ಒಂದೇ ದಿನದಲ್ಲಿ ಲಸಿಕೆ ದಾಖಲೆ


Team Udayavani, Aug 18, 2021, 6:10 AM IST

ಒಂದೇ ದಿನದಲ್ಲಿ ಲಸಿಕೆ ದಾಖಲೆ

ಹೊಸದಿಲ್ಲಿ/ವೆಲ್ಲಿಂಗ್ಟನ್‌: ದೇಶದಲ್ಲಿ ಸೋಮವಾರ ಒಂದೇ ದಿನ 88.13 ಲಕ್ಷ ಡೋಸ್‌ ಕೊರೊನಾ ಲಸಿಕೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದ ಬಳಿಕ ಒಂದು ದಿನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡಿದ್ದು ಇದು ದಾಖಲೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮನ್‌ಸುಖ್‌ ಮಾಂಡವಿಯಾ ಟ್ವೀಟ್‌ ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆ 7 ಗಂಟೆಯ ವರೆಗಿನ ಪ್ರಾಥಮಿಕ ಮಾಹಿತಿ ಪ್ರಕಾರ 62,12,108 ಸೆಷನ್‌ಗಳ ಮೂಲಕ 55,47,30, 609 ಡೋಸ್‌ ಲಸಿಕೆ ನೀಡಲಾಗಿದೆ. ಹೀಗಾಗಿ ದೇಶದಲ್ಲಿ ಲಸಿಕೆ ಪಡೆದವರ ಒಟ್ಟು ಸಂಖ್ಯೆ 55.47 ಕೋಟಿಗೆ ಏರಿಕೆ ಯಾ ಗಿದೆ. 18 ವರ್ಷ ಮೇಲ್ಪಟ್ಟ ಶೇ.45 ಮಂದಿಗೆ ಮೊದಲ ಡೋಸ್‌ ಲಸಿಕೆ, ಶೇ.13 ಮಂದಿಗೆ ಎರಡು ಡೋಸ್‌ ನೀಡಿಕೆ ಪೂರ್ತಿ ಯಾಗಿದೆ. ರಾಜ್ಯಗಳಿಗೆ ಇದುವರೆಗೆ  56.81 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಇನ್ನೂ 1.09 ಕೋಟಿ ಡೋಸ್‌ ಪೂರೈಕೆಯ ವಿವಿಧ ಹಂತಗಳಲ್ಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

154 ದಿನಗಳ ಕನಿಷ್ಠಕ್ಕೆ ದೇಶದಲ್ಲಿ ಸೋಮವಾರದಿಂದ ಮಂಗಳವಾರದ ಅವಧಿಯಲ್ಲಿ 25,166 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. 154 ದಿನಗಳ ಕನಿಷ್ಠಕ್ಕೆ ಸೋಂಕು ಇಳಿಕೆಯಾಗಿದೆ. 437 ಮಂದಿ ಅಸುನೀಗಿದ್ದಾರೆ. 2020ರ ಮಾರ್ಚ್‌ ಬಳಿಕ ಚೇತರಿಕೆ ಪ್ರಮಾಣ ಶೇ.97.51ಕ್ಕೆ ಹೆಚ್ಚಿದೆ.ಸಕ್ರಿಯ ಸೋಂಕು 3,69,846ಕ್ಕೆ ಇಳಿಕೆಯಾಗಿದೆ. ಒಂದು ದಿನದಲ್ಲಿ  12,101 ಪ್ರಕರಣಗಳಷ್ಟು ಇಳಿಕೆಯಾಗಿದೆ.

ಒಂದು ಕೇಸ್‌; ದೇಶಕ್ಕೇ ಲಾಕ್‌ :

ನ್ಯೂಜಿಲೆಂಡ್‌ನ‌ ಆಕ್ಲೆಂಡ್‌ನ‌ಲ್ಲಿ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿದೆ. ಹೀಗಾಗಿ ದೇಶಾ ದ್ಯಂತ ಲಾಕ್‌ಡೌನ್‌ ಜಾರಿ ಮಾಡಲಾಗಿದೆ ಎಂದು ಪ್ರಧಾನಿ ಜೆಸಿಂಡಾ ಆ್ಯಡ್ರೆನ್‌ ಹೇಳಿದ್ದಾರೆ. 50 ಲಕ್ಷ ಇರುವ ದೇಶದ ಜನರು ಮತ್ತೂಮ್ಮೆ ಕಠಿನ ದಿನಗಳನ್ನು ಎದುರಿಸುವ ಅನಿವಾರ್ಯ ಉಂಟಾಗಿದೆ. ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಏನಾಗುತ್ತದೆ ಎಂಬ ಬಗ್ಗೆ ಜಗತ್ತಿನ ಹಲವು ಉದಾಹರಣೆ ಗಳಿಂದ ಪಾಠ ಕಲಿಯ ಬೇಕಾಗಿದೆ’ ಎಂದಿದ್ದಾರೆ. ಹೀಗಾಗಿ ನ್ಯೂಜಿಲೆಂಡ್‌ನಾದ್ಯಂತ ಜನರು ಅಗತ್ಯ ವಸ್ತುಗಳ ಖರೀದಿಗೆ ಅಂಗಡಿ ಗಳ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿದ್ದಾರೆ.

ಟಾಪ್ ನ್ಯೂಸ್

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

rahul gandhi

Adani ಗಾಗಿ ಕೆಲಸ ಮಾಡುವಂತೆ ಮೋದಿಗೆ ಬಹುಶಃ ದೇವರು ಹೇಳಿರಬೇಕು: ರಾಹುಲ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ; ಕಾಂಗ್ರೆಸ್‌ ಗೆಲುವು ಖಚಿತ: ಸಲೀಂ

ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ; ಕಾಂಗ್ರೆಸ್‌ ಗೆಲುವು ಖಚಿತ: ಸಲೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vimana 2

Bird hit; ಲೇಹ್‌ಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ: ದಿಲ್ಲಿಗೆ ವಾಪಸ್‌

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

supreem

NDA ಗೆದ್ದ ಬಳಿಕ ಕೊಲಿಜಿಯಂ ವ್ಯವಸ್ಥೆ ರದ್ದು: ಉಪೇಂದ್ರ ಕುಶ್ವಾಹ

1-pande

Army ಮುಖ್ಯಸ್ಥ ಮನೋಜ್‌ ಸೇವಾ ಅವಧಿ ವಿಸ್ತರಣೆ

1-aaaa

Delhi ಹಸುಗೂಸುಗಳ ದುರಂತ: ಆಸ್ಪತ್ರೆಯ ಮಾಲಕ, ವೈದ್ಯ ಬಂಧನ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Vimana 2

Bird hit; ಲೇಹ್‌ಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ: ದಿಲ್ಲಿಗೆ ವಾಪಸ್‌

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Donald-Trumph

US ಬೈಡೆನ್‌ ಕೆಟ್ಟ ಅಧ್ಯಕ್ಷ ಎಂದ ಟ್ರಂಪ್‌ಗೆ ಜನರಿಂದ ಛೀಮಾರಿ

supreem

NDA ಗೆದ್ದ ಬಳಿಕ ಕೊಲಿಜಿಯಂ ವ್ಯವಸ್ಥೆ ರದ್ದು: ಉಪೇಂದ್ರ ಕುಶ್ವಾಹ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.