ನಿದಿರೆಯೂ ಸದಾ ಏಕೆ ದೂರ?

ಕೈಗೆ ಮೊಬೈಲ್‌ ಬಂದರೆ ಕಣ್ಣಿಗೆ ನಿದ್ದೆ ಎಲ್ಲಿ?

Team Udayavani, Sep 10, 2019, 5:34 AM IST

Y-14

ತಡರಾತ್ರಿಯವರೆಗೂ ಓದುತ್ತಾ, ತಮ್ಮ ಮುಂದಿನ ಸಾಧನೆಯ ಮೆಟ್ಟಿಲುಗಳಿಗೆ ಇಟ್ಟಿಗೆಗಳನ್ನು ಜೋಡಿಸುತ್ತಾ ಕೂತು ನಿದ್ದೆ ಕಳೆದುಕೊಳ್ಳುತ್ತಿದ್ದಾರೆ ಅಂತ ಭಾವಿಸಿದರೆ ಅದು ನಿಮ್ಮ ತಪ್ಪು. ಬದಲಿಗೆ, ಅವರ ಕೈಯಲ್ಲಿ ಮೊಬೈಲ್‌ ಇದೆ ಅನ್ನೋತು ಮಾತ್ರ ಸತ್ಯ.

ನಮ್ಮೂರಲ್ಲಿ ಇದುವರೆಗೂ ರಾತ್ರಿಹೊತ್ತು ಕಳ್ಳತನವಾದ ಉದಾಹರಣೆಗಳಿಲ್ಲ. ಏಕೆಂದರೆ, ವಯಸ್ಸಾದ ತಾತಂದಿರು ಕೆಮ್ಮುತ್ತಲೊ, ಎಲೆ ಅಡಿಕೆ ಮೆಲ್ಲುತ್ತಲೊ ಕೂತಿರುತ್ತಿದ್ದರು. ಮೊದಲೇ ಆ ವಯಸ್ಸಿನಲ್ಲಿ ನಿದ್ದೆ ಕಡಿಮೆ, ಮುಂಜಾನೆವರೆಗೂ ಎಚ್ಚರವಾಗಿರೋರು. ಈಗ ಊರಲ್ಲಿ ಅಂತಹ ತಾತಂದಿರ ಸಂಖ್ಯೆ ಕಡಿಮೆ. ಆದರೂ, ಕಳ್ಳತನವಾಗಿಲ್ಲ. ಏಕೆಂದರೆ, ತಡರಾತ್ರಿಯವರೆಗೂ ಎಚ್ಚರವಾಗಿರುವ ಯುವಕರಿದ್ದರಲ್ಲ. ಇದನ್ನು ಓದಿ ನಿಮಗೊಂದು ನಗು ಬಂದರೆ ಥ್ಯಾಂಕ್ಸ್‌… ಆದರೆ ವಿಚಾರ ಮಾತ್ರ ನಗುವಂತದ್ದಲ್ಲ!

ಯುವಕರು ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಇದು ಈಗ ಇಡೀ ಜಗತ್ತಿನ ಸಮಸ್ಯೆ. ಬರೀ ನಮ್ಮೂರಿನದ್ದಲ್ಲ. ಹರಿವ ನೀರನ್ನು, ಬೀಸುವ ಗಾಳಿಯನ್ನು ಹಿಡಿದಿಡುವಂಥ ವಯಸ್ಸಿನಲ್ಲಿ ರಾತ್ರಿ ಒಂದೆರಡು ಗಂಟೆಗಳವರೆಗೂ ಎಚ್ಚರವಾಗಿದ್ದು ತಮ್ಮ ಯವ್ವನವನ್ನಷ್ಟೇ ಅಲ್ಲದೆ ಆರೋಗ್ಯವನ್ನು, ಅವಕಾಶಗಳನ್ನು, ಸಾಧಿಸುವ ಹುಮ್ಮಸ್ಸನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಒಂದು ಕಳವಳ ಇದೆ. ಭಾರತದಲ್ಲಿ ಪ್ರತಿಶತ ಅರ್ಧದಷ್ಟು ಜನಕ್ಕೆ ನಿದ್ದೆಯ ಸಮಸ್ಯೆಯಿದೆ. ಅದರಲ್ಲಿ ಬಹುಪಾಲು ಯುವಕರೆಂಬುದು ನಿಜಕ್ಕೂ ಗಂಭೀರ ವಿಚಾರ. ನಿಮಗೆ ಗೊತ್ತ? ಶೇ. 46ರಷ್ಟು ಭಾರತೀಯರು 6 ಗಂಟೆಗಿಂತ ಕಡಿಮೆ ನಿದ್ದೆ ಮಾಡುತ್ತಿದ್ದಾರಂತೆ. ಮನುಷ್ಯ ಬದುಕಲಿಕ್ಕೆ ಬೇಕಾದ ನೀರು, ಗಾಳಿ, ಆಹಾರದ ನಂತರದ ಸ್ಥಾನ ನಿದ್ದೆಗೆ ಇದೆ. ಭಾರತದಲ್ಲಿ 18 ರಿಂದ 45 ವರ್ಷದ ಯುವಕರೇ ನಿದ್ದೆಗೆಟ್ಟು ಕೂರುತ್ತಿರುವುದರಿಂದ ಓದುವ, ದುಡಿಯುವ, ಸಾಧಿಸುವ ಹೊತ್ತಿನಲ್ಲಿ ಅನಾರೋಗ್ಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಇವರೇಕೆ ನಿದ್ದೆ ಮಾಡಲ್ಲ?
ತಡರಾತ್ರಿಯವರೆಗೂ ಓದುತ್ತಾ, ತಮ್ಮ ಮುಂದಿನ ಸಾಧನೆಯಮೆಟ್ಟಿಲುಗಳಿಗೆ ಇಟ್ಟಿಗೆಗಳನ್ನು ಜೋಡಿಸುತ್ತಾ ಕೂತು ನಿದ್ದೆ ಕಳೆದುಕೊಳ್ಳುತ್ತಿದ್ದಾರೆ ಅಂತ ಭಾವಿಸಿದರೆ ಅದು ನಿಮ್ಮ ತಪ್ಪು. ಎಲ್ಲಾ ಯುವಕರು ಅದೇ ಕಾರಣಕ್ಕೆ ನಿದ್ದೆ ಬಿಟ್ಟಿದ್ದರೆ ನಮ್ಮ ದೇಶ ಇವತ್ತು ಅದೆಷ್ಟು ಮುಂದುವರೆದಿರುತ್ತಿತ್ತೂ! ಅಂತವರು ಕೇವಲ ಬೆರಳೆಣಿಕೆ. ಹಾಗೆ ನಿದ್ದೆ ತಪ್ಪಿಸಿ ಓದುವುದು ಕೂಡ ಒಳ್ಳೆಯದಲ್ಲ. ಶೇ. 90 ರಷ್ಟು ಯುವಕರು ನಿದ್ದೆ ಕಳೆದುಕೊಳ್ಳುತ್ತಿರುವುದು ತಾವು ಬಳಸುತ್ತಿರುವ ಮೊಬೈಲ್‌ ಗಳಿಂದ. ಬೆಳೆಸಿಕೊಂಡಿರುವ ವಿಚಿತ್ರ ಜೀವನ ಶೈಲಿಯಿಂದ. ಮೊಬೈಲ್‌ ಸ್ಕ್ರೀನ್‌ ತೀಡುತ್ತಲೇ ಅರ್ಧ ರಾತ್ರಿ ಕಳೆದು ಬಿಡುತ್ತಾರೆ. ಇದರಿಂದ ಅವರೊಳಗಿನ ನಿದ್ದೆಯ ಗಡಿಯಾರ ಎಕ್ಕುಟ್ಟಿ ಹೋಗುತ್ತದೆ. ಮುಂದೆ ಒಂದಿನ ನನಗೆ ನಿದ್ದೆಯ ಬರಲ್ಲ ಅನ್ನುವ ಚಡಪಡಿಕೆ ತಂದುಕೊಳ್ಳುತ್ತಾರೆ.

ಆಧುನಿಕ ಜೀವನ ಶೈಲಿಯು ಯುವಕರ ಬದುಕಿನ ಕ್ರಮವನ್ನು ಕೊಲ್ಲುತ್ತಿದೆ. ಡಯಟ್‌ ನ ಹೆಸರಿನಲ್ಲಿ ಎಷ್ಟೊ ಯುವತಿಯರು ರಾತ್ರಿಯ ಊಟ ಮಾಡದೇ ಉಳಿದುಬಿಡುತ್ತಾರೆ. ಅಂತಹ ಹಸಿವಿನ ಬಳಿ ಒಂದೊಳ್ಳೆ ನಿದ್ದೆ ಸುಳಿಯುವುದೇ ಇಲ್ಲ. ಕಾಫಿ, ಟೀ, ಆಲ್ಕೋಹಾಲ…, ಭಗ್ನ ಪ್ರೇಮ, ಪ್ರೀತಿಗೀತಿ ಇತ್ಯಾದಿಗಳು ಮತ್ತು ಆ ಕಾರಣಕ್ಕೆ ತಂದುಕೊಳ್ಳುವ ಮಾನಸಿಕ ಒತ್ತಡಗಳು ನಿದ್ದೆಯನ್ನು ಕಸಿಯುತ್ತವೆ.

ಯುವಕರು ಎಷ್ಟು ನಿದ್ದೆ ಮಾಡಬೇಕು?
ನವಜಾತ ಶಿಶುವೊಂದು ದಿನಕ್ಕೆ 15 ರಿಂದ 17 ಗಂಟೆಗಳ ಕಾಲ ಮಲಗಿರುತ್ತದೆ. ನೋಡಿ, ತೀರ ವಯಸ್ಸಾದವರಿಗೆ ಏಳರಿಂದ ಎಂಟು ಗಂಟೆ ನಿದ್ದೆ ಸಾಕು. ತಮ್ಮ ವಯಸ್ಸಿಗೆ ತಕ್ಕಂತೆ ನಿದ್ದೆಯ ಬೇಡಿಕೆಯುಬದಲಾಗುತ್ತದೆ. 18 ರಿಂದ 25 ವಯಸ್ಸಿನ ಯುವಕರಿಗೆ ಏಳರಿಂದ ಒಂಬತ್ತು ಗಂಟೆಗಳಷ್ಟು ಕಾಲ ಆಳವಾದ ನಿದ್ದೆ ಬೇಕು. 26 ರಿಂದ 64 ವಯಸ್ಸಿನವರೆಗೂ ಹೆಚ್ಚು ಕಡಿಮೆ ಅಷ್ಟೇ ಪ್ರಮಾಣದ ನಿದ್ದೆ ಬೇಕಾಗುತ್ತದೆ. ನಿದ್ದೆ ಮಾಡಲು ರಾತ್ರಿ ಹತ್ತರಿಂದ ಬೆಳಗ್ಗೆ 6 ರವರೆಗೆ ಸೂಕ್ತಕಾಲ. ಆದರೆ, ನೀವು ಆ ಹೊತ್ತಿನಲ್ಲಿ ನಿಮ್ಮದೇ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತೀರಿ.

ಅಪಾಯವಿದೆ
ನಿಮಗೊಂದಿಷ್ಟು ಬೊಜ್ಜು, ಸುಸ್ತು, ಕಳಾಹೀನ ಮುಖ, ತುಸು ವಯಸ್ಕರಂತೆ ಕಾಣುವ ಲುಕ್ಕು ಇದ್ದರೆ ನಿಮಗೆ ನಿದ್ದೆ ಸಾಲುತ್ತಿಲ್ಲ ಅಂತಲೇ ಅರ್ಥ. ನಿದ್ದೆಯ ಆವಭಾವಗಳು ತಂದೊಡ್ಡುವ ಅಪಾಯಗಳು ಒಂದೆರಡಲ್ಲ. ನಿದ್ದೆಯ ಅಭಾವದಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಶಕ್ತಿ ಕುಂಠಿತವಾಗುತ್ತದೆ. ಅದರ ನೆಪವಾಗಿಟ್ಟುಕೊಂಡು ಅನೇಕ ಕಾಯಿಲೆಗಳು ವಕ್ಕರಿಸಿಕೊಳ್ಳಬಹುದು. ನಿದ್ರಾಹೀನತೆಯಿಂದ ಬೆಳೆಯುವ ಬೊಜ್ಜು ಮತ್ತು ಅದಕ್ಕೆ ಕಟ್ಟಿಕೊಂಡಂತೆ ಬರುವ ಮಧುಮೇಹ ನಿಮ್ಮನ್ನು ಕಾಡಬಹುದು. ಅನತಿದೂರದಲ್ಲಿ ಹೃದಯ ರೋಗವು ನಿಮ್ಮನ್ನು ಬೆನ್ನೆತ್ತಿ ಬರುತ್ತದೆ.

ಒಳ್ಳೆ ನಿದ್ದೆಗಾಗಿ ಹೀಗೆ ಮಾಡಿ
ನಿದ್ದೆಯು ಆರೋಗ್ಯದ ದೃಷ್ಟಿಯಿಂದ ಎಷ್ಟು ಅಗತ್ಯ ಅಂತ ಗೊತ್ತಾದ ಮೇಲೆ ಅದನ್ನು ಕೇರ್‌ ಮಾಡದಿರುವುದು ಮೂರ್ಖತನ. ಗ್ಯಾಜೆಟಗಳ ಬಳಕೆಯು ಇಂದಿನ ಯುವಕರ ನಿದ್ದೆ ಕಸಿಯುತ್ತಿರುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಸೋಶಿಯಲ್ಮೀಡಿಯಾಗೆ ನೀವು ದಿನಪೂರ್ತಿಎಷ್ಟರಮಟ್ಟಿಗೆ ಅಡಿಕ್ಟ್ ಆಗಿದ್ದೀರಿ ಅನ್ನುವುದು ನಿಮ್ಮ ರಾತ್ರಿಯ ನಿದ್ರೆಯ ಕ್ವಾಲಿಟಿಯನ್ನು ನಿರ್ಧರಿಸುತ್ತದೆ. ಅತಿಯಾಗಿ ಹಚ್ಚಿಕೊಂಡರೆ ನಿದ್ದೆ ಕೈಕೊಡುವುದು ಗ್ಯಾರೆಂಟಿ.

ಮೊಬೈಲ್‌ ಬಳಸಿದರೆ ನಿದ್ದೆ ಬರಲ್ಲ ಯಾಕೆ?
ಮೆಲಟೊನಿನ್‌ ಎಂಬ ಹಾರ್ಮೋನ್‌ ನಿಂದಲೇ ನಮಗೆ ನಿದ್ದೆ ಬರುವುದು. ಇದು ಬೆಳಕಿನಲ್ಲಿ ಹೆಚ್ಚು ಕಾರ್ಯನಿರ್ವಹಿಸುವುದಿಲ್ಲ. ರಾತ್ರಿಯ ವೇಳೆಯಲ್ಲಿ ನೀಲಿಕಿರಣಗಳನ್ನು ಹೆಚ್ಚು ನೋಡಿದರೆ ನಿದ್ದೆಯ ಮಂಪರು ಕಡಿಮೆಯಾಗುತ್ತದೆ. ಸ್ಮಾರ್ಟ್ ಫೋನ್ ನಿಂದ ಬರುವ ಬೆಳಕು ಮೆಲಟೊನಿನ್‌ ಮೇಲೆ ಪ್ರಭಾವ ಬೀರಿ ನಿದ್ದೆ ಬಾರದಂತೆ ತಡೆಯುತ್ತದೆ.

ನಿಧ್ದೋಪನಿಷತ್ತು
1) ಹಾಸಿಗೆಯ ಪಕ್ಕದಲ್ಲಿ ಮೊಬೈಲ್‌ ಬೇಡವೇಬೇಡ.
2) ಮಲಗುವ ಹೊತ್ತಿಗಿಂತ 2 ಗಂಟೆ ಮೊದಲೇ ಮೊಬೈಲ್‌ ಬಳಕೆ ನಿಲ್ಲಿಸಿ.
3) ನಿತ್ಯ ಮಲಗಲು ಒಂದು ಸರಿಯಾದ ಸಮಯ ನಿರ್ಧರಿಸಿ. ಅದೇ ಸಮಯಕ್ಕೆ ಸರಿಯಾಗಿ ಮಲಗಿ.
4) ನಿಮ್ಮೊಳಗಿನ ನಿದ್ದೆಯ ಗಡಿಯಾರ ಅಸ್ತವ್ಯಸ್ತವಾಗುತ್ತದೆ. ಎಷ್ಟೋ ದಿನಗಳವರೆಗೂ ಸರಿಯಾದ ನಿದ್ದೆ ಸಿಗದೇಪರದಾಡ ಬೇಕಾಗುತ್ತದೆ.
5) ಓದುವ, ಬರೆಯುವ ಸಮಯಕ್ಕೆ ನೀವು ಹಾಕಿಕೊಂಡ ವೇಳಾಪಟ್ಟಿಯಲ್ಲಿ ಸಾಗಲಿ. ಅದಕ್ಕಾಗಿ ನಿದ್ದೆ ಬಲಿಕೊಡಬೇಡಿ.
6) ಮಲಗುವ ಕೋಣೆ ಸ್ವಚ್ಛವಾಗಿರಲಿ. ಬಳಸುವ ಹಾಸಿಗೆ ದಿಂಬು ನಿಮ್ಮ ನಿದ್ದೆಗೆ ಕಂಫ‌ರ್ಟ್‌ ಕೊಡಲಿ.
7) ಗಾಳಿಗೆ ಅವಕಾಶವಿರಲಿ. ತೀರ ಪ್ರಖರವಾದ ಬೆಳಕಿನಲ್ಲಿ ನಿದ್ದೆ ಬೇಡ. ಮಲಗುವ ಮುನ್ನ ನಿಮ್ಮ ಇಷ್ಟದ ಪುಸ್ತಕ ಇಲ್ಲವೇ, ಇಲ್ಲವೇ ಸಂಗೀತವಿದ್ದರೆ ಚೆಂದ.

ಸದಾಶಿವ ಸೊರಟೂರು

ಟಾಪ್ ನ್ಯೂಸ್

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.