ತೂಗು ದೀಪದ ದರ್ಶನ


Team Udayavani, Nov 21, 2018, 6:00 AM IST

w-4.jpg

ದೀಪಾವಳಿ ಮುಗಿದು ವಾರ ಕಳೆದಿದೆ. ಆದರೂ ಹಬ್ಬದ ದಿನಗಳಲ್ಲಿ ಸಿಡಿದ ಪಟಾಕಿಗಳ ಸದ್ದನ್ನಾಗಲಿ, ಹಬ್ಬದೂಟದ ರುಚಿಯನ್ನಾಗಲಿ ಮರೆಯಲು ಸಾಧ್ಯವಾಗಿಲ್ಲ. ಹಾಗೆಯೇ, ಹಬ್ಬದ ದಿನ ತೊಟ್ಟ ಹೊಸ ದಿರಿಸಿನ, ಅದರ ಸೊಗಸು ಹೆಚ್ಚಿಸಿದ ಆಭರಣಗಳ ಬೆಡಗನ್ನೂ… ಈ ದಿನಗಳ ಹೊಸ ಟ್ರೆಂಡ್‌ ಆಗಿರುವ ಕಿವಿಯೋಲೆಗಳನ್ನೂ ಕುರಿತು ನಾಲ್ಕು ಮಾತುಗಳಿವೆ…

ದೀಪಾವಳಿ ಮುಗಿದರೂ ಸಂಭ್ರಮ ಮಾತ್ರ ಮುಗಿದಿಲ್ಲ. ಹೊಸ ಹೊಸ ಉಡುಪುಗಳನ್ನು ತೊಟ್ಟು ನೆಂಟರಿಷ್ಟರೊಂದಿಗೆ ಸೇರಿ ದೇವಸ್ಥಾನಕ್ಕೆ ಹೋಗಿ ಬರುವ, ಪೂಜೆ ಮಾಡಿ ಸಂಭ್ರಮಿಸುವ ಚಟುವಟಿಕೆಗಳಿನ್ನೂ ನಿಂತಿಲ್ಲ. ಹೀಗಿದ್ದಾಗ, ಆಯಾ ಉಡುಪಿಗೆ ಹೋಲುವಂಥ ಭಿನ್ನ-ಭಿನ್ನವಾದ ಅಲಂಕಾರಿಕ ಆಭರಣಗಳನ್ನು ತೊಡುವುದು ಸಹಜ ತಾನೆ? ಈ ವರ್ಷ ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಆಗುತ್ತಿರುವ ಆಭರಣ, ದೀಪ ಅಥವಾ ಹಣತೆ ಆಕಾರದ ಕಿವಿಯೋಲೆಗಳು! 

ಆನ್‌ಲೈನಿನಲ್ಲಿ ಹೆಚ್ಚಿನ ಆಯ್ಕೆ
ನಿಮಗೆ ಪರಿಚಯವಿರುವ ಚಿನ್ನದ ಅಂಗಡಿಯಲ್ಲಿ ನಿಮಗೆ ಬೇಕಾದ ವಿನ್ಯಾಸದಂತೆ ಹಣತೆ ಆಕಾರದ ಕಿವಿಯೋಲೆ ಮಾಡಿಸಬಹುದು. ಇಲ್ಲವೇ ಆನ್‌ಲೈನ್‌ ಮೂಲಕ ದಿಯಾ ಶೇಫ್ಡ್ ಇಯರ್‌ ರಿಂಗ್ಸ್ ಆರ್ಡರ್‌ ಮಾಡಿ ಕೊಂಡುಕೊಳ್ಳಬಹುದು. ಅಂಗಡಿಯಿಂದ ಅಂಗಡಿಗೆ ಅಲೆದಾಡುವುದನ್ನು ತಪ್ಪಿಸಲು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಅಲ್ಲದೆ ಆನ್‌ಲೈನಿನಲ್ಲಿ ಕಸ್ಟಮೈಸ್ಡ್(ನಮಗೆ ಬೇಕಾದ ಹಾಗೆ ವಿನ್ಯಾಸಗೊಳಿಸಿದ) ಕಿವಿಯೋಲೆಗಳು ಲಭ್ಯ ಇರುವ ಕಾರಣ, ಹೆಚ್ಚಿನವರು ಅಲ್ಲಿಂದಲೇ ತರಿಸಿಕೊಳ್ಳುತ್ತಾರೆ. ದೀಪದ ಆಕಾರದ ಬುಗುಡಿ, ಓಲೆ, ಜುಮ್ಕಿ ಮತ್ತು ಚೈನ್‌ ಆನ್‌ಲೈನ್‌ನಲ್ಲಿ ಲಭ್ಯ. 

ಇವು ಹೊಳೆಯುತ್ತವೆ!
ಈ ಕಿವಿಯೋಲೆಗಳು, ಲಂಗ ದಾವಣಿ, ಉದ್ದ ಲಂಗ, ಚೂಡಿದಾರ್‌, ಸಲ್ವಾರ್‌ ಕಮೀಜ…, ಸೀರೆ- ರವಿಕೆ, ಕುರ್ತಿಯಂಥ  ಸಾಂಪ್ರದಾಯಿಕ ಉಡುಪುಗಳಿಗೆ ಚೆನ್ನಾಗಿ ಒಪ್ಪುತ್ತವೆ. ಪ್ರಯೋಗ ಮಾಡಲು ಧೈರ್ಯ ಇದ್ದವರು ಪಾಶ್ಚಾತ್ಯ ಉಡುಗೆ ಜೊತೆಯೂ ಇವುಗಳನ್ನು ತೊಟ್ಟು ನೋಡಬಹುದು. ಕೆಂಪು, ಪಚ್ಚೆ, ಹಳದಿ ಅಥವಾ ನೀಲಿ ಬಣ್ಣದ ಕಲ್ಲುಗಳನ್ನೂ ಇಂಥ ಕಿವಿಯೋಲೆಗಳಲ್ಲಿ ಬಳಸುತ್ತಾರೆ. ಮುತ್ತು, ರತ್ನ, ಬಣ್ಣ-ಬಣ್ಣದ ಜಾಜಿನ ತುಂಡು, ಪ್ಲಾಸ್ಟಿಕ್‌ ಆಕೃತಿಗಳನ್ನೂ ಆರ್ಟಿಫಿಷಿಯಲ್‌ (ಕೃತಕ) ಆಭರಣಗಳಲ್ಲಿ ಬಳಸುತ್ತಾರೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ವೈಟ್‌ ಮೆಟಲ…, ತಾಮ್ರ ಅಥವಾ ಕಂಚಿಗೆ ಹೋಲುವ ಲೋಹದಿಂದ ಇಂಥ ಕಿವಿಯೋಲೆಗಳನ್ನು ತಯಾರಿಸುತ್ತಾರೆ. ಕೃತಕ ಆಭರಣಗಳಲ್ಲಿ ಪ್ಲಾಸ್ಟಿಕ್‌, ಕಾರ್ಡ್‌ಬೋರ್ಡ್‌, ಮರದ ತುಂಡು, ಗಾಜಿನ ಚೂರು ಅಥವಾ ಮಣ್ಣಿನಿಂದ ತಯಾರಿಸಿ ಅವುಗಳ ಮೇಲೆ ಲೋಹದಂತೆ ಕಾಣುವ ಬಣ್ಣ ಬಳಿಯುತ್ತಾರೆ. ಬಣ್ಣದ ದಾರ, ಗೆಜ್ಜೆ, ಬಳೆಯ ಚೂರುಗಳಿಂದಲೂ ಕಿವಿಯೋಲೆಗಳನ್ನು ನಾವೇ ಸ್ವತಃ ಮಾಡಬಹುದು. ಇದಕ್ಕೆ ಸಂಬಂಧಿಸದ ಅದೆಷ್ಟೋ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಲಭ್ಯ ಇವೆ. ಇಂಥ ಕಿವಿಯೋಲೆಗಳಲ್ಲಿ ವಿಕಿರಣಶೀಲ ಲೋಹ ಧಾತು ರೇಡಿಯಂ(ಕತ್ತಲಿನಲ್ಲಿ ಹೊಳೆಯುವಂಥ ವಸ್ತು) ಮತ್ತು ಎಲ್.ಇ.ಡಿ ಲೈಟ್‌ಗಳನ್ನೂ ಬಳಸುತ್ತಾರೆ ಜೋಕೇ! 

ಕಿವಿಯೋಲೆಯ ಸೆಲ್ಫಿ
ಪ್ರತಿ ಉಡುಗೆಗೊಂದು ಕಿವಿಯೋಲೆ ತೊಟ್ಟರೆ ಹೇಗಿರುತ್ತದೆ? ಚೆಂದ ಅಲ್ವಾ? ಪ್ರತಿ ಹೊಸ ದಿರಿಸಿಗೆ ಹೋಲುವಂಥ ಬಗೆಬಗೆಯ ಬಣ್ಣ ಮತ್ತು ವಿನ್ಯಾಸಗಳ ದೀಪಾಕಾರದ ಕಿವಿಯೋಲೆ ಕೊಂಡುಕೊಳ್ಳಲು ಇಂದೇ ಹೊರಡಿ! ಹೊಸ ಬಗೆಯ ಕಿವಿಯೋಲೆ ತೊಟ್ಟು, ಎಲ್ಲರ ಗಮನ ನಿಮ್ಮತ್ತ ಬೀಳುವಂತೆ ಮಾಡಿ. 

ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.