ನೀನು ಅದ್ಯಾವ ಮಾಯದಲ್ಲಿ ಬಸ್ಸಿಳಿದು ಹೋದೆ?

Team Udayavani, May 23, 2017, 10:40 AM IST

neenu.jpg

ನನ್ನ ಕಾಲೇಜಿನ ದಿನಗಳಲ್ಲಿ ಮುಖ್ಯವಾದ ಭಾಗವಾಗಿದ್ದು ಬಸ್ಸುಗಳು. ಬೆಳ್ಳಂಬೆಳಗೆ ಎದ್ದು ಬೈಂದೂರಿನ ಬಸ್‌ಸ್ಟಾಪ್‌ನಲ್ಲಿ ಬಸ್ಸಿಗಾಗಿ ಕಾಯುವುದು, ಕಾಲಿಡಲೂ ಜಾಗವಿರದ ಬಸ್ಸಿನ ಆ ಪುಟ್‌ಬೋರ್ಡ್‌ನಲ್ಲಿ ನಿಂತು ಪಯಣಿಸಿವುದು ನನ್ನ ದಿನಚರಿಯ ಒಂದು ಭಾಗವೇ ಆಗಿತ್ತು. ಆದರೆ ಆ ಒಂದು ದಿನ ಮಾತ್ರ ನನ್ನ ಬಾಳಿನ ನೆನಪುಗಳ ಗಣಿಯಲ್ಲಿ ಶಾಶ್ವತವಾಗಿ ಉಳಿದು ಬಿಟ್ಟಿದೆ.

ಅವತ್ತು ಸೋಮವಾರ. ಎಂದಿನಂತೆ ಬಸ್ಸು ಕಿಕ್ಕಿರಿದು ತುಂಬಿತ್ತು. ಪುಟ್‌ ಬೋರ್ಡಿನ ಮೇಲೆ ಕಾಲಿಟ್ಟು ನಿಂತಿದ್ದ ನನಗೆ ರೇಷ್ಮೆಯ ನವಿರಾದ ಎಳೆಗಳು ಮುಖವ ಸೋಕಿದಂಥ ಅನುಭವ. ತಿರುಗಿ ನೋಡಿದರೆ, ನನಗೆ ಕಿಟಕಿಗೆ ತಲೆಯಾನಿಸಿ ಕುಳಿತಿದ್ದ ನಿನ್ನ ನೀಳ ಕೇಶರಾಶಿಯು  ಕೋಮಲ ಎಳೆಗಳಂತೆ ಗಾಳಿಯಲಿ ನನ್ನ ಮುಖ ಸೋಕುತ್ತಿದ್ದವು. ನಿನ್ನ ಕೇಶರಾಶಿಯ ಘಮಲು ನನ್ನ ಮನವನ್ನೆಲ್ಲ ಆವರಿಸಿದಂತಿತ್ತು. ಆ ಕ್ಷಣ  ನೀ ಗಮನಿಸಿಯೋ- ಗಮನಿಸದೆಯೋ, ಕೇಶರಾಶಿಯ ನನ್ನಿಂದ ದೂರ ಸರಿಸಿದೆ.

ಆಗ ಕಂಡ ನಿನ್ನ ಕಿವಿಯಲ್ಲಿದ್ದ ಓಲೆಯ ಹೆಸರೇನು? ಅದರ ಹೆಸರು ಹೇಳಿದ್ದರೆ ಮುಂದೊಂದು ದಿನ  ನನ್ನ ಕೈ ಹಿಡಿವ ಹುಡುಗಿಗೆ ಹುಡುಕಿಯಾದರೂ ತರುತ್ತಿದ್ದೆ. ಹಾಗೆಯೇ ಅಂದು ಧರಿಸಿದ್ದ ಮೂಗುತಿಯ ಅಂದವ ಹೊಗಳಲು ಅದ್ಯಾವ ಭಾಷೆಯ ಪದಗಳ ಎರವಲು ಪಡೆಯಲಿ ಹೇಳು? ಎಲ್ಲಾ ಶಬ್ದಕೋಶಗಳ ಪ್ರತಿ ಪದಗಳಿಗೆ ನಾನಾ ಅರ್ಥಗಳ ಹುಡುಕಿ ಬರೆದರೂ ಅದೂ ನಿನ್ನ ಆ ಸೌಂದರ್ಯವ ಹೊಗಳಲು ಸಾಕಾಗಲಾರದೇನೋ. ಬೆಳ್ಳಿಯ ಬಟ್ಟಲಲ್ಲಿ ಬೆಲೆ ಕಟ್ಟಲಾಗದ ವಜ್ರಗಳ ಪೋಣಿಸಿ, ಮುಂಜಾನೆಯ ಸೂರ್ಯನ ಹೊಂಬಿಸಿಲ ಕಿರಣಗಳಲ್ಲಿ ಇಟ್ಟಾಗ ಹೊರಬರುವ ಹೊಳಪನ್ನು ಯಾವ ಕವಿಯೂ ವರ್ಣಿಸಿರಲಾರ. ಯಾವ ಊರಿನ ಅರಸನ ಮಗಳ್ಳೋ, ಮಾಯಾನಗರಿಯಿಂದ ಇಳಿದು ಬಂದ ಮಾಂತ್ರಿಕಳ್ಳೋ ನೀನು ಅಂತ ಅನಿಸುತ್ತಿದೆ.

ನೀನು, ಅದ್ಯಾವ ಘಳಿಗೆಯಲ್ಲಿ ಬಸ್ಸಿನಿಂದಿಳಿದು ಹೋದೆಯೋ ತಿಳಿಯಲೇ ಇಲ್ಲ. ನಿನಗಾಗಿ ಪ್ರತಿದಿನ ಹುಡುಕುತ್ತಿದ್ದವು ನನ್ನ ಕಂಗಳು. ಇದಾಗಿ, ವರ್ಷಗಳೇ ಕಳೆಯುತ್ತಾ ಬಂದಿದೆ. ನೀ ಮತ್ತೆ ಯಾವತ್ತೂ ಕಾಣಿಸಲೇ ಇಲ್ಲ. ಆ ಕುಂದೇಶ್ವರನ ಪಾದದಾಣೆ ಇನ್ನೊಮ್ಮೆ ನೀ ಕಾಣಿಸಿದರೆ ತಪ್ಪದೇ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತೇನೆ. ಇನ್ನೂ ನನ್ನ ಕಾಯಿಸಿ ಕಾಡದಿರು ಹುಡುಗಿ…

– ಗಣೇಶ್‌ ಆರ್‌. ಜಿ., ಶಿವಮೊಗ್ಗ

ಟಾಪ್ ನ್ಯೂಸ್

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.