Udayavni Special

ಲೋಕಲ್‌ ಹಾಡುಗಳಿಗೆ ಪವರ್‌ ಟಚ್‌

ಮದರಂಗಿ ಕೃಷ್ಣ ಹಳೇ ಪ್ರಾಜೆಕ್ಟ್

Team Udayavani, Jan 31, 2020, 5:42 AM IST

youth-22

ಪ್ರೀತಿ ಎನ್ನುವುದು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ, ಯಾವಾಗ ಬೇಕಾದರೂ ಶುರುವಾಗಬಹುದು. ಪ್ರೀತಿ ಹುಟ್ಟಲು ಸಮಯ, ಸ್ಥಳ, ಹೊತ್ತು-ಗೊತ್ತು ಯಾವುದೂ ಇರುವುದಿಲ್ಲ. ಹಾಗೇ ಪ್ರೀತಿ ಅನ್ನೋದು ಬಸ್ಸು, ಕಾರು, ಟ್ರೈನು, ಫ್ಲೈಟಿನಲ್ಲೂ ಕೂಡ ಹುಟ್ಟಬಹುದು. ಈಗ ಇದೇ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ಚಿತ್ರತಂಡ ಟ್ರೈನ್‌ನಲ್ಲಿ ಶುರುವಾದ ಪ್ರೇಮಕಥೆಯನ್ನು ತೆರೆಮೇಲೆ ಹೇಳಲು ಹೊರಟಿದೆ. ಅಂದಹಾಗೆ ಆ ಚಿತ್ರದ ಹೆಸರು “ಲೋಕಲ್‌ ಟ್ರೈನ್‌’.

ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಬರುವ ಟ್ರೈನ್‌ ಒಂದರಲ್ಲಿ ಶುರುವಾದ ಲವ್‌ ಸ್ಟೋರಿ ಮತ್ತು “ಲೋಕಲ್‌ ಟ್ರೈನ್‌’ ಸುತ್ತ ಈ ಚಿತ್ರದ ಕಥೆ ನಡೆಯಲಿದೆ. ಹಾಗಾಗಿ ಚಿತ್ರಕ್ಕೆ “ಲೋಕಲ್‌ ಟ್ರೈನ್‌’ ಎಂದು ಟೈಟಲ್‌ ಇಡಲಾಗಿದೆ ಎನ್ನುತ್ತದೆ ಚಿತ್ರತಂಡ. “ಲೋಕಲ್‌ ಟ್ರೈನ್‌’ ಚಿತ್ರದಲ್ಲಿ ಮದರಂಗಿ ಕೃಷ್ಣ ನಾಯಕನಾಗಿ ಕಾಣಿಸಿ ಕೊಂಡಿದ್ದು, ಎಸ್ತಾರ್‌ ನರೋನಾ, ಮೀನಾ ದೀಕ್ಷಿತ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಖಳನಾಯಕನಾಗಿ ಭಜರಂಗಿ ಲೋಕಿ, ಕಾಮಿಡಿ ಕಮಾಲ್‌ ಮಾಡಲು ಟೆನ್ನಿಸ್‌ ಕೃಷ್ಣ, ಸಾಧುಕೋಕಿಲ, ಸೆಂಟಿಮೆಂಟ್‌ಗಾಗಿ ಸುಚೇಂದ್ರಪ್ರಸಾದ್‌, ಗುರುದತ್‌ ಸೇರಿದಂತೆ ಅನೇಕ ಕಲಾವಿದರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರುದ್ರಮುನಿ ವೈ.ಎನ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸುಮಾರು ಮೂರು ವರ್ಷಗಳ ಹಿಂದೆ ಶುರುವಾದ ಈ ಚಿತ್ರ, ಕೆಲವು ತಾಂತ್ರಿಕ ಕಾರಣಗಳಿಂದ ತೆರೆಗೆ ಬರಲು ವಿಳಂಬವಾಗಿದ್ದು, ಇದೇ ಫೆಬ್ರವರಿ ವೇಳೆಗೆ ಚಿತ್ರವನ್ನು ರಿಲೀಸ್‌ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಇತ್ತೀಚೆಗೆ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, “ಲೋಕಲ್‌ ಟ್ರೈನ್‌’ ಚಿತ್ರದ ಆಡಿಯೋವನ್ನು ಬಿಡುಗಡೆ­ಗೊಳಿಸಿತು. ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ಲೋಕಲ್‌ ಟ್ರೈನ್‌’ ಹಾಡುಗಳನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಚಿತ್ರತಂಡ, “ಟ್ರೈನ್‌ ಒಂದರಲ್ಲಿ ಶುರುವಾಗಿ, ಅದರ ಸುತ್ತ ನಡೆಯುವ ಪ್ರೇಮಕಥೆಯೇ ಈ ಚಿತ್ರದ ಹೈಲೈಟ್‌. ಹಳ್ಳಿಯೊಂದರಿಂದ ಬೆಂಗಳೂರಿಗೆ ಬರುವ ಸ್ಥಳೀಯ ಟ್ರೆçನ್‌ನಲ್ಲಿ ಪ್ರತಿದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಂಚರಿಸುತ್ತಿರುತ್ತಾರೆ. ಇದೇ ವೇಳೆ ಟ್ರೈನ್‌ನಲ್ಲಿ ಹುಟ್ಟುವ ನವಿರಾದ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಇದನ್ನೆ ಆಧಾರವಾಗಿಟ್ಟುಕೊಂಡು, ಅದರಲ್ಲಿ ಬರುವ ಹಲವು ಸನ್ನಿವೇಶಗೊಂದಿಗೆ ಚಿತ್ರವನ್ನು ತೆರೆಗೆ ತಂದಿದ್ದೇವೆ’ ಎಂದು ವಿವರಣೆ ನೀಡುತ್ತದೆ.

ಚಿತ್ರದ ಐದು ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆಯಿದ್ದು, ಜಯಂತ್‌ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಹಿರಿಯ ನೃತ್ಯ ನಿರ್ದೇಶಕರಾದ ಚಿನ್ನಿಪ್ರಕಾಶ್‌, ರಾಜುಸುಂದರ್‌ ಮತ್ತು ಗಣೇಶ್‌ ಈ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಈ ಪೈಕಿ ಒಂದು ಹಾಡಿನಲ್ಲಿ ಸುಮಾರು 200ಕ್ಕೂ ಹೆಚ್ಚು ನೃತ್ಯ ಕಲಾವಿದರು ಹೆಜ್ಜೆ ಹಾಕಿದ್ದು, ಅದ್ದೂರಿ ಏಳು ಸೆಟ್‌ಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆಯಂತೆ.

ಇನ್ನು “ಲೋಕಲ್‌ ಟ್ರೈನ್‌’ ಚಿತ್ರಕ್ಕೆ ರಮೇಶ ಬಾಬು ಛಾಯಾಗ್ರಹಣ, ಕೆ.ಎಂ ಸೌಂದರ್‌ ರಾಜು ಸಂಕಲನ ಕಾರ್ಯವಿದೆ. ಈಶ್ವರಿ ಕುಮಾರ್‌ ಕಲೆ, ಮಾಸ್‌ಮಾದ ಸಾಹಸ ನಿರ್ದೇಶನವಿದೆ. ಕುಮುಟದ ಸುಬ್ರಾಯ ವಾಳ್ಕೆ “ಸಂಜನಾ ಸಿನಿ ಆರ್ಟ್ಸ್’ ಬ್ಯಾನರ್‌ನಲ್ಲಿ ಸುಬ್ರಾಯ ವಾಳ್ಕೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ ಹಾಡುಗಳ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ “ಲೋಕಲ್‌ ಟ್ರೈನ್‌’ ಜರ್ನಿ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಹಿತಾನುಭವ ಕೊಡುತ್ತದೆ ಅನ್ನೋದು ಫೆಬ್ರವರಿ ಕೊನೆಗೆ ಗೊತ್ತಾಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಆಸ್ಪತ್ರೆಯ ಐಸಿಯು ಬೀಗದ ಕೈ ಹುಡುಕಲು ಸಿಬ್ಬಂದಿಗಳ ಪರದಾಟ: 55 ವರ್ಷದ ಮಹಿಳೆ ಸಾವು

ಆಸ್ಪತ್ರೆಯ ಐಸಿಯು ಬೀಗದ ಕೈ ಹುಡುಕಲು ಸಿಬ್ಬಂದಿಗಳ ಪರದಾಟ: 55 ವರ್ಷದ ಮಹಿಳೆ ಸಾವು

ಕೋವಿಡ್-19: ಸ್ವಚ್ಛತೆಯೇ ಅಸ್ತ್ರ ಎಂದ ಜಪಾನ್‌

ಕೋವಿಡ್-19: ಸ್ವಚ್ಛತೆಯೇ ಅಸ್ತ್ರ ಎಂದ ಜಪಾನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

suchitra-tdy-9

ಮನರೂಪ ಚಿತ್ರಕ್ಕೆಪ್ರಶಸ್ತಿ ಖುಷಿ

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

suchitra-tdy-07

ಡೈರೆಕ್ಟರ್ ಸ್ಪೆಷಲ್‌! : ನಿರ್ದೇಶಕರ ಹೊಸ ಯೋಚನೆಗಳೇನು ಗೊತ್ತಾ?

suchitra-tdy-6

ಮೀನಾ ಬಜಾರ್‌ ನಿರ್ದೇಶಕರ ಕಾಫಿ ಬ್ರೇಕ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ  ಆರಂಭ

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ ಆರಂಭ

ಕ್ವಾರೆಂಟೈನ್‌ ಕೇಂದ್ರಕ್ಕೆ ಕಟ್ಟಡ ಕೊಟ್ಟ ಕಿಂಗ್‌ ಖಾನ್‌

ಕ್ವಾರೆಂಟೈನ್‌ ಕೇಂದ್ರಕ್ಕೆ ಕಟ್ಟಡ ಕೊಟ್ಟ ಕಿಂಗ್‌ ಖಾನ್‌

ಬೆಳಗಾವಿಯಲ್ಲಿ ಮತ್ತೆ ನಾಲ್ಕು ಕೋವಿಡ್ 19 ಪ್ರಕರಣ

ನಿಜಾಮುದ್ದೀನ್ ನಿಂದ ಬಂದ ನಾಲ್ವರಿಗೆ ಸೋಂಕು: ಬೆಳಗಾವಿಯಲ್ಲಿ ಮತ್ತೆ ನಾಲ್ಕು ಹೊಸ ಪ್ರಕರಣ

sm-tdy-1

ಹಾಪ್‌ಕಾಮ್ಸ್‌ ಮಳಿಗೆ ತೆರೆಯಲು ಸೂಚನೆ