ನಾಟಕ ಅಭಿರುಚಿ ಮೂಡಿಸಿದ ರಂಗಭೂಮಿಕಾ


Team Udayavani, Jan 5, 2018, 3:21 PM IST

05-42.jpg

ಬಂಟ್ವಾಳ ತಾಲೂಕಿನ ಮಂಚಿ-ಕುಕ್ಕಾಜೆ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್‌ ನಾಟಕ ಕಲೆಯನ್ನು ಜೀವಂತವಾಗಿರಿಸಲು ಉತ್ತಮ ಹೆಜ್ಜೆಯನ್ನಿಟ್ಟಿದೆ. ವಿಟ್ಲ ವಿಟಲ ವಿದ್ಯಾ ಸಂಘದ ಸಹಯೋಗದೊಂದಿಗೆ ರಂಗಭೂಮಿಕಾ ಟ್ರಸ್ಟ್‌ನ ದಶಮಾನದ ಸಂಭ್ರಮದ ಅಂಗವಾಗಿ ಬಿ.ವಿ.ಕಾರಂತರ ನೆನಪಿಗಾಗಿ ಅಂತರ ಕಾಲೇಜು ನಾಟಕ ಸ್ಪರ್ಧೆ “ರಂಗಭೂಮಿಕಾ-2017′ ನಾಟಕ ಸ್ಪರ್ಧೆಯನ್ನು ಆಯೋಜಿಸಿ ನಾಟಕ ಅಭಿರುಚಿಯನ್ನು ಮೂಡಿಸಲು ಪ್ರಯತ್ನಿಸಿದೆ. ಆ ಹೆಜ್ಜೆ ದೃಢವಾಗಿಡಲು ಪ್ರೇಕ್ಷಕರ ಕೊರತೆಯೊಂದು ಅಡ್ಡಿಯಾಗಬಹುದಾದರೂ ಕೆಲ ನಾಟಕಗಳು ನೈಜ ಆಸಕ್ತ ಕಲಾಭಿಮಾನಿ, ನಾಟಕಾಭಿಮಾನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫ‌ಲವಾಗಿವೆ. ಟ್ರಸ್ಟಿನ ಮುಂದಿನ ನಡೆಗಳಿಗೆ ಇದು ಪ್ರೋತ್ಸಾಹದಾಯಕವೆನಿಸಬಹುದು. 

ಎರಡು ದಿನಗಳ ಅಂತರ್‌ಕಾಲೇಜು ಸ್ಪರ್ಧೆಯಲ್ಲಿ ಒಟ್ಟು ಹತ್ತು ತಂಡಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ದ.ಕ.ಜಿಲ್ಲೆಯ ವಿವಿಧ ಕಾಲೇಜು ತಂಡಗಳ ಹೆಸರು ಮತ್ತು ನಾಟಕಗಳನ್ನು ಆಮಂತ್ರಣ ಪತ್ರದಲ್ಲೇ ಪ್ರಕಟಿಸಲಾಗಿತ್ತು. ಆದರೆ ಭಾಗವಹಿಸಿದ ತಂಡಗಳು ಎಂಟು. ಪ್ರತೀ ನಾಟಕಕ್ಕೂ ಒಂದು ಗಂಟೆ ಅವಧಿಯನ್ನು ನಿಗದಿಪಡಿಸಲಾಗಿತ್ತು. ರಂಗನಟ ಚಂದ್ರಹಾಸ ಉಳ್ಳಾಲ, ರಂಗ ವಿಮರ್ಶಕ ಪ್ರಭಾಕರ ತುಮರಿ, ರಂಗಕರ್ಮಿ ಶೀನಾ ನಾಡೋಳಿ ಅವರು ತೀರ್ಪುಗಾರರಾಗಿದ್ದರು.

ಮದರ್‌ ಕರೇಜ್‌ 
ಪ್ರಥಮ ಸ್ಥಾನ ಪಡೆದ ನಾಟಕ “ಮದರ್‌ ಕರೇಜ್‌’. ಈ ನಾಟಕವನ್ನು ಮಂಗಳೂರು ಪಾದುವಾ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಬಟೋìಲ್‌ ಬ್ರೆಕ್ಟ್ ಅವರ ಮೂಲ ಕಥೆಯನ್ನು ಆಧಾರವಾಗಿಟ್ಟುಕೊಂಡು ಸಿದ್ಧಲಿಂಗ ಪಟ್ಟಣ ಶೆಟ್ಟಿ ಅನುವಾದಿಸಿದ “ಮದರ್‌ ಕರೇಜ್‌’ ನಾಟಕದಲ್ಲಿ ವ್ಯಾಪಾರಿ ಮಹಿಳೆಯೊಬ್ಬರ ಜೀವನ ಚಿತ್ರಣವಿದ್ದು, ಸತೀಶ್‌ ನೀನಾಸಂ ನಿರ್ದೇಶಿಸಿದ್ದಾರೆ. ಯುದ್ಧಗಳು ಜನ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ? ಯುದ್ಧವು ಮಾನವ ಹತ್ಯೆಯ ಜತೆಗೆ ಮಾನವೀಯ ಮೌಲ್ಯಗಳನ್ನು ಹತ್ಯೆಯಾಗಿಸುವ ಬಗೆ ಹೇಗೆ ? ಮಾನವ ಕುಲ, ಪ್ರಾಣಿ ಸಂಕುಲಗಳ ಸ್ಥಿತಿ ಯಾವ ರೀತಿ ಶೋಚನೀಯವಾಗಿಬಿಡುತ್ತದೆ ಎಂಬ ಚಿತ್ರಣವನ್ನು ನೀಡುತ್ತದೆ. ಯುದ್ಧವನ್ನು ತಡೆಯುವ ಪ್ರಯತ್ನಗಳಲ್ಲಿ ಎಷ್ಟು ಶ್ರೇಷ್ಠತೆ ಇದೆ ಎಂಬ ಚಿಂತನೆಗೆ ಈಡುಮಾಡುತ್ತದೆ. ಯುದ್ಧವನ್ನು ತಡೆಯಲು ಮಾಡುವ ಪ್ರಯತ್ನ ಎಲ್ಲಾ ತ್ಯಾಗಕ್ಕಿಂತ ದೊಡ್ಡದು ಎಂಬ ಸಂದೇಶ ನೀಡುತ್ತದೆ.

ಮಾರಿಕಾಡು 
ಶೇಕ್‌ಸ್ಪಿಯರ್‌ ಅವರ ಮೂಲ ಕಥೆಯಾಗಿದ್ದರೂ, ಡಾ. ಚಂದ್ರಶೇಖರ ಕಂಬಾರರ ರಚನೆ “ಮಾರಿಕಾಡು’ ನಾಟಕದಲ್ಲಿ ಮ್ಯಾಕ್‌ಬೆತ್‌ ಹಾಗೂ ಲೇಡಿ ಮ್ಯಾಕ್‌ಬೆತ್‌ ಅವರ ದುರಾಸೆಯ ಜೀವನ ಹೇಗೆ ದುರಂತ ಅಂತ್ಯಕ್ಕೆ ಕಾರಣವಾಗುತ್ತದೆ ಎಂಬ ಚಿತ್ರಣವನ್ನು ದೇಶದ ರಾಜವಂಶಗಳ ಜೀವನ ದರ್ಶನದ ಮೂಲಕ ಬಯಲು ಮಾಡಲಾಗಿದೆ. ಉಜಿರೆ ಎಸ್‌.ಡಿ.ಎಂ ಕಾಲೇಜು ವಿದ್ಯಾರ್ಥಿಗಳು ಶಿವಶಂಕರ್‌ ನೀನಾಸಂ ನಿರ್ದೇಶನದಲ್ಲಿ ಈ ನಾಟಕವನ್ನು ಪ್ರದರ್ಶಿಸಿದರು. ಈ ತಂಡ ದ್ವಿತೀಯ ಸ್ಥಾನ ಪಡೆಯಿತು.

ಅಗ್ನಿವರ್ಣ 
ರಘುವಂಶದ ಕೊನೆಯ ಅರಸ ಅಗ್ನಿವರ್ಣನು ಭೋಗ-ವೈಭೋಗಗಳಲ್ಲಿ ಮೈಮರೆತು, ಬೋಧನೆಯನ್ನು ಸಲಹೆಯನ್ನು ಧಿಕ್ಕರಿಸಿ, ದುಶ್ಚಟಗಳ ದಾಸನಾಗಿ, ಭೂಮಿಗೆ ಭಾರವಾದ ದೃಶ್ಯಗಳನ್ನು ಮಂಗಳೂರು ಸಂತ ಅಲೋಶಿಯಸ್‌ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದರು. ತನ್ನಿಂದಲೇ ಅಧಃಪತನಗೊಳ್ಳುವ ಅಗ್ನಿವರ್ಣನು ಯಜ್ಞದ ಹವಿಸ್ಸಾಗಿ ಬಿಡುವ ಪಾಡು ಆಧುನಿಕ ಬದುಕಿನ ವಿಲಾಸೀ ಜೀವನದ ಅಂತ್ಯವನ್ನು ಬಯಲಾಗಿಸಿದವು. ಎಚ್‌.ಎಸ್‌.ವೆಂಕಟೇಶಮೂರ್ತಿಯವರ ರಚನೆ, ಭವ್ಯ ಶೆಟ್ಟಿ ನಿರ್ದೇಶನವಿತ್ತು. ತೃತೀಯ ಸ್ಥಾನ ಪಡೆದ ಈ ನಾಟಕದಲ್ಲಿ ಉತ್ತಮ ಕಾವ್ಯಮಯ ಸಂಭಾಷಣೆ, ಕನಸುಗಳ ಮೂಲಕ ಭಾವನೆಯ ಓಡಾಟ, ಚೆಲ್ಲಾಟ, ಕಲಾವಿದರ ಶಿಸ್ತುಬದ್ಧ ನಡವಳಿಕೆ ಆಕರ್ಷಣೀಯವಾಗಿತ್ತು ಹಾಗೂ ರಂಗವೇದಿಕೆಯನ್ನು ಜೀವಂತವಾಗಿರಿಸಿತ್ತು. ಈ ನಾಟಕ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ರಂಗ ಸಜ್ಜಿಕೆ 
ಮಂದ ಬೆಳಕು, ಕಪ್ಪು ಪರದೆಗಳ ಮಧ್ಯೆ ವರ್ಣಗಾರಿಕೆಯ ಪಾತ್ರಗಳು, ವಾದ್ಯ, ತಾಳ, ರಂಗ ಗೀತೆಗಳು ಪಾತ್ರಗಳಿಗೆ ಹಾಗೂ ಸನ್ನಿವೇಶಗಳಿಗೆ ಹೊಂದಿಕೊಂಡಿದ್ದವು. ಮಾತುಗಾರಿಕೆ, ಮುಖದ ಹಾವ ಭಾವದಲ್ಲಿ ಉತ್ತಮ ತಂತ್ರಗಾರಿಕೆಯಿತ್ತು. ಒಂದು ನಿರ್ಜೀವ ವಸ್ತುವನ್ನು ಅಂದರೆ ತೆರೆದ ಪೆಟ್ಟಿಗೆಯನ್ನು ವಿಭಿನ್ನವಾಗಿ ಬಳಸಿಕೊಳ್ಳುವ ವಿಧಾನವೂ ವಿಶೇಷವಾಗಿತ್ತು. ಕಲಾವಿದರ ಸಮಯವನ್ನು ಉಳಿಸಿತ್ತು ಮತ್ತು ಆರ್ಥಿಕ, ಶಾರೀರಿಕ ಸಂಕಷ್ಟಗಳನ್ನು ತಪ್ಪಿಸಿತ್ತು. 

ಉಳಿದ ತಂಡಗಳ ಪ್ರದರ್ಶನ 
ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ ಅವರ “ಕುಣಿ ಕುಣಿ ನವಿಲೆ’ ನಾಟಕವನ್ನು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಾಮಾಜಿಕ ನಡಾವಳಿಗಳನ್ನು ಗೇಲಿ ಮಾಡುತ್ತಲೇ, ನಮ್ಮ ಸುತ್ತಮುತ್ತಲ ಪ್ರಾಕೃತಿಕ ಆಗುಹೋಗುಗಳನ್ನು ತೋರಿಸುವ ಮುರಳಿ ಶƒಂಗೇರಿ ಅವರ “ಕರುಣಾನಿಧಿ’ ನಾಟಕವನ್ನು ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್‌ ಪೂಜಾರಿ ಅವರ ಸಹನಿರ್ವಾಹಕತ್ವದಲ್ಲಿ ಬಂಟ್ವಾಳ ಎಸ್‌ವಿಎಸ್‌ ಕಾಲೇಜು ವಿದ್ಯಾರ್ಥಿಗಳ ತಂಡ ಅಭಿನಯಿಸಿತು. ಈ ಎರಡೂ ನಾಟಕಗಳನ್ನು ಪತ್ರಕರ್ತ, ರಂಗಕಲಾವಿದ ಮೌನೇಶ್‌ ವಿಶ್ವಕರ್ಮ ನಿರ್ದೇಶಿಸಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಹಿಂದೆ ಹಾಗೂ ಇಂದಿನ ಚಿತ್ರಣವನ್ನು ಎಚ್‌.ಎಸ್‌.ವೆಂಕಟೇಶ್‌ಮೂರ್ತಿ ಅವರ “ನಿನಗೆ ನೀನೇ ಗೆಳತಿ’ಯ ಮೂಲಕ ಮಂಗಳೂರು ಸೆ„ಂಟ್‌ ಆಗ್ನೇಸ್‌ ಕಾಲೇಜು ವಿದ್ಯಾರ್ಥಿಗಳು ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ನಿರ್ದೇಶನದಲ್ಲಿ ಪ್ರದರ್ಶಿಸಿದರು.

ಸಹಜ ನಿರೀಕ್ಷೆ 
ನಾಟಕಗಳ ಮೇಲೆ ನಿರೀಕ್ಷೆ ಸಹಜ. ಕಾಲೇಜು ಹುಡುಗರ ತಂಡವೆನ್ನುವಾಗ ಉತ್ಸಾಹ, ಏರು ಅಭಿನಯ, ಸ್ವರಗಳ ಮೇಲಿನ ಹಿಡಿತ, ಅವರ ಆತ್ಮವಿಶ್ವಾಸದ ಮೇಲೆ ನಂಬಿಕೆಯಿರುತ್ತದೆ. ಆದರೆ ಪ್ರದರ್ಶನಗೊಂಡ ನಾಟಕಗಳಲ್ಲಿ ಎರಡು-ಮೂರು ನಾಟಕಗಳು ಯಾವುದೇ ಸಂದೇಶ ನೀಡಲು ವಿಫಲವಾದವು. ಈ ಬಗ್ಗೆ ತೀರ್ಪುಗಾರ ಪ್ರಭಾಕರ ತುಮರಿ ಅವರು ಸಮಾರೋಪ ಸಮಾರಂಭದಲ್ಲಿ ನೇರವಾಗಿ ಟೀಕಿಸಿ, ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ ಎರಡು ತಂಡಗಳು ನಿರೀಕ್ಷಿತ ಗುಣಮಟ್ಟದಲ್ಲಿರಲಿಲ್ಲ. ಕಾಲೇಜಿನಿಂದಲೇ ತಂಡಗಳನ್ನು ಪರಿಶೀಲಿಸಿ, ಕಳುಹಿಸಬೇಕು. ಹೊಸ ಅರ್ಥಗಳನ್ನು ಪ್ರೇಕ್ಷಕರು ಗ್ರಹಿಸುವಂತೆ ನಾಟಕ ಮಾಡಬೇಕು. ನಾಟಕದ ವಸ್ತು ಹಾಗೂ ಸಂದೇಶ ಸ್ಪಷ್ಟ ದಿಕ್ಕುಗಳನ್ನು ನೀಡುವ ಆವಶ್ಯಕತೆಯಿದೆ. ರಂಗವೇದಿಕೆ ಶೆ„ಕ್ಷಣಿಕ ಸಾಧನೆಗೆ ಕಾರಣವಾಗಬೇಕು ಎಂದು ಹೇಳಿರುವುದೇ ಎರಡು ನಾಟಕಗಳ ವೈಫಲ್ಯವನ್ನು ಬೆಟ್ಟು ಮಾಡಿರುವುದಕ್ಕೆ ಉದಾಹರಣೆಯಾಗಿದೆ.

ಟ್ರಸ್ಟಿನ ಅಧ್ಯಕ್ಷ ಕಜೆ ರಾಮಚಂದ್ರ ಭಟ್‌, ಶಾರದಾ ಟೀಚರ್‌, ರಂಗಭೂಮಿಕಾ ವಿಟ್ಲದ ಸಂಚಾಲಕ ಎಂ.ಅನಂತಕೃಷ್ಣ ಹೆಬ್ಟಾರ್‌, ಮೂರ್ತಿ ದೇರಾಜೆ, ಅರವಿಂದ ಕುಡ್ಲ, ಸುಬ್ರಾಯ ಪೈ ಅವರ ಶ್ರಮ, ವಿಟಲ ವಿದ್ಯಾ ಸಂಘದ ಪದಾಧಿಕಾರಿಗಳು, ವಿಟಲ ಪ.ಪೂ.ಕಾಲೇಜಿನ ಪ್ರಾಂಶುಪಾಲ, ಉಪನ್ಯಾಸಕರು, ಬೋಧಕೇತರ ವೃಂದ, ವಿಟಲ ಪ್ರೌಢಶಾಲೆಯ ಮುಖ್ಯ ಶಿಕ್ಷಕ, ಶಿಕ್ಷಕರು ಹಾಗೂ ಬೋಧಕೇತರ ವೃಂದದವರ ಶ್ರಮ ಶ್ಲಾಘನೀಯ. ವಿದ್ಯಾರ್ಥಿಗಳಲ್ಲಿ ಸದಭಿರುಚಿಯ ನಾಟಕದ ಆಸಕ್ತಿ ಹುಟ್ಟಿಸಲು ಸ್ಪರ್ಧೆ ಕಾರಣವಾದರೆ ಸಂಘಟಕರ ಈ ಶ್ರಮ ಸಾರ್ಥಕವಾದಂತೆ. 

ಉದಯಶಂಕರ್‌ ನೀರ್ಪಾಜೆ 

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.