ಗುರುವಿಗೊಂದು ನಮನ

Team Udayavani, Sep 20, 2019, 4:34 AM IST

ಶಿಕ್ಷಕರು ನಮ್ಮ ಜೀವನದ ಅವಿಭಾಜ್ಯ ಅಂಗ. ನಮಗೆ ತಂದೆತಾಯಿ ಜನ್ಮವನ್ನು ನೀಡಿದ್ದರೆ, ನಮ್ಮ ಜೀವನವನ್ನು ಸರಿಯಾಗಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಒಂದು ಕಲ್ಲು ಶಿಲೆಯಾಗಲು ಹೇಗೆ ಶಿಲ್ಪಿಯ ಸಹಾಯವಿರತ್ತೋ ಹಾಗೆಯೇ ಒಬ್ಬ ವಿದ್ಯಾರ್ಥಿಯು ಸನ್ನಡತೆಯ ಮಾರ್ಗದಲ್ಲಿ ನಡೆಯಬೇಕೆಂದರೆ ಶಿಕ್ಷಕರು ಇರಲೇಬೇಕು.

ಶಿಕ್ಷಕರು ಪಾಠ ಹೇಳುವುದಷ್ಟೇ ಅಲ್ಲದೆ ಮಕ್ಕಳ ದುಃಖಗಳಿಗೆ ಕಿವಿಗೊಟ್ಟು ಸಮಸ್ಯೆಯನ್ನು ಪರಿಹರಿಸುತ್ತಾರೆ. ಮಕ್ಕಳ ಸಂತೋಷಕ್ಕಾಗಿ ಸದಾ ಶ್ರಮಿಸುತ್ತಾರೆ. ಅಂತಹ ಶಿಕ್ಷಕರಿಗೆ ಮೀಸಲಾದ ದಿನವೇ ಶಿಕ್ಷಕರ ದಿನ. ಇಂತಹ ಸಂದರ್ಭದಲ್ಲಿ ನನ್ನ ಬಾಲ್ಯದ ದಿನದ ಶಿಕ್ಷಕರ ದಿನಾಚರಣೆಯ ಬಗ್ಗೆ ಹೇಳಲು ಬಯಸುತ್ತೇನೆ.

ಅಂದು ಶಿಕ್ಷಕರ ದಿನಾಚರಣೆ. ನಾವೆಲ್ಲರೂ ಗಡಿಬಿಡಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಓಡಾಡುತ್ತಿದ್ದೆವು. ಎಲ್ಲಾ ಕಡೆ ಝಗಝಗ ಮಿಂಚುವ ಬೆಳಕಿತ್ತು. ಹೂವಿನ ಅಲಂಕಾರ ತುಂಬಿತ್ತು. ನಾವೆಲ್ಲರೂ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ತಯಾರಿ ನಡೆಸಿದ್ದೆವು. ನೃತ್ಯಕ್ಕೆಲ್ಲ ಸಿದ್ಧರಾಗಿದ್ದೆವು.

ಶಿಕ್ಷಕರಿಗೆ ಶುಭಾಶಯ ತಿಳಿಸಿದ್ದೂ ಆಗಿದೆ. ಕಾರ್ಯಕ್ರಮ ಶುರುವಾಗುವ ಸಮಯ. ನಾವೆಲ್ಲಾ ಖುಷಿಯಿಂದ ಶಿಕ್ಷಕರನ್ನು ಸ್ವಾಗತಿಸಿದೆವು. ಎಲ್ಲರೂ ನೃತ್ಯ ಮಾಡಿದರು. ನಾವೂ ಅಷ್ಟೇ ಸಂತೋಷದಿಂದ ಕುಣಿದೆವು. ಇನ್ನೇನು ದಿನಾಚರಣೆಯ ಕಾರ್ಯಕ್ರಮ ಮುಗಿಯಬೇಕು ನಮಗೊಂದು ಆಶ್ಚರ್ಯ ಕಾದಿತ್ತು.

ಎಲ್ಲಾ ಶಿಕ್ಷಕರು ಒಬ್ಬರಾದ ಮೇಲೆ ಒಬ್ಬರು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ವೇದಿಕೆಯ ಮೇಲೆ ಬರುತ್ತಿದ್ದರು. ಅದೂ ಪ್ಯಾಂಟು-ಶರ್ಟು, ತಲೆಗೊಂದು ಟೋಪಿ. ಅವರಲ್ಲೊಬ್ಬರು ಎಲ್ಲರಿಗಿಂತಲೂ ಹಿರಿಯ ಶಿಕ್ಷಕಿ ಇದ್ದರು. ಅವರೂ ಪ್ಯಾಂಟ್‌ಶರ್ಟ್‌ ಧರಿಸಿ ಬಂದಿದ್ದರು. ನೋಡ ನೋಡುತ್ತಿದ್ದಂತೆಯೇ ಅವರು ನಮಗೋಸ್ಕರ ನೃತ್ಯವನ್ನು ಮಾಡತೊಡಗಿದರು. ಹಾಡು ಹಾಡಿದರು. ನಾವೆಲ್ಲರೂ “ಒನ್ಸ್‌ ಮೋರ್‌’ ಎಂದು ಕಿರುಚಿದ್ದೇ ಕಿರುಚಿದ್ದು. ನಮ್ಮನ್ನೆಲ್ಲ ವೇದಿಕೆಯ ಮೇಲೆ ಬರುವಂತೆ ಹೇಳಿದರು. ಎಲ್ಲರೂ ವೇದಿಕೆಗೆ ಓಡಿಹೋಗಿ ಶಿಕ್ಷಕರೊಂದಿಗೆ ಜೊತೆಯಾಗಿ ಕುಣಿದೆವು. ನಮ್ಮ ಅಧ್ಯಾಪಕರು ನಮ್ಮೊಂದಿಗೆ ತಾವೂ ಚಿಕ್ಕ ಮಕ್ಕಳಾಗಿ ಬಿಟ್ಟರು. ಸಂತೋಷದಿಂದ ಎಲ್ಲರೂ ಒಟ್ಟಿಗೆ ನಲಿದೆವು.

ಆ ದಿನ ಒಂದು ಮರೆಯಲಾಗದ ಕ್ಷಣ. ಮಕ್ಕಳೂ ನೃತ್ಯ ಮಾಡಿದ್ದಲ್ಲದೆ ಒಂದು ಬದಲಾವಣೆ ಇರಲಿ, ಮಕ್ಕಳು ಸಂತೋಷವಾಗಿರಲಿ ಎಂದು ಬಯಸಿದ ನಮ್ಮ ಶಿಕ್ಷಕರು ತಾವು ದಿನಾ ಬಳಸುತ್ತಿದ್ದ ಉಡುಗೆತೊಡುಗೆಯನ್ನು ಬಿಟ್ಟು ಬರೀ ಮಕ್ಕಳ ಸಂತೋಷಕ್ಕೋಸ್ಕರ ಎಂದೂ ನೃತ್ಯ ಮಾಡದವರು ಆ ದಿನ ನೃತ್ಯ ಮಾಡಿದಾಗ ಕಣ್ತುಂಬಿ ಬಂತು. ನಾವೆಲ್ಲರೂ ಧನ್ಯರಾದೆವೆಂದು ಆಗ ಅನ್ನಿಸಿತು.

ಹೀಗೆ ಶಿಕ್ಷಕರು ಬರೀ ಪಾಠ ಮಾಡುವುದಲ್ಲದೆ ನಿಸ್ವಾರ್ಥ ಸೇವೆಯನ್ನು ಮಾಡುತ್ತಾರೆ. ಮಕ್ಕಳೆಲ್ಲರೂ ಗುರಿಮುಟ್ಟುವವರೆಗೆ ಅವರ ಜೊತೆಗಿದ್ದು, ಶಕ್ತಿ ತುಂಬುತ್ತಾರೆ. ಅವರ ಕೆಲಸ ಅಷ್ಟು ಸುಲಭವಲ್ಲ. ಇಡೀ ದಿನ ನಿಂತು ಪಾಠ ಮಾಡಿ ಮಕ್ಕಳ ಏಳಿಗೆಯನ್ನೇ ಸದಾ ಬಯಸುತ್ತಾರೆ. ಶಿಕ್ಷಕ ವೃತ್ತಿ ಎಲ್ಲದಕ್ಕಿಂತಲೂ ಶ್ರೇಷ್ಠವಾದದ್ದು. ಮಕ್ಕಳಾದವರು ಅವರನ್ನು ಸದಾ ಗೌರವಿಸಿದರೆ, ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ.

ಚೈತ್ರಾ
ದ್ವಿತೀಯ ಬಿ. ಕಾಂ. , ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅದು ಜುಲೈ ತಿಂಗಳ ಕೊನೆಯ ವಾರ. ಜೀವನದ ಹೊಸ ಮೆಟ್ಟಿಲು ಏರುತ್ತಿರುವ ಸಂತೋಷ ಒಂದೆಡೆಯಾದರೆ, ವಿದ್ಯಾರ್ಥಿ ಜೀವನದ ಕೊನೆಯ ಹಂತ ಎನ್ನುವ ಬೇಸರ ಇನ್ನೊಂದೆಡೆ. ಅದು...

  • ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ, ಬ್ಯಾಗ್‌ ಹಾಕಿಕೊಂಡು ಶಾಲೆಗೆ ಹೋಗುವ ಮಕ್ಕಳನ್ನು ನೋಡುವಾಗ, ನನಗೆ ನನ್ನ ಶಾಲಾ ಜೀವನದ ಆ ಸುಂದರ ಕ್ಷಣಗಳ ನೆನಪಾಗುತ್ತದೆ....

  • ಆಗಷ್ಟೆ ಸೂರ್ಯ ಮುಳುಗಲಾರಂಭಿಸಿದ್ದ. ಪಕ್ಷಿಗಳೆಲ್ಲ ಚಿಲಿಪಿಲಿ ಗುಟ್ಟುತ್ತ ತಮ್ಮ ತಮ್ಮ ಗೂಡುಗಳಿಗೆ ಮರಳಲು ಹೊರಡುತ್ತಿದ್ದವು. ಇತ್ತ ಚಂದಿರ ತನ್ನ ಕರ್ತವ್ಯ ನಿರ್ವಹಿಸುವ...

  • ಕೆಲ ದಿನಗಳ ಹಿಂದಷ್ಟೇ ರಸ್ತೆ ಬದಿಯಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿದ್ದಾಗ ಪುಟ್ಟ ಹಕ್ಕಿಯೊಂದು "ಚಿಂವ್‌... ಚಿಂವ್‌' ಎನ್ನುತ್ತ ಅತ್ತಿಂದಿತ್ತ ಹಾರಾಡುತ್ತಿತ್ತು....

  • ಅಮ್ಮ ಎಂದರೆ ಮೊದಲಿಗೆ ನೆನಪಾಗುವುದು ಪ್ರೀತಿ, ಮಮತೆ, ಅಕ್ಕರೆ. ಅಮ್ಮನ ಬಗ್ಗೆ ಎಷ್ಟೇ ಹೇಳಿದರೂ ಸಾಲದು ಎಂದು ಹೇಳಿದರೆ ಯಾರು ಇಲ್ಲವೆನ್ನುತ್ತಾರೆ ! ಶಾಲಾ-ಕಾಲೇಜಿಗೆ...

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...