ಅನಂತ ಭಟ್‌-ಗಿರಿಧರ ನಾಯಕ್‌ಗೆ ಕೊಂಕಣಿ ಯಕ್ಷರತ್ನ ಪ್ರಶಸ್ತಿ 

Team Udayavani, Mar 9, 2018, 6:00 AM IST

s-16.jpg

ಮೂರು ದಶಕಗಳಿಂದ ಸಾಂಸ್ಕೃತಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಕೊಂಕಣಿ ಸಾಂಸ್ಕೃತಿಕ ಸಂಘ ಮಾ.11ರಂದು ಮಂಗಳೂರಿನ ಪುರಭವನದಲ್ಲಿ ಶ್ರೀ ಕೃಷ್ಣ ಪರಂಧಾಮ ಕೊಂಕಣಿ ಯಕ್ಷ ಪ್ರದರ್ಶನದೊಂದಿಗೆ ಯಕ್ಷ ಕಲಾವಿದರಾದ ಅನಂತ ರಾಮ ಭಟ್‌ ಮತ್ತು ಗಿರಿಧರ ಪಿ. ನಾಯಕ್‌ರಿಗೆ ಕೊಂಕಣಿ ಯಕ್ಷರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.ಸಂಘದ ಸದಸ್ಯರು ಮತ್ತು ಹವ್ಯಾಸಿ ಕಲಾವಿದರು ಪ್ರದರ್ಶಿಸಲಿರುವ ಶ್ರೀಕೃಷ್ಣ ಪರಾಂಧಮ ಆಖ್ಯಾನವನ್ನು ಎಂ.ಶಾಂತರಾಮ ಕುಡ್ವಾ ರಚಿಸಿದ್ದಾರೆ ಹಾಗೂ ಎಂ.ಆರ್‌. ಕಾಮತ್‌ ಸಂಭಾಷಣೆ ಬರೆದಿದ್ದಾರೆ. 

ಗಣೇಶ್‌ಪುರ ಗಿರೀಶ್‌ ನಾವಡ ತರಬೇತಿ ನೀಡಿದ್ದಾರೆ. 10ರ ಹರೆಯದ ಬಾಲಕರಿಂದ ತೊಡಗಿ 72ರ ಹಿರಿಯರು ವೇಷಧಾರಿಗಳಾಗಿರುವುದು ಇದರ ಈ ಪ್ರದರ್ಶನದ ವೈಶಿಷ್ಟ. ಕೆಲ ಮಹಿಳಾ ಕಲಾವಿದರೂ, ಯಕ್ಷಗಾನ ವಿದ್ಯಾರ್ಥಿಗಳೂ ಇದ್ದಾರೆ. ಯಾದವರ ಅಂತ್ಯ ಮತ್ತು ಶ್ರೀಕೃಷ್ಣ ನಿರ್ಯಾಣದ ಕಥಾಭಾಗವನ್ನು ಒಳಗೊಂಡಿರುವ ಪ್ರಸಂಗವಿದು. ಕೊಂಕಣಿ ಸಾಂಸ್ಕೃತಿಕ ಕೇಂದ್ರದ ಆರನೇ ಕೊಂಕಣಿ ಯಕ್ಷಗಾನ ಪ್ರಸಂಗವಿದು. 

ಅನಂತರಾಮ ಭಟ್‌
 ಕಲ್ಲಮುಂಡ್ಕೂರ್‌ ರಾಮ ಭಟ್‌ ಮತ್ತು ಪದ್ಮಾವತಿ ದಂಪತಿಯ ಪುತ್ರ ಭಾಗವತ ಅನಂತ ರಾಮ ಭಟ್‌. 1929,ಅ.4ರಂದು ಜನಿಸಿದ ಇವರು ಬಾಲ್ಯದಲ್ಲೇ ಯಕ್ಷಗಾನದ ಅಭಿರುಚಿ ಹೊಂದಿದ್ದರು. ಮುಂದೆ ಯಕ್ಷ ಕಲಾವಿದರಾಗಿ ಮೆರೆಯಲು ಇದು ತಳಹದಿಯಾಯಿತು. 
ರಾಘವೇಂದ್ರ ಶೆಣೈ ಇವರ ಗುರು. ಶ್ರೀ ಕಾಶೀ ಮಠದ ವೃಂದಾವನಸ್ಥ ಯತಿವರ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಪಾದಂಗಳವರ ಸಮಕ್ಷಮ ತಮ್ಮ ತಂಡದೊಂದಿಗೆ ಕೊಂಕಣಿ ಯಕ್ಷಗಾನ ಪ್ರದರ್ಶಿಸಿ ಮುಂಬಯಿಯಲ್ಲಿ “ಜನಪ್ರಿಯ ಯಕ್ಷಗಾನ ಮಂಡಳಿ’ಯ ಉಗಮಕ್ಕೆ ಕಾರಣಕರ್ತರಾದವರಲ್ಲಿ ಓರ್ವರು. ಭಾಗವತರಾಗಿ 30 ವರ್ಷಗಳಿಂದ ಯಕ್ಷರಂಗಕ್ಕೆ ತಮ್ಮ ಸಿರಿಕಂಠ ಧಾರೆ ಎರೆದಿದ್ದಾರೆ. ಕನ್ನಡ/ಕೊಂಕಣಿ ಯಕ್ಷ ಪಾತ್ರಧಾರಿ, ಪ್ರಸಂಗ ಕರ್ತರೂ ಹೌದು. ಕಿನ್ನಿಗೋಳಿಯ ಯಕ್ಷಲಹರಿ, ಮುಂಬಯಿಯ ಯಕ್ಷಗಾನ ಸಾಹಿತ್ಯ ಪರಿಷತ್‌ನ ಸಮ್ಮಾನ ಪಡೆದಿದ್ದಾರೆ.

ಗಿರಿಧರ್‌ ಪಿ. ನಾಯಕ್‌ 
 ಮಿತ್ತಬೈಲಿನ ಪುರಷೋತ್ತಮ ನಾಯಕ್‌ ಮತ್ತು ರೋಹಿಣಿ ದಂಪತಿಯ ಪುತ್ರ ಗಿರಿಧರ್‌ ನಾಯಕ್‌. 1963,ನ.27ರಂದು ಜನಿಸಿದ ಇವರು ವ್ಯವಹಾರ ನಿಮಿತ್ತ ದುಬೈಯಲ್ಲಿದ್ದರೂ ಕೊಂಕಣಿ ಸಾಂಸ್ಕೃತಿಕ ಸಂಘದ ಹಾಗೂ ಊರಿನ ಇತರ ಯಕ್ಷಗಾನ ಪ್ರದರ್ಶನಗಳಲ್ಲಿ ಸಕ್ರಿಯ ತೊಡಗುವಿಕೆ ತಪ್ಪಿಲ್ಲ. ದುಬೈನ ಯಕ್ಷ ಮಿತ್ರ ತಂಡದ ಮುಖ್ಯ ಕಲಾವಿದ. 
ರಂಗಭೂಮಿ ಕಲಾವಿದ ಹಾಗೂ ಹಿನ್ನೆಲೆ ಗಾಯಕರೂ ಆಗಿದ್ದು, ನಾಟಕಗಳಲ್ಲಿ ಬಾಲ, ಸ್ತ್ರೀ ವೇಷ, ನಾಯಕ , ಖಳ ನಾಯಕ, ಹಾಸ್ಯ ಪಾತ್ರಗಳಲ್ಲಿ ಮತ್ತು ಯಕ್ಷಗಾನದಲ್ಲಿ ಶ್ರೀ ಕೃಷ್ಣ, ಈಶ್ವರ, ಜಮದಗ್ನಿ ಷಣ್ಮುಖ. ರಕ್ತಬೀಜ, ಮಹಿಷಾಸುರ, ಹನುಮಂತ ಮುಂತಾದ ವೇಷ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮಿತ್ತಬೈಲಿನ ಶ್ರೀರಾಮ ಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ಧಾರ್ಮಿಕ ಚಟುವಟಿಕೆಗಳಲ್ಲೂ ದುಡಿಯುತ್ತಿದ್ದಾರೆ.   

ಸಂದೀಪ್‌ ನಾಯಕ್‌ ಸುಜೀರ್‌

ಟಾಪ್ ನ್ಯೂಸ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.