ನಮ್‌ ದುಡ್ಡು ಯಾವಾಗ್‌ ಸಿಗುತ್ತೆ?

 ಸಾವಿರ ದನಿಗಳ ಸಂಕಟದ ಮಾತು

Team Udayavani, Jun 24, 2019, 5:00 AM IST

ಬ್ಲೇಡ್‌ ಕಂಪನಿಗಳಲ್ಲಿ ಹಣ ಹೂಡಿ ವಚನೆಗೆ ಒಳಗಾದರೂ, ನಮ್ಮ ದುಡ್ಡು ಯಾವಾಗ ಸಿಗುತ್ತೆ? ಬ್ಲೇಡ್‌ ಕಂಪನಿಯ ಒಟ್ಟು ಆಸ್ತಿಯನ್ನೂ ಹರಾಜು ಹಾಕಿ ಹಣ ವಾಪಸ್‌ ಕೊಡಬಹುದಾ ಎಂದೆಲ್ಲ ಸಂಕಟದಿಂದ ಕೇಳುತ್ತಾರೆ. ಅಂಥ ಸಾಧ್ಯತೆಗಳು ನಿಜಕ್ಕೂ ಇವೆಯಾ? ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ…

‘ನೋಡ್ರಿ, ಈ ಕಂಪನೀನ ನಂಬಬಹುದು. ಎಂ.ಡಿ. ತುಂಬಾ ಒಳ್ಳೆಯವರು. ಅವರಿಗೆ ಒಳ್ಳೆಯ ಹೆಸರಿದೆ. ನಾಲ್ಕು ಜನಕ್ಕೆ ಉಪಕಾರ ಮಾಡಬೇಕು ಎಂಬ ಮನಸ್ಸಿದೆ. ಷೇರು ಮಾರ್ಕೆಟಿಂಗ್‌ಲಿ ದಿನವೂ ಲಕ್ಷ ಲಕ್ಷ ಸಂಪಾದಿಸ್ತಾರೆ. ಒಂದಲ್ಲ, ಎರಡಲ್ಲ; ಇವರದ್ದೇ ಒಟ್ಟು ಎಂಟು ಕಂಪನಿಗಳಿವೆ. ಚಿನ್ನಾಭರಣ ಮಾರಾಟದ ಮಳಿಗೆ ಇದೆ. ದುಬೈನಲ್ಲೂ ಒಂದು ಬ್ರಾಂಚ್‌ ಆಫೀಸ್‌ ಇದೆಯಂತೆ. ಇದರ ಜೊತೆ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಇದೆ. ಸ್ವಂತದ್ದೊಂದು ಸ್ಕೂಲ್‌ ಇದೆ. ಅಂದಮೇಲೆ ಬಿಡಿಸಿ ಹೇಳಬೇಕಾ? ಒಂದು ಮಗುವಿಗೆ, ಒಂದು ವರ್ಷಕ್ಕೆ 30 ಸಾವಿರ ಫೀ ಅಂದುಕೊಳ್ಳಿ. ಒಟ್ಟು 800 ಮಕ್ಕಳಿದ್ದಾರಂತೆ. 800/30000 ಅಂದ್ರೆ ವರ್ಷಕ್ಕೆ ಎಷ್ಟಾಯ್ತು ಲೆಕ್ಕ ಹಾಕಿ. ಅಕಸ್ಮಾತ್‌, ಒಂದು ಕಡೇಲಿ ಲಾಸ್‌ ಆದರೂ, ಉಳಿದ ಕಂಪನಿಗಳಿಂದ ಲಾಭ ಬಂದಿರುತ್ತಲ್ಲ. ಅದರಿಂದ ಸರಿದೂಗಿಸಿಕೊಳ್ಳುತ್ತಾರೆ. ಈಗಾಗ್ಲೆà 500ಕ್ಕೂ ಹೆಚ್ಚು ಮಂದಿ ಇನ್ವೆಸ್ಟ್‌ ಮಾಡಿದ್ದಾರೆ. ಈ ಕಂಪನಿಯ ಎಂ.ಡಿ. ಸ್ಥಳೀಯರೇ ಆಗಿರುವುದರಿಂದ, ಅವರು ಎಲ್ಲಿಗಾದ್ರು ಓಡಿಹೋಗ್ತಾರೆ ಎಂಬ ಚಿಂತೆ ಇಲ್ವೇ ಇಲ್ಲ. ಎಲ್ಲಿಗೇ ಹೋದ್ರೂ ನಾಲ್ಕು ದಿನ ಬಿಟ್ಟು ಅವರು ವಾಪಸ್‌ ಬರಲೇಬೇಕು. ಹಾಗಾಗಿ, ಕಣ್ಮುಚ್ಚಿ ಕೊಂಡು ಹೂಡಿಕೆ ಮಾಡಬಹುದು…

ಇಂಥಾ ಬಣ್ಣದ ಮಾತನ್ನೇ ಪರಿಚಯದವರೊಬ್ಬರು ವರ್ಷದ ಹಿಂದೆ ಹೇಳಿದ್ರು ಸ್ವಾಮಿ. ಅವರ ಮಾತು ಕೇಳಿ, ತಂಗಿಯ ಮದುವೆಗೆಂದು ಕೂಡಿಟ್ಟಿದ್ದ 5 ಲಕ್ಷ ರುಪಾಯಿಗಳನ್ನು ಇಲ್ಲಿ ಹೂಡಿಕೆ ಮಾಡಿದ್ದೆ. ಹೂಡಿಕೆಯ ಹಣ ಅಲ್ವ? ಹೇಗಿದ್ರೂ ಅಸಲು ಹಾಗೇ ಉಳಿಯುತ್ತೆ. ಅದರ ಮೇಲೆ ಬ್ಯಾಂಕಿನವರು ಕೊಡುವುದಕ್ಕಿಂತ ಜಾಸ್ತಿ ಬಡ್ಡಿ ಸಿಗುತ್ತೆ. ಹೀಗೆಲ್ಲಾ ಲೆಕ್ಕ ಹಾಕಿದ್ದೆ. ಆದರೆ, ನನಗೆ ಬಡ್ಡಿಯ ಹಣ ಅಂತ ಸಿಕ್ಕಿದ್ದು ಏಳೇ ತಿಂಗಳು ಎಂಟು ಮತ್ತು ಒಂಭತ್ತನೇ ತಿಂಗಳು ಹಣ ಬರಲಿಲ್ಲ. ಹೋಗಿ ಕೇಳಿದರೆ “ಸ್ವಲ್ಪ ಸಮಸ್ಯೆಯಾಗಿದೆ. ಮುಂದಿನ ತಿಂಗಳು ಎಲ್ಲವನ್ನೂ ಒಟ್ಟಿಗೇ ಸೇರಿಸಿ ಕೊಡ್ತೀವಿ’ ಅಂದರು. ಈಗ ನೋಡಿದರೆ, ಆ ಕಂಪನಿಯ ಎಂ.ಡಿ. ತಲೆ ತಪ್ಪಿಸಿಕೊಂಡು ಹೋಗಿಬಿಟ್ಟಿದ್ದಾನೆ. ನನ್ನಂತೆಯೇ ಒಬ್ಬಿಬ್ಬರಲ್ಲ; ಸಾವಿರಾರು ಜನ ಆ ಕಂಪನೀಲಿ ಹೂಡಿಕೆ ಮಾಡಿದ್ದಾರೆ. ನಿಜವಾಗ್ಲೂ, ನಮ್ಮ ದುಡ್ಡು ವಾಪಸ್‌ ಸಿಗುತ್ತಾ? ಸಿಗುತ್ತೆ ಅನ್ನುವುದಾದ್ರೆ ಎಷ್ಟು ದಿನದಲ್ಲಿ ಸಿಗಬಹುದು?

ಇತ್ತೀಚಿನ ದಿನಗಳಲ್ಲಿ ಬಿಗ್‌ ನ್ಯೂಸ್‌ ಆಗಿರುವ ಐಎಂಎ ( ಐ ಮಾನಿಟರಿ ಅಡ್ವೆ„ಸರಿ) ಹೂಡಿಕೆಯಲ್ಲಿ ಹಣ ಕಳೆದುಕೊಂಡ ಸಾವಿರಾರು ದನಿಗಳ ಸಂಕಟದ ಮಾತಿದು.

ಜಾಸ್ತಿಯಾಗಲಿ ಎಂಬ ಆಸೆ
ನಿಮ್ಮ ಹೂಡಿಕೆಯ ಹಣಕ್ಕೆ ಅತಿ ಹೆಚ್ಚು ಬಡ್ಡಿ ಕೊಡ್ತೇವೆ ಎಂದು ಆಸೆ ತೋರಿಸುವುದು, ಆರೆಂಟು ತಿಂಗಳು ಬಡ್ಡಿಯನ್ನೂ ನೀಡಿ, ನಂತರ ರಾತ್ರೋರಾತ್ರಿ ಹೂಡಿಕೆದಾರರಿಗೆ ಟೋಪಿ ಹಾಕುವುದು, ಬ್ಲೇಡ್‌ ಕಂಪನಿಗಳ ಹಳೇ ಚಾಳಿ. ಹೀಗೆ ಟೋಪಿ ಹಾಕುವ ಕೆಲಸ, ನೂರು ವರ್ಷಗಳಿಂದಲೂ ಸಾಂಗೋಪಾಂಗವಾಗಿ ನಡೆದುಕೊಂಡು ಬಂದಿದೆ. ಒಂದೇ ವ್ಯತ್ಯಾಸವೆಂದರೆ, ಹಿಂದೆ ಹೂಡಿಕೆಯಲ್ಲಿ ಸಂಗ್ರಹವಾಗುತ್ತಿದ್ದ ಮೊತ್ತ ಲಕ್ಷಗಳಲ್ಲಿ ಇರುತ್ತಿತ್ತು. ಈಗ ಅದು ಕೋಟಿಗೆ ಏರಿದೆ. ನಮ್ಮಲ್ಲಿರುವ ಹಣ ಆದಷ್ಟು ಬೇಗ ಜಾಸ್ತಿಯಾಗಲಿ ಎಂಬ ಅತಿಯಾಸೆಯೇ, ಹಿಂದೆ ಮುಂದೆ ಯೋಚಿಸದೆ ಹಣ ಹೂಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. ದುರುಂತವೇನು ಗೊತ್ತೆ? ಹೆಚ್ಚು ಬಡ್ಡಿ ಪಡೆಯಲೆಂದು ತಾಯಿ/ ಹೆಂಡತಿಯ ಚಿನ್ನಾಭರಣ ಮಾರಿ ಹಣ ಕಟ್ಟಿದವರಿದ್ದಾರೆ. ಬ್ಯಾಂಕ್‌ನಲ್ಲಿ ಸಾಲ ಪಡೆದು ಅದನ್ನೇ ಹೂಡಿದವರಿದ್ದಾರೆ. ಪೆನÒನ್‌ ಹಣ, ಮಕ್ಕಳ ಭವಿಷ್ಯಕ್ಕೆ ಕೂಡಿಟ್ಟಿದ್ದ ಹಣವನ್ನೂ ಹೂಡಿ ಕಳೆದುಕೊಂಡವರೂ ನೂರಲ್ಲ, ಸಾವಿರ ಲೆಕ್ಕದಲ್ಲಿ ಇದ್ದಾರೆ.
ನಿಜ ಹೇಳಬೇಕೆಂದರೆ, ಬ್ಯಾಂಕ್‌ಗಳು ನೀಡು ಬಡ್ಡಿ ಇದೆಯಲ್ಲ; ಅದು ನ್ಯಾಯಯುತ ಸಂಪಾದನೆಯ ದಾರಿ. ಗ್ರಾಹಕರು ಹಣವನ್ನು ಇನ್ನೊಂದು ಕಡೆಯಲ್ಲಿ ಹೂಡಿಕೆ ಮಾಡಿ, ಅದರಲ್ಲಿ ಲಾಭ ಬರುವಂತೆ ವರ್ಷಗಟ್ಟಲೆ ಶ್ರಮಿಸಿ, ಆನಂತರವೇ ಶೇ.6ರಷ್ಟು ಹಣವನ್ನು ಹೂಡಿಕೆಯ ಹಣಕ್ಕೆ ಬಡ್ಡಿಯ ರೂಪದಲ್ಲಿ ನೀಡುವುದು ಬ್ಯಾಂಕಿನ ನೀತಿ. ಅದಕ್ಕಿಂತ ಹೆಚ್ಚಿನ ಬಡ್ಡಿ ಕೊಡಲು ಯಾವ ರೀತಿಯಿಂದಲೂ ಸಾಧ್ಯವೇ ಇಲ್ಲ. ಈ ಸಂಗತಿ ಗೊತ್ತಿದ್ದು ಸಾವಿರವಲ್ಲ, ಲಕ್ಷ ಲಕ್ಷ ಹಣವನ್ನು ಹೂಡುವುದು ಅಂದರೆ…?

ಹರಾಜು ಹಾಕಲು ಸಾಧ್ಯವಾ?
ಐಎಂಎ ಹಗರಣವನ್ನೇ ತಗೊಳ್ಳಿ. ಇವತ್ತಿನ ತನಕ, ಐಎಂಎ ಕಂಪನಿಯಲ್ಲಿ ಹಣ ಹೂಡಿ ಮೋಸ ಹೋಗಿದ್ದೇವೆ ಎಂದು ದೂರು ನೀಡಿರುವವರ ಸಂಖ್ಯೆ 50 ಸಾವಿರ ದಾಟಿದೆ. ಇಷ್ಟೂ ಜನ ಹೂಡಿಕೆ ಮಾಡಿರುವ ಹಣ ಮೊತ್ತ ಐನೂರು ಕೋಟಿಯನ್ನು ಮೀರಿದೆ ಎಂಬುದು ಒಂದು ಅಂದಾಜು. ಇದಕ್ಕೆ ಪ್ರತಿಯಾಗಿ ಐಎಂಎ ಕಂಪನಿಯ ಒಟ್ಟು ಆಸ್ತಿಯ ಮೊತ್ತು 500 ಕೋಟಿ ರುಪಾಯಿ ಎನ್ನಲಾಗುತ್ತಿದೆ. ಇಲ್ಲ ಇಲ್ಲ, ಅದು ಸಾವಿರ ಕೋಟಿಯನ್ನೂ ಮೀರುತ್ತದೆ ಎನ್ನುವವರೂ ಇದ್ದಾರೆ.

ಐಎಂಎ ಕಂಪನಿಯ ಒಟ್ಟು ಆಸ್ತಿ ಮೌಲ್ಯ 1000ಕೋಟಿ ಅಂದುಕೊಡರೂ, ಅದನ್ನು ಮುಂದಿನ ತಿಂಗಳೊಳಗೆ ವಶಪಡಿಸಿಕೊಂಡು ಹರಾಜು ಹಾಕಲು ಸಾಧ್ಯವಿಲ್ಲ. ಏಕೆಂದರೆ, 1000ಕೋಟಿಯಷ್ಟು ಹಣ, ಏಳೆಂಟು ಕಂಪನಿಗಳಲ್ಲಿ ಹಂಚಿಕೆಯಾಗಿರುತ್ತದೆ. ಐಎಂಎ ಕಂಪನಿಯದ್ದೇ ಸ್ಕೂಲ್‌ ಇದೆ. ಅದರ ಒಟ್ಟು ಮೌಲ್ಯ 200 ಕೋಟಿ ಅಂದುಕೊಳ್ಳಿ. ದರಲ್ಲಿ 40 ಕೋಟಿಯಷ್ಟು ಹಣವನ್ನು ಯಾವುದಾದರೂ ಬ್ಯಾಂಕಿನಿಂದ ಸಾಲ ಪಡೆಯಲಾಗಿರುತ್ತದೆ. ಕಂಪನಿಯೊಂದು ಹಗರಣದಲ್ಲಿ ಸಿಕ್ಕಿಕೊಂಡು, ಅದರ ಆಸ್ತಿ ಹರಾಜಾಗುತ್ತಿದೆ ಅಂದರೆ, ಸಾಲ ನೀಡಿರುವ ಬ್ಯಾಂಕುಗಳು ಮೊದಲು ತಮ್ಮ ಪಾಲು ಕೇಳುತ್ತವೆ. ಆನಂತರ ಉಳಿಯುತ್ತದಲ್ಲ; ಅದಷ್ಟೇ “ವಶಪಡಿಸಿಕೊಂಡ ಆಸ್ತಿ’ಯಾಗಿ ಲೆಕ್ಕಕ್ಕೆ ಸೇರುತ್ತದೆ.

ವರ್ಷಗಳ ಲೆಕ್ಕಾಚಾರ
ಆನಂತರವಾದರೂ ವಶಪಡಿಸಿಕೊಂಡ ಆಸ್ತಿಯ ಹರಾಜು ಅಥವಾ ಮಾರಾಟ ತ್ವರಿತವಾಗಿ ಆಗುವುದಿಲ್ಲ. ವಂಚನೆ ಮಾಡಿದ ಕಂಪನಿಯಲ್ಲಿ ಪಾಲುದಾರರೆಂದು ಇರುತ್ತಾರಲ್ಲ.., ಅವರಲ್ಲಿ ಒಂದಿಬ್ಬರು, ತಮ್ಮ ನ್ಯಾಯಯುತ ಸಂಪಾದನೆ ಕಂಪನಿಯಲ್ಲಿ ಇದೆಯೆಂದೂ, ಆಸ್ತಿಯನ್ನು ಹರಾಜು ಹಾಕಬಾರದೆಂದೂ ನ್ಯಾಯಲಯದ ಮೊರೆ ಹೋಗಬಹುದು. ಇಲ್ಲವಾದರೆ, ವಂಚಕ ಕಂಪನಿಯ ಆಸ್ತಿಯ ಮೊತ್ತ ಎಷ್ಟಿದೆ ಎಂದು ನಿಖರವಾಗಿ ಹೇಳಲು ಒಂದು ಸಮಿತಿಯ ನೇಮಕ ಆಗಬಹುದು. ಅವರು ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಆದಾಯ-ನಷ್ಟದ ಪಟ್ಟಿ ತಯಾರಿಸಿ, ಅದನ್ನು ನ್ಯಾಯಾಲಯದ ಮುಂದಿಟ್ಟು, ಈ ಸಂಬಂಧವಾಗಿ ಪರ-ವಿರೋಧದ ವಾದಗಳು ನಡೆದು, ಆ ಕಂಪನಿಯ ಆಸ್ತಿಯನ್ನು ಹರಾಜು ಹಾಕಿ ಎಂದು ನ್ಯಾಯಾಲಯ ಘೋಷಿಸುವ ವೇಳೆಗೆ ಎರಡು ಅಥವಾ ಮೂರು ವರ್ಷಗಳು ಖಂಡಿತ ಕಳೆದುಹೋಗಿರುತ್ತವೆ.
ಸ್ವಾರಸ್ಯವೇನು ಗೊತ್ತೆ? ಸಾರ್ವಜನಿಕರಿಗೆ ಕೋಟಿಗಟ್ಟಲೆ ಪಂಗನಾಮ ಹಾಕಿ, ಓಡಿಹೋದವನು ಯಾವುದೋ ಒಂದು ದೇಶದಲ್ಲಿ ಆರಾಮಾಗಿ ಇರುತ್ತಾನೆ. ಇಲ್ಲಿ ಹಣ ಕಳೆದು ಕೊಂಡವರಿಗೆ ನ್ಯಾಯ ದೊರಕಿಸಲೆಂದು ನಡೆಯುವ ಪ್ರತಿಯೊಂದು ಕೆಲಸಕ್ಕೂ ಲಕ್ಷ ಲಕ್ಷ ಹಣ ಖರ್ಚಾಗುತ್ತಲೇ ಹೋಗುತ್ತದೆ. ಈ ವೇಳೆಗೆ, ಬೇರೆಯಾವುದೇ ಹೊಸ ಬ್ಲೇಡ್‌ ಕಂಪನಿಯ ಹಗರಣ ಬೆಳಕಿಗೆ ಬಂದರೆ, ಈ ಪ್ರಕರಣ ಜನರ ಮನಸ್ಸಿಂದ ನಿಧಾನಕ್ಕೆ ಮರೆಯಾಗ ತೊಡಗುತ್ತದೆ.

ಸಿಕ್ಕಿದಷ್ಟೇ ಸಮಾಧಾನ
ಇಷ್ಟಾದಮೇಲೂ, ಹಣ ಕಳೆದುಕೊಂಡವರು, ಇವತ್ತಲ್ಲ ನಾಳೆ ಏನಾದರೂ ಪವಾಡ ನಡೆದು ಬಿಡಬಹುದು. ನಾವು ಹೂಡಿಕೆ ಮಾಡಿರುವ ಹಣ ಪೂರ್ತಿಯಾಗಿ ನಮ್ಮ ಕೈ ಸೇರಬಹುದು ಎಂದು ಆಸೆಯಿಂದ ಕಾಯುತ್ತಲೇ ಇರುತ್ತಾರೆ. ಅಂಥ ಪವಾಡಗಳು ನಡೆಯುವುದೇನಿದ್ದರೂ ಸಿನಿಮಾಗಳಲ್ಲಿ. ಆದರೆ, ಬದುಕು ಸಿನಿಮಾ ಅಲ್ಲವಲ್ಲ; ಹಾಗಾಗಿ, ಇಲ್ಲಿ ಯಾವ ಪವಾಡವೂ ನಡೆಯುವುದಿಲ್ಲ. ಹೂಡಿಕೆ ಮಾಡಿ ವಂಚನೆಗೆ ಒಳಗಾದ ಎಲ್ಲರಿಗೂ, ವಶಪಡಿಸಿಕೊಂಡ ಆಸ್ತಿಯ ಹಣ ಸಮಾನ ಹಂಚಿಕೆ ಆಗುವುದರಿಂದ, ಅದೃಷ್ಟವಿದ್ದವರಿಗೆ- ಸ್ವಲ್ಪ ಹಣವಷ್ಟೇ ಕೈ ಸೇರಬಹುದು. ಸಧ್ಯ, ಇಷ್ಟಾದರೂ ವಾಪಸ್‌ ಬಂತಲ್ಲ; ಎಂದು ಸಮಾಧಾನ ಪಡುವುದಷ್ಟೇ ಬದುಕಾಬಹುದು.

ಬಡ್ಡಿಯಂತೆ ಸಿಗೋದು ನಮೆªà ಹಣ !
ಹಣ ಹೂಡಿಕೆ ಮಾಡಿದರೆ, ಬ್ಯಾಕ್‌ಗಳಿಗಿಂತ ಹೆಚ್ಚಿನ ಬಡ್ಡಿ ಕೊಡಲು ಬ್ಲೇಡ್‌ ಕಂಪನಿಗಳಿಗೆ ಹೇಗೆ ಸಾಧ್ಯ? ಶೇ.10 ಅಥವಾ ಅದಕ್ಕಿಂತ ಹೆಚ್ಚಿನ ಬಡ್ಡಿ ಕೊಟ್ಟರೆ ಅವರಿಗೆ ಲಾಸ್‌ ಆಗುವುದಿಲ್ಲವೆ ಎಂಬುದು ಹಲವರ ಪ್ರಶ್ನೆ. ಹೆಚ್ಚಿನವರು ಅರ್ಥ ಮಾಡಿಕೊಳ್ಳದ ಸಂಗತಿಯೊಂದಿದೆ. ಏನು ಗೊತ್ತೆ? ಅವರು ಬಡ್ಡಿಯ ರೂಪದಲ್ಲಿ ಕೊಡುವುದು ನಮ್ಮದೇ ಹಣ! ಹೇಗೆಂದರೆ, ಯಾವುದೇ ಕಂಪನಿ, ಹಣ ಹೂಡಿದವರಿಗೆ ಆರು ಅಥವಾ ಏಳು ತಿಂಗಳು, ಇನ್ನೂ ಹೆಚ್ಚೆಂದರೆ ಒಂದು ವರ್ಷದವರೆಗೆ ಮಾತು ಅಧಿಕ ಬಡ್ಡಿಯ ಹಣ ಕೊಡುತ್ತದೆ. ಉದಾಹರಣೆಗೆ, ನೀವು 5 ಲಕ್ಷ ರೂ. ಹೂಡಿಕೆ ಮಾಡಿದ್ದೀರಿ ಅಂದುಕೊಳ್ಳಿ. ಈ ಹಣಕ್ಕೆ ಶೇ. 10ರಷ್ಟು ಬಡ್ಡಿ ಅಂದುಕೊಂಡರೆ, ನಿಮಗೆ ಒಂದು ವರ್ಷಕ್ಕೆ 50,000, 1 ಲಕ್ಷವನ್ನು ಬಡ್ಡಿಯ ರೂಪದಲ್ಲಿ ನಿಮಗೆ ವಾಪಸ್‌ ಕೊಟ್ಟು, ನೀವು ಅಸಲು ವಾಪಸ್‌ ಪಡೆಯುವ ಮೊದಲೇ, ಬ್ಲೇಡ್‌ ಕಂಪನಿಯವರು ಕಣ್ಮರೆಯಾಗುತ್ತಾರೆ. ಈ ಹೇಳಿ, ಯಾರು ಬುದ್ಧಿವಂತರು?

ವಿದೇಶದಿಂದ ಹಿಡಿದು ತರುವುದು ಕಷ್ಟ ಕಷ್ಟ
ಬ್ಲೇಡ್‌ ಕಂಪನಿಯೊಂದರ ಮುಖ್ಯಸ್ಥ, ದುಬೈ, ಕುವೈತ್‌, ಸೌದಿ ಅರೇಬಿಯಾ ಅಥವಾ ಇನ್ಯಾವುದೋ ದೇಶಕ್ಕೆ ಓಡಿ ಹೋಗಿದ್ದಾನೆ ಎಂದು ಕೊಳ್ಳಿ. ಆತ ಅಲ್ಲಿದ್ದಾನೆಂದು ಖಚಿತವಾದರೆ, ತಕ್ಷಣ ಇಲ್ಲಿಂದ ಹೋಗಿ ಅವನನ್ನು ಎಳೆದು ತರಲು ಸಾಧ್ಯವೇ ಇಲ್ಲ. ಏಕೆಂದರೆ, ಹೀಗೆ ಬೇರೊಂದು ದೇಶಕ್ಕೆ ಓಡಿ ಹೋಗುತ್ತಾರಲ್ಲ; ಅವರು ಆ ದೇಶದಲ್ಲಿ ಪಾಲುದಾರಿಕೆಯಲ್ಲಿ ಹಣ ಹೂಡಿರುತ್ತಾರೆ. ಮುಖ್ಯವಾಗಿ ಆ ದೇಶದಲ್ಲಿ ಸಣ್ಣದೊಂದು ತಪ್ಪನ್ನು ಮಾಡಿರುವುದಿಲ್ಲ. ವಿಷಯ ಹೀಗಿದ್ದಾಗ, ನಮ್ಮ ರಾಜ್ಯದ ಪೊಲೀಸರು, ಸಿನಿಮಾದಲ್ಲಿ ಮಾಡುವಂತೆ ದಿಢೀರ್‌ ಹೋಗಿ ಬಂಧಿಸಲು ಸಾಧ್ಯವಿಲ್ಲ. ಮೊದಲು, ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಕೇಂದ್ರದವರು ವಿದೇಶಾಂ ಸಚಿವಾಲಯದ ಮೂಲಕ ಸಂಬಂಧಪಟ್ಟ ದೇಶಕ್ಕೆ ಮನವಿ ಸಲ್ಲಿಸಬೇಕು. ಮೊದಲಿಂದ ಮೇಲೆ ಒತ್ತಡ ಹೇರಬೇಕು. ಆನಂತರ, ಅಲ್ಲಿರುವ ವ್ಯಕ್ತಿ ಮಾಡಿರುವ ಹಗರಣಗಳು ಏನೇನು? ಅವನನ್ನು ಏಕೆ ಬಂಧಿಸಬೇಕು ಎಂಬುದನ್ನೆಲ್ಲ ವಿವರವಾಗಿ ತಿಳಿಸಿ, ಎಲ್ಲವನ್ನೂ ಆ ದೇಶದ ಭಾಷೆಗೇ ತರ್ಜುಮೆ ಮಾಡಿಸಿ ಮನವಿ ಸಲ್ಲಿಸಬೇಕು.

ಇಷ್ಟೆಲ್ಲಾ, ಆಗುವುದರೊಳಗೆ ಎರಡು ವರ್ಷವಂತೂ ಮುಗಿದೇ ಹೋಗುತ್ತದೆ. ಆನಂತರ, ಇಡೀ ಪ್ರಕರಣವನ್ನು ಆ ವಿದೇಶ ನ್ಯಾಯಾಲಯ ಕೈಗೆತ್ತಿಕೊಳ್ಳುತ್ತದೆ. ಕಡೆಗೊಮ್ಮೆ ಅದು-”ಕ್ರಮ ಕೈಗೊಳ್ಳಬಹುದು’ ಎಂದರೆ ಮಾತ್ರ, ಅಲ್ಲಿರುವ ಕಳ್ಳನನ್ನು ಹಿಡಿದು ತರಬಹುದು !

ಕೋಟಿ ಕೋಟಿ ವಂಚಿಸಿದ ನಂತರವೂ ವಿಜಯ್‌ ಮಲ್ಯ, ನೀರವ್‌ ಮೋದಿಯಂಥವರು ವಿದೇಶಗಳಲ್ಲಿ ಆರಾಮಾಗಿ ಇರುವುದು ಹೇಗೆಂಬುದು ಈಗಲಾದರೂ ಅರ್ಥವಾಯಿತೆ? ದುಬೈನಲ್ಲಿದ್ದಾನೆ ಎನ್ನಲಾಗುತ್ತಿರುವ ಮೊಹಿಸಿನ್‌ ಖಾನ್‌ನ ಕಥೆಯೂ ಹೀಗೇ ಆಗಬಹುದು…


ಈ ವಿಭಾಗದಿಂದ ಇನ್ನಷ್ಟು

  • ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...

  • ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....

  • ದೇಶದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ದಕ್ಷಿಣ ಅಮೆರಿಕದ...

  • ಮನೆ ವಿನ್ಯಾಸ ಮಾಡುವಾಗ ಆರ್ಕಿಟೆಕ್ಟ್ ಹಾಗೂ ಮನೆಯವರು ಸಾಕಷ್ಟು ಯೋಚಿಸುವುದು ವಿವಿಧ ಭಾಗಗಳು ಎಷ್ಟೆಷ್ಟು ಎತ್ತರ ಇರಬೇಕು? ಎಂಬುದರ ಬಗ್ಗೆ. ಮುಂದಿರುವ ರಸ್ತೆಯ...

  • ಅನಿಯಮಿತ ಕರೆ ಸೌಲಭ್ಯ, ಕಡಿಮೆ ದರಕ್ಕೆ ಹೆಚ್ಚು ಡಾಟಾ ನೀಡುತ್ತಿದ್ದ ಕಂಪೆನಿಗಳ ಕೊಡುಗೆಗಳು ಈಗ ಅಂತ್ಯವಾಗಿವೆ. ಜಿಯೋ, ಏರ್‌ಟೆಲ್‌, ವೊಡಾಫೋನ್‌ ಕಂಪೆನಿಗಳು...

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ...

  • ಹೊಸದಿಲ್ಲಿ: ಸೋಮವಾರದಿಂದ ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಬಿಸಿಸಿಐ ಇನ್ನೂ ಅಂಕಣ ಹೇಗಿರಬೇಕೆಂಬ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಲ್ಲ ಎಂದು ಕ್ಯುರೇಟರ್‌ಗಳು...

  • ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ. ಕೇಂದ್ರ ಸಾರಿಗೆ...

  • ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...

  • ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....