Udayavni Special

ಮದರ್‌ ಇಂಡಿಯಾ; 14 ವರ್ಷದ ಮಗನನ್ನು ಎತ್ತಿಕೊಂಡೇ ಹೋಗ್ತಿದ್ದ ತಾಯಿ…

ತಾಯಿಗೆ ಮಗನು ಭಾರವೆ?

Team Udayavani, Dec 11, 2019, 6:15 AM IST

ds-2

ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿಯಲ್ಲಿ ಇದ್ದಾಳೆ. ಹದಿನಾಲ್ಕು ವರ್ಷದ ವಿಕಲಚೇತನ ಮಗನನ್ನು ದಿನವೂ ಶಾಲೆಗೆ ಹೊತ್ತು ಸಾಗುವ ಆಕೆಯನ್ನು ದೇವತೆ ಎನ್ನದೆ ಬೇರೆ ಏನೆಂದು ಕರೆಯಬಹುದು?

ರಾಮಾಯಣದ ಶ್ರವಣಕುಮಾರನನ್ನು ನೆನಪಿಸುವ ಈ ತಾಯಿಯ ಹೆಸರು ಜಯಲಕ್ಷ್ಮಿ. ಅಪ್ಪಟ ಅನಕ್ಷರಸ್ಥ, ಹಳ್ಳಿ ಹೆಂಗಸು. ಗಂಡನ ಸಾವಿನ ನಂತರ, ಮೂರು ಮಕ್ಕಳಿರುವ ಕುಟುಂಬದ ಏಕೈಕ ಆಧಾರ ಸ್ತಂಭ. ಅದರಲ್ಲೂ ಹಿರಿಯ ಮಗ, 14 ವರ್ಷದ ರಾಜೇಶ್‌ ಬಾಬು ವಿಕಲಚೇತನ. ಆತನ ಎರಡೂ ಕಾಲುಗಳಲ್ಲಿ ಸ್ವಾಧೀನವಿಲ್ಲ. ತಾನೂ ಎಲ್ಲರಂತೆ ಓದಬೇಕು, ವಿದ್ಯಾವಂತನಾಗಬೇಕು ಎಂದು ಕನಸು ಕಾಣುತ್ತಿರುವ ರಾಜೇಶ್‌ಗೆ ಬೆನ್ನೆಲುಬಾಗಿ ನಿಂತಿರುವ ಅಮ್ಮ, ಅವನನ್ನು ಪ್ರತಿನಿತ್ಯ 8 ಕಿ.ಮೀ. ಹೆಗಲ ಮೇಲೆ ಹೊತ್ತೂಯ್ದು ಶಾಲೆ ಕಲಿಸುತ್ತಿದ್ದಾರೆ.

ಕಾಲುಗಳ ಸ್ವಾಧೀನ ತಪ್ಪಿತು
ಎಲ್ಲ ಮಕ್ಕಳಂತೆ ಕುಣಿದು, ಜಿಗಿದು ನಲಿಯುತ್ತಿದ್ದ ರಾಜೇಶ್‌ಗೆ 10ನೇ ವಯಸ್ಸಿನಲ್ಲಿ ಎರಡೂ ಕಾಲುಗಳ ಸ್ವಾಧೀನ ತಪ್ಪಿದವು. ಮಗನ ಸ್ಥಿತಿ ಕಂಡು ಮರುಗಿದ ಹೆತ್ತವರು, ಮಗನನ್ನ ಎತ್ತಿಕೊಂಡು ಹತ್ತಾರು ಆಸ್ಪತ್ರೆ, ದೇವಸ್ಥಾನಗಳನ್ನು ಸುತ್ತಿದರು. ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಹೀಗಿರುವಾಗ, ತಂದೆಯೂ ತೀರಿಕೊಂಡರು. ಅಮ್ಮನ ಸಹಾಯದಿಂದ ರಂಗವ್ವನಹಳ್ಳಿಯಲ್ಲೇ ಇದ್ದ ಶಾಲೆಯಲ್ಲಿ ರಾಜೇಶ್‌ 7ನೇ ತರಗತಿ ಮುಗಿಸಿದ.

ನಿಂಗೆ ನಾನಂದ್ರೆ ಇಷ್ಟ ಇಲ್ವಾ?
ಆ ಊರಿನಲ್ಲಿ ಪ್ರೌಢಶಾಲೆ ಇರಲಿಲ್ಲ. ಅವನನ್ನು ದೂರದ ಶಾಲೆಗೆ ಕರೆದೊಯ್ಯುವುದು ಕಷ್ಟ ಎನ್ನಿಸಿದಾಗ ಜಯಲಕ್ಷ್ಮಿ, ಇಷ್ಟು ಓದಿದ್ದು ಸಾಕು, ಇನ್ಮುಂದೆ ಮನೆಯಲ್ಲಿಯೇ ಇರು ಎಂದುಬಿಟ್ಟರು. ಆಗ ರಾಜೇಶ್‌- “ಅಮ್ಮಾ, ನಿಂಗೆ ನಾನಂದ್ರೆ ಇಷ್ಟ ಇಲ್ಲ ಅಲ್ವಾ? ನಿಂಗೆ ಅವರಿಬ್ಬರ ಮೇಲೆ ಮಾತ್ರ ಪ್ರೀತಿ. ಅದಕ್ಕೇ ನೀನು ನನ್ನನ್ನು ಶಾಲೆಗೆ ಕಳಿಸುತ್ತಿಲ್ಲ’ ಎಂದು ಗಲಾಟೆ ಮಾಡಿದ. ಶಾಲೆಗೆ ಹೋಗಲೇಬೇಕು ಅಂತ ಹಠ ಹಿಡಿದು, ಊಟ ಬಿಟ್ಟ.

ಹೊತ್ತುಕೊಂಡೇ ಸಾಗಿದರು
ಸರಿ, ಎಷ್ಟು ಕಷ್ಟವಾದರೂ ಮಗನನ್ನು ಓದಿಸಲೇಬೇಕು ಅಂತ ನಿರ್ಧರಿಸಿದ ಜಯಲಕ್ಷ್ಮಿ, ನಾಲ್ಕು ಕಿ.ಮೀ. ದೂರದ ರಾಣಿಕೆರೆ ಶಾಲೆಗೆ ರಾಜೇಶನನ್ನು ಸೇರಿಸಿದರು. ಹುಡುಗನಿಗೆ ಮೂರು ಚಕ್ರದ ಸೈಕಲ್‌, ಹಾಸ್ಟೆಲ್‌ನಲ್ಲಿ ಸೀಟ್‌ ಕೂಡಾ ಸಿಕ್ಕಿತು. ಆದರೆ, ಸೈಕಲ್‌ ತಿರುಗಿಸಿ ಶಾಲೆಗೆ ಹೋಗುವಷ್ಟು ತ್ರಾಣ ಅವನಲ್ಲಿ ಇರಲಿಲ್ಲ. ಹಾಸ್ಟೆಲ್‌ನಲ್ಲಿ ಬದುಕುವುದು ಕೂಡಾ ಆ ಚಿಕ್ಕ ಹುಡುಗನಿಗೆ ಕಷ್ಟವೇ. ಇನ್ನು, ರಂಗವ್ವನಹಳ್ಳಿಯಿಂದ ಶಾಲೆಗೆ ಸಾರಿಗೆ ಸೌಕರ್ಯವೂ ಸರಿ ಇರಲಿಲ್ಲ. ಹಾಗಾಗಿ, ಮಗನನ್ನು ಪ್ರತಿ ದಿನ ಹೆಗಲ ಮೇಲೆ ಹೊತ್ತೂಯ್ದು ಶಾಲೆ ತಲುಪಿಸತೊಡಗಿದರು ಜಯಲಕ್ಷ್ಮಿ.

ದಿನಕ್ಕೆ ಎಂಟು ಕಿ.ಮೀ.
14 ವರ್ಷದ ಮಗನನ್ನು, ಅವನ ಚೀಲವನ್ನು ಹೊತ್ತುಕೊಂಡು ಬೆಳಗ್ಗೆ ನಾಲ್ಕು ಕಿ.ಮೀ. ನಡೆಯುತ್ತಿದ್ದ ಜಯಲಕ್ಷ್ಮಿ, ಮಗನನ್ನು ಶಾಲೆಯ ಒಳಗೆ ಕೂರಿಸಿ, ಶಾಲೆಗೆ ಸಮೀಪವಿದ್ದ ಮರದ ಕೆಳಗೆ ಕುಳಿತು ದಿನ ಕಳೆಯುತ್ತಿದ್ದರು. ಸಂಜೆ ಮತ್ತೆ ನಾಲ್ಕು ಕಿ.ಮೀ. ನಡೆದು ವಾಪಸ್‌ ಬರುತ್ತಿದ್ದರು. ಈ ಪಾದಯಾತ್ರೆ ಆರು ತಿಂಗಳು ನಡೆದಿದೆ!

ಸರ್ಕಾರಿ ಕೆಲಸ ಸಿಕ್ಕರೆ…
ರಾಜೇಶ್‌ ಬಾಬುವಿನ ಶ್ರವಣ ಶಕ್ತಿಯೂ ಕೊಂಚ ಮಂದವಾಗಿದೆ. ಶಿಕ್ಷಕರು ಮಾಡುವ ಪಾಠವನ್ನು ಅಂದಾಜಿನಲ್ಲಿ ಕೇಳಿಸಿಕೊಂಡು, ಸ್ವಪ್ರಯತ್ನದಿಂದ ಓದಿ, ಪರೀಕ್ಷೆಯಲ್ಲಿ ಅಂಕ ಗಳಿಸುತ್ತಿದ್ದಾನೆ. ಮಗನಿಗೆ ಯಾವುದಾದರೂ ಒಂದು ಸರ್ಕಾರಿ ಕೆಲಸ ಸಿಕ್ಕಿದರೆ ಸಾಕು ಅಂತ ತಾಯಿ ಆಸೆಪಟ್ಟರೆ, ಮಗರಾಯ, “ಅಮ್ಮಾ, ನಾನು ಚೆನ್ನಾಗಿ ಓದಿ ಕೆಲಸ ಹಿಡಿದು, ನಿನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ’ ಎಂದು ಆಕೆಯಲ್ಲಿ ತೃಪ್ತಿಯ ನಗು ಮೂಡಿಸುತ್ತಾನಂತೆ.

ಊಟ ಬೇಡ ಅಂತಿದ್ದ
ಅಮ್ಮ ದಿನವೂ ನನ್ನನ್ನು ಹೊತ್ತು ಓಡಾಡುತ್ತಿದ್ದಾಳೆ. ನಾನು ಚೆನ್ನಾಗಿ ಊಟ ಮಾಡಿ, ತೂಕ ಹೆಚ್ಚಿದರೆ ಅಮ್ಮನಿಗೆ ಕಷ್ಟವಾಗುತ್ತದೆ ಎಂದು ರಾಜೇಶ್‌, ಹಗಲು ಹೊತ್ತಿನಲ್ಲಿ ಊಟ ಬೇಡ ಅನ್ನುತ್ತಿದ್ದನಂತೆ! ಬೆಳಗ್ಗೆ ಮತ್ತು ಮಧ್ಯಾಹ್ನ ಟೀ. ಬಿಸ್ಕೆಟ್‌ ಅಷ್ಟೇ ತಿನ್ನುತ್ತಿದ್ದ. ರಾತ್ರಿ ಮಾತ್ರ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದನಂತೆ. ಮಗನ ಭಾರದ ಜತೆಗೆ ಪುಸ್ತಕಗಳ ಚೀಲ, ನೀರಿನ ಬಾಟಲಿ ಕೂಡಾ ಇರುತ್ತಿದ್ದುದರಿಂದ ಅಮ್ಮನಿಗೆ ಮತ್ತೂ ಕಷ್ಟವಾಗುತ್ತಿತ್ತು. ಹಾಗಾಗಿ, ಕೆಲವು ಪುಸ್ತಕಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದ ರಾಜೇಶ್‌, ನೀರಿನ ಬಾಟಲಿಯೂ ಬೇಡ ಅನ್ನುತ್ತಿದ್ದ.

ಇಲಾಖೆಯಿಂದ ಆಟೋ ವ್ಯವಸ್ಥೆ
ತಾಯಿ-ಮಗನ ಕಷ್ಟಕ್ಕೆ ಈಗ ಶಿಕ್ಷಣ ಇಲಾಖೆ ಸ್ಪಂದಿಸಿದೆ. ಬಾಲಕನನ್ನು ನಿತ್ಯವೂ ಶಾಲೆಗೆ ಕರೆದೊಯ್ಯಲು ಹಾಗೂ ಮನೆಗೆ ವಾಪಸ್‌ ಬಿಡಲು ಆಟೋ ವ್ಯವಸ್ಥೆ ಮಾಡಲಾಗಿದೆ. ಇನ್ಮುಂದೆ, ಸ್ಕೂಲ್‌ ಬ್ಯಾಗ್‌ನಲ್ಲಿ ಎಲ್ಲ ಪುಸ್ತಕ ಇಟ್ಟು, ನೀರಿನ ಬಾಟಲಿಯನ್ನೂ ಇಡಬಹುದು ಎನ್ನುವುದು ತಾಯಿ ಜಯಲಕ್ಷಿ¾ಯ ಸಂತಸ.

ರಂಗವ್ವನಹಳ್ಳಿಯ ಜಯಲಕ್ಷ್ಮಿ ಅವರಿಗೆ ಪಗಲಬಂಡೆಯ ವೀರಣ್ಣ ಅವರೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಮೂವರು ಮಕ್ಕಳು. ರಾಜೇಶ್‌ ಬಾಬು, ಸತೀಶ್‌ ಬಾಬು, ಶಂಕರ ವಿಜಯ ಎಂಬ ಹೆಸರಿನ ಅವರಿಗೆ ಕ್ರಮವಾಗಿ 14, 12, 10 ವರ್ಷ. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ವೀರಣ್ಣ, ಮೂರೂವರೆ ವರ್ಷದ ಹಿಂದೆ ಕಿಡ್ನಿ ಸಮಸ್ಯೆಯಿಂದ ನಿಧನರಾದರು. ಸ್ವಂತ ಮನೆ, ಜಮೀನು, ಎರಡೂ ಇಲ್ಲದ ಕಾರಣ, ಮಕ್ಕಳನ್ನು ಕಟ್ಟಿಕೊಂಡು ಜಯಲಕ್ಷ್ಮಿ ತವರಿಗೆ ವಾಪಸ್‌ ಬರಬೇಕಾಯ್ತು. ಕೂಲಿ ಮಾಡಿಕೊಂಡು ಬದುಕಲು ನಿರ್ಧರಿಸಿದರು.

-ತಿಪ್ಪೇಸ್ವಾಮಿ ನಾಕೀಕೆರೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

pineapple–750

ಸಿಹಿಗೂ ಸೈ, ಸಾಂಬಾರಿಗೂ ಜೈ; ಇದು ಪೈನಾಪಲ್ ಪಾಕ ಲೋಕ!

Covid

ರಷ್ಯಾದ Covid-19 ಲಸಿಕೆ ಫೇಕ್ ? ಸುರಕ್ಷೆಯ ಕುರಿತು ಬಹುದೊಡ್ಡ ಪ್ರಶ್ನೆ

ಕರುಣ್‌ ನಾಯರ್‌ಗೆ ಕೋವಿಡ್; ಚೇತರಿಕೆಯ ಬಳಿಕ ಹಬ್ಬಿದ ಸುದ್ದಿ

ಕರುಣ್‌ ನಾಯರ್‌ಗೆ ಕೋವಿಡ್; ಚೇತರಿಕೆಯ ಬಳಿಕ ಹಬ್ಬಿದ ಸುದ್ದಿ

ಕಲ್ಪನಾ ಚಾವ್ಲಾ – ಉಪಾಸನಾ ; ಕೃಷ್ಣಾ – ಮಂಜು ಶರ್ಮಾ: ಏನಿದು ಪುನರ್ಜನ್ಮದ ರೋಚಕ ವೃತ್ತಾಂತ!?

ಕಲ್ಪನಾ ಚಾವ್ಲಾ – ಉಪಾಸನಾ ; ಕೃಷ್ಣಾ – ಮಂಜು ಶರ್ಮಾ: ಏನಿದು ಪುನರ್ಜನ್ಮದ ರೋಚಕ ವೃತ್ತಾಂತ!?

ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

china 1

ಬ್ರೆಜಿಲ್‌ನ ಕೋಳಿಯಿಂದ ಕೊರೊನಾ ಬಂತು ಎಂದ ಚೀನ

facebook-lite

ಜನಪ್ರಿಯ ಫೇಸ್‍ಬುಕ್‍ ಲೈಟ್ ಇನ್ಮುಂದೆ ಆ್ಯಪಲ್ ಸ್ಟೊರ್ ನಲ್ಲಿ ಲಭ್ಯವಿರುವುದಿಲ್ಲ:ಕಾರಣವೇನು ?
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಪೀಕಿಂಗ್ ಸ್ತ್ರೀ :  ಭಗವಂತನನ್ನು ನೋಡುವುದು ಹೇಗೆ?

ಸ್ಪೀಕಿಂಗ್ ಸ್ತ್ರೀ : ಭಗವಂತನನ್ನು ನೋಡುವುದು ಹೇಗೆ?

ಹಲಸು ತಿಂದು ಹೆದರಿಬಿಟ್ಟೆ..

ಹಲಸು ತಿಂದು ಹೆದರಿಬಿಟ್ಟೆ..

ಖಾಲಿ ಬೆಂಚೂ ಕಳೆದ ನಗುವೂ…

ಖಾಲಿ ಬೆಂಚೂ ಕಳೆದ ನಗುವೂ…

avalu-tdy-1

ಅವಳಿಗೆ ಪ್ರೀತಿಯ ಬಡಿಸಿ

ಶ್ರಾವಣ ಬಂದರೂ ಸಂಭ್ರಮವಿಲ್ಲ…

ಶ್ರಾವಣ ಬಂದರೂ ಸಂಭ್ರಮವಿಲ್ಲ…

MUST WATCH

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೆಗಡೆ ಹೇಳಿಕೆ ವಿರೋಧಿಸಿ BSNL Employ Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆಹೊಸ ಸೇರ್ಪಡೆ

pineapple–750

ಸಿಹಿಗೂ ಸೈ, ಸಾಂಬಾರಿಗೂ ಜೈ; ಇದು ಪೈನಾಪಲ್ ಪಾಕ ಲೋಕ!

Covid

ರಷ್ಯಾದ Covid-19 ಲಸಿಕೆ ಫೇಕ್ ? ಸುರಕ್ಷೆಯ ಕುರಿತು ಬಹುದೊಡ್ಡ ಪ್ರಶ್ನೆ

ಕರುಣ್‌ ನಾಯರ್‌ಗೆ ಕೋವಿಡ್; ಚೇತರಿಕೆಯ ಬಳಿಕ ಹಬ್ಬಿದ ಸುದ್ದಿ

ಕರುಣ್‌ ನಾಯರ್‌ಗೆ ಕೋವಿಡ್; ಚೇತರಿಕೆಯ ಬಳಿಕ ಹಬ್ಬಿದ ಸುದ್ದಿ

ಕಲ್ಪನಾ ಚಾವ್ಲಾ – ಉಪಾಸನಾ ; ಕೃಷ್ಣಾ – ಮಂಜು ಶರ್ಮಾ: ಏನಿದು ಪುನರ್ಜನ್ಮದ ರೋಚಕ ವೃತ್ತಾಂತ!?

ಕಲ್ಪನಾ ಚಾವ್ಲಾ – ಉಪಾಸನಾ ; ಕೃಷ್ಣಾ – ಮಂಜು ಶರ್ಮಾ: ಏನಿದು ಪುನರ್ಜನ್ಮದ ರೋಚಕ ವೃತ್ತಾಂತ!?

ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.