ಬರೆದೆ ನಾನು ನನ್ನ ಹೆಸರ…

ಲೈಫಿನ ಪುಟಗಳನ್ನು ತೆರೆದಿಟ್ಟ ಪ್ರಿಯಾಂಕಾ

Team Udayavani, Jun 12, 2019, 5:50 AM IST

ನಾನು ನನಗಿಂತ ಹತ್ತು ವರ್ಷ ಚಿಕ್ಕವನಾದ ನಿಕ್‌ನನ್ನು ಮದುವೆಯಾದಾಗ ಹಲವರಿಗೆ ಆ ವಿಚಾರವನ್ನು ಅರಗಿಸಿಕೊಳ್ಳಲಾಗಿರಲಿಲ್ಲ. ಪುರುಷರು ತಮಗಿಂತ ಅದೆಷ್ಟು ವರ್ಷ ಕಿರಿಯ ಮಹಿಳೆಯನ್ನು ಮದುವೆಯಾಗಬಹುದಂತೆ, ಆದರೆ ಒಬ್ಬಳು ಹೆಣ್ಣು ಮಗಳು ತನಗಿಂತ ಕಿರಿಯ ಪುರುಷನನ್ನು ಮದುವೆಯಾಗುವುದು ಅಸಹಜವಂತೆ. ಅದಲ್ಲದೆ ನನ್ನ ಮದುವೆ ಇನ್ನೊಂದು ವಿವಾದಕ್ಕೆ ಕಾರಣವಾಗಿತ್ತು. ಮದುವೆ ಸಮಾರಂಭದ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಶೇರ್‌ ಮಾಡಿದಾಗ ಹಲವರು- “ಮದುವೆ ಒಂದು ಖಾಸಗಿ ಸಮಾರಂಭ. ಅದರ ಫೋಟೋಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡು ಅದನ್ನೂ ಜಾಹೀರಾತಿನಂತೆ ಬಳಸಿಕೊಳ್ಳುವುದು ಸರಿಯಲ್ಲ’ ಎಂದು ವ್ಯಂಗ್ಯ ಮಾಡಿದ್ದರು.

ಒಂದು ನಿಮಿಷ ತಾಳಿ… ಎಷ್ಟೇ ದೊಡ್ಡ ನಟಿಯಾಗಿದ್ದರೂ, ಸೆಲೆಬ್ರಿಟಿಯಾಗಿದ್ದರೂ ನಾನೊಬ್ಬಳು ಹೆಣ್ಣುಮಗಳು. ಎಲ್ಲಾ ಹೆಣ್ಮಕ್ಕಳಂತೆ ವೈಭವಯುತವಾಗಿ ಮದುವೆಯಾಗಬೇಕು, ನನ್ನ ಮದುವೆಯನ್ನು ಊರವರೆಲ್ಲರೂ ನೋಡಬೇಕು ಎನ್ನುವ ಆಸೆ ನನಗೂ ಇರುತ್ತದೆ. ಆ ಸ್ಥಾನದಿಂದ ನೋಡಬೇಕೆ ಹೊರತು ಮೊಸರಲ್ಲೂ ಕಲ್ಲು ಹುಡುಕುವುದಕ್ಕೆ ಹೋಗಬಾರದು. ನಾನು ಯಾವಾಗ ಈ ಕ್ಷೇತ್ರಕ್ಕೆ ಕಾಲಿಟ್ಟೆನೋ ಆ ದಿನವೇ ಖಾಸಗಿ ಬದುಕಿಗೆ ಅರ್ಧಕ್ಕರ್ಧ ತಿಲಾಂಜಲಿ ಇಟ್ಟೆ. ಹಾಗಿದ್ದೂ ನಾನು ನನ್ನ ವೈಯಕ್ತಿಕ ಬದುಕಿನ ಎಲ್ಲಾ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ನನ್ನ ಕುರಿತ ಅನೇಕ ವಿಚಾರಗಳು ಹೊರಜಗತ್ತಿಗೆ ತಿಳಿದಿಲ್ಲ.

ನನ್ನ ಜೀವನದ ಏಕೈಕ ಗುರಿ ಎಂದರೆ ಪ್ರಪಂಚದಲ್ಲಿ ಚೂರಾದರೂ ಬದಲಾವಣೆ ತರುವಂಥ ಕೆಲಸವನ್ನೇನಾದರೂ ಮಾಡಬೇಕು ಎನ್ನುವುದು. ಮುಂದೆ ನನಗೆ ಮಕ್ಕಳಾದಾಗ ಅವರು ಹೆಮ್ಮೆಯಿಂದ “ಹಾಗಿದ್ದರು ನಮ್ಮಮ್ಮ’ ಎಂದು ಎದೆ ತಟ್ಟಿಕೊಂಡು ಹೇಳಬೇಕು. ನನಗೆ ಭಾರತದ ಪ್ರಧಾನಮಂತ್ರಿ ಹುದ್ದೆಗೆ ಸ್ಪರ್ಧಿಸಬೇಕೆಂಬ ಕನಸಿದೆ. ಪತಿ ನಿಕ್‌, ಅಮೆರಿಕದ ಅಧ್ಯಕ್ಷ ಗಾದಿಗೆ ಸ್ಪರ್ಧಿಸಬೇಕೆಂಬ ಬಯಕೆ ಇಟ್ಟುಕೊಂಡಿರುವೆ. ನನಗೆ ರಾಜಕಾರಣದ ಲಾಬಿಗಳೆಲ್ಲ ಹಿಡಿಸುವುದಿಲ್ಲ, ಆದರೆ, ಪ್ರಪಂಚದಲ್ಲಿ ಏನಾದರೂ ಬದಲಾವಣೆ ತರುವ ನನ್ನ ಇಚ್ಛೆ ಇದರಿಂದ ಈಡೇರುತ್ತದೆ ಎನ್ನುವುದಾದರೆ ಯಾಕೆ ನಿಲ್ಲಬಾರದು!?

ಸದ್ಯ ಅಧ್ಯಾತ್ಮ ಗುರು ಓಶೋ ರಜನೀಶ್‌ ಅವರ ಜೀವನಾಧಾರಿತ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಬರೆಯಲು ಶುರುಮಾಡಿರುವ ಆತ್ಮಚರಿತ್ರೆ “ಅನ್‌ಫಿನಿಶ್‌’ ಇನ್ನೇನು ಮುಗಿಸಲಿದ್ದೇನೆ. ನಾನು ಭಾರತದ ಜೊತೆಗಿನ ಸಂಬಂಧವನ್ನು ಎಂದೂ ಕಡಿದುಕೊಂಡಿಲ್ಲ. ನನಗೆ ಬ್ರೇಕ್‌ ನೀಡಿದ ಬಾಲಿವುಡ್‌ಅನ್ನೂ ಮರೆತಿಲ್ಲ. ನನ್ನ ಚಿತ್ರ ನಿರ್ಮಾಣ ಸಂಸ್ಥೆ “ಪರ್ಪಲ್‌ ಪೆಬಲ್‌’ನಿಂದ ಬಾಲಿವುಡ್‌ ಸಿನಿಮಾಗಳನ್ನು ತಯಾರಿಸುತ್ತಲೇ ಇದ್ದೇನೆ. ಅದರ ಜವಾಬ್ದಾರಿಯನ್ನು ಅಮ್ಮ ಹೊತ್ತುಕೊಂಡಿದ್ದಾರೆ. ಈಗಲೂ ನನಗೆ ಸಂದಿಗ್ಧತೆ ಎದುರಾದಾಗ, ಇಲ್ಲಾ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿ ಬಂದಾಗ ಮೊದಲು ನೆನಪಾಗುವವಳೇ ಅಮ್ಮ.

ಅವಳಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಉದಾಹರಣೆಗೆ ನನ್ನ ಡ್ರೆಸ್‌ ಸೆನ್ಸ್‌ಗೆ ಆಕೆಯೇ ಸ್ಫೂರ್ತಿ. ನನಗೆ ಸೀರೆ ಎಂದರೆ ಇಷ್ಟ. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಂಡುಬರುವ ಹೊಳೆಯುವ ವೈಭವಯುತವಾದ ಸೀರೆಗಳಲ್ಲ. ನೋಡಲು ಸರಳವಾದ ಫ್ರೆಂಚ್‌ ಶಿಫಾನ್‌ ಸೀರೆಗಳು. ವೈದ್ಯಳಾದ ಅಮ್ಮ ಆಸ್ಪತ್ರೆಗೆ ಹಣೆ ಮೇಲೆ ಬಿಂದಿ ಇಟ್ಟು, ಆ ಸೀರೆಯನ್ನು ಉಟ್ಟುಕೊಂಡು ಹೋಗುತ್ತಿದ್ದಾಗ ನೋಡುತ್ತಿದ್ದೆ. ನಾನು ನೋಡಿದ ಮೊದಲ ಆಧುನಿಕ ಮಹಿಳೆ ನಮ್ಮಮ್ಮ.

ಹಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು ನನ್ನ ಬದುಕಿನ ಟರ್ನಿಂಗ್‌ ಪಾಯಿಂಟ್‌. ಇಲ್ಲಿ ನನ್ನನ್ನು ನನ್ನ ಮೈ ಬಣ್ಣದಿಂದ ಗುರುತಿಸುವಂತಾಗಬಾರದು ಎನ್ನುವ ಎಚ್ಚರಿಕೆ ನನಗಿದೆ. ನನ್ನ ಪ್ರತಿಭೆ ನೋಡಿ ಸಿನಿಮಾಗಳಲ್ಲಿ ಪಾತ್ರ ಕೊಡಬೇಕು. ಆ ನಿಟ್ಟಿನಲ್ಲಿ ಹಾಲಿವುಡ್‌ ಇನ್ನೂ ವಿಶಾಲ ಮನೋಭಾವವನ್ನು ತೋರಬೇಕಿದೆ. ಭಾರತ ಮಾತ್ರವಲ್ಲ, ಜಗತ್ತಿನೆಲ್ಲೆಡೆ ಇರುವ ಪ್ರತಿಭಾನ್ವಿತ ಕಲಾವಿದರಿಗೆ ಹಾಲಿವುಡ್‌ನ‌ಲ್ಲಿ ಅವಕಾಶ ಸಿಗಬೇಕು. ಅದಕ್ಕಾಗಿ ನನ್ನ ಪ್ರಯತ್ನ ಮುಂದುವರಿದೇ ಇರುತ್ತದೆ.

ಭಾವಾನುವಾದ:
– ಹರ್ಷವರ್ಧನ್‌ ಸುಳ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಇತ್ತೀಚಿನ ದಿನಗಳಲ್ಲಿ ಸ್ತ್ರೀಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಪಿ.ಸಿ.ಓ.ಎಸ್‌, ಪಿ.ಸಿ.ಓ.ಡಿ. ರೋಗ ಲಕ್ಷಣಗಳು ಗೋಚರಿಸುತ್ತಿದ್ದರೂ ಅನೇಕರು ಅದನ್ನು ಗುರುತಿಸಿ,...

  • ಹಳ್ಳಿ ಮನೆಯ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡಲು ತುಳಸಿಯಂತೆಯೇ ಕಾಣುವ ಸಸ್ಯ ಕಾಮಕಸ್ತೂರಿ. ಸುಗಂಧಭರಿತವಾಗಿರುವ ಇದರ ಎಲೆಗಳನ್ನು ದೇವರ ಪೂಜೆಗೆ,...

  • "ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ "ಅವರು' ಅನಬಾರದು, "ಇವರು'...

  • ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. "ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ...

ಹೊಸ ಸೇರ್ಪಡೆ