ರಂಜಿಸಿದ ಶಬರಿಮಲೆ ಅಯ್ಯಪ್ಪ 


Team Udayavani, Oct 12, 2018, 6:00 AM IST

z-3.jpg

ಭಾವನೆಗಳ ಅಲೆಗಳಲ್ಲಿ ತೇಲಿಸುವಂತಹ ಹಾಡು, ಚಿಂತನೆಗೆ ಹಚ್ಚುವ ಮಾತು, ಮೂಖವಿಸ್ಮಿತರನ್ನಾಗಿಸುವ ಕುಣಿತ ಮತ್ತು ಅಭಿನಯಗಳನ್ನ ಕಣ್ತುಂಬಿಕೊಂಡ ಸಂದರ್ಭ 30ನೇ ವರ್ಷದ ಗಣೇಶೊತ್ಸವದ ಪ್ರಯುಕ್ತ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರು ನಿಡ್ಲೆಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸೆ. 14ರಂದು ಪ್ರಸ್ತುತಪಡಿಸಿದ ಶಬರಿಮಲೆ ಅಯ್ಯಪ್ಪ ಎಂಬ ಪ್ರಸಂಗದ ಪ್ರದರ್ಶನ. 

ಕರುಣಾಕರ ಶೆಟ್ಟಿಗಾರ ಅವರ ಇಂಪಾದ ಭಾಗವತಿಕೆ, ಹಿಮ್ಮೇಳದ ವೈಭವವನ್ನು ಇಮ್ಮಡಿಗೊಳಿಸಿದ ಚೆಂಡ ವಾದಕರಾದ ಪಡ್ರೆ ಶ್ರೀಧರ, ಮದ್ದಳೆ ವಾದಕರಾದ ನೇರೋಳು ಗಣಪತಿ ನಾಯಕ್‌ ಮತ್ತು ಚಕ್ರತಾಳದ ಶಬ್ದವನ್ನು ಝೇಂಕರಿಸಿದ ಕೇಶವ ಇವರುಗಳ ಸಂಗಮ ಉತ್ಸಹದ ಚಿಲುಮೆಯನ್ನು ಚಿಮ್ಮಿಸಿತು. 

ನಿಡ್ಲೆ ಗೋವಿಂದ ಭಟ್ಟರು ವಿನೋದಾತ್ಮಕವಾದ ರೀತಿಯಲ್ಲಿ ಹಾಸ್ಯದೊಂದಿಗೆ ವಾವರನ ಪಾತ್ರದಲ್ಲಿ ಮಿಂಚಿದರು. ಅಮ್ಮುಂಜೆ ಮೋಹನ ಮತ್ತು ನವೀನ ಶೆಟ್ಟಿ ಇವರುಗಳು ಅಯ್ಯಪ್ಪನ ಪಾತ್ರ ಪಾತ್ರಕ್ಕೆ ನ್ಯಾಯ ಒದಗಿಸಿದರು. ಕುಂಬ್ಳೆ ಶ್ರೀಧರ ರಾವ್‌ ಇವರ ಈಶ್ವರನ ಪಾತ್ರ ನಿರ್ವಹಣೆ ಉತ್ತಮವಾಗಿತ್ತು. ಉಬರಡ್ಕ ಉಮೇಶ್‌ ಶೆಟ್ಟಿ ಭಸ್ಮಾಸುರನ ಪಾತ್ರದಲ್ಲಿ ತಲ್ಲೀನವಾಗಿ ಅವರ ನಾಟ್ಯ, ಮಾತು, ಅಭಿನಯ ಪ್ರೇಕ್ಷಕರ ಚಪ್ಪಾಳೆಗೆ ಕಾರಣವಾಯಿತು.ಪದ್ಮನಾಭ ಶೆಟ್ಟಿ ಇವರು ವಿಷ್ಣು ಮತ್ತು ಕೇಳು ಪಂಡಿತನಾಗಿ ಮಿಂಚಿದರು. ಉಮಾಮಹೇಶ್ವರ ಭಟ್ಟರ ಕೇತಕಿವರ್ಮ ರಾಜನ ಗಾಂಭೀರ್ಯಕ್ಕೆ ಸಾಕ್ಷಿಯಾಯಿತು. ಪುತ್ತೂರು ಗಂಗಾಧರರ ಮಹಿಷಿ, ಶಿವ ಪ್ರಸಾದ್‌ ಭಟ್ಟರ ಶಭರಾಸುರ ರಂಜಿಸಿತು. ಕೆದಿಲ ಜಯರಾಮ ಭಟ್ಟರ ಸುಮುಖೀ, ಆನಂದ ಕೊಕ್ಕಡ ಇವರ ಪಾರ್ವತಿಯು ಸ್ತ್ರೀ ಪಾತ್ರದ ಮೆರುಗನ್ನು ಹೆಚ್ಚಿಸಿತು. ಗೌತಮ ಶೆಟ್ಟಿ ಇವರು ಕನಕವರ್ಮ ಪಾತ್ರಕ್ಕೆ ಜೀವ ತುಂಬಿಸಿದರು. ರಾಜೇಶ್‌ ನಿಟ್ಟೆ ಇವರ ಬಳುಕುವ ವಯ್ನಾರದೊಂದಿಗೆ ಮೋಹಿನಿಯಾಗಿ ಮನ ಸೆಳೆದರು. ಯುವ ಕಲಾವಿದರಾದ ಮುಖೇಶ್‌ ದೇವಧರ್‌ ಬೇತಾಳನ ಪಾತ್ರದಲ್ಲಿ ಕಾಣಿಸಿಕೊಂಡರು.

ಕಾವ್ಯಶ್ರೀ ಕೆ. ನಿಡ್ಲೆ 

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.