರು. ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಸರಪಾಡಿ ಅಶೋಕ ಶೆಟ್ಟಿ ಅವರ ನೇತೃತ್ವದಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದರು. ಕೃಷಿ ಕ್ಷೇತ್ರದಲ್ಲಿ ಪ್ರಸ್ತುತ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಮನೋಜ್ಞವಾಗಿ ತಿಳಿಯಪಡಿಸಿ ಅದನ್ನು ಬಗೆಹರಿಸುವ ಜತೆಗೆ ಪರಿಸರ ಮಾರಕ ಮತ್ತು ಮಣ್ಣಿನ ಸತ್ವ ಹೀರುವ ರಾಸಾಯನಿಕ ಗೊಬ್ಬರಗಳನ್ನು ವಿರೋಧಿಸಿ ಪರಿಸರ ಮತ್ತು ಮಣ್ಣಿನ ಸತ್ವ ಸಂರಕ್ಷಣೆಯೊಂದಿಗೆ ಕೃಷಿ ನಡೆಸಿದರೆ ಅನ್ನದಾತನ ಸಮಸ್ಯೆಗಳಿಗೆ ವಿಮೋಚನೆ ಎಂಬ ಸಂದೇಶವನ್ನು ನಾಟಕ ಸಾರಿದೆ. 

ರೈತನೊಬ್ಬ ಕೃಷಿಯಲ್ಲಿ ಸೋತು ಸಾಲಗಳಿಂದ ಕಂಗೆಟ್ಟು, ಪತ್ನಿಯಿಂದ ದೂಷಣೆಗೊಳಪಟ್ಟು ಆತ್ಮಹತ್ಯೆಗೆ ಮುಂದಾಗುವ ಮೊದಲು ಜನಪ್ರತಿನಿಧಿಯಲ್ಲಿ ತನ್ನ ಪರಿಸ್ಥಿತಿಯನ್ನು ವಿವರಿಸಿದಾಗ ಸಾಮಾಜಿಕ, ಪರಿಸರ ಹೋರಾಟಗಾರನ ಸಲಹೆಯಂತೆ ಪರಿಸರ ಮಾರಕ ರಾಸಾಯನಿಕ ಗೊಬ್ಬರ ಬಳಸದೆ ಕೃಷಿ ಕಾರ್ಯ ನಡೆಸುವುದು. ಪ್ರಾಕೃತಿಕ ಅಸಮತೋಲನವಾಗದಂತೆ ಅರಣ್ಯ ಸಂರಕ್ಷಣೆ ಮೊದಲಾದ ಧ್ಯೇಯಗಳ ಪ್ರತಿಜ್ಞೆ ನಡೆಸುವುದರೊಂದಿಗೆ ಕೃಷಿ ವಲಯದಲ್ಲಿ ರೈತರು ಅನುಸರಿಸಬೇಕಾದ ಮಾರ್ಗ, ಸಾವಯವ ಕೃಷಿ ಪದ್ಧತಿ, ಪರಿಸರ ಮಾಹಿತಿಯೊಂದಿಗೆ ಕೃಷಿಯಿಂದ ತನ್ನ ಹಾಗೂ ದೇಶದ ಅಭಿವೃದ್ಧಿ ಎಂಬ ಸಂದೇಶ ಕಿರು ನಾಟಕದಲ್ಲಿ ಮೂಡಿ ಬಂತು. ದೇಶ ಕಾಯುವ ಯೋಧ ಮತ್ತು ನಮಗಾಗಿ ಅನ್ನ ನೀಡುವ ರೈತ ಭಾರತಾಂಬೆಯ ಕಣ್ಣುಗಳಿದ್ದಂತೆ ಅವರನ್ನು ಗೌರವಿಸಬೇಕಾದುದು ಎಲ್ಲರ ಕರ್ತವ್ಯ ಎಂದು ಈ ಕಿರು ನಾಟಕದ ಮೂಲಕ ಹೇಳಲಾಯಿತು.

ಜನಪ್ರತಿನಿಧಿಯಾಗಿ ಕಡಬ ದಿನೇಶ್‌ ರೈ, ರೈತನಾಗಿ ಕೋಡಪದವು ದಿನೇಶ, ಮಡದಿಯಾಗಿ ಸುಂದರ ಬಂಗಾಡಿ, ಬ್ಯಾಂಕ್‌ ಮ್ಯಾನೇಜರ್‌ ಆಗಿ ಶಶಿಧರ ಬಾಚಕೆರೆ, ಪರಿಸರ, ಕೃಷಿಪರ ಹೋರಾಟಗಾರನಾಗಿ ಸರಪಾಡಿ ಅಶೋಕ ಶೆಟ್ಟಿ ಪಾತ್ರ ವಹಿಸಿದ್ದರು. ಸುಧಾಕರ ಮೂಡಬಿದಿರೆ ಸಂಗೀತ ನೀಡಿದ್ದರು.

ರತ್ನದೇವ್‌ ಪುಂಜಾಲಕಟ್ಟೆ 

ಟಾಪ್ ನ್ಯೂಸ್

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.