Udayavni Special

ಈ ಹೃದಯವೇ ಬಯಸಿದೆ ನಿನ್ನನೂ…


Team Udayavani, Jul 23, 2019, 5:00 AM IST

i-20

ಇರದುದರೆಡೆಗೆ ತುಡಿಯುವುದು ಜೀವನ. ಅರ್ಥವಾಗಲಿಲ್ಲವಾ? ಯಾವುದು ನಮಗೆ ಸಿಗುವುದಿಲ್ಲವೋ ಅದೇ ನಮ್ಮ ಕಣ್ಣಿಗೆ, ಹೃದಯಕ್ಕೆ ತುಂಬಾ ಇಷ್ಟವಾಗಿಬಿಡುತ್ತದಂತೆ.

ನಿನ್ನ ಹಾಗೆ…
ನೀನು ನನಗೆ ಸಿಗುವುದು ತುಂಬಾ ಕಷ್ಟ ಅಂತ ತಿಳಿದಿದ್ದರೂ ಈ ಹುಚ್ಚು ಹೃದಯ ನಿನ್ನನ್ನೇ ಬಯಸುತಿದೆ. ನಿನ್ನ ನೋಡಬೇಕೆಂದು ಚಂಡಿ ಹಿಡಿಯುತ್ತಿದೆ. ಪ್ರೀತಿಗೆ ಯಾವುದೇ ಜಾತಿ,ಧರ್ಮ ಇಲ್ಲ. ಪ್ರೀತಿಯೇ ಒಂದು ಪ್ರತ್ಯೇಕ ಜಾತಿ ಅಂತಾರೆ. ಹಾಗಾಗಿ, ಎರಡು ಹೃದಯಗಳ ಸಂಗಮವೇ ಪ್ರೀತಿ ಅಂತ ನಂಬಿದವಳು ನಾನು. ಆದರೆ ನಮ್ಮಿಬ್ಬರ ಪ್ರೀತಿಗೆ ಜಾತಿಯ ಬೇಲಿಕಟ್ಟಿ ಒಂದಾಗಲು ಈ ಸಮಾಜ ಬಿಡುವುದಿಲ್ಲ ಕಣೋ.

ಏನೇ ಹೇಳು, ಈ ಕಣ್ಣುಗಳಿಗೆ ನಿನ್ನ ಬಿಟ್ಟರೆ ಬೇರೆ ಯಾರೂ ಕಾಣಿಸುತ್ತಿಲ್ಲ. ಕಿವಿಗಳಿಗೆ ನಿನ್ನ ಧ್ವನಿ ಬಿಟ್ಟರೆ ಬೇರೆ ಯಾರ ಧ್ವನಿಯೂ ಕೇಳಿಸುತ್ತಿಲ್ಲ. ಈ ಹೃದಯ ಪ್ರತಿ ದಿನ, ಪ್ರತಿ ಕ್ಷಣ ನಿನ್ನ ಹೆಸರನ್ನೇ ಜಪಿಸುತ್ತಿದೆ.

ನಿನಗೆ, ನನ್ನ ಹೃದಯದ ಕೂಗು ಕೇಳಿಸುತ್ತಿಲ್ಲವೇ? ಕಾದಿರುವೇ ನಾ ಕಡಲಂತೆ , ಬಂದು ಸೇರು ನೀ ನದಿಯಂತೆ , ಪ್ರೀತಿಸುವೆ ನಿನ್ನನ್ನು ಜೀವದಂತೆ, ಹೃದಯ ಬಡಿತದಂತೆ. ನನ್ನೀ ಬದುಕಿನ ಬಂಡಿಯಲ್ಲಿ ನಿನ್ನ ಜೊತೆ ಪ್ರಯಾಣಿಸಲು ಅದೃಷ್ಟ ಇಲ್ಲದೇ ಹೋದರು ಪರವಾಗಿಲ್ಲ ,ನಿನ್ನ ಮನಸ್ಸಿನಲ್ಲಿ ಜಾಗ ಕೊಟ್ಟಿದ್ದೀಯಲ್ಲಾ ಅಷ್ಟು ಸಾಕು ಈ ಪುಟ್ಟ ಹೃದಯಕ್ಕೆ.

ಬದುಕಿನ ವಿಚಿತ್ರ ನಿಯಮ ನನಗೀಗ ತಿಳಿಯುತ್ತಿದೆ ಗೆಳೆಯ. ಇಷ್ಟ ಪಟ್ಟಿರುವುದು ಸಿಗುವುದೇ ಆದರೆ ಕಣ್ಣೀರಿಗೆ ಬೆಲೆ ಎಲ್ಲಿದೆ? ಸಿಗುವುದೆಲ್ಲವನ್ನೂ ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶವೇ ಇರುವುದಿಲ್ಲ ಅಲ್ಲವೇ? ನನ್ನ ಹೃದಯದ ನೋವನ್ನು ನೀನೇ ಅರ್ಥ ಮಾಡಿಕೊಳ್ಳಬೇಕು ಕಣೋ. ಕಣ್ಣಲ್ಲಿರುವ ಖುಷಿನಾ ಯಾರು ಬೇಕಾದರೂ ನೋಡಬಹುದು, ಆದರೆ ಹೃದಯದಲ್ಲಿರೋ ನೋವು ಯಾರಿಗೂ ಕಾಣೋಲ್ಲ; ಕಂಡರೂ ಅದು ನಿನಗೆ ಮಾತ್ರ.

ನೀನು ಸಿಗೋದಿಲ್ಲ ಅನ್ನೋಕ್ಕಿಂತ, ನನ್ನೊಳಗಿರುವ ನಿನ್ನ ಮರೆಯೋಕೆ ಆಗೊಲ್ಲ ಅನ್ನೋ ನೋವೇ ಪ್ರತಿ ಕ್ಷಣ ನನ್ನ ಸಾಯಿಸುತ್ತಿದೆ. ಒಂದು ಮಾತು ತಿಳ್ಕೊ. ಮಾತು ಬಿಟ್ಟ ಮಾತ್ರಕ್ಕೆ ಪ್ರೀತಿ ಕಡಿಮೆಯೇನೂ ಆಗಿಲ್ಲ. ನಿನ್ನ ನೆನಪೇ ಪ್ರೀತಿಯನ್ನು ಇಮ್ಮಡಿಗೊಳಿಸುತ್ತಿದೆ.

ಇಂತಿ ನಿನ್ನ ಹೃದಯವಾಸಿ
ಚಿನ್ನಿ

ಉಮ್ಮೆ ಅಸ್ಮ ಕೆ. ಎಸ್‌

ಟಾಪ್ ನ್ಯೂಸ್

ಆಕ್ಸಿಜನ್ ಕೊರತೆ; ಗೋವಾದ ಕೋವಿಡ್ ಆಸ್ಪತ್ರೆಯಲ್ಲಿ 74 ಮಂದಿ ಸಾವು

ಆಕ್ಸಿಜನ್ ಕೊರತೆ; ಗೋವಾದ ಕೋವಿಡ್ ಆಸ್ಪತ್ರೆಯಲ್ಲಿ 74 ಮಂದಿ ಸಾವು

ftfgggg

ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ ಎನ್ನುವುದು ಬಿಜೆಪಿಯ ಕೈಲಾಗದ ಮಾತುಗಳು : ಕುಮಾರಸ್ವಾಮಿ

hgfvbhgff

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ ಯೋಜನೆ ರೂಪಿಸಿದೆ : ಡಿಕೆಶಿ

ghgfdghnbvd

ಬಸವ ಜಯಂತಿ : ಬಸವಣ್ಣ ಅವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

sgrdsdaSA

ಸುಮ್ ಸುಮ್ನೆ ಕೋವಿಡ್ ಚೆಕ್ ಮಾಡಿದ್ರೆ ಸರಿ ಇರಲ್ಲ, ನನಗೆ ಡಿಸಿ ಗೊತ್ತು: ವ್ಯಕ್ತಿಯಿಂದ ರಂಪಾಟ

madras-high-court-warns-against-religious-intolerance-after-muslims-object-to-conduct-of-hindu-festival

ಹಿಂದೂಗಳ ಹಬ್ಬ, ಮೆರವಣಿಗೆ ನಿಷೇಧಿಸಿ;ಮುಸ್ಲಿಮರ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಬರ್ಟ್ ಚಿತ್ರ Tonic ಆಯ್ತು

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

ಹೊಸ ಸೇರ್ಪಡೆ

ಆಕ್ಸಿಜನ್ ಕೊರತೆ; ಗೋವಾದ ಕೋವಿಡ್ ಆಸ್ಪತ್ರೆಯಲ್ಲಿ 74 ಮಂದಿ ಸಾವು

ಆಕ್ಸಿಜನ್ ಕೊರತೆ; ಗೋವಾದ ಕೋವಿಡ್ ಆಸ್ಪತ್ರೆಯಲ್ಲಿ 74 ಮಂದಿ ಸಾವು

nbdsdfghnbvc

ಬಾಲಗಂಗಾಧರನಾಥ ಸ್ವಾಮೀಜಿ ಕಂಚಿನ ಪ್ರತಿಮೆ ಅನಾವರಣ ಮಾಡಿದ ವಿ ಸೋಮಣ್ಣ

ftfgggg

ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ ಎನ್ನುವುದು ಬಿಜೆಪಿಯ ಕೈಲಾಗದ ಮಾತುಗಳು : ಕುಮಾರಸ್ವಾಮಿ

hgfvbhgff

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ ಯೋಜನೆ ರೂಪಿಸಿದೆ : ಡಿಕೆಶಿ

ಪ್ರಧಾನಮಂತ್ರಿ ಕಿಸಾನ್ ಯೋಜನೆ 8ನೇ ಕಂತು: 20,000 ಸಾವಿರ ಕೋಟಿ ಬಿಡುಗಡೆ

ಪ್ರಧಾನಮಂತ್ರಿ ಕಿಸಾನ್ ಯೋಜನೆ 8ನೇ ಕಂತು: 20,000 ಸಾವಿರ ಕೋಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.