ಕಸುವು ತುಂಬಿದ ಕೆಸುವು


Team Udayavani, Jan 6, 2020, 5:17 AM IST

3

ಕಳೆದ 18- 20 ವರ್ಷಗಳಿಂದ ಕೆಸುವಿನ ಕೃಷಿಯಲ್ಲಿ ಆದಾಯದ ಮೂಲವನ್ನು ಕಂಡುಕೊಂಡಿರುವ ಈ ದಂಪತಿಗೆ ಸ್ವಂತ ಜಮೀನಿಲ್ಲ. ಇತರ ರೈತರ ಜಮೀನನ್ನೇ ಬಾಡಿಗೆಗೆ ಪಡೆದು ಯಶಸ್ವಿ ಕೆಸುವು ಬೆಳೆಗಾರರೆಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ.

ತೆಂಗು, ಅಡಕೆ, ರಬ್ಬರ್‌ ಇತ್ಯಾದಿ ಬಹುವಾರ್ಷಿಕ ಬೆಳೆಗಳ ಕೃಷಿಯಿಂದ ಸಾಕಷ್ಟು ಆದಾಯ ಪಡೆಯಬಹುದೆಂದು ಬಹುತೇಕ ರೈತರು ಅದರಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಕೆಲವು ರೈತರು ಸುತ್ತಮುತ್ತಲ ರೈತರು ಏನನ್ನು ಬೆಳೆಯುತ್ತಿದ್ದಾರೋ ಅದೇ ಕೃಷಿಯನ್ನು ತಾವೂ ಅನುಸರಿಸುತ್ತಾ ಸಾಗುತ್ತಾರೆ. ಆದರೆ, ಬುದ್ಧಿವಂತ ರೈತರು, ಸುತ್ತಮುತ್ತಲಿನ ಪ್ರದೇಶದಲ್ಲಿ ಯಾರೂ ಬೆಳೆಯದ ಬೆಳೆ ತೆಗೆದು ಕೈ ತುಂಬಾ ಆದಾಯ ಪಡೆದು ಯಶಸ್ಸು ಸಾಧಿಸುತ್ತಾರೆ. ಆ ವರ್ಗಕ್ಕೆ ಸೇರಿದವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಮನೆ ಗ್ರಾಮದ ರೈತ ದಂಪತಿ ಮಂಜು ಗೌಡ ಮತ್ತು ಪಾರ್ವತಿ. ಕಳೆದ 18- 20 ವರ್ಷಗಳಿಂದ ಕೆಸುವಿನ ಕೃಷಿಯಲ್ಲಿ ಆದಾಯದ ಮೂಲವನ್ನವರು ಕಂಡುಕೊಂಡಿದ್ದಾರೆ.

ಪಟ್ಟೆ ಸಾಲುಗಳ ನಡುವೆ
ಹೊನ್ನಾವರ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇವರ ಹೊಲವಿದೆ. ಇವರ ಬಳಿ ಸ್ವಂತ ಜಮೀನು ಇಲ್ಲವಾದರೂ, ಪ್ರತಿ ವರ್ಷ ಇತರರ ಜಮೀನನ್ನು ಬಾಡಿಗೆಗೆ ಪಡೆದುಕೊಂಡು ಕೃಷಿ ಕೈಂಕರ್ಯದಲ್ಲಿ ತೊಡಗಿದ್ದಾರೆ. 10 ಗುಂಟೆ ವಿಸ್ತೀರ್ಣದ ಜವಳು ಗದ್ದೆಯನ್ನು ಬಾಡಿಗೆಗೆ ಪಡೆದು ಕೆಸುವಿನ ಬೀಜದ ಗಡ್ಡೆಗಳನ್ನು ನಾಟಿ ಮಾಡಿದ್ದರು. ಮೊದಲು, ಗದ್ದೆಯನ್ನು ಎತ್ತು ಮತ್ತು ನೇಗಿಲು ಬಳಸಿ ಉಳುಮೆ ಮಾಡಿ ಹದಗೊಳಿಸಿಕೊಳ್ಳುತ್ತಾರೆ. ನಂತರ, ಕೂಲಿಯಾಳುಗಳ ಸಹಾಯ ಪಡೆದು 2 ಅಡಿ ಅಗಲ 40 ಅಡಿ ಉದ್ದ ಮತ್ತು ಸಾಲಿನಿಂದ ಸಾಲಿಗೆ 2 ಅಡಿ ಅಂತರದಲ್ಲಿ ಪಟ್ಟೆ ಸಾಲು ನಿರ್ಮಿಸಿಕೊಳ್ಳುತ್ತಾರೆ. ಈ ಪಟ್ಟೆ ಸಾಲಿನಲ್ಲಿ ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಬರುವಂತೆ ಕೆಸುವಿನ ಬೀಜ ನಾಟಿ ಮಾಡುತ್ತಾರೆ.

ಕೊಳೆ ರೋಗದ ಕಾಟವಿಲ್ಲ
10 ಗುಂಟೆ ವಿಸ್ತೀರ್ಣದ ಗದ್ದೆಯಲ್ಲಿ ಒಟ್ಟು ಸುಮಾರು 1,500 ಕೆಸುವಿನ ಗಿಡ ಬರುವಂತೆ ನಾಟಿ ಮಾಡಿದ್ದರು. ಕೆಸುವಿನ ಬೀಜ ನೆಡುವಾಗ ಸಗಣಿ ಗೊಬ್ಬರ ಹಾಕಿ ನಾಟಿ ಮಾಡಿದ್ದರು. ನಾಟಿ ಮಾಡಿದ 15 ದಿನಗಳ ನಂತರ ಗಡ್ಡೆ ಮೊಳಕೆಯಾಗಿ ಎರಡು- ಮೂರು ಎಲೆಗಳು ಕಾಣಿಸುತ್ತಿದ್ದಂತೆ ಸರಾಸರಿ 25 ಗ್ರಾಂ.ನಷ್ಟು ಡಿಎಪಿ ಗೊಬ್ಬರ ನೀಡಿದ್ದರು. ಗದ್ದೆ ಪಕ್ಕದಲ್ಲಿ ಹಳ್ಳ ಹರಿಯುತ್ತಿದ್ದು, ಅದಕ್ಕೆ ಚಿಕ್ಕ ಕಟ್ಟು ಹಾಕಿ ನೀರು ಹಾಯಿಸುವ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ ದಂಪತಿ. ಪಟ್ಟೆ ಸಾಲಿನಲ್ಲಿ 3 ದಿನಗಳಿಗೊಮ್ಮೆ ನೀರು ಹಾಯಿಸುತ್ತಾರೆ. ನಂತರ, 45 ದಿನಗಳ ಬಳಿಕ ಸಗಣಿ ಗೊಬ್ಬರ, 70 ದಿನಗಳ ನಂತರ ಸಗಣಿ ಸೊಪ್ಪಿನ ಗೊಬ್ಬರ ನೀಡುತ್ತಾರೆ. ಪ್ರತಿ ಸಲ ಗೊಬ್ಬರ ನೀಡಿದ ನಂತರ, ಮಣ್ಣು ಏರಿಸಿ ಕೃಷಿ ನಡೆಸಿದ್ದರು. ಕೆಸುವಿನ ಸಸಿಗಳಿಗೆ ಯಾವುದೇ ಕೊಳೆ ರೋಗ ಬರುವುದಿಲ್ಲವಾದ್ದರಿಂದ ಔಷಧ ಸಿಂಪಡಣೆಯ ಅಗತ್ಯವೇ ಬೀಳುವುದಿಲ್ಲ. 5ರಿಂದ 7 ತಿಂಗಳಿಗೆ ಕೆಸುವಿನ ಫ‌ಸಲು ಕೀಳಲು ಸಿದ್ಧವಾಗುತ್ತದೆ.

ಲಾಭ ಸಮಾಚಾರ
ಒಂದೊಂದು ಗಿಡದಿಂದ ಸರಾಸರಿ 2 ಕೆ.ಜಿ.ಯಂತೆ 1,500 ಗಿಡಗಳಿಂದ 30 ಕ್ವಿಂಟಾಲ್‌ ಫ‌ಸಲು ದೊರೆತಿದೆ. ಕ್ವಿಂಟಾಲ್‌ ಒಂದಕ್ಕೆ ಈ ವರ್ಷ ರೂ. 4000 ದರವಿದೆ. 45 ಕ್ವಿಂಟಾಲ್‌ ಕೆಸುವಿನ ಗಡ್ಡೆ ಮಾರಾಟದಿಂದ 1 ಲಕ್ಷ 20 ಸಾವಿರ ಆದಾಯ ದೊರೆತಿದೆ. ಜಮೀನಿನ ಬಾಡಿಗೆ, ಗೊಬ್ಬರ, ಕೂಲಿಯಾಳುಗಳ ಸಂಬಳ, ಎಲ್ಲಾ ಬಗೆಯ ಖರ್ಚುಗಳನ್ನು ಲೆಕ್ಕ ಹಾಕಿದರೂ, ತಗುಲಿರುವ ಖರ್ಚು 40,000 ರೂ. ಅಷ್ಟೇ. ಮಿಕ್ಕ 80,000 ಪೂರ್ತಿ ಲಾಭ. 10 ಗುಂಟೆ ಜಮೀನಿನ ಕೆಸುವಿನ ಕೃಷಿ 6 ತಿಂಗಳ ಅವಧಿಯದ್ದಾಗಿದೆ. ಪ್ರತಿ ವರ್ಷ ಈ ರೀತಿ ಬಾಡಿಗೆ ಆಧಾರಿತ ಜಮೀನಿನಲ್ಲಿ ಕೆಸುವಿನ ಕೃಷಿ ನಡೆಸುತ್ತಿರುವ ಇವರು ಸಂಸಾರ ನಿರ್ವಹಣೆಗೆ ಆದಾಯದ ಮೂಲ ಕಂಡುಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ: 9972661745

ಫೋಟೋ ಮತ್ತು ಲೇಖನ-ಎನ್‌.ಡಿ. ಹೆಗಡೆ

ಟಾಪ್ ನ್ಯೂಸ್

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

7

Uttarakhand: ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 8 ಮಂದಿ ದುರ್ಮರಣ

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

6

Movies: ʼಪುಷ್ಪ-2ʼ ಮುಂದೂಡಿಕೆಯಾದರೆ ಸ್ವಾತಂತ್ರ್ಯ ದಿನದ ರಿಲೀಸ್‌ ಮೇಲೆ ಈ ಚಿತ್ರಗಳ ಕಣ್ಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

ಪುತ್ತೂರು: ಗ್ರಾಮೀಣ ಶಾಲೆ ಮಕ್ಕಳಿಗಾಗಿ ಹಳೆ ವಿದ್ಯಾರ್ಥಿಯ ಸೈಕಲ್‌ ಸವಾರಿ

ಪುತ್ತೂರು: ಗ್ರಾಮೀಣ ಶಾಲೆ ಮಕ್ಕಳಿಗಾಗಿ ಹಳೆ ವಿದ್ಯಾರ್ಥಿಯ ಸೈಕಲ್‌ ಸವಾರಿ

3-application

Udupi: ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

7

Uttarakhand: ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 8 ಮಂದಿ ದುರ್ಮರಣ

university

Mangalore University: ಪ್ರಕಾಶ್ ಶೆಟ್ಟಿ, ರೊನಾಲ್ಡ್ ಕೊಲಾಸೋರಿಗೆ ಗೌರವ ಡಾಕ್ಟರೆಟ್ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.