​​​​​​​ಜಿಂಗಲ್‌ ವಾಲಾ


Team Udayavani, Jun 30, 2018, 12:24 PM IST

3-qwert-lkii.jpg

ಜಿಂಗಲ್ಸ್‌ ಅನ್ನೋದು ಜಾಹೀರಾತು ಸಂಗೀತ ಎಂಬ ಆಲದ ಮರದ ಕೆಳಗೆ ಬೆಳೆದ ಕೂಸು.  ಸಿನಿಮಾ ಹಾಗೂ ಶಾಸ್ತ್ರೀಯ ಸಂಗೀತದಂತೆ  ಇದೂ ಕೂಡ ಸಂಗೀತದ ಒಂದು ಪ್ರಬೇಧವಾಗಿ ಬೆಳೆದಿದೆ.  ಬಾಲಿವುಡ್‌ನ‌ಲ್ಲಿ ಎತ್ತರೆತ್ತರಕ್ಕೆ ಬೆಳೆದಿರುವ ಎ.ಆರ್‌. ರೆಹಮಾನ್‌, ಸೋನು ನಿಗಮ್‌ ಅವರಂಥವರ ಮೂಲ ಬೇರುಗಳು ಇಲ್ಲಿವೆ. ಇದರಲ್ಲಿ ಕನ್ನಡದ ಬೇರು ವಿಜಯಪ್ರಕಾಶ್‌ರದ್ದು. ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಜಿಂಗಲ್ಸ್‌ ಹಾಡಿದ ಇವರು, ಜಿಂಗಲ್‌ ಜಗತ್ತು ಹೇಗಿದೆ ಅನ್ನೋದನ್ನು ಇಲ್ಲಿ ಹೇಳಿಕೊಂಡಿದ್ದಾರೆ. 

ಟಣ್‌ ಟಂಟಡ‚ಣ್‌ 
 ಈ  ಸದ್ದು ಕಿವಿಯೊಳಗೆ ಹೋಗುತ್ತಿದ್ದಂತೆ ಪಾಲೇìಜಿ ಬಿಸ್ಕೇಟು ಕಣ್ಣ ಮುಂದೆ ಮಾರ್ಚ್‌ಫಾಸ್ಟ್‌ ಮಾಡುತ್ತದೆ. 
 ಕಲ್‌ಬಿà.. ಆಜ್‌ಬೀ.. ಕಲ್‌..ಬೀ.. ಈ ಸಾಲು ಹಾಡಂತೆ ತೇಲಿಬಂದರಂತೂ ಬಜಾಜ್‌ ಸ್ಕೂಟರ್‌ ಕಂಡಂಗೆ ಆಗುತ್ತದೆ.     ಏ ದಿಲ್‌ ಮಾಂಗೇ ಮೋರ್‌.. ಇಷ್ಟೇ ಆದರೆ ಅಪೂರ್ಣ. ಅದರ ಕೊನೆಗೆ  ಹಾಹಾ…. ಅನ್ನೋ ಮಾದಕ ದನಿ ಕಿವಿಗೆ ಅಪ್ಪಳಿಸಿದರೆ ಶಾರುಖ್‌ ಖಾನ್‌ ಪೆಪ್ಸಿ ಕುಡಿಯುತ್ತಿರೋ ನೆನಪು ಹಾಜರಾಗಿಬಿಡುತ್ತದೆ. 

 ಮೆಹರ್‌ ಕುಚ್‌ ಬಾತ್‌ – ಅಂದರೆ ಮೆಕ್‌ಡೊನಾಲ್ಡ್‌ ಅಂತಲೇ ಮನಸ್ಸು ಹೇಳ್ಳೋದು. 

 ನಮಗೆ ಗೊತ್ತಿಧ್ದೋ, ಗೊತ್ತಿಲ್ಲದೆಯೋ ಇಂಥ ಜಾಹೀರಾತಿನ ಜಿಂಗಲ್ಸ್‌ಗಳ ಜೊತೆ ಸಂಸಾರ ಮಾಡುತ್ತಿರುತ್ತೇವೆ. ಮಧುರ ಜಿಂಗಲ್‌ಗ‌ಳ ಒಳಗೆ ನಮ್ಮ ನೆನಪುಗಳ ಗಂಟೂ ಇರುತ್ತದೆ.  ಜಾಹೀರಾತಿನ ಸಂಗೀತ ಕಿವಿಗೆ ಬಿದ್ದಾಕ್ಷಣ ಅದು ಬಿಚ್ಚಿಕೊಂಡು ಎದುರಿಗೆ ಚಕ್ಕಳಮಕ್ಕಳ ಹಾಕಿ ಕುಳಿತು ಬಿಡುತ್ತವೆ. 

ಹಾಗಾದರೆ ಜಿಂಗಲ್‌ ಅಂದರೆ ಏನು?
 ಇದು ಮೂರು, ನಾಲ್ಕು ಸೆಕೆಂಡುಗಳ ಸಂಗೀತದ ಹನಿ. ಸಂಗೀತದಲ್ಲಿ ಜಾಹೀರಾತು ಸಂಗೀತ (ಜಾ.ಸಂ) ಪ್ರತ್ಯೇಕವಾಗಿದೆ. ಇದರಲ್ಲಿ ಪಲ್ಲವಿ, ಚರಣಗಳೇನೂ ಇರುವುದಿಲ್ಲ. ಇರುವುದು ಒಂದೋ ಅಥವಾ ಎರಡು ವಾಕ್ಯಗಳ ಸಾಹಿತ್ಯ.  ಅದನ್ನು ದರ್‌ ದರ್‌ ಅಂತ ಎಳೆದುಕೊಂಡು ಹೋಗುವ ಮೋಹಕ ಸಂಗೀತ. 

ಹಾ.. ಅರೇ, ಜಾ.ಸಂ. ಸಿನಿಮಾ ಸಂಗೀತದಂತೆ 6-7 ನಿಮಿಷದ್ದಲ್ವಲ್ಲ, ಬರೀ ಮೂರು-ನಾಲ್ಕು ಸೆಕೆಂಡ್‌ಗಳದ್ದು ಅಷ್ಟೇ ಅಲ್ವಾ ಅನ್ನಬೇಡಿ. ಜಿಂಗಲ್‌ಗೆ ಸಂಗೀತ ನೇಯುವುದೇನು ಸುಲಭವಲ್ಲ. ಸಾಮಾನ್ಯ ಹಾಡುಗಳಿಗೆ ಸಂಗೀತ ನೀಡುವಾಗ ಇರುವ ಶ್ರಮ, ಚಾಲೆಂಜ್‌ ಇದಕ್ಕೂ ಉಂಟು. ಇಂಥ ಜಿಂಗಲ್‌ ಕೇಳಿದೊಡನೆ ಉತ್ಪನ್ನಗಳ ನೆನಪು ಉಮ್ಮಳಿಸಿಕೊಂಡು ಬರುವಂತೆ ಸ್ವರಾಕರ್ಷವಾಗಿ ಮಾಡೋದು ಮತ್ತೂಂದು ಚಾಲೆಂಜ್‌. ಇವತ್ತು ಬಾಲಿವುಡ್‌ನ‌ಲ್ಲಿ ಎತ್ತರೆತ್ತರಕ್ಕೆ ಬೆಳೆದಿರುವ ಎ.ಆರ್‌. ರೆಹಮಾನ್‌, ಸೋನು ನಿಗಮ್‌ ಅಷ್ಟೇಏಕೆ, ಗಜಲ್‌ ದೊರೆ ಜಗಜೀತ್‌ಸಿಂಗ್‌ ಮುಂತಾದವರ ಕೆರಿಯರ್‌ ಬೇರುಗಳನ್ನು ಹುಡುಕಿ ಹೊರಟರೆ ಎಲ್ಲವೂ ಜಿಂಗಲ್‌ಗ‌ಳಿಗೆ ಸುತ್ತು ಹಾಕಿಕೊಂಡಿರುತ್ತವೆ. ಇದನ್ನು ಬಿಡಿಸಿದರೆ ನಮ್ಮ ಕನ್ನಡದ ಬೇರೂ ಸಿಕ್ಕೀತು. ಅದುವೇ ವಿಜಯ್‌ಪ್ರಕಾಶ್‌. ಈತನಕ  ಹೆಚ್ಚಾ ಕಮ್ಮಿ ನಾನಾ ಭಾಷೆಗಳ ನಾಲ್ಕು ಸಾವಿರಕ್ಕೂ ಹೆಚ್ಚು ಜಿಂಗಲ್‌ಗ‌ಳನ್ನು ಹಾಡಿದ  “ಕಂಠಕೀರ್ತಿ’ ಅವರಿಗೆ ದೊರೆತಿದೆ.

 ಗಾಯಕನಾಗಬೇಕು ಎಂಬ ಮಹದಾಸೆಯಿಂದ ಮುಂಬಯಿ ಎಂಬ ಸಮುದ್ರಕ್ಕೆ  ಬಂದು ಬಿದ್ದಾಗ ವಿಜಯ್‌ ಪ್ರಕಾಶ್‌ಗೆ ಗರಿಕೆಯಂತೆ ಸಿಕ್ಕಿದ್ದು ಈ ಜಿಂಗಲ್‌.  ಆಗಲೇ ಅರ್ಥವಾಗಿದ್ದು. ಒಂದು ಸಿನಿಮಾವನ್ನು ಎಷ್ಟು ಪ್ರೀತಿಸುತ್ತಾರೆ, ಎಷ್ಟು ಸೀರಿಯಸ್ಸಾಗಿ ತೆಗೆದು ಕೊಳ್ಳುತ್ತಾರೋ ಅಷ್ಟೇ ಪ್ರೀತಿ, ಸೀರಿಯಸ್ಸಾಗಿಯೇ ಈ ಜಾಹೀರಾತುಗಳನ್ನೂ, ಜಿಂಗಲ್‌ಗ‌ಳನ್ನು ನಿರ್ಮಿಸುತ್ತಾರೆ ಅಂತ. 

 “ಈಗ ಗೆಲಾಕ್ಸ್‌ ಶೇ. 50 ಪ್ರತಿಶತ ಉಚಿತ. ತ್ವರೆ ಮಾಡಿ’ ಹೀಗಂತ ಮೊತ್ತ ಮೊದಲ ಜಾಹೀರಾತು ಉತ್ಪನ್ನಕ್ಕೆ ನಾನಾ ಭಾಷೆಯಲ್ಲಿ ಹಾಡಿದಾಗ ವಿಜಯ ಪ್ರಕಾಶ್‌ ಅವರಿಗೆ 19 ವರ್ಷ. ಆವತ್ತು ಇವರ ದನಿ ಎಲ್ಲರ ಮನೆಗಳಲ್ಲೂ ತೂರಿ ಹೋಯಿತು.   

 “ನಾನು ಈ ಪ್ರಪಂಚಕ್ಕೆ ಕಾಲಿಡ್ತೀನಿ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಬಾಂಬೆಯಲ್ಲಿ ಬದುಕೋಕೆ ಇದು ಅನಿವಾರ್ಯವಾಗಿತ್ತು. ನನ್ನ ಗುರಿ ಗಾಯಕನಾಗುವುದು. ಅದಕ್ಕೆ ತಾಲೀಮಿನಂತೆ ಈ ಜಿಂಗಲ್‌ಗ‌ಳನ್ನು ಹಾಡಲು ಶುರುಮಾಡಿದೆ.  ಸಿನಿಮಾದಲ್ಲಿ ಕಥೆ ಹೇಳಲೂ ಎರಡು, ಮೂರು ಗಂಟೆ ಸಮಯ ಇರುತ್ತೆ. ಜಿಂಗಲ್‌ಗ‌ಳಲ್ಲಿ ಹಾಗಿಲ್ಲ. ಕೇವಲ ನಾಲ್ಕೈದು ಸೆಕೆಂಡ್‌ಗಳಲ್ಲಿ ಪೂರ್ಣ ಕಥೆಯನ್ನು ಸಂಗೀತದ ಮೂಲಕ ಹೇಳಬೇಕು. ಕಥೆ ಎಂದರೆ ವ್ಯಕ್ತಿಗಳ ಬಗ್ಗೆ ಅಲ್ಲ. ಉತ್ಪನ್ನಗಳ ಬಗ್ಗೆ. ಸುತ್ತಿ ಬಳಸಿ ಹೇಳುವಂತಿಲ್ಲ. ಟುದಿ ಪಾಯಿಂಟ್‌ ಅಂತಾರಲ್ಲ ಹಾಗೇ. ಜಿಂಗಲ್‌ಗ‌ಳಲ್ಲೂ ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಉಂಟು.  ಅದರಲ್ಲಿ ವಾಯ್ಸ ಓವರ್‌, ಹಾಡೋದು ಕೂಡ ಒಂದು ಭಾಗ. ಒಟ್ಟಾರೆ ಏನೇ ಮಾಡಿದರೂ ಉತ್ಪನ್ನ ನೇರವಾಗಿ ಗ್ರಾಹಕರ ಮನ ಮುಟ್ಟುವಂತೆ ಮಾಡಬೇಕು ಅಷ್ಟೇ. ಹಾಗಾಗಿ, ಬಹಳ ಕ್ರಿಯೇಟಿವ್‌ ಆಗಿರಬೇಕು- ಹೀಗಂತ ವಿವರಿಸುತ್ತಾ ಹೋದರು ವಿಜಯ್‌ಪ್ರಕಾಶ್‌.

ನವರಸ ಜಿಂಗಲ್‌ಗ‌ಳು
  ಜಿಂಗಲ್‌ಗ‌ಳು ಕೂಡ ನವರಸಗಳಲ್ಲಿ ಇರುತ್ತವಂತೆ. ಉತ್ಪನ್ನಗಳು ಯಾವ ವರ್ಗಕ್ಕೆ ತಲುಪಬೇಕು ಅನ್ನೋದರ ಮೇಲೆ ಜಿಂಗಲ್‌ಗ‌ಳ ಭಾವಸ್ಪುರಣೆಯಾಗುತ್ತದೆ.  ಹಾಗೆಯೇ, ಮಕ್ಕಳಿಗೆ ಸಂಬಂಧಿಸಿದ, ಹಿರಿಯರಿಗೆ ಬೇಕಾದ, ಆರೋಗ್ಯಕ್ಕೆ ಸಂಬಂಧಿಸಿದ…  ಹೀಗೆ ಅವರವರ ಉತ್ಪನ್ನಕ್ಕೆ ತಕ್ಕಂತೆ ಜಿಂಗಲ್‌ಗ‌ಳು ರೂಪಿತವಾಗುತ್ತದೆ. ಉದಾಹರಣೆಗೆ- ಹೇ ದಿಲ್‌ ಮಾಂಗೇ ಮೋರ್‌.. ಹಾಹಾ  ಹೀಗೆ ಹಾಡಬೇಕಾದರೆ ಇದರ ಉದ್ದೇಶ ಯುವ ಜನತೆ. ಹೀಗಾಗಿ ಇದನ್ನು ತಾರಕಸ್ಥಾಯಿಯಲ್ಲಿ ವೈವಿಧ್ಯಮಯವಾಗಿ ಹಾಡಿದ್ದಾರೆ.  

 ಜಿಂಗಲ್‌ಗ‌ಳಿಗೆ ಸಂಗೀತವೇ ಪ್ರಧಾನವಾದರೂ ಭಾಷೆಯೂ ಮುಖ್ಯವಾಗುತ್ತದೆ. ನಾನಾ ಭಾಷೆಗಳಲ್ಲಿ ಹಾಡಿರುವ ವಿಜಯ್‌ಪ್ರಕಾಶ್‌, ಇದನ್ನು ರೂಢಿಸಿಕೊಂಡದ್ದು ಹೇಗೆ ಅನ್ನೋದನ್ನೂ ಹೇಳಿದರು-
“ಜಾಹೀರಾತು ಸಂಗೀತದಲ್ಲಿ ಫ್ರೀಡಂ ಜಾಸ್ತಿ. ವೈವಿಧ್ಯ ದನಿಯಿಂದಲೋ, ಸಂಗೀತದ ಮೂಲಕವೋ ಜನರ ಮನಸ್ಸನ್ನು ಹಿಡಿಯಬೇಕು. ಸಂಗೀತ, ಭಾಷೆ ಗೊತ್ತಿಲ್ಲದವರೂ ಕೂಡ ಜಿಂಗಲ್‌ಗ‌ಳನ್ನು ಗುನುಗುತ್ತಾರೆ.  ಅದೇ ದೊಡ್ಡ ಯಶಸ್ಸು. ಹಾಡುವವರಿಗೆ ಕೂಡ ಭಾಷೆಯ ಮೇಲೆ ಪ್ರೀತಿ ಇರಬೇಕು. ಇಲ್ಲವಾದರೆ ಎಲ್ಲ ಭಾಷೆಯಲ್ಲೂ ಹಾಡೋಕೆ ಆಗೋಲ್ಲ. ಹಾಡಿದರೂ ಅದು ಯಾಂತ್ರಿಕವಾಗುತ್ತದೆ. 

 ಈ ವಿಚಾರವಾಗಿ ನೆರವಾಗಿದ್ದು ನನ್ನ ಕನ್ನಡ ಭಾಷೆ. ನನ್ನ ಅಪ್ಪ ವ್ಯಾಕರಣ ದೋಷವಿಲ್ಲದೆ ಶಾಸ್ತ್ರೀಯವಾಗಿ ಕನ್ನಡ ಮಾತನಾಡುತ್ತಿದ್ದರು. ಇದರಿಂದ ನಾನು ಪ್ರಭಾವಿತನಾದೆ.  ಅವರಂತೆ ನಾನೂ ಪ್ರಯೋಗ ಮಾಡಲು ಶುರುಮಾಡಿದೆ. ಕನ್ನಡದ ಮೇಲೆ ಹಿಡಿತ ಸಿಕ್ಕಿತು. ಭಾಷೆಯ ಒಳಹೊರಗು ಗೊತ್ತಿದ್ದರಿಂದ ಬೇರೆ ಭಾಷೆಗಳ ಜೊತೆ ನನ್ನ ಸ್ನೇಹ ಕುದುರಿಕೊಂಡಿತು.  ನನ್ನ ಅನುಭವದ ಪ್ರಕಾರ ಕನ್ನಡವನ್ನ ಸರಿಯಾಗಿ ಅರಿತಿದ್ದರೆ ಬೇರೆ ಭಾಷೆಗಳನ್ನು ಬೇಗ ಡಿ-ಕೋಡ್‌ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ನನಗೆ ಕರ್ನಾಟಕ ಶಾಸಿŒಯ ಸಂಗೀತ ತಿಳಿದಿತ್ತು. ಅವರು ಏನೇ ಹೇಳಿದರೂ ನಾನು ಸಂಗೀತದ ಭಾಷೆಗೆ ಕನ್ವರ್ಟ್‌ ಮಾಡಿಕೊಳ್ಳುತ್ತಿದ್ದೆ. ಈಗಲೂ ನನಗೆ ಶಬ್ದಗಳೆಲ್ಲವೂ ಸಂಗೀತ ನೋಟ್ಸ್‌ಗಳಾಗೇ ಕೇಳುತ್ತವೆ. ಉದಾಹರಣೆಗೆ- ಬ್ರಿಟಾನಿಯಾ ಬಿಸ್ಕೆಟ್‌ನ  ಟಣ್‌ ಟಣ್‌ಟಡಣ್‌ ಎನ್ನುವ ಸಿಗ್ನೇಚರ್‌ ಟ್ಯೂನ್‌ ಕೇಳಿದೆ ಅಂತಿಟ್ಟುಕೊಳ್ಳಿ. ಅದು ನನ್ನ ಮನಸ್ಸಲ್ಲಿ  ಸಾ…ನೀ ಪಸಾ ಅಂತಾಗುತ್ತದೆ.  ಹೀಗೆ ಪ್ರತಿ ದನಿಯೂ  ಸಂಗೀತಾಕ್ಷರಗಳಾಗುವುದರಿಂದ ಎಲ್ಲ ಭಾಷೆಗಳಲ್ಲೂ ನನಗೆ ಸುಲಲಿತವಾಯಿತು- ವಿಜಯ್‌ ಪ್ರಕಾಶ್‌ ಬೇರೆ ಭಾಷೆಗಳನ್ನು ಹಾಡುವ ತಂತ್ರಗಳನ್ನು ಬಿಚ್ಚಿಟ್ಟರು.  

ಪ್ರತ್ಯೇಕ ರಾಗಗಳು ಇಲ್ಲ
ಬಹುಶಃ ಜಾಹೀರಾತು ಸಂಗೀತಕ್ಕಾಗಿಯೇ ಪ್ರತ್ಯೇಕ ರಾಗಗಳನ್ನು ಬಳಸಬಹುದೇ? ಸೆಕೆಂಡುಗಳಲ್ಲಿಯೇ ಜನರ ಮನಸ್ಸು ಗೆಲ್ಲುವ ತಂತ್ರಗಳು ಏನು? ಇಂಥ ಅನುಮಾನಗಳು ಸಹಜ. ಇದಕ್ಕೂ ವಿಜಯಪ್ರಕಾಶರು ಉತ್ತರ ಕೊಟ್ಟರು. 
 “ಸಾಮಾನ್ಯವಾಗಿ ಜಿಂಗಲ್‌ಗ‌ಳಿಗೆ ಬೇಸ್‌ ವಾಯ್ಸ ಪ್ರಿಫ‌ರ್‌ ಮಾಡ್ತಾರೆ. ಅದರಲ್ಲೂ ಮೆಲೋಡಿ ಬಹಳ ಚೆನ್ನಾಗಿ ಕೇಳುತ್ತದೆ. ಬೇಸ್‌ವಾಯ್ಸನಲ್ಲಿ ಭಾವ ಸಂಚಾರ ಚೆನ್ನಾಗಿ ಆದಾಗ ಕಿವಿಯಲ್ಲಿ ನಿಲ್ಲುತ್ತದೆ ಅನ್ನೋ ನಂಬಿಕೆ.  ಹಾಗಂತೆ ಇತರೆ ಸ್ಥಾಯಿಯಲ್ಲಿ ಇಲ್ಲ ಅಂತಲ್ಲ. ನನಗೆ ಅವಕಾಶ ಸಿಕ್ಕಿದ್ದು ಇವನ ಬೇಸ್‌ ವಾಯ್ಸ ಬಹಳ ಚೆನ್ನಾಗಿದೆ ಅಂತ. ಹಾಗೇನೇ, ಇವನು ಜಿಂಗಲ್ಸ್‌ ಮಾತ್ರವಲ್ಲ. ಶಾಸ್ತ್ರೀಯವಾಗಿಯೂ ಚೆನ್ನಾಗಿ ಹಾಡ್ತಾನೆ ಅಂತ ಗುರುತಿಸಿ ಅವಕಾಶ ಕೊಟ್ಟರು. ಎಲ್ಲವೂ ಆಯಾ ಸಂಗೀತ ನಿರ್ದೇಶಕರ ಮೇಲೆ ನಿರ್ಧಾರವಾಗುತ್ತದೆ ಅಂತ ಪ್ರಕಾಶ್‌ ಪ್ರಕಾಶಮಾನವಾಗಿ ವಿವರಿಸುತ್ತಾ ಹೋದರು. 
ವಿಜಯ್‌ಪ್ರಕಾಶ್‌ ಇತ್ತೀಚೆಗಷ್ಟೇ ಅಮೇಜಾನ್‌ ಪ್ರೈಮ್‌ಗೆ ಜಿಂಗಲ್‌ ಹಾಡಿ, ಅದೂ ಮಿಲಿಯನ್‌ಗಟ್ಟಲೆ ಹಿಟ್‌ಗಳನ್ನು ಪಡೆದಿದೆಯಂತೆ. “ನನಗೆ ಅನ್ನ ಕೊಟ್ಟ ಕ್ಷೇತ್ರವದು. ಬಿಡಕ್ಕಾಗಲ್ಲ. ಎಲ್ಲದರ ಮಧ್ಯೆ ಆಗಾಗ ಈಗಲೂ ಜಿಂಗಲ್‌ಗ‌ಳನ್ನು ಹಾಡ್ತಾ ಇರ್ತೀನಿ’ ಅಂತ ಖುಷಿಯಾಗಿ ಆ ಜಿಂಗಲ್‌ ಅನ್ನು ಗುನುಗುತ್ತಾ ಮಾತನ್ನು ಮುಗಿಸಿದರು.

ಸಿನಿಮಾ ಸಂಗೀತ v/s  ಜಾ.ಸಂ. ಸಂಗೀತ
ಜಿಂಗಲ್‌ ಸಂಗೀತ, ಸಿನಿಮಾ ಸಂಗೀತ ಅಂತ ವಿಭಾಗ ಏನೂ ಇಲ್ಲ. ಇಲ್ಲಿನ ಸಂಗೀತ ಕೂಡ  ಸಪ್ತಸ್ವರಗಳಲ್ಲೇ ಹುಟ್ಟೋದು. ಅದಕ್ಕೋಸ್ಕರ ಬೇರೆ ರಾಗಗಳು, ಸ್ವರಗಳು ಅಂತೇನೂ ಇಲ್ಲ. ಸಿನಿಮಾ ಹಾಡುಗಳಿಗೆ ಲೈಫ್ ಜಾಸ್ತಿ. ಸಮಯ ಕೂಡ ಹೆಚ್ಚು. ಉದ್ದೇಶವೂ ಬೇರೆ. ಉದಾಹರಣೆಗೆ- ಬೊಂಬೆ ಹೇಳುತೈತೆ ಅನ್ನೋ ಹಾಡನ್ನೇ ತಗೊಳ್ಳಿ. ಅದು, ಸುಮಾರು 6 ನಿಮಿಷದ ಹಾಡು.  ಅದನ್ನು ನೀವು ಎಲ್ಲೋ ಒಂದು ಕಡೆ ಕೂತು ಮತ್ತೆ ಮತ್ತೆ ಕೇಳುತ್ತೀರಿ. ಇದರ ಉದ್ದೇಶ ಈ ಹಾಡು ಮತ್ತು ಸಂಗೀತ ಸಿನಿಮಾಗೂ ಹೊಂದಬೇಕು, ಜನಕ್ಕೆ ಇಷ್ಟವಾಗಬೇಕು ಅನ್ನೋದು. ಆದರೆ ಜಾಹೀರಾತಿನ ಜಿಂಗಲ್‌ಗ‌ಳನ್ನು ನೀವು ಆ ರೀತಿ ಇಷ್ಟ ಪಟ್ಟು ಪದೇ ಪದೆ ಕೇಳುವುದಿಲ್ಲ. ಅದರ ಉದ್ದೇಶ ಉತ್ಪನ್ನಗಳನ್ನು ಪ್ರಚಾರ ಮಾಡುವುದು ಅಷ್ಟೇ.  ಇದಕ್ಕೆ ಅಪವಾದವಂತೆ  ಎಷ್ಟೇ ಹಳೆಯದಾದರೂ ಮತ್ತೆ ಮತ್ತೆ ಕೇಳುವಂತೆ ಮಾಡುವ ಮೆಲೋಡಿ ಜಿಂಗಲ್‌ಗ‌ಳೂ ಉಂಟು’ 

 ಭಾಷೆ ಕಮ್ಯೂನಿಕೇಷನ್‌ಗೂ ಮೀರಿದ್ದು…
 “ನಾನು ಎಲ್ಲೇ ಇದ್ದರೂ, ಹೇಗೇ ಇದ್ದರೂ, ಯಾವ ಭಾಷೆಯಲ್ಲಿ ಹಾಡಬೇಕಾದರೂ ಆ ಭಾಷೆಯ ಹಾಡನ್ನು ಮೊದಲು ನನ್ನ ಕನ್ನಡದಲ್ಲೇ ಬರೆದುಕೊಳ್ಳುತ್ತೇನೆ.  ಯೋಚನೆಗಳ ಮೊಳಕೆಯೊಡೆದು,  ಬೀಜವಾಗುವುದೂ ಕನ್ನಡದಲ್ಲೇ.   ಅದು ವಿಸ್ತಾರವಾಗುತ್ತಾ ಹೋದಂತೆ ಬೇರೆ ಬೇರೆ ಭಾಷೆಗಳಾಗಿ ಹೋಗುತ್ತದೆ. ಎಲ್ಲಕ್ಕೂ ಮೂಲ ಬೇರಿ ನಂತೆ ಇರುವುದು ಕನ್ನಡವೇ.   ಭಾಷೆಯನ್ನು ಬರೀ ಕಮ್ಯುನಿಕೇಷನ್‌ ಟೂಲ್‌ ರೀತಿ ಬಳಸಿದರೆ- ಬಾರ್ಲಾ, ಕೂತ್ಕಂಡ್ಲಾ, ಕಾಫೀ ಕುಡೀಲಾ.. ಇಷ್ಟಕ್ಕೇ ಸೀಮಿತವಾಗುತ್ತದೆ. ಪ್ರತಿ ಭಾಷೆಯ ಹಿಂದೆ ಅದರದೇ ಆದ ಭಾವ, ಸೌಂದರ್ಯ ಇರುತ್ತದೆ. ಇದು ಅಕ್ಷರಗಳಷ್ಟೇ ಮುಖ್ಯ. ಎಲ್ಲವನ್ನೂ ಅರ್ಥಮಾಡಿಕೊಂಡು ಬಳಸುತ್ತಾ ಹೋದರೆ ಇಂಪಾಗಿ, ಸ್ವಾದಿಷ್ಟವಾಗಿ ಕೇಳುತ್ತಾ ಹೋಗುತ್ತದೆ.   ನಮ್ಮ ಭಾಷೆಯನ್ನು ಪ್ರೀತಿಸುತ್ತಲೇ ಬೇರೆ ಭಾಷೆಗಳಿಗೆ ತೆರೆದುಕೊಳ್ಳುವ, ಗೌರವಿಸುವ ಗುಣವಿದ್ದರೆ ಮಾತ್ರ ಎಲ್ಲಾ ಭಾಷೆಗಳನ್ನು ಕೊರಳಲ್ಲಿ ತುಂಬಿಕೊಳ್ಳಲು ಸಾಧ್ಯ. ‘

ಕಟ್ಟೆ ಗುರುರಾಜ್‌

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.