ಅಬ್‌ ಕಿ ಬಾರ್‌ ನಿಮ್ದೇ ಕಾರ್‌!

ಹೊಸ ಕಾರುಗಳ ದರ್ಬಾರು

Team Udayavani, Oct 7, 2019, 5:59 AM IST

car

ಆಯುಧ ಪೂಜೆಯ ದಿನ ಕಾರ್‌ ತಗೋಬೇಕು, ದಸರಾ ದಿನಾನೇ ಬೈಕ್‌ ಖರೀದಿಸಬೇಕು ಎಂದೆಲ್ಲಾ ಯೋಜಿಸುವ ಜನರುಂಟು. ಆಯುಧ ಪೂಜೆ- ದಸರಾ- ದೀಪಾವಳಿಯ ಸಡಗರ ಒಟ್ಟಿಗೇ ಬರುವುದರಿಂದ, ಈ ಸಂದರ್ಭದಲ್ಲಿ ನೌಕರರಿಗೆ ಬೋನಸ್‌ ಕೂಡಾ ಸಿಗುವುದರಿಂದ, ವಾಹನ ಖರೀದಿಸುವ ಹುಮ್ಮಸ್ಸು ಸಹಜವಾಗಿಯೇ ಇರುತ್ತದೆ. ವಾಹನ ತಯಾರಕರೂ ಅಷ್ಟೇ: ದಸರಾ ಸಮಯಕ್ಕೆ ಸರಿಯಾಗಿ ಬಗೆಬಗೆಯ ವಾಹನಗಳನ್ನು ಗ್ರಾಹಕರ ಮುಂದೆ ನಿಲ್ಲಿಸುತ್ತಾರೆ! ಆತಂಕ ಹುಟ್ಟಿಸಿದ್ದ ಆಟೋಮೊಬೈಲ್‌ ಕ್ಷೇತ್ರ ಮತ್ತೆ ಚೇತರಿಕೆಯ ಹಾದಿ ಹಿಡಿಯುತ್ತಿರುವ ಲಕ್ಷಣ ಗೋಚರಿಸುತ್ತಿರುವುದು ದಸರಾ ಸಂಭ್ರಮವನ್ನು ಹೆಚ್ಚಿಸಿದೆ. ಮಾರುಕಟ್ಟೆಗೆ ಕಾಲಿಡಲಿರುವ ಈ ಕಾರು- ಬೈಕುಗಳ ಬಯೋಡಾಟಾ ಇಲ್ಲಿದೆ.

1. ಮಾರುತಿ ಸುಜುಕಿ ವಿಟಾರಾ ಬ್ರಿಜಾ
ಮಾದರಿ – ಎಸ್‌ಯುವಿ (ಪೆಟ್ರೋಲ…- ಡೀಸೆಲ್‌)
ನಿರೀಕ್ಷಿತ ಬೆಲೆ -8.5- 10.5 ಲಕ್ಷ ರೂ.
ಲಾಂಚ್‌ -ಅಕ್ಟೋಬರ್‌
ವೈಶಿಷ್ಟ- ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌, ಆ್ಯಂಟಿಲಾಕ್‌ ಬ್ರೇಕಿಂಗ್‌ ಸಿಸ್ಟಮ್‌
ಮೈಲೇಜ್‌- 22 ಕಿ.ಮೀ
ಈಗಾಗಲೇ ಮಾರುಕಟ್ಟೆಯಲ್ಲಿ ನಾಲ್ಕು ವರ್ಷಗಳ ಕಾಲ ಆಳ್ವಿಕೆ ನಡೆಸಿರುವ ಮಾರುತಿ ಸುಜುಕಿ ವಿಟಾರಾ ಬ್ರಿಜಾ ಕಾರು, ಇದೇ ಮೊದಲ ಬಾರಿಗೆ ಫೇಸ್‌ಲಿಫr…ಗೆ ರೆಡಿಯಾಗಿದೆ. ವಿಶೇಷವೆಂದರೆ, ಈ ನಾಲ್ಕು ವರ್ಷಗಳಲ್ಲಿ ಕಂಪನಿ ಯಾವುದೇ ರೀತಿಯ ಅಪ್‌ಡೇಟ್‌ಗೆ ಹೋಗಿರಲಿಲ್ಲ. ಈಗ ಮತ್ತೂಂದಿಷ್ಟು ಫೀಚರ್‌ಗಳನ್ನು ತುಂಬಿ, ತಯಾರಿಸಲಾಗುತ್ತಿದೆ. ಇದೇ ತಿಂಗಳು ಅಥವಾ ವರ್ಷಾಂತ್ಯದಲ್ಲಿ ಕಾರು ಲಾಂಚ್‌ ಆಗಬಹುದು ಎಂಬ ಮಾತುಗಳಿವೆ. ಇದಾದ ಬಳಿಕ, ಮಾರುತಿಯವರ ಅರೆನಾ ಶೋರೂಂಗಳಲ್ಲಿ ಮುಂದಿನ ವರ್ಷದ ಆರಂಭದÇÉೇ ಕಾಣಿಸಿಕೊಳ್ಳಲಿದೆ. ಅಂದಹಾಗೆ, ಈಗ ಈ ಕಾರು ಬಿಎಸ್‌6 ಮಾದರಿಯಲ್ಲಿ ಬರಲಿದೆ.

2. ಮಹೀಂದ್ರಾ ಇಕೆಯುವಿ100
ಮಾದರಿ – ಎಸ್‌ಯುವಿ (ಎಲೆಕ್ಟ್ರಿಕ್‌)
ನಿರೀಕ್ಷಿತ ಬೆಲೆ -9- 10 ಲಕ್ಷ ರೂ.
ಲಾಂಚ್‌ – ಡಿಸೆಂಬರ್‌
ವೈಶಿಷ್ಟé- ಫ‌ುಲ್‌ ಚಾರ್ಜ್‌ನಲ್ಲಿ 250 ಕಿ.ಮೀ
ಮಹೀಂದ್ರಾ ಆಂಡ್‌ ಮಹೀಂದ್ರಾ ಕಂಪನಿ 2019-20ರ ಹಣಕಾಸು ವರ್ಷದಲ್ಲಿ ಹೊಸ ಎಲೆಕ್ಟ್ರಿಕ್‌ ಎಸ್‌ಯುವಿ ತರಬೇಕು ಎಂಬ ಕನಸನ್ನು ನನಸು ಮಾಡಲು ಹೊರಟಿದೆ. ಹೀಗಾಗಿ, ಕೆಯುವಿ100 ಅನ್ನು ಈ ವರ್ಷಾಂತ್ಯದಲ್ಲಿ ಬಿಡುಗಡೆ ಮಾಡಲಿದೆ. ಈ ಕಾರು 380 ವೋಲ್ಟ… ಸಿಸ್ಟಮ…, 150 ಕಿಲೋವ್ಯಾಟ್‌ ಬ್ಯಾಟರಿ ಪ್ಯಾಕ್‌ಅನ್ನು ಒಳಗೊಂಡಿದೆ. ಒಮ್ಮೆ ಚಾರ್ಜ್‌ ಮಾಡಿದರೆ 250 ಕಿ.ಮೀ. ಚಲಿಸುತ್ತದೆ.

3. ಟಾಟಾ ಅಲೊóàಸ್‌
ಮಾದರಿ -ಹ್ಯಾಚ್‌ ಬ್ಯಾಕ್‌(ಪೆಟ್ರೋಲ್‌- ಡೀಸೆಲ್‌)
ನಿರೀಕ್ಷಿತ ಬೆಲೆ – 6- 8.2 ಲಕ್ಷ ರೂ.
ಲಾಂಚ್‌ – ಅಕ್ಟೋಬರ್‌
ವೈಶಿಷ್ಟé- ನೆಕ್ಸಾನ್‌ ಟಬೊì ಚಾರ್ಜ್‌x ಮೋಟಾರ್‌
ಮೈಲೇಜ್‌- 20 ಕಿ.ಮೀ
2018ರ ದೆಹಲಿ ಆಟೋ ಎಕÕ…ಪೋದಲ್ಲಿ ಬಿಡುಗಡೆಯಾದ ಈ ಕಾರು, ಇನ್ನೂ ಮಾರುಕಟ್ಟೆಗೆ ಪ್ರವೇಶ ಮಾಡಿಲ್ಲ. ಪ್ರೀಮಿಯಂ ಹ್ಯಾಚ್‌ ಬ್ಯಾಕ್‌ ಎಂಬ ಹೆಗ್ಗಳಿಕೆ ಹೊಂದಿರುವ ಇದು, ಸದ್ಯ ಇನ್ನೂ ತಯಾರಿಕೆ ಹಂತದÇÉೇ ಇದೆ. ದೆಹಲಿ ಆಟೋ ಎಕÕ…ಪೋದಲ್ಲಿ ಈ ಕಾರಿಗೆ ಯಾವುದೇ ಹೆಸರನ್ನು ನೀಡಿರಲಿಲ್ಲ. 2019ರ ಆರಂಭದಲ್ಲಿ ಈ ಕಾರಿನ ಹೆಸರನ್ನೂ ಬಿಡುಗಡೆ ಮಾಡಲಾಗಿದೆ. ಅಲ್ಬಟ್ರೋಸ್‌ ಎಂಬ ಪಕ್ಷಿ ಹೆಸರನ್ನು ತೆಗೆದುಕೊಂಡು “ಅಲೊóàಸ್‌’ ಎಂಬ ಹೆಸರನ್ನು ಇಡಲಾಗಿದೆ ಎಂದು ಟಾಟಾ ಸಂಸ್ಥೆ ಹೇಳಿಕೊಂಡಿದೆ.

4. ಹೊಸ ವೋಲ್ವೋ ಎಸ್‌60
ಮಾದರಿ- ಸೆಡಾನ್‌, ಪೆಟ್ರೋಲ…, ಹೈಬ್ರಿಡ್‌
ನಿರೀಕ್ಷಿತ ಬೆಲೆ – 35- 42 ಲಕ್ಷ ರೂ.
ಲಾಂಚ್‌ – ಅಕ್ಟೋಬರ್‌
ವೈಶಿಷ್ಟé- 8 ಸ್ಪೀಡ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌- ಮಿನಿಮಲಿಸ್ಟಿಕ್‌ ವಿನ್ಯಾಸ
ಮೈಲೇಜ್‌- 27 ಕಿ.ಮೀ
ಸೆಡಾನ್‌ ಮಾದರಿಯ, ಲಕ್ಸೂರಿಯಸ್‌ ಟಚ್‌ ಇರುವ ಕಾರಿದು. ಈ ತಿಂಗಳೇ ಲಾಂಚ್‌ ಆಗುವ ಸಂಭವವಿದ್ದರೂ, ಮಾರ್ಕೆಟ್‌ಗೆ ಬರಲು ಇನ್ನೊಂದಿಷ್ಟು ದಿನ ಕಾಯಲೇಬೇಕು. ಇದುವರೆಗೆ ಲಕ್ಸೂರಿಯಸ್‌ ಕಾರು ತಯಾರಿಕೆಯಲ್ಲಿ ಹೆಸರು ಮಾಡಿರುವ ವೋಲ್ವೋ ಈ ಸೆಡಾನ್‌ ಮಾದರಿಯ ಕಾರನ್ನೂ ಅದೇ ರೀತಿಯÇÉೇ ವಿನ್ಯಾಸ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಎಸ್‌90 ಸಿರೀಸ್‌ನ ಕಾರುಗಳಿದ್ದು, ಮುಂದೆ ಎಸ್‌60 ಸಿರೀಸ್‌ನಲ್ಲಿ ಬರಲಿದೆ. ವಿಶೇಷವೆಂದರೆ, ಈ ಮಾದರಿಯಲ್ಲಿ ಡೀಸೆಲ್‌ ಎಂಜಿನ್‌ ಸಿಗುವುದಿಲ್ಲ.

5. ಹೊಸ ಜಾಗ್ವಾರ್‌ ಎಕÕ…ಇ
ಮಾದರಿ -ಸೆಡಾನ್‌(ಪೆಟ್ರೋಲ್‌)
ನಿರೀಕ್ಷಿತ ಬೆಲೆ -42- 45 ಲಕ್ಷ ರೂ.
ಲಾಂಚ್‌ -ನವೆಂಬರ್‌
ವೈಶಿಷ್ಟ- 6 ಏರ್‌ ಬ್ಯಾಗ್‌, ಡ್ಯುಯೆಲ್‌ ಕ್ಲೈಮೇಟ್‌ ಕಂಟ್ರೋಲ್‌, ಪ್ಯಾನರೋಮಿಕ್‌ ಸನ್‌ರೂಫ್
ಮೈಲೇಜ್‌- 14 ಕಿ.ಮೀ
ಇದು ಕೂಡ ಫೇಸ್‌ಲಿಫr… ಮಾದರಿಯಲ್ಲಿ ಬರುತ್ತಿದೆ. ಮಾರ್ಕೆಟ್‌ನಲ್ಲಿ ಹವಾ ಎಬ್ಬಿಸಿರುವ ಈ ಸೆಡಾನ್‌ ಮಾದರಿಯ ಕಾರು, ಹಿಂದಿನ ಮಾದರಿಯಲ್ಲಿ ಹೆಚ್ಚೇನೂ ಬದಲಾವಣೆ ಮಾಡದೇ ಇದ್ದರೂ, ಕೊಂಚ ಆಚೀಚೆ ಮಾಡಲಾಗಿದೆ. ಕಾರಿನ ಮುಂಭಾಗದ ಗ್ರಿಲ್‌ನಲ್ಲಿ ಕೊಂಚ ಬದಲು, ಹೆಡ್‌ಲ್ಯಾಂಪ್‌ಗ್ಳು 12ಎಂಎಂ ಸ್ಲಿಮ್ಮರ್‌ ಗಳಾಗಿವೆ.

6. ಫೋಕ್ಸ್ ವ್ಯಾಗನ್ ಟಿ- ರಾಕ್‌
ಮಾದರಿ -ಎಸ್‌ಯುವಿ (ಪೆಟ್ರೋಲ್‌)
ನಿರೀಕ್ಷಿತ ಬೆಲೆ -17- 20 ಲಕ್ಷ ರೂ.
ಲಾಂಚ್‌ – ನವೆಂಬರ್‌
ವೈಶಿಷ್ಟé- ಡ್ಯುಯೆಲ್‌ ಕ್ಲಚ್‌ ಟ್ರಾನ್ಸ್‌ಮಿಷನ್‌, ಟಬೊì ಡೈರೆಕ್ಟ್ ಇಂಜೆಕ್ಷನ್‌
ಮೈಲೇಜ್‌- 16 ಕಿ.ಮೀ
ಇದು ಕಾಂಪ್ಯಾಕr… ಎಸ್‌ಯುವಿಯಾಗಿದ್ದು, ಸದ್ಯ ಪೆಟ್ರೋಲ್‌ ಮಾದರಿಯಲ್ಲಷ್ಟೇ ಬರುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಲಾಂಚ್‌ ಆಗುತ್ತಿರುವುದರಿಂದ ಮೋಟೋ ಆಸಕ್ತರು ಕುತೂಹಲದಿಂದ ಕಾದಿದ್ದಾರೆ.

7. ಟಾಟಾ ಟಿಯಾಗೋ ಫೇಸ್‌ಲಿಫ್ಟ್
ಮಾದರಿ -ಎಸ್‌ಯುವಿ (ಪೆಟ್ರೋಲ್‌, ಡೀಸೆಲ್‌)
ನಿರೀಕ್ಷಿತ ಬೆಲೆ – 4.31 ಲಕ್ಷ
ಲಾಂಚ್‌ – 2020
ವೈಶಿಷ್ಟé- 8 ಸ್ಪೀಕರ್‌ ಹರ್ಮನ್‌ ಸೌಂಡ್‌ ಸಿಸ್ಟಂ
ಮೈಲೇಜ್‌- 27 ಕಿ.ಮೀ
ಮಾರುಕಟ್ಟೆಯಲ್ಲಿರುವ ಟಿಯಾಗೋ ಹೊಸ ಸ್ಪರ್ಶದೊಂದಿಗೆ, ವಿನ್ಯಾಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಲು ತಯಾರಿ ನಡೆಸಿದೆ. ಈ ಕಾರು ಫೇಸ್‌ಲಿಫ್ಟ್ ಮಾದರಿಯಲ್ಲಿದ್ದು, ಡೀಸೆಲ್‌ ಆವೃತ್ತಿಯಲ್ಲಿ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆ ನೀಡಲಾಗಿದೆ..

8. ಹೊಸ ಹುಂಡೈ ಟಕ್ಸನ್‌
ಮಾದರಿ – ಎಸ್‌ಯುವಿ (ಡೀಸೆಲ್‌)
ನಿರೀಕ್ಷಿತ ಬೆಲೆ – 18- 22 ಲಕ್ಷ ರೂ.
ಲಾಂಚ್‌- ನವೆಂಬರ್‌
ವೈಶಿಷ್ಟé- ಬಾಟಲ್‌, ಲೋಟ ಮತ್ತಿತರ ವಸ್ತುಗಳನ್ನಿಡಲು ಪಾಕೆಟ್‌ಗಳು, ಫ್ಲೋಟಿಂಗ್‌ ಟ್ಯಾಬ್ಲೆಟ್‌ ವಿನ್ಯಾಸ
ಮೈಲೇಜ್‌- 18 ಕಿ.ಮೀ
ಇದು ಕೂಡ ಹೊಸ ಕಾರೇನಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಕಾರನ್ನೇ ಇನ್ನೊಂದಿಷ್ಟು ಅಪ್‌ಗೆÅàಡ್‌ ಮಾಡಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಫೇಸ್‌ಲಿಫr… ಕಾರು, ಹೊಸ ಹೆಡ್‌ಲ್ಯಾಂ±Õ…, ಡಿಆರ್‌ಎಲ್‌ ಮತ್ತು ಕ್ಯಾಸ್ಕೇಡಿಂಗ್‌ ಫ್ರಂಟ್‌ ಗ್ರಿಲ್‌ಗ‌ಳನ್ನು ಒಳಗೊಂಡಿದೆ.

9. ಮಾರುತಿ ಸುಜುಕಿ ಜಿಮ್ನಿ
ಮಾದರಿ – ಎಸ್‌ಯುವಿ (ಪೆಟ್ರೋಲ…- ಡೀಸೆಲ್‌)
ನಿರೀಕ್ಷಿತ ಬೆಲೆ -7.5- 8 ಲಕ್ಷ ರೂ.
ಲಾಂಚ್‌ -ಡಿಸೆಂಬರ್‌
ವೈಶಿಷ್ಟé- 5 ಡೋರ್‌ ಆವೃತ್ತಿ
ಮೈಲೇಜ್‌- 15 ಕಿ.ಮೀ
ಒಂದು ರೀತಿ ಮಿನಿ ಎಸ್‌ಯುವಿ ರೀತಿ ಇರುವ ಇದು 4×4 ಮಾದರಿಯ ಕಾರು. 0.66 ಲೀ. ಟಬೋì ಚಾರ್ಜ್‌ಡ್‌, 3 ಸಿಲಿಂಡರ್‌ ಎಂಜಿನ್‌ ಹಾಗೂ 1.5 ಲೀ. ಸಾಮರ್ಥ್ಯದ ಎಂಜಿನ್‌ ಹೊಂದಿದೆ. ಇದರಲ್ಲಿ 5 ಮ್ಯಾನ್ಯುವಲ್‌ ಗೇರ್‌ ಅಥವಾ 4 ಆಟೋಮ್ಯಾಟಿಕ್‌ ಗೇರ್‌ಬಾಕÕ… ಸೌಲಭ್ಯವಿದೆ.

10. ಸ್ಕೋಡಾ ಸ್ಕೇಲಾ
ಮಾದರಿ- ಎಸ್‌ಯುವಿ (ಪೆಟ್ರೋಲ…- ಡೀಸೆಲ್‌)
ನಿರೀಕ್ಷಿತ ಬೆಲೆ -43- 49 ಲಕ್ಷ ರೂ.
ಲಾಂಚ್‌ – ಡಿಸೆಂಬರ್‌
ವೈಶಿಷ್ಟ- ಸ್ಯಾಟಲೈಟ್‌ ನ್ಯಾವಿಗೇಷನ್‌
ಮೈಲೇಜ್‌-14 ಕಿ.ಮೀ
2018ರಲ್ಲಿ ಇಸ್ರೇಲ್‌ನ ಟೆಲ್‌ ಅವೈವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕಾರಿನ ಬಗ್ಗೆ ಸ್ಕೋಡಾ ಕಂಪನಿ ಘೋಷಣೆ ಮಾಡಿತ್ತು. ಒಂದು ರೀತಿಯಲ್ಲಿ ಹ್ಯಾಚ್‌ ಬ್ಯಾಕ್‌ನಂತೆ ಕಂಡು ಬಂದರೂ, ಸ್ಕೇಲಾದಲ್ಲಿ ಹಿಂದಿನ ಸೀಟಿನ ಲೆಗ್‌ರೂಂ (ಕಾಲಿಡಲು ಜಾಗ) ಕೊಂಚ ಹೆಚ್ಚಾಗಿಯೇ ಇದೆ. ಅದರಲ್ಲೂ ಹಿಂದಿನ ಅಕ್ಟೇವಿಯಾ ಸೆಡಾನ್‌ಗಿಂತ ಹೆಡ್‌ ರೂಂಗಿಂತ ಇನ್ನೊಂದಿಷ್ಟು ವಿಶಾಲವಾಗಿದೆ. ಇದರಲ್ಲಿ ವಿಶಾಲವಾದ ಡಿಕ್ಕಿ ಅಂದರೆ, 467 ಲೀ. ಬೂಟ್‌ಸ್ಪೇಸ್‌ ಇದೆ. ಅಲ್ಲದೆ ಹಿಂದಿನ ಸೀಟುಗಳನ್ನು ಮಡಚಿದರೆ 1410 ಲೀ. ಬೂಟ್‌ ಸ್ಪೇಸ್‌ ಸಿಗಲಿದೆ.

11. ಟಾಟಾ ನೆಕ್ಸಾನ್‌ ಝಿಪಾóನ್‌
ನಿರೀಕ್ಷಿತ ಬೆಲೆ -15 - 17 ಲಕ್ಷ ರೂ.
ಮಾದರಿ – ಎಸ್‌ಯುವಿ (ಎಲೆಕ್ಟ್ರಿಕ್‌)
ಲಾಂಚ್‌ – ಜನವರಿ, 2020
ವೈಶಿಷ್ಟé- ಫ‌ುಲ್‌ಜಾರ್ಜ್‌ನಲ್ಲಿ 300 ಕಿ.ಮೀ
ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ನಿರ್ಮಿಸಿರುವ ಟಾಟಾ ನಿಕ್ಸಾನ್‌, ಮುಂದಿನ ವರ್ಷಾರಂಭದಲ್ಲಿ ಎಲೆಕ್ಟ್ರಿಕ್‌ ಮಾದರಿಯಲ್ಲಿ ಮರು ಪ್ರವೇಶ ಮಾಡಲಿದೆ. ಸದ್ಯ ಕಂಪನಿ ಈ ಬಗ್ಗೆ ಘೋಷಣೆ ಮಾಡಿಕೊಂಡಿದ್ದು, ಹಣಕಾಸು ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ ಕಾರು ಮಾರುಕಟ್ಟೆಗೆ ಪ್ರವೇಶ ಮಾಡಲಿದೆ ಎಂದಿದೆ. ಝಿಪಾóನ್‌ ಟೆಕ್ನಾಲಜಿಯೊಂದಿಗೆ ಬಂದಿರುವ ಇದು, ಒಮ್ಮೆ ಚಾರ್ಜ್‌ ಮಾಡಿದಲ್ಲಿ 300 ಕಿ.ಮೀ. ಮೈಲೇಜ್‌ ನೀಡಲಿದೆಯಂತೆ. ಜೊತೆಗೆ ಶೀಘ್ರ ಚಾರ್ಜ್‌ ಆಗುವ ಬ್ಯಾಟರಿ ಸೇರಿದಂತೆ ಒಳ್ಳೊಳ್ಳೆ ಫೀಚರ್‌ಗಳಿವೆ ಎಂದು ಸ್ವತಃ ಕಂಪನಿಯೇ ಹೇಳಿಕೊಂಡಿದೆ.

12. ಹುಂಡೈ ಐಯೋನಿಕ್‌
ಮಾದರಿ- ಸೆಡಾನ್‌ (ಎಲೆಕ್ಟ್ರಿಕ್‌, ಹೈಬ್ರಿಡ್‌)
ನಿರೀಕ್ಷಿತ ಬೆಲೆ -20- 25 ಲಕ್ಷ ರೂ.
ಲಾಂಚ್‌-ಜನವರಿ, 2020
ವೈಶಿಷ್ಟé- ಆಟೋಮ್ಯಾಟಿಕ್‌ ಲೈಟ್ಸ್‌ ಮತ್ತು ವೈಪರ್‌
ಮೂರು ಎಲೆಕ್ಟ್ರಿಕ್‌ ಪವರ್‌ ಟ್ರೈ®Õ… ಮೂಲಕ ಈ ಆಪ್ಶನ್‌ ಕೊಡುತ್ತಿರುವ ಜಗತ್ತಿನ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಹುಂಡೈ ಐಯೋನಿಕ್‌ ಪಾತ್ರವಾಗಿದೆ. ಇದು ಐಯೋನಿಕ್‌ ಹೈಬ್ರಿಡ್‌, ಐಯೋನಿಕ್‌ ಎಲೆಕ್ಟ್ರಿಕ್‌ ಮತ್ತು ಐಯೋನಿಕ್‌ ಪ್ಲಗ್‌ ಇನ್‌ ಎಂಬ ಮಾದರಿಯಲ್ಲಿ ಬರುತ್ತಿದೆ. ಹೈಬ್ರಿಡ್‌ ಮತ್ತು ಪ್ಲಗ್‌ ಇನ್‌ ಕಾರುಗಳು ನ್ಯೂ ಕಪ್ಪಾ 1.6 ಲೀ., ಫೋರ್‌ ಸಿಲಿಂಡರ್‌, ಜಿಡಿಐ ಪೆಟ್ರೋಲ್‌ ಎಂಜಿನ್‌ ಅನ್ನು ಒಳಗೊಂಡಿವೆ. ಅಷ್ಟೇ ಅಲ್ಲ, ಸಿಕÕ… ಸ್ಪೀಡ್‌ ಗೇರ್‌ಬಾಕÕ…ಗಳನ್ನೂ ಈ ಕಾರು ಒಳಗೊಂಡಿದೆ.
—————————
ಬೈಕುಗಳ ಸುಗ್ಗಿ

ಬೆನೆಲಿ ಲಿಯೋನ್ಸಿಯೋ 250
ನಿರೀಕ್ಷಿತ ಬೆಲೆ- 1.5- 2 ಲಕ್ಷ ರೂ.
ಇಂಧನ -ಪೆಟ್ರೋಲ್‌
ಲಾಂಚ್‌ – ಅಕ್ಟೋಬರ್‌
ಅಕ್ಟೋಬರ್‌ ಆರಂಭದÇÉೇ ಲಾಂಚ್‌ ಆಗಲಿರುವ ಬೈಕ್‌ ಇದು. ಚೀನೀ ಮಾಲೀಕತ್ವದ ಇಟಲಿಯ ತಯಾರಕಾ ಸಂಸ್ಥೆಯ ಬೆನೆಲಿ ಲಿಯೋನ್ಸಿಯೋ 250 ಬೈಕ್‌, ನ್ಪೋರ್ಟ್ಸ್ ಸ್ಟೈಲ್‌ ಹೊಂದಿದೆ. 250 ಸಿಸಿ ಸಾಮರ್ಥ್ಯದ ಇದರ ಮುಂದುವರಿದ ಭಾಗವಾಗಿ 500 ಸಿಸಿ ಬೈಕ್‌ ಅನ್ನು ಮಾರುಕಟ್ಟೆಗೆ ಬಿಡಲೂ ಕಂಪನಿ ತಯಾರಿ ನಡೆಸಿದೆ. ಇದು 2020ರ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು.

ಹುಸ್ಕ್ವಾರ್ನಾ ವಿಟಿ³ಲೆನ್‌ 401
ನಿರೀಕ್ಷಿತ ಬೆಲೆ -2.5- 3 ಲಕ್ಷ ರೂ.
ಇಂಧನ – ಪೆಟ್ರೋಲ್‌
ಲಾಂಚ್‌ – ಅಕ್ಟೋಬರ್‌
ಈಗಾಗಲೇ ಭಾರತದಲ್ಲಿ ಯುವಕರ ಮನಗೆದ್ದಿರುವ ಕೆಟಿಎಂ ಬೈಕ್‌ನ ಮಾಲೀಕತ್ವ ಹೊಂದಿರುವ, ಸ್ವೀಡಿಷ್‌ ಕಂಪನಿಯ ಹೊಸ ಬೈಕ್‌ ಇದು. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬೈಕ್‌ ಅನ್ನು ಲಾಂಚ್‌ ಮಾಡಲಾಗಿದೆ. ಶೀಘ್ರದÇÉೇ ಇದು, ಭಾರತದ ಮಾರುಕಟ್ಟೆಗೂ ಪ್ರವೇಶ ಮಾಡಲಿದೆ.

ಜಾವಾ ಪೆರಕ್‌
ನಿರೀಕ್ಷಿತ ಬೆಲೆ – 1.89- 2 ಲಕ್ಷ ರೂ.
ಇಂಧನ – ಪೆಟ್ರೋಲ್‌
ಲಾಂಚ್‌ – ಅಕ್ಟೋಬರ್‌
ಮಹೀಂದ್ರಾ ಕಂಪನಿ, ಜಾವಾ ಕಂಪನಿಯನ್ನು ಖರೀದಿಸಿದ ಮೇಲೆ ಜಾವಾ ಹೆಸರಿನ ಹಲವು ಬೈಕ್‌ಗಳು ಬಂದಿವೆ. ಇದೀಗ ಕಂಪನಿಯೇ ಮಗದೊಂದು ಬೈಕ್‌ಅನ್ನು ಮಾರುಕಟ್ಟೆಗೆ ಬಿಡಲು ತಯಾರಿ ನಡೆಸಿದೆ. ಬಾಬ್ಬರ್‌ ಮೋಟಾರ್‌ ಸೈಕಲ್‌ ಎಂದೇ ಕರೆಸಿಕೊಂಡಿರುವ ಜಾವಾ ಪೆರಕ್‌ ಅನ್ನು ಶೀಘ್ರದÇÉೇ ಬಿಡುಗಡೆ ಮಾಡಲಾಗುತ್ತದೆ. ಇದು ದೇಶದ ಮೊದಲ ಫ್ಯಾಕ್ಟರಿ ಕಸ್ಟಮ್‌ ಮೋಟಾರ್‌ ಸೈಕಲ್‌ ಎಂದು ಕಂಪನಿ ಹೇಳಿಕೊಂಡಿದೆ.

ಪಿಯಾಗಿಯೋ ವೆಸ್ಪಾ ಎಲೆಕ್ಟ್ರಿಕಾ
ನಿರೀಕ್ಷಿತ ಬೆಲೆ – 90,000- 1 ಲಕ್ಷ ರೂ.
ಇಂಧನ – ಎಲೆಕ್ಟ್ರಿಕ್‌
ಲಾಂಚ್‌ – ಅಕ್ಟೋಬರ್‌
ಈಗಾಗಲೇ ಗ್ಲೋಬಲ್‌ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಈ ಬೈಕ್‌ನ ಬುಕ್ಕಿಂಗ್‌ ಭಾರತದಲ್ಲಿ ಈ ತಿಂಗಳಿನಿಂದಲೇ ಆರಂಭವಾಗಲಿದೆ. ಈಗಾಗಲೇ ಒಂದು ವೆಸ್ಪಾ ಮಾದರಿಯ ಸ್ಕೂಟರ್‌ ಭಾರತದ ರಸ್ತೆಗಳಲ್ಲಿ ಓಡಾಡುತ್ತಿದ್ದು, ಈಗ ಎಲೆಕ್ಟ್ರಿಕ್‌ ಮಾದರಿಯ ಸ್ಕೂಟರ್‌ ನೀಡಲಾಗುತ್ತಿದೆ.

ಹೀರೋ ಡೇರ್‌ 125
ನಿರೀಕ್ಷಿತ ಬೆಲೆ – 55,000- 60,000 ರೂ.
ಇಂಧನ – ಪೆಟ್ರೋಲ್‌
ಲಾಂಚ್‌ – ಡಿಸೆಂಬರ್‌
2014ರ ಆಟೋ ಎಕÕ…ಪೋದÇÉೇ ಈ ಸ್ಕೂಟರ್‌ಅನ್ನು ಅನಾವರಣ ಮಾಡಲಾಗಿತ್ತಾದರೂ ಇದುವರೆಗೆ ಮಾರುಕಟ್ಟೆಗೆ ಮಾತ್ರ ಬಂದಿಲ್ಲ. ಪುರುಷ ರೈಡರ್ ಅನ್ನೇ ಗಮನದಲ್ಲಿಟ್ಟುಕೊಂಡು ಈ ಬೈಕ್‌ ರೂಪಿಸಲಾಗಿದೆ. 124 ಸಿಸಿ ಸಾಮರ್ಥ್ಯದ ಇದು ಉತ್ತಮ ಶಕ್ತಿ ಹೊಂದಿದೆ.

ಎಲೆಕ್ಟ್ರಿಕ್‌ ವೆಹಿಕಲ್‌ಗ‌ಳ ಕತೆ ಏನು?
ಆಟೋಮೊಬೈಲ್‌ ಉದ್ಯಮ ಕೊಂಚ ಚುರುಕು ತೆಗೆದುಕೊಳ್ಳುವ ಹೊತ್ತಿಗೇ ಕೇಂದ್ರ ಸರ್ಕಾರ, ಎಲೆಕ್ಟ್ರಿಕ್‌ ವೆಹಿಕಲ್‌ ಯುಗದತ್ತ ಚಲನೆಯ ಗತಿಯನ್ನು ತುಸು ನಿಧಾನ ಮಾಡಿದೆ. ಎಲೆಕ್ಟ್ರಿಕ್‌ ವೆಹಿಕಲ್‌ಗ‌ಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದೇ ಪೆಟ್ರೋಲ…, ಡೀಸೆಲ್‌ ಆಧರಿತ ವಾಹನೋದ್ಯಮಕ್ಕೆ ಪೆಟ್ಟಾಯಿತೇ ಎಂಬ ಆತಂಕವೂ ಇದಕ್ಕೆ ಕಾರಣ. ಹೀಗಾಗಿಯೇ 2022ರ ವೇಳೆಗೆ ವಾಹನೋದ್ಯಮದಲ್ಲಿ ಹೆಚ್ಚೆಚ್ಚು ಎಲೆಕ್ಟ್ರಿಕ್‌ ವಾಹನಗಳನ್ನು ತರಬೇಕು ಎಂಬ ಪಟ್ಟನ್ನು ಸಡಿಲ ಮಾಡಿಕೊಂಡಿರುವ ಕೇಂದ್ರ ಸರ್ಕಾರ, ಅದನ್ನು ಕೊಂಚ ಮುಂದಕ್ಕೆ ತಳ್ಳಿದೆ.

ಇದರ ನಡುವೆಯೇ, ವಾಹನ ಕಂಪನಿಗಳು ಮಾತ್ರ, ಎಲೆಕ್ಟ್ರಿಕ್‌ ವೆಹಿಕಲ್‌ಗ‌ಳತ್ತ ಹೆಚ್ಚಿನ ಗಮನ ಹರಿಸಿವೆ. ಜತೆ ಜತೆಯÇÉೇ ರಾಜ್ಯ ಸರ್ಕಾರಗಳೂ ಇವಿ ವೆಹಿಕಲ್‌ಗ‌ಳತ್ತ ಚಿತ್ತ ಹರಿಸಿವೆ. ಉತ್ತರಪ್ರದೇಶ ಸರ್ಕಾರ, 2024ರ ವೇಳೆಗೆ 2 ಲಕ್ಷ ಚಾರ್ಜಿಂಗ್‌ ಸ್ಟೇಷನ್‌ ಮಾಡುವ ಗುರಿ ಹೊಂದಿದ್ದರೆ, ಆಂಧ್ರಪ್ರದೇಶ, 2029ರ ವೇಳೆಗೆ ಶೇ.100ರಷ್ಟು ಸಾರ್ವಜನಿಕ ಬಸ್‌ಗಳನ್ನು ವಿದ್ಯುತ್‌ಚಾಲಿತ ಬಸ್‌ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.

ಇನ್ನು ಐಷಾರಾಮಿ ಸೆಗೆ¾ಂಟ್‌ನ ವಾಹನ ತಯಾರಕರು, ಹೆಚ್ಚೆಚ್ಚಾಗಿ ಎಲೆಕ್ಟ್ರಿಕ್‌ ವಾಹನಗಳತ್ತಲೇ ಗಮನ ಹರಿಸುತ್ತಿ¨ªಾರೆ. ಆಡಿ, ಬೆಂಝ…, ಜಾಗ್ವಾರ್‌, ರೇಂಜ್‌ ರೋವರ್‌, ಬಿ.ಎಂ.ಡಬ್ಲೂ$Â, ವೋಲ್ವೋ ಸೇರಿದಂತೆ, ಐಷಾರಾಮಿ ಕಾರು ತಯಾರಕ ಕಂಪನಿಗಳು, 2020ರ ವೇಳೆಗೆ ಬಹಳಷ್ಟು ಕಾರುಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಲು ಮುಂದಾಗಿವೆ. ಭಾರತದಲ್ಲಿ ಹುಂಡೈ, ಮಹೀಂದ್ರಾ ಮುಂತಾದ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿವೆ.

ಮುಂದೆ ಬರಲಿರುವ ಬೈಕ್‌ಗಳು
1. ಯಮಹಾ ಎಕÕ…-ಮ್ಯಾಕÕ… 125
ನಿರೀಕ್ಷಿತ ದರ – 70,000- 75,000 ರೂ.
2. ಲ್ಯಾಂಬ್ರೆಟಾ ವಿ125
ನಿರೀಕ್ಷಿತ ದರ – 87,000- 95,000 ರೂ.
3. ಹೀರೋ ಡ್ನೂಯೆಟ್‌-ಇ
ನಿರೀಕ್ಷಿತ ದರ – 48,000- 52,000 ರೂ.
4. ಟಿವಿಎಸ್‌ ಡಾಜ್‌
ನಿರೀಕ್ಷಿತ ದರ – 55,000- 60,000 ರೂ.
5. ಟಿವಿಎಸ್‌ ಕ್ರಿಯಾನ್‌
ನಿರೀಕ್ಷಿತ ದರ – 72,000- 82,000 ರೂ.

– ಸೋಮಶೇಖರ ಸಿ. ಜೆ

ಟಾಪ್ ನ್ಯೂಸ್

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.