ಚಕ್ಕರ್‌ ಹಾಕಿದ್ದಕ್ಕೆ ಕಲ್ಲೇಟಿನ ಶಿಕ್ಷೆ!

Team Udayavani, Jan 1, 2019, 12:30 AM IST

5.jpg

ನಾನು ಹಿಂದೆ ತಿರುಗಿ ನೋಡುವುದಕ್ಕೂ, ಕಲ್ಲು ಬಂದು ಕಣ್ಣಿನ ಹತ್ತಿರ ಬೀಳುವುದಕ್ಕೂ ಸರಿಯಾಯ್ತು. ಪುಣ್ಯಕ್ಕೆ, ಕಣ್ಣಿಗೆ ತಾಗಬೇಕಾಗಿದ್ದ ಕಲ್ಲು ಹುಬ್ಬಿಗೆ ತಾಗಿ ರಕ್ತ ಚಿಮ್ಮಿತು. ರಕ್ತ ನೋಡಿದ ಅಜ್ಜಿ ಗಾಬರಿಯಾಗಿ, ಶಾಲೆಗೆ ಹೋಗದೆ ಅಡಗಿ ಕುಳಿತಿದ್ದ ನನ್ನ ತಪ್ಪನ್ನು ಮರೆತೇಬಿಟ್ಟರು.

ನನ್ನ ಅಜ್ಜಿ ಬಹಳ ಸಿಟ್ಟಿನ ಸ್ವಭಾವದವರಾಗಿದ್ದರು. ಅವರ ಮುಂದೆ ಸುಳ್ಳು ಹೇಳಿ ಬಚಾವಾಗುವುದು ಭಾರಿ ಕಷ್ಟದ ಸಂಗತಿಯಾಗಿತ್ತು. ಎಲ್ಲರೂ ಅವರಿಗೆ ಬಹಳ ಹೆದರುತ್ತಿದ್ದರು. ಗಂಡು ಮಕ್ಕಳೆಂದರೆ ಅವರಿಗೆ ಅಚ್ಚುಮೆಚ್ಚು. ಹಾಗಾಗಿ ನಮಗೆ ಎಲ್ಲದರಲ್ಲೂ ರಿಯಾಯಿತಿ. ಕರಿದ ತಿಂಡಿಗಳಲ್ಲಿ ಸಿಂಹಪಾಲು. ಆದರೆ, ಶಾಲೆಗೆ ಚಕ್ಕರ್‌ ಹಾಕುವುದನ್ನು ಮಾತ್ರ ಅವರು ಸಹಿಸುತ್ತಿರಲಿಲ್ಲ.

ನನಗೋ ಶಾಲೆಗೆ ಹೋಗುವುದೆಂದರೆ ಅಲರ್ಜಿ. ಶಾಲೆ ತಪ್ಪಿಸುವ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದೆ. ನಮ್ಮ ಮನೆಯಲ್ಲಿ ದೊಡ್ಡವರೆಲ್ಲರೂ ಬೆಳಗ್ಗೆ ಗಂಜಿ ಊಟ ಮಾಡಿ, ಹೊರಗಡೆ ಕೆಲಸಗಳಿಗೆ ತೆರಳುತ್ತಿದ್ದರು. ಅವರು ಹೊರ ಹೋಗುವುದನ್ನೇ ಕಾಯುತ್ತಿದ್ದ ನಾನು, ಅವರು ಕಣ್ಣಿಂದ ಮರೆಯಾದ ತಕ್ಷಣ ಶಾಲೆ ಚೀಲವನ್ನು ಎತ್ತಿಕೊಂಡು, ಮನೆಯಲ್ಲಿದ್ದ ಅಟ್ಟವನ್ನು ಏರುತ್ತಿದ್ದೆ. ಅಲ್ಲಿ ಚೆನ್ನಾಗಿ ಕುರುಕಲು ತಿಂಡಿ ತಿಂದು, ನಿದ್ರೆ ಹೊಡೆದು ಸಂಜೆ ಎಲ್ಲರೂ ಮರಳಿ ಬರುವ ಅರ್ಧಗಂಟೆ ಮೊದಲು ಕೆಳಗಿಳಿದು, ಮುಖ ತೊಳೆದು ಅಮಾಯಕನಂತೆ ಕುಳಿತಿರುತ್ತಿದ್ದೆ.

ಹತ್ತು ಸಲ ಕದ್ದ ಕಳ್ಳ ಒಂದು ಸಲ ಸಿಕ್ಕಿ ಬೀಳದಿರುತ್ತಾನೆಯೇ? ಎಂಬ ಗಾದೆ ಮಾತಿನಂತೆ, ನನ್ನ ಈ ಕಳ್ಳಾಟ ಕೊನೆಗೂ ಒಂದು ದಿನ ಅಜ್ಜಿಯ ಕಣ್ಣಿಗೆ ಬಿದ್ದೇ ಬಿಟ್ಟಿತು. ಇನ್ನು ಶಿಕ್ಷೆ ಗ್ಯಾರಂಟಿ ಎಂದಾದಾಗ, ಅಟ್ಟದಿಂದ ಇಳಿದವನೇ ಹೊರಗೆ ಓಡಲು ಶುರು ಮಾಡಿದೆ. ನಾನು ಅವರ ಕೈಗೆ ಸಿಗಲಿಲ್ಲ ಎಂಬ ಕೋಪದಿಂದ ಅಲ್ಲೇ ಬಿದ್ದಿದ್ದ ಒಂದು ಕಲ್ಲನ್ನೆತ್ತಿ ನನ್ನತ್ತ ಒಗೆದೇ ಬಿಟ್ಟರು! ನಾನು ಹಿಂದೆ ತಿರುಗಿ ನೋಡುವುದಕ್ಕೂ, ಕಲ್ಲು ಬಂದು ಕಣ್ಣಿನ ಹತ್ತಿರ ಬೀಳುವುದಕ್ಕೂ ಸರಿಯಾಯ್ತು. ಪುಣ್ಯಕ್ಕೆ, ಕಣ್ಣಿಗೆ ತಾಗಬೇಕಾಗಿದ್ದ ಕಲ್ಲು ಹುಬ್ಬಿಗೆ ತಾಗಿ ರಕ್ತ ಚಿಮ್ಮಿತು. ರಕ್ತ ನೋಡಿದ ಅಜ್ಜಿ ಗಾಬರಿಯಾಗಿ, ಶಾಲೆಗೆ ಹೋಗದೆ ಅಡಗಿ ಕುಳಿತಿದ್ದ ನನ್ನ ತಪ್ಪನ್ನು ಮರೆತೇಬಿಟ್ಟರು. ನನ್ನನ್ನು ಹತ್ತಿರ ಕರೆದು ಮುದ್ದು ಮಾಡಿ, ಗಾಯಕ್ಕೆ ಮದ್ದು ಹಚ್ಚಿದರು. ಅವರ ಆರೈಕೆಯಲ್ಲಿ ನನ್ನ ನೋವು ಮಾಯವಾಯಿತು. ನಾ ಮಾಡಿದ ತಪ್ಪಿಗೆ ಅವರು ಕೊಟ್ಟ ಶಿಕ್ಷೆ, ಗಾಯದ ಗುರುತಾಗಿ ಇನ್ನೂ ನನ್ನ ಜೊತೆಗೆ ಇದೆ. ಅಂದಿನಿಂದ ಶಾಲೆಗೆ ಚಕ್ಕರ್‌ ಎನ್ನುವ ಪದವೇ  ನನ್ನಿಂದ ದೂರವಾಗಿ ಬಿಟ್ಟಿತ್ತು.

ಎನ್‌.ಕೃಷ್ಣಮೂರ್ತಿ ರಾವ್‌

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.