ನಾಲ್ಕರ ನಂಟು ಬಾಳಿನ ಗಂಟು
Team Udayavani, May 19, 2020, 5:41 AM IST
ಜರ್ಮನಿಯ ಸಾಮ್ರಾಟ ನಾಲ್ಕನೆಯ ಚಾರ್ಲ್ಸ್ನಿಗೂ, ನಾಲ್ಕರ ಸಂಖ್ಯೆಗೂ ಒಂದು ಬಗೆಯ ವಿಚಿತ್ರವಾದ ನಂಟು. ಈ ಮಹರಾಯ, ನಾಲ್ಕು ಬಾಗಿಲುಳ್ಳ ಮಹಲಿನಲ್ಲಿ ವಾಸಿಸುತ್ತಿದ್ದ. ಪ್ರತಿ ಮಹಲಿನಲ್ಲೂ ನಾಲ್ಕು ಕೋಣೆಗಳಿದ್ದವು. ಆ ನಾಲ್ಕು ಕೋಣೆಗಳಲ್ಲೂ ತಲಾ ನಾಲ್ಕು ಕಿಟಕಿಗಳಿದ್ದವು. ದಿನವೂ ಆತ, ನಾಲ್ಕು ಬೇರೆ ಬೇರೆ ಡೈನಿಂಗ್ ಟೇಬಲ್ಗಳ ಮೇಲೆ ಕುಳಿತು, ನಾಲ್ಕು ನಮೂನೆ ಅಡುಗೆಯ ಊಟ ಮಾಡುತ್ತಿದ್ದ. ಅಷ್ಟೇ ಅಲ್ಲ, ನಾಲ್ಕು ಬಗೆಯ ಮದ್ಯ ಕುಡಿಯುತ್ತಿದ್ದ! ಇಷ್ಟು ಸಾಲದೆಂಬಂತೆ, ಪ್ರತಿದಿನ, ನಾಲ್ಕು ಬಗೆಯ ಪೋಷಾಕು ಧರಿಸುತ್ತಿದ್ದ. ಚಾರ್ಲ್ಸ್ ದೊರೆ ಮತ್ತು ನಾಲ್ಕನೆಯ ಸಂಖ್ಯೆ ಜೊತೆಗಿನ ಸ್ವಾರಸ್ಯಗಳು ಇಷ್ಟಕ್ಕೇ ಮುಗಿಯುವುದಿಲ್ಲ.
ಅವನ ಖಾಸಾ ಕುದುರೆ ಲಾಯದಲ್ಲಿ ನಾಲ್ಕು ಕುದುರೆಗಳಿದ್ದವು. ಅವನ ಸೈನ್ಯದಲ್ಲಿ ನಾಲ್ಕು ವಿಭಾಗಗಳಿದ್ದವು. ನಾಲ್ಕು ಜನ ಗೌರ್ನರ್ಗಳು, ನಾಲ್ಕು ಜನ ಜನರಲ್ಗಳು, ನಾಲ್ಕು ಮಂದಿ ಡ್ನೂಕ್ ಮತ್ತು ನಾಲ್ಕು ಮಂದಿ ಕ್ಯಾಪ್ಟನ್ಗಳನ್ನ ಆತ ನೇಮಿಸಿಕೊಂಡಿದ್ದ. ಜೀವನವಿಡೀ ಅವನನ್ನು ಮೋಹಿಸಿದ ಈ ನಾಲ್ಕು, ಆತನ ಸಾವಿನಲ್ಲೂ ಜೊತೆಯಾಯಿತು. ಆತ ಅನಾರೋಗ್ಯಕ್ಕೆ ತುತ್ತಾದಾಗ, ನಾಲ್ಕು ಜನ ವೈದ್ಯರು, ನಾಲ್ಕು ದಿನಗಳ ಕಾಲ, ಆತನನ್ನು ಬದುಕಿಸಲು ಹೋರಾಡಿದರು. ಆದರೆ ಆತ ನಾಲ್ಕನೆಯ ದಿನ, ನಾಲ್ಕು ಗಂಟೆ ನಾಲ್ಕು ನಿಮಿಷಕ್ಕೆ ಕೊನೆಯುಸಿರೆಳೆದ! ಸಾಯುವ ಮುನ್ನ ಸುತ್ತಲೂ ಇದ್ದವ್ರಿಗೆ, ನಾಲ್ಕು ಸಲ ಗುಡ್ ಬೈ ಹೇಳಿದ್ದ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Playoff ಪಂದ್ಯಗಳಿಗೆ ಮೀಸಲು ದಿನವಿದೆಯೇ? ಮಳೆ ನಿಯಮ ಏನು ಹೇಳುತ್ತದೆ?
Devil; ದರ್ಶನ್ ಚಿತ್ರಕ್ಕೆ ನಾಯಕಿಯಾದ ಕರಾವಳಿ ಬೆಡಗಿ
Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ
IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್