ಕಾರ್‌ ಡಿಕ್ಷನರಿ

ನಿಮಗೆ ತಿಳಿದಿರಬೇಕಾದ ಆಟೋಮೊಬೈಲ್‌ ಪದಗಳು

Team Udayavani, Mar 16, 2020, 5:46 AM IST

ಕಾರ್‌ ಡಿಕ್ಷನರಿ

ಕಾರು ಕೊಳ್ಳಲು ಹೋಗುವಾಗ ನಮಗೆ ಎದುರಾಗುವ ಮೊದಲ ಸಮಸ್ಯೆ ಎಂದರೆ ಸೇಲ್ಸ್‌ಮನ್‌ ವಿವರಿಸುವ ಅನೇಕ ಸವಲತ್ತುಗಳು, ಶಬ್ದಗಳು ನಮಗೆ ಅರ್ಥವಾಗದೇ ಹೋಗುವುದು. ಹೀಗಾಗಿ ಕಾರಿನ ಕುರಿತು ಈ ಪದಗಳು ನಮ್ಮ ಮನಃಪಟಲದ ಶಬ್ದಕೋಶದಲ್ಲಿದ್ದರೆ ಒಳ್ಳೆಯದು.

ಎಬಿಎಸ್‌- ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ
ತುರ್ತು ಸನ್ನಿವೇಶಗಳಲ್ಲಿ ಸಡನ್‌ ಬ್ರೇಕ್‌ ಹಾಕಿದಾಗ ಕಾರು ನಿಯಂತ್ರಣ ಕಳೆದುಕೊಳ್ಳುವುದನ್ನು ಈ ಸವಲತ್ತು ತಪ್ಪಿಸುತ್ತದೆ.

ಪಡಲ್‌ ಲ್ಯಾಂಪ್‌
ಕತ್ತಲಲ್ಲಿ ಕಾರಿನಿಂದ ಸುರಕ್ಷಿತವಾಗಿ ಇಳಿಯಲು ಅನುವು ಮಾಡಿಕೊಡುವ ಲ್ಯಾಂಪ್‌ ಇದು. ಇವು ಕಾರಿನ ಬಾಗಿಲ ಬಳಿ ಬೆಳಕನ್ನು ಬೀರುವುದರಿಂದ ಮಕ್ಕಳು, ವಯಸ್ಕರು ತೊಂದರೆಯಾಗದಂತೆ ಇಳಿಯಬಹುದು.

ಏರ್‌ಬ್ಯಾಗ್‌
ಇದು ಕಾರು ಅಪಘಾತಕ್ಕೆ ಒಳಗಾದಾಗ ಬಲೂನಿನಂತೆ ಊದಿಕೊಳ್ಳುವ, ಮೆದುವಾದ ಕುಶನ್‌ ಮಟೀರಿಯಲ್‌ನಿಂದ ತಯಾರಾದ ವಸ್ತು. ಮಿಕ್ಕ ಸಮಯದಲ್ಲಿ ಇದು ಕಾಣದಂತೆ ಕಾರಿನ ಮುಂಭಾಗದಲ್ಲಿ ಹುದುಗಿರುತ್ತದೆ. ಅಪಘಾತದ ಸಮಯದಲ್ಲಿ ಪ್ರಯಾಣಿಕರ ಹಣೆ ಮುಂಭಾಗಕ್ಕೆ ಚಚ್ಚಿಕೊಳ್ಳುವುದರಿಂದ ಆ ಅಪಾಯದಿಂದ, ಏರ್‌ ಬ್ಯಾಗ್‌ ರಕ್ಷಿಸುತ್ತದೆ. ಇತ್ತೀಚಿನ ಕಾರುಗಳಲ್ಲಿ ಹಿಂಬದಿಯ ಪ್ರಯಾಣಿಕರಿಗೂ ಏರ್‌ಬ್ಯಾಗುಗಳನ್ನು ನೀಡಲಾಗುತ್ತಿದೆ.

ಕ್ರೂಸ್‌ ಕಂಟ್ರೋಲ್‌
ಕಾರನ್ನು ಚಲಾಯಿಸುವಾಗ ಚಾಲಕ ತನ್ನ ಕಾಲನ್ನು ಆ್ಯಕ್ಸೆಲೇಟರ್‌ ಪೆಡಲ್‌ ಮೇಲೆ ಒತ್ತಿರುತ್ತಾನೆ. ಹೈವೇಗಳಲ್ಲಿ, ಲಾಂಗ್‌ ಡ್ರೈವ್‌ ಹೋಗುವಾಗ ಇದು ಚಾಲಕನಿಗೆ ತ್ರಾಸ ಎನ್ನಿಸಬಹುದು. ಅದನ್ನು ತಪ್ಪಿಸುವ ಸವಲತ್ತು ಇದು. ಇದರಲ್ಲಿ ಚಾಲಕ ನಿರ್ದಿಷ್ಟ ವೇಗವನ್ನು ಕಂಪ್ಯೂಟರ್‌ ಸಹಾಯದಿಂದ ಕಾರಿಗೆ ಫೀಡ್‌ ಮಾಡಿಬಿಟ್ಟರೆ ಸಾಕು. ಕ್ರೂಸ್‌ ಕಂಟ್ರೋಲ್‌ ಬಟನ್‌ ಅದುಮಿ, ಚಾಲಕ ಆ್ಯಕ್ಸೆಲರೇಟರ್‌ ಪೆಡಲ್‌ನಿಂದ ಕಾಲನ್ನು ಹಿಂತೆಗೆದುಕೊಳ್ಳಬಹುದು. ಆ ಪೆಡಲ್‌ ಅದುಮದೆಯೂ ಕಾರು ಚಾಲಕ ಫೀಡ್‌ ಮಾಡಿದ ವೇಗದಲ್ಲಿ ಕಾರು ಚಲಿಸುತ್ತದೆ. ಆದರೆ ಕಾರನ್ನು ತಿರುಗಿಸುವುದು, ಬ್ರೇಕ್‌ ಒತ್ತುವುದು ಮತ್ತಿತರ ಜವಾಬ್ದಾರಿ ಚಾಲಕನದೇ ಆಗಿರುತ್ತದೆ. ಹೀಗಾಗಿ ಆತ ಎಚ್ಚರಿಕೆಯಿಂದಲೇ ಈ ಸವಲತ್ತನ್ನು ಬಳಸಿಕೊಳ್ಳಬೇಕು.

ಫಾಲೋ ಮಿ ಲ್ಯಾಂಪ್‌
ಕತ್ತಲಲ್ಲಿ ಕಾರನ್ನು ಪಾರ್ಕ್‌ ಮಾಡಿ, ಇಗ್ನಿಷನ್‌ ಆಫ್ ಮಾಡಿದ್ದೀರಿ ಎಂದುಕೊಳ್ಳೋಣ. ಈಗ ಮನೆ ಕಾರಿನಿಂದ ಸ್ವಲ್ಪ ದೂರವಿದೆ ಎಂದಾದರೆ ಕತ್ತಲಲ್ಲಿ ಅಲ್ಲಿಯವರೆಗೆ ನಡೆದುಹೋಗಬೇಕಲ್ಲ. ಕಾರಿನಲ್ಲಿ ಯಾರಾದರೂ ಇದ್ದಿದ್ದರೆ ಹೆಡ್‌ಲೈಟ್‌ ಆನ್‌ ಮಾಡಬಹುದಿತ್ತು. ಆದರೆ ಒಬ್ಬರೇ ಇದ್ದಾಗ, ಅಥವಾ ಎಲ್ಲರೂ ಕಾರಿನಿಂದ ಇಳಿದು ಹೋಗಬೇಕಾದಾಗ ಸಹಾಯಕ್ಕೆ ಬರುತ್ತದೆ ಫಾಲೋ ಮಿ ಲ್ಯಾಂಪ್‌. ಈ ಆಯ್ಕೆಯನ್ನು ಆರಿಸಿದರೆ ಇಗ್ನಿಷನ್‌ ಆಫ್ ಮಾಡಿ ಕಾರನ್ನು ಲಾಕ್‌ ಮಾಡಿದ ನಂತರವೂ ಫಾಲೋ ಮಿ ಲ್ಯಾಂಪು ನಿರ್ದಿಷ್ಟ ಸಮಯದವರೆಗೆ ಆನ್‌ ಆಗಿರುವುದು. ನಂತರ ತನ್ನಷ್ಟಕ್ಕೇ ಆಫ್ ಆಗುವುದು. ಅದು ಆನ್‌ ಆಗಿರುವ ಸಮಯದೊಳಗೆ ಕತ್ತಲಲ್ಲಿ ದಾಟಿಕೊಳ್ಳಬಹುದು.

ಚೈಲ್ಡ್‌ ಲಾಕ್‌
ಕಾರು ಚಲಿಸುತ್ತಿರುವಾಗ ಹಿಂಬದಿಯಲ್ಲಿ ಕುಳಿತ ಪ್ರಯಾಣಿಕರು ಅಕಸ್ಮಾತ್‌ ಆಗಿ ಕಾರಿನ ಬಾಗಿಲುಗಳನ್ನು ತೆರೆಯದಂತೆ ಈ ಸವಲತ್ತು ತಡೆಯುತ್ತದೆ. ಮುಖ್ಯವಾಗಿ ಮಕ್ಕಳು ಆಟವಾಡುತ್ತಾ ಬಾಗಿಲು ತೆರೆಯುತ್ತಾರೆ ಎಂದು ಮುನ್ನೆಚ್ಚರಿಕೆಯಾಗಿ ಈ ಸವಲತ್ತನ್ನು ನೀಡಲಾಗುತ್ತದೆ. ಚಾಲ್ಡ್‌ ಲಾಕ್‌ ಬಟನ್‌ ಅನ್ನು ಅದುಮಿದರೆ ಹಿಂಬದಿಯ ಬಾಗಿಲುಗಳು ಒಳಗಿನಿಂದ ಲಾಕ್‌ ಆಗುತ್ತವೆ. ಒಳಗೆ ಕುಳಿತವರು ಬಾಗಿಲು ತೆರೆಯಲು ಆಗುವುದಿಲ್ಲ. ಹೊರಗಿನಿಂದ ಮಾತ್ರ ತೆರೆಯಬಹುದು. ಪ್ರಯಾಣದ ಸಮಯದಲ್ಲಿ ಈ ಸವಲತ್ತು ನೆರವಿಗೆ ಬರುತ್ತದೆ.

ಗ್ಲೋವ್‌ ಬಾಕ್ಸ್‌
ಕಾರು ಚಾಲಕನ ಪಕ್ಕದ ಸೀಟಿನ ಎದುರು ಡ್ಯಾಷ್‌ಬೋರ್ಡ್‌ನಲ್ಲಿ ಕಾಗದ ಪತ್ರಗಳು, ಫೈಲುಗಳು, ಪರ್ಸು, ಲೈಸೆನ್ಸ್‌ ಮುಂತಾದವನ್ನು ಇಡಲು ಒಂದು ಬಾಕ್ಸ್‌ ನೀಡಿರುತ್ತಾರೆ. ಅದನ್ನು ಗ್ಲೋವ್‌ ಬಾಕ್ಸ್‌ ಎಂದು ಕರೆಯುತ್ತಾರೆ.

ಬೂಟ್‌ ಸ್ಪೇಸ್‌
ಕಾರಿನಲ್ಲಿ ಲಗೇಜ್‌ ಇಡುವ ಜಾಗ ಎಂದರೆ ಅದು ಡಿಕ್ಕಿ. ಹಿಂಬದಿಯ ಬಾಗಿಲನ್ನು ಮೇಲಕ್ಕೆ ತೆರೆದರೆ ಈ ಲಗೇಜ್‌ ಇಡಬಹುದಾದ ಖಾಲಿ ಜಾಗ ಕಾಣುತ್ತದೆ. ಅದನ್ನೇ ಬೂಟ್‌ ಸ್ಪೇಸ್‌ ಎಂದು ಕರೆಯುವರು.

ಹವನ

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.