ವಿರಾಟ್ ಕೊಹ್ಲಿಗೆ ವಿನೂತನ ಬೆಂಬಲ
Team Udayavani, Jun 9, 2019, 6:00 AM IST
ಹೊಸದಿಲ್ಲಿ: ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಅವರು ಕಪಿಲ್ದೇವ್ ಮತ್ತು ಧೋನಿ ಬಳಿಕ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಇದಕ್ಕೆ ಹೊಸದಿಲ್ಲಿಯಲ್ಲಿ ಕೊಹ್ಲಿ ಕಲಿತ ಶಾಲೆಯೊಂದು ವಿನೂತನ ಮಾದರಿದಲ್ಲಿ ಬೆಂಬಲ ನೀಡಿದೆ.
ಕೊಹ್ಲಿ ಬಾಲ್ಯದ ದಿನಗಳಲ್ಲಿ ವಿದ್ಯಾಭ್ಯಾಸ ನಡೆಸಿದ ಉತ್ತಮ್ ನಗರದಲ್ಲಿರುವ “ವಿಶಾಲ್ ಭಾರತಿ ಪಬ್ಲಿಕ್ ಸ್ಕೂಲ್’ನ ಮಣ್ಣನ್ನು ಲಂಡನ್ಗೆ ಕಳುಹಿಸಲಾಗಿದೆ. ಇದೇ ಶಾಲೆಯಲ್ಲಿ ಕೊಹ್ಲಿ ಕ್ರಿಕೆಟ್ ಆಡುವುದನ್ನು ಕಲಿತಿದ್ದರು. ಅವರನ್ನು ಆಶೀರ್ವದಿಸಲು ಶಾಲೆಯ ಮಣ್ಣನ್ನು ಲಂಡನ್ಗೆ ಕಳುಹಿಸಲಾಗಿದೆ ಎಂದು “ಸ್ಟಾರ್ ನ್ಪೋರ್ಟ್ಸ್’ಟ್ವೀಟ್ ಮಾಡಿದೆ. 1998ರಲ್ಲಿ “ವಿಶಾಲ್ ಭಾರತಿ’ ಶಾಲೆಗೆ ಹೋಗುತ್ತಿದ್ದ ವೇಳೆ ಅವರು ಕ್ರಿಕೆಟ್ ಅಭ್ಯಾಸಕ್ಕಾಗಿ ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೇರ್ಪಡೆಯಾಗಿದ್ದರು. 9ನೇ ಗ್ರೇಡ್ ವೇಳೆ ಅವರು ಸೇವಿಯರ್ ಕಾನ್ವೆಂಟ್ಗೆ ಸೇರ್ಪಡೆಯಾದರು. ಭಾರತೀಯ ತಂಡಕ್ಕೆ ಸೇರಿಕೊಳ್ಳುವ ಮೊದಲು ಅವರು ರಾಜಧಾನಿಯ ವಿವಿಧ ಸ್ತರಗಳ ಕ್ರಿಕೆಟ್ನಲ್ಲಿ ತೊಡಗಿಕೊಂಡು ಹಂತ ಹಂತವಾಗಿ ಮೇಲೇರುತ್ತ ಹೋದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ