ಟೆನ್ ಟೆನ್ ಟೆನ್

ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

Team Udayavani, Aug 22, 2019, 5:00 AM IST

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು 1857ರಲ್ಲಿ. ಆ ಸಂಗ್ರಾಮವನ್ನು “ಸಿಪಾಯಿ ದಂಗೆ’ ಅಂತಲೂ ಗುರುತಿಸುತ್ತಾರೆ.
2. ಸಿಪಾಯಿ ದಂಗೆಯ ಮುಖ್ಯ ರೂವಾರಿ ಮಂಗಲ್‌ ಪಾಂಡೆ.
3. ಹಸು ಮತ್ತು ಹಂದಿಯ ಮೈಯ ಕೊಬ್ಬಿನಿಂದ ಲೇಪಿಸಿದ ಬಾಂಬುಗಳನ್ನು ಕಚ್ಚಿ ಎಸೆಯಬೇಕಿತ್ತು. ಆದರೆ ಇದನ್ನು ವಿರೋಧಿಸಿದ ಮಂಗಲ್‌ ಪಾಂಡೆ ಮತ್ತು ತಂಡದವರು ಆಂಗ್ಲರ ಮೇಲೆ ದಂಗೆ ಎದ್ದರು.
4. 1857ರ ಮಾರ್ಚ್‌ನಲ್ಲಿ ಮಂಗಲ್‌ ಪಾಂಡೆ ಇಂಗ್ಲಿಷ್‌ ಅಧಿಕಾರಿಯೊಬ್ಬನ ಮೇಲೆ ಆಕ್ರಮಣ ಮಾಡುವ ಮೂಲಕ, ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯ್ತು.
5. ಅಧಿಕಾರಿಯ ಮೇಲೆ ಆಕ್ರಮಣ ಮಾಡಿ ತಲೆಮರೆಸಿಕೊಂಡ ಮಂಗಲ್‌ ಪಾಂಡೆಯನ್ನು ಹುಡುಕಿ, ಗಲ್ಲಿಗೇರಿಸಲು ಬ್ರಿಟಿಷ್‌ ಸರ್ಕಾರ ಆದೇಶಿಸಿತ್ತು.
6. ಇದರಿಂದ ಸಿಟ್ಟಿಗೆದ್ದ, ಭಾರತೀಯ ಸಿಪಾಯಿಗಳು ದೆಹಲಿ, ಲಕ್ನೊ, ಕಾನ್ಪುರ ಮುಂತಾದ ಕಡೆಗಳಲ್ಲಿ ದಂಗೆಯೆದ್ದರು.
7. ಮಂಗಲ್‌ಪಾಂಡೆಯನ್ನು ಸೆರೆ ಹಿಡಿದು, ಏಪ್ರಿಲ್‌ 18ರಂದು ಗಲ್ಲಿಗೇರಿಸಲು ಬ್ರಿಟಿಷ್‌ ಸರ್ಕಾರ ನಿರ್ಧರಿಸಿತು.
8. ಸಿಪಾಯಿಗಳ ದಂಗೆ ಕಾಡ್ಗಿಚ್ಚಿನಂತೆ ವ್ಯಾಪಿಸಿದಾಗ ಹೆದರಿದ ಬ್ರಿಟಿಷರು, ಹತ್ತು ದಿನ ಮುಂಚಿತವಾಗಿ; ಅಂದರೆ, ಏಪ್ರಿಲ್‌ 8ರಂದು ನೇಣಿಗೇರಿಸಿದರು.
9. ನೇಣುಗಂಬಕ್ಕೆ ಏರಿದಾಗ ಮಂಗಲ್‌ ಪಾಂಡೆಗೆ 29 ವರ್ಷ ವಯಸ್ಸು.
10. ಮಂಗಲ್‌ ಪಾಂಡೆಯ ಜೀವನವನ್ನಾಧರಿಸಿ, “ಮಂಗಲ್‌ ಪಾಂಡೆ: ದ ರೈಸಿಂಗ್‌’ ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಗಿದೆ.

ಸಂಗ್ರಹ: ಪ್ರಿಯಾಂಕ


ಈ ವಿಭಾಗದಿಂದ ಇನ್ನಷ್ಟು

  • "ಅಜ್ಜೀ, ನನ್ನ ಹೊಸ ಗೆಳೆಯರು ಬಂದಿದ್ದಾರೆ. ಏನಾದ್ರೂ ಕೊಡು ' ಎಂದು ಸಿರಿ ಹೇಳಿದಳು. "ಐದೇ ನಿಮಿಷ ಮಕ್ಕಳಾ... ಇದೋ ಬಂದೆ ' ಎಂದ ಅಜ್ಜಿ ಲಗುಬಗೆಯಿಂದ ಅಡುಗೆಮನೆಗೆ ಹೀಗೆ...

  • ಚಿನ್ನು ಕೈಲಿ ಸ್ಕೇಲ್‌ ಹಿಡಿದು ಮೋತಿ ನಾಯಿಯ ಬಳಿ "ನಿನ್ನ ಹೆಸರು ಹೇಳು' ಎಂದು ಅಪ್ಪಣೆ ಹೊರಡಿಸುತ್ತಿದ್ದಳು. ಅದಕ್ಕೋ... ಈ ಮಗು ಏನು ಮಾಡಿದರೂ ಚಂದವೇ. ಬಾಲ ಅಲ್ಲಾಡಿಸುತ್ತ...

  • ಮ್ಯಾಜಿಕ್‌ ಪ್ರದರ್ಶನಕ್ಕೆ ಬಂದವರನ್ನು ನಿಮ್ಮ ಕಡೆ ಸೆಳೆಯಬೇಕು. ಅದಕ್ಕೆ ಏನು ಮಾಡ್ತೀರ? ತಲೆ ಬಿಸಿ ಬೇಡ. ಹೀಗೆ ಮಾಡಿ, ನೀವು ಮ್ಯಾಜಿಕ್‌ ಪ್ರದರ್ಶನವನ್ನು ನೀಡುತ್ತಿರುವಾಗ...

  • ವ್ಯಾಪಾರಿ "ಈ ನಾಯಿಮರಿಗೆ ಒಂದು ಕಾಲಿಲ್ಲ. ಆದ್ದರಿಂದ ನನಗೆ ದುಡ್ಡೇನು ಬೇಡ. ಇದನ್ನು ಉಚಿತವಾಗಿಯೋ ತಗೊಂಡು ಹೋಗು' ಎಂದು ಹೇಳಿದ. ಅರುಣ "ಉಚಿತವಾಗಿ ಬೇಡ. ಇದಕ್ಕೂ...

  • ಅವತಾರವೆಂದು ಹೇಳಿಕೊಳ್ಳುವ ಮಂತ್ರವಾದಿಯೊಬ್ಬನ ಸುತ್ತ ಭಕ್ತಾದಿಗಳು ಜಮಾಯಿಸಿದ್ದಾರೆ. ಒಬ್ಟಾತ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾನೆ. ಮಂತ್ರವಾದಿಯು...

ಹೊಸ ಸೇರ್ಪಡೆ