ಕಾಲೇಜಿನ ಮೊದಲ ದಿನ, ಖುಷಿ-ಭಯ-ತಲ್ಲಣ! 


Team Udayavani, May 11, 2018, 7:20 AM IST

3.jpg

ಮೊದಲ ಮಳೆ, ಮೊದಲ ಪ್ರೀತಿ, ಮೊದಲ ನೋಟ- ಹೀಗೆ ಹಲವು ಸಿಹಿ ಮೊದಲುಗಳ ಸಾಲಿಗೆ ಮೊದಲನೇ ದಿನ ಕಾಲೇಜಿಗೆ ಹೋಗುವ ಕ್ಷಣವೂ ಸೇರುತ್ತದೆ. ಈ ಮೊದಲುಗಳೇ ಹೀಗೆ, ಅದು ಸಿಹಿಯಾಗಿರಲಿ, ಕಹಿಯಾಗಿರಲಿ ನೆನಪಿನಲ್ಲಿ ಹಾಗೆ ಉಳಿದುಬಿಡುತ್ತವೆ, ಕಾಡುತ್ತಿರುತ್ತವೆ. ಅದೆಷ್ಟು ಹುಡುಗ-ಹುಡುಗಿಯರು ಕಾಲೇಜಿನ ಕನಸನ್ನು ಕಣ್ಣಲ್ಲಿಟ್ಟುಕೊಂಡು ಎಸ್ಸೆಸ್ಸೆಲ್ಸಿ ಮುಗಿಸಿಬಿಟ್ಟಿದ್ದಾರೆ. ಕಾಲೇಜ್ ಕಡೆ ಅದೇನೊ ಸೆಳೆತ. ಸದಾ ಶಿಸ್ತು ಅಂತ ಗದರಿಸುವ ಸ್ಕೂಲ… ಅವರಿಗೆ ಈಗಾಗಲೇ ಬೇಜಾರು. ನಾವು ಬೆಳೆದಿದ್ದೇವೆ ಅನ್ನುವುದು ಕೂಡ ಈಗ ಅವರಿಗೆ ಅರಿವಿಗೆ ಬಂದಿದೆ. ಅವರ ಮನಸ್ಸಿನಲ್ಲಿ ಕಾಲೇಜಿನ ಕಲ್ಪನೆಯನ್ನು ಸಿನೆಮಾಗಳು ಆದಷ್ಟೂ ಅದ್ದೂರಿಯಾಗಿಯೇ ಕಟ್ಟಿಬಿಟ್ಟಿವೆ. ಸಾಲದು ಎಂಬಂತೆ ಅವರ ಅಣ್ಣಂದಿರು, ಅಕ್ಕಂದಿರು ಆಗಾಗ್ಗೆ ಹೇಳುವ ಕಾಲೇಜಿನ ರೋಚಕ ಕ್ಷಣಗಳು ಅವರನ್ನು ಪುಳಕಿತರನ್ನಾಗಿಸುತ್ತವೆ. ಹೇಳಿ ಕೇಳಿ ಇದು ಯೌವ್ವನದ ಕಾಲ.  ತಮ್ಮ ಜೊತೆಗಾರರನ್ನು ಹುಡುಕಿಕೊಳ್ಳುವ ಆಸೆಯಲ್ಲಿರುತ್ತಾರೆ. ಆ ಕಡೆ ಅವರಿಗೇ ಗೊತ್ತಾಗದಂಥ ಅದೆಂಥದೋ ಒಂದು ಸೆಳೆತ ಅವರಲ್ಲಿ ಮನೆ ಮಾಡಿರುತ್ತದೆ. 

ಅಪ್ಪನೋ, ಅಮ್ಮನೋ ಒಂದು ವಾರದಿಂದ, “ನೀನು ಕಾಲೇಜಿನಲ್ಲಿ ಹೀಗಿರಬೇಕು, ಹಾಗಿರಬೇಕು…’ ಅಂತ ಅದೆಷ್ಟು ಕ್ಲಾಸ್‌ ತಗೆದುಕೊಂಡಿರುತ್ತಾರೆ. ಅದಕ್ಕೆಲ್ಲ ಇವರು ಸುಮ್ಮನೆ ತಲೆ ಅಲ್ಲಾಡಿಸಿರುತ್ತಾರೆ. ಕಾಲೇಜಿಗೆ ಅಂತ ಕಳುಹಿಸುವ ಪೋಷಕರ ಮನಸ್ಸಿನಲ್ಲಿ ಅದೆಂಥ¨ªೋ ದುಗುಡ. ನನ್ನ ಮಗ, ಮಗಳು ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡುಬಿಟ್ಟರೆ ! ಕಾಲೇಜಿನ ದಿನಗಳು ಮುಗಿಯುವವರೆಗೂ ಉಸಿರು ಬಿಗಿಹಿಡಿದು ಬದುಕುತ್ತಾರೆ. 

ಹತ್ತಾರು ಜನ ಹೇಳಿದ್ದು, ಕೇಳಿದ್ದು, ಸಿನೆಮಾದಲ್ಲಿ ನೋಡಿದ್ದು ತುಂಬಿಕೊಂಡು ಮೊದಲ ದಿನ ಕಾಲೇಜಿಗೆ ಹೊರಡುತ್ತೀರಿ. ನಿಮ್ಮ ಬಟ್ಟೆ, ಮೇಕಪ್‌, ಲುಕ್‌ ಬಗ್ಗೆ ಮುಗಿಯದ ಸೌಂದರ್ಯಪ್ರಜ್ಞೆ ನಿಮ್ಮದು. ನಿಮ್ಮಲ್ಲಿ ತುಂಬಿದ ಭಯ, ಕೂತೂಹಲ, ಸ್ಕೂಲ…ಗೂ ಇಲ್ಲಿಗೂ ಎಷ್ಟು ಬದಲಾವಣೆ, ಅಬ್ಟಾ ! ಅದೆಷ್ಟು ಹುಡುಗ-ಹುಡುಗಿಯರು, ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ತರಗತಿಗೆ ಎರಡೆರಡು ಬಾಗಿಲುಗಳು, ಅಲ್ಲಲ್ಲಿ ಹುಡುಗ-ಹುಡುಗಿಯರು ನಿಂತು ಮಾತನಾಡುತ್ತಿದ್ದಾರೆ, ನನಗೆ ಯಾರು ಪರಿಚಯವೇ ಇಲ್ಲ, ಏನೋ !ಎಂತೋ ! ಅಮ್ಮ ಹೇಳಿದ ಮಾತು ನೆನಪಾಗುತ್ತಿದೆ. ಸಿನೆಮಾ ನೆನಪಾಗುತ್ತದೆ. ಒಳಗೊಳಗೆ ಖುಷಿ. ನಿಮ್ಮ ಮನಸ್ಸಿನಲ್ಲೇ ವಾಹ್‌! ಎಷ್ಟೊಂದು ಚೆಂದದ ಹುಡುಗಿಯರು ಇಷ್ಟೊಂದು ಸಂಖ್ಯೆಯಲ್ಲಿ ಎಂದು ಕಳ್ಳಗಣ್ಣನ್ನು ಆ ಕಡೆ ಬೀರಲು ಸೆಳೆಯುತ್ತದೆ. ಅದೇ ಸೆಳೆತ ಹುಡುಗಿಯರಲ್ಲೂ. ಆದರೆ, ಅಮ್ಮನ ಮಾತು ಪದೇ ಪದೇ ನೆನಪು. ಡೆ… ಮೇಲೆ ಹಾಗೆ ಸುಮ್ಮನೆ ಕೂತು ಬಿಡುತ್ತೀರಿ. ಅವರು ಮಾತಾಡಿಸಲಿ ಎಂದು ನೀವು, ನೀವು ಮಾತಾಡಿಸಲಿ ಎಂದು ಅವರು. ಕೊನೆಗೂ ಮಾತಾಗುತ್ತೀರಿ. ಒಂಚೂರು ನೀರಾಳ. ಲೆಕ್ಚರ್‌ ಬಂದು ಪರಿಚಯ ಮಾಡಿಕೊಂಡು ನಿಮ್ಮ ಪರಿಚಯ ತಗೆದುಕೊಳ್ಳುತ್ತಾರೆ. ಈಗ ನಿಮಗೆ ಎಲ್ಲರ ಹೆಸರು ಅವರು ಊರು ತಿಳಿಯುತ್ತದೆ. ಈಗೀಗ ಧೈರ್ಯವೆನಿಸುತ್ತದೆ. ಮೊದಲ ದಿನವೇ ಯಾವ ಲೆಕ್ಚರ್‌ ಕೂಡ ಕ್ಲಾಸ್‌ ತೆಗೆದುಕೊಳ್ಳುವುದಿಲ್ಲ. ನಿಮ್ಮ ಹೊಸತನಕ್ಕೆ ಖಷಿಯಾಗಿ ನಾಲ್ಕು ಮಾತಾಡಿ ಹೋಗುತ್ತಾರೆ. ಅದೊಂದು ಖುಷಿಯೆನಿಸುತ್ತದೆ. 

ಬೆಳಗ್ಗೆ ಬರುವಾಗ ಇದ್ದ ದುಗುಡ ಈಗ ಇಲ್ಲ. ಭಯ ಒಂಚೂರು ಹೊರಟು ಹೋಗಿದೆ. ಸ್ನೇಹಿತರನ್ನು ಮಾಡಿಕೊಳ್ಳಬೇಕು ಎನಿಸಿದೆ. ಒಂದಿಬ್ಬರ ಪರಿಚಯವಾಗಿದ್ದು ಸಂತಸ ತಂದಿದೆ. ನಾಳೆಗೆ ಅದೇ ಹುರುಪು ಉಳಿದುಹೆೋಗುತ್ತದೆ. ದಿನ ದಿನ ಸಾಗುತ್ತಿದ್ದಂತೆ ಕಾಲೇಜಿನ ದಿನಗಳಲ್ಲಿ ಮುಳುಗಿ ಹೋಗುತ್ತೀರಿ. ಎಲ್ಲವನ್ನೂ ಕಾಲೇಜು ಕಲಿಸುತ್ತಾ ಹೋಗುತ್ತದೆ. 

ಆದರೆ ಸ್ನೇಹಿತರೇ ಕಾಲೇಜಿನ ತವಕ ಪುಳಕಕ್ಕೆ ಬಿದ್ದು ಹಲವು ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಡಿ. ಯಾವುದೋ ಆಕರ್ಷಣೆಯನ್ನು ಲವ್‌ ಅಂದುಕೊಂಡರೆ ಓದಿನ ಮನಸ್ಸು ವಿನಃ ಕಾರಣ ಹಾಳಾಗುತ್ತದೆ. ಕಾಲೇಜಿಗೆ ಬಂಕ್‌ ಹೊಡೆದು ಸಿನೆಮಾ, ಪಾರ್ಕ್‌ ಅಂತ ಸುತ್ತಬೇಡಿ. ನಿಮ್ಮ ತಂದೆತಾಯಿ ನೀವು ಕಾಲೇಜಿನಲ್ಲಿ  ಚೆನ್ನಾಗಿ ಓದುತ್ತಿದ್ದೀರಿ ಎಂದು ನಂಬಿ ಕೂತಿದ್ದಾರೆ. ಅನೇಕ ಅಡ್ಡ ದಾರಿಗಳು ನಿಮ್ಮನ್ನು ಸೆಳೆಯಲು ಕೂತಿರುತ್ತವೆ, ಆ ಕಡೆ ಕುರುಡರಾಗಿ. ಹಾಗಂತ ಸದಾ ಅವುಡುಗಜ್ಜಿಕೊಂಡು ಕಾಲೇಜಿನ ದಿನಗಳನ್ನು ಮುಗಿಸಿ ಬನ್ನಿ ಅನ್ನುತ್ತಿಲ್ಲ. ಜೋಶ್‌ ಇರಲಿ ಆದರೆ ಎಲ್ಲೇ ದಾಟದಿರಲಿ. ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಿ ಅವರೊಂದಿಗೆ ಖುಷಿಪಡಿ. ರಜಾದಿನಗಳಲ್ಲಿ ಒಂದು ಔಟಿಂಗ್‌ ಹೋಗಿ ಬನ್ನಿ, ಎಚ್ಚರಿಕೆ ಇರಲಿ. ರ್ಯಾಗಿಂಗ್‌ನಿಂದ ದೂರವಿರಿ. ಪ್ರೀತಿನ ಹಿಂದೆ ಕೂರಿಸಿ ಸ್ನೇಹವನ್ನು ಪಕ್ಕದಲ್ಲಿಟ್ಟುಕೊಳ್ಳಿ. ಓದು ಮೊದಲಾಗಲಿ.

ಸದಾಶಿವ ಸೊರಟೂರು  

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.