ಇದು ಗಾಂಧೀ ಗ್ರಾಮ :ಈ ಹಳ್ಳೀಲಿ ಸಿಗರೇಟು, ಮದ್ಯ ಮುಟ್ಟಂಗಿಲ್ಲ


Team Udayavani, May 19, 2018, 12:50 PM IST

24.jpg

ಆಧುನಿಕತೆಯ ಭರಾಟೆಯಲ್ಲಿ ಸಿಲುಕಿರುವ ನಮ್ಮ ಗ್ರಾಮಗಳಿಗೆ ಗಾಂಧಿಯ ಕನಸೇ ಬೀಳುವುದಿಲ್ಲ. ಆದರೆ ಈ ಹನುಮನಹಳ್ಳಿ ಮಾತ್ರ ಇದಕ್ಕೆ ಅಪವಾದ. ಗಾಂಧಿಯ ಕನಸನ್ನು ನನಸು ಮಾಡಲೆಂದೇ ಈ  ಊರಲ್ಲಿ ಮದ್ಯ, ಬೀಡಿ, ಸಿಗರೇಟು ನಿಷಿದ್ಧ.

ಮಹಾತ್ಮಾ ಗಾಂಧೀಜಿ ಕಂಡಿದ್ದ ಸ್ವದೇಶಿ ಪರಿಕಲ್ಪನೆಯ ಮಾದರಿ ಗ್ರಾಮ ನಮ್ಮಲ್ಲಿ ಇದೆಯಾ?
ಹೌದು! ಕೊಪ್ಪಳ ತಾಲೂಕಿನ ಹನುಮನಹಳ್ಳಿ ಎಂಬ ಕುಗ್ರಾಮವೇ ಈ ಮಾದರಿ ಗ್ರಾಮ. ಜಿಲ್ಲಾ ಕೇಂದ್ರದಿಂದ ಸುಮಾರು 12 ಕಿಲೋ ಮೀಟರ್‌ ದೂರದಲ್ಲಿರುವ ಈ ಪುಟ್ಟ ಗ್ರಾಮವು ಹಲವು ವಿಶೇಷತೆಗಳ ಮೂಲಕ ಗಮನ ಸೆಳೆಯುತ್ತದೆ. ಈ ಗ್ರಾಮವು ತನ್ನದೇ ಆದ ಅಲಿಖೀತ ಸಂಧಾನವೊಂದನ್ನು ಸೃಷ್ಟಿಸಿಕೊಂಡು ಸನ್ಮಾರ್ಗದತ್ತ ಸಾಗುವ ಮೂಲಕ ಗಾಂಧೀಜಿಯವರ ಕನಸನ್ನು ನನಸು ಮಾಡಿದೆ. 

ಈ ಗ್ರಾಮದಲ್ಲಿ ಅಂತಹ ವಿಶೇಷತೆಯಾದರೂ ಏನಿರಬಹುದು ಅಂತೀರಾ? ಇಲ್ಲಿದೆ ನೋಡಿ ಈ ಗ್ರಾಮದ ವೈಶಿಷ್ಠ$Â. ಬಹುತೇಕ ಕೃಷಿಕರು ಹಾಗೂ ಕೂಲಿ ಕಾರ್ಮಿಕರು ನೆಲೆಸಿರುವ ಈ ಪುಟ್ಟ ಗ್ರಾಮದಲ್ಲಿ ಇಂದಿಗೂ ಯಾವ ಅಂಗಡಿಯಲ್ಲೂ ಬೀಡಿ, ಸಿಗರೇಟು, ಗುಟ್ಕಾ, ಮದ್ಯ ಸೇರಿದಂತೆ ಆರೋಗ್ಯಕ್ಕೆ ಮಾರಕವಾಗುವ ವಸ್ತುಗಳ ಮಾರಾಟ ನಿಷಿದ್ಧ. ಒಂದು ವೇಳೆ ಯಾವುದೇ ವ್ಯಕ್ತಿ ಇಂತಹ ವಸ್ತುಗಳ ಮಾರಾಟಕ್ಕೆ ಯತ್ನಿಸಿದರೆ ಊರಿನ ಜನರೆಲ್ಲ ಸಭೆ ಸೇರಿ ಆ ವ್ಯಕ್ತಿಗೆ ಸುಮಾರು ಹತ್ತು ಸಾವಿರ ರೂಪಾಯಿಯವರೆಗೆ ದಂಡ ವಿಧಿಸುತ್ತಾರೆ. ಅಷ್ಟೇ ಅಲ್ಲ, ಊರಿನ ಯಾವುದೇ ವ್ಯಕ್ತಿ ಬೇರೆಡೆಯಿಂದ ಮದ್ಯ ಸೇವಿಸಿ ಗ್ರಾಮಕ್ಕೆ ಬಂದಿದ್ದು ಕಂಡುಬಂದರೂ  ಕೂಡ, ಅವನಿಗೆ ದಂಡ ಕಟ್ಟಿಟ್ಟ ಬುತ್ತಿ. ಊರ ತುಂಬೆಲ್ಲ ಸುತ್ತಿ ಬಂದರೂ ಅಲ್ಲಲ್ಲಿ ಕಂಡು ಬರುವ ಹೊಟೇಲುಗಳಲ್ಲಿ ಕೇವಲ ಚಹಾ ಒಂದನ್ನು ಹೊರತುಪಡಿಸಿ ಬೇರೇನೂ ದೊರೆಯದು. ವಯಸ್ಸಾದ, ಅಸಹಾಯಕ ವ್ಯಕ್ತಿಗಳನ್ನು ಹೊರತುಪಡಿಸಿದರೆ ಗ್ರಾಮದ ಯುವಕರ್ಯಾರೂ ಅಂಥ ಹೋಟೆಲ್‌ಗ‌ಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇಷ್ಟೇ ಅಲ್ಲ, ಸುಮಾರು ಹತ್ತು ವರ್ಷಗಳಿಂದ ಈ ಗ್ರಾಮದಲ್ಲಿ ಆಗಾಗ ಏಳುವ ತಂಟೆ, ತಕರಾರುಗಳು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಉದಾಹರಣೆಯೂ ಇಲ್ಲ. ಎಂಥ ಕಲಹಗಳಿದ್ದರೂ ಗ್ರಾಮದ ಹಿರಿಯರ ಸಮಕ್ಷಮದಲ್ಲೇ ನ್ಯಾಯ ತೀರ್ಮಾನವಾಗುತ್ತವೆ. 

“ಗ್ರಾಮದ ಈ ನಿಯಮಗಳು ಮಕ್ಕಳ ಮೇಲೆ ಧನಾತ್ಮಕವಾದ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ, ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರವಾಗುತ್ತವೆ. ಈ ಮಾದರಿ ಕ್ರಮಗಳನ್ನು ಎಲ್ಲಾ ಗ್ರಾಮದವರು ಅನುಸರಿಸಿದರೆ ಪರಿಶುದ್ಧವಾದ ಸಮಾಜ ನಿರ್ಮಾಣವ ಆಗುತ್ತದೆ’ ಎನ್ನುತ್ತಾರೆ ಹನುಮನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರ ಪ್ರಾಣೇಶ ಪೂಜಾರ್‌. 

ಸುಮಾರು ಹನ್ನೆರಡು ವರ್ಷಗಳ ಹಿಂದೆ ಗ್ರಾಮದ ಹಿರಿಯರೆಲ್ಲ ಸೇರಿ ತಮ್ಮ ಗ್ರಾಮದ ವಾಸ್ತವ ಸ್ಥಿತಿಗತಿಗಳನ್ನು ಅವಲೋಕಿಸುತ್ತ ಇರುವಾಗ ಥಟ್ಟನೆ ತಮ್ಮ ಊರಿನ ಹಲವು ಸಮಸ್ಯೆಗಳು ಕಣ್ಣ ಮುಂದೆ ಬಂದವು. ಬೀಡಿ, ಸಿಗರೇಟು, ಮದ್ಯಗಳಿಂದ ಜನರು ತತ್ತರಿಸಿ ಹೋಗುತ್ತಿರುವುದು, ಗ್ರಾಮದ ಯುವ ಜನತೆ ದುಶ್ಚಟಗಳಿಗೆ ಅಂಟಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿ ಕಂಡಿತು. ಕೂಡಲೇ ಏನಾದರೂ ಮಾಡಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಯೋಚನೆ ಮಾಡಿದ್ದರ ಫ‌ಲವೇ  ಮದ್ಯ, ಸಿಗರೇಟು ನಿಷಿದ್ಧ ಯೋಜನೆ ಜಾರಿ ಮಾಡಿದ್ದು.  ಈ ನಿರ್ಧಾರಕ್ಕೆ ಗ್ರಾಮದ ಪ್ರತಿಯೊಬ್ಬರೂ ಸಮ್ಮತಿ ಸೂಚಿಸಿದರು. 

“ನಮ್ಮೂರ್‍ನಾಗ ಬೀಡಿ, ಸಿಗರೇಟು, ಎಣ್ಣೆ ಇಂಥಾವೇನೂ ಮಾರಂಗಿಲಿÅ. ಹಂಗೇನಾದ್ರೂ ಮಾಡಿದ್ರ ಊರ ಪಂಚಾತಿ ಸೇರಿÕ ಅವ್ರಿಗೆ ದಂಡ ಹಾಕ್ತಿವಿ. ಕುಡಿಯೋದು, ಸೇದೋದು ಮಾಡಿ ಊರಾಗಿನ ಹುಡುಗ್ರೆಲ್ಲ ಅಡ್ಡದಾರಿ ಹಿಡಿಬಾರ್ಧು ಅಂತ ರಿಯರೆಲ್ಲ ಸೇರಿ ಈ ತೀರ್ಮಾನಕ್ಕ ಬಂದಿದಾರೀ. ನಮ್ಮೂರ್‍ನಾಗ ಜಗಳ, ತಂಟೆ, ತಕರಾರಿಲ್ದ ಆರಾಮಾದೀವಿ. ಏನೇ ಕಾರ್ಯಕ್ರಮ ಬಂದ್ರೂಎಲ್ರೂ ಸೇರಿ ಒಗ್ಗಟ್ಟಿನಿಂದ ಮಾಡ್ತೀವ್ರಿà ಅಂತಾರೆ ಗ್ರಾಮಸ್ಥ ದುರುಗಪ್ಪ ಮುರಡಿ. 
 ಗ್ರಾಮದಲ್ಲಿ ಯಾವುದೇ ಹಬ್ಬ, ಹರಿದಿನಗಳು ನಡೆದರೆ ಎಲ್ಲ ಜನಾಂಗದವರೂ ಸರಿ ಸಮನಾಗಿ ಹಣ ವಿನಿಯೋಗಿಸುತ್ತಾರೆ. ಅಷ್ಟೇ ಅಲ್ಲ, ಆ ಊರಿಗೆ ಸಂಬಂಧಿಸಿದ ಜಾತ್ರೆ, ದೇವರ ಕಾರ್ಯಗಳಲ್ಲಿ ಎಲ್ಲ ಜನಾಂಗದವರೂ ಭಾಗಿಯಾಗಿ ಒಂದೊಂದು ಸಮುದಾಯದವರು ಒಂದೊಂದು ಜವಾಬ್ದಾರಿ ಹಂಚಿಕೆ ಮಾಡಿಕೊಂಡು ಯೋಜನೆ ರೂಪಿಸಿಕೊಂಡು ಸೌಹಾರ್ದತೆಯಿಂದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಾರೆ. ಅಂದಿನಿಂದ ಇಂದಿನವರೆಗೂ ಗ್ರಾಮಸ್ಥರೆಲ್ಲರೂ ತಮ್ಮ ಈ ತೀರ್ಮಾನಕ್ಕೆ ಬದ್ಧರಾಗಿ ಅದನ್ನು ಪಾಲಿಸುತ್ತಾ ಬಂದಿರುವುದು ವಿಶೇಷ.
 ಆ ಗ್ರಾಮದಲ್ಲಿ ಕೋಮು ದಳ್ಳುರಿಗಳಿಲ್ಲ, ಕೋಮುಧೆÌàಷಗಳಿಲ್ಲ. ಅಲ್ಲಿರುವುದು ಶಾಂತಿ, ಸೌಹಾರ್ದತೆ, ಸಮನ್ವಯತೆ ಮತ್ತು ಸಾಕಾರತೆ.

ಸುಸಜ್ಜಿತ ರಸ್ತೆ, ಆರೋಗ್ಯ ಸೇರಿದಂತೆ ಕೆಲವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದರೂ ಈ ಗ್ರಾಮವು ಹಲವು ಜೀವನ ಮೌಲ್ಯಗಳನ್ನು ಬಿಂಬಿಸುವ ಸನ್ಮಾರ್ಗಗಳನ್ನು ರೂಪಿಸಿಕೊಳ್ಳುವಲ್ಲಿ ಶ್ರೀಮಂತವಾಗಿದೆ. ಒಂದು ಗ್ರಾಮವು ಮಾದರಿ ಗ್ರಾಮ ಎನಿಸಿಕೊಳ್ಳಬೇಕೆಂದರೆ ಇಷ್ಟು ಸಾಕಲ್ಲವೇ?

ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ  

ಚಿತ್ರಗಳು- ದೇವರಾಜ ಮೇಟಿ

ಟಾಪ್ ನ್ಯೂಸ್

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

cm-b-bommai

ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಹೊರಗಡೆಯವರಿಗೆ ಪ್ರವೇಶ ನಿರ್ಬಂಧ: ಸಿಎಂ ಬೊಮ್ಮಾಯಿ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

shivaraj-kumar

ಪುನೀತ್ ಡ್ರೀಮ್ ಪ್ರಾಜೆಕ್ಟ್ ಟೀಸರ್ ಬಿಡುಗಡೆಗೆ ಸಿಎಂಗೆ ಆಹ್ವಾನ ನೀಡಿದ ಶಿವಣ್ಣ

1-ff

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಕೆ. ರೋಸಯ್ಯ ವಿಧಿವಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

10bjp

ಬಿಜೆಪಿಗೆ ಪಾಠ ಕಲಿಸಿ: ಡಾ| ಅಜಯಸಿಂಗ್‌

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

10kannada

ಕನ್ನಡ-ತಮಿಳು ಪರಸ್ಪರ ಆಪ್ತ ಸಂಬಂಧ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.