ಶತಕಲಾವಿದರ ಗಾನ, ವಾದನ, ನೃತ್ಯ ನಮನ


Team Udayavani, May 4, 2018, 6:00 AM IST

s-6.jpg

ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ದ್ವಿತೀಯ ಬಾರಿಗೆ ಸರ್ವಜ್ಞಪೀಠವನ್ನು ಅಲಂಕರಿಸಿ ನೂರು ದಿನ ಪೂರ್ಣಗೊಂಡ ನಿಮಿತ್ತ ಎ.27ರಂದು ರಾಜಾಂಗಣದಲ್ಲಿ ಶತಕಲಾವಿದರು ಗಾಯನ, ವಾದನ, ನೃತ್ಯ ಮೂರು ಪ್ರಕಾರಗಳ ಮೇಳೈಕೆಯಾದ ಗಾನ, ವಾದನ, ನೃತ್ಯ ವೈಭವವನ್ನು ನಡೆಸಿಕೊಟ್ಟರು. ಇದಕ್ಕೆ ಸಂಘಟಕರು ಕೊಟ್ಟ ಹೆಸರೇ ನಾದನಮನ. 

ಅಂತಾರಾಷ್ಟ್ರೀಯ ಖ್ಯಾತಿಯ ಹಾರ್ಮೋನಿಯಂ ವಾದಕ ಡಾ| ರವೀಂದ್ರ ಗುರುರಾಜ ಕಾಕೋಟಿ ಮತ್ತು ತಬಲಾವಾದಕ ಡಾ| ಉದಯ ರಾಜ್‌ ಅವರ ಜತೆ 60 ಮಂದಿ ಹಾರ್ಮೋನಿಯಂ ಕಲಾವಿದರು ಏಕಕಾಲದಲ್ಲಿ ಹಾರ್ಮೋನಿಯಂ ನುಡಿಸಿ ಆಕರ್ಷಿಸಿದರು. ಹಾರ್ಮೋನಿಯಂನ್ನು ಸಂವೇದಿನಿ ಎಂದು ಕರೆದರೆ ಇಲ್ಲಿ ಹಲವು ಉಪಕರಣಗಳ ಸಂಯೋಜನೆಯಾದ ಕಾರಣ ಬಹುಸಂವೇದಿನಿ ಎಂದು ಕರೆದರು. ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶದಿಂದ ಬಂದ ಕಲಾವಿದರಲ್ಲದೆ ಹುಬ್ಬಳ್ಳಿ, ಮಂಗಳೂರು, ಕಾರ್ಕಳ ಮೊದಲಾದೆಡೆಗಳಿಂದ ಬಂದವರೂ ಇದ್ದರು. ಭಾರ್ಗವಿ ಆರ್ಟ್ಸ್ ಆ್ಯಂಡ್‌ ಡ್ಯಾನ್ಸ್‌ ಅಕಾಡೆಮಿ ಮತ್ತು ಲಕ್ಷ್ಮೀ ಗುರುರಾಜ್‌ ನೇತೃತ್ವದ 40 ಮಂದಿ ಕಲಾವಿದರು ನೃತ್ಯಪ್ರದರ್ಶನ ನೀಡಿದರು. ಮೊದಲು ಮತ್ತು ಕೊನೆಯಲ್ಲಿ ಹಾರ್ಮೋನಿಯಂ ವಾದನವಿದ್ದರೆ ನಡುವಿನಲ್ಲಿ ನೃತ್ಯ ನಡೆಯಿತು. ಪ್ರಧಾನ ವಾದ್ಯ ಸ್ಥಾನದಿಂದ ವಂಚಿತವಾಗುತ್ತಿರುವ ಹಾರ್ಮೋನಿಯಂ ಉಪಕರಣವನ್ನು ಇಷ್ಟೊಂದು ಕಲಾವಿದರು ನುಡಿಸುತ್ತಿರುವುದು ಇದರ ಪ್ರಾಮುಖ್ಯವನ್ನು ತೋರಿಸುತ್ತದೆ. ಕೇವಲ ಹಾರ್ಮೋನಿಯಂ ವಾದನವಲ್ಲದೆ ರವೀಂದ್ರ ಕಾಕೋಟಿಯವರು ಸಂಗೀತ ರಸದೌತಣವನ್ನೂ ನೀಡಿದರು. 

ನಾದನಮನ ಸಲ್ಲಿಸಿದ ಅನಂತರ ಕಲಾವಿದರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಗೌರವ ಸಲ್ಲಿಸಿದ ಸಂದರ್ಭ “ನಮಗೆ ನೂರು ದಿನಗಳ ಪೂಜೆ ಎನ್ನುವುದು ಮುಖ್ಯವಲ್ಲ. ನಾವು ಲೆಕ್ಕವನ್ನೂ ಹಾಕಿಲ್ಲ. ಆದರೆ ಇದೊಂದು ಅಪರೂಪದ ಗಾನ ಸಮ್ಮೇಳನ. 60 ಹಾರ್ಮೋನಿಯಂ ಉಪಕರಣಗಳು ಒಂದೆಡೆ ಸೇರಿಯೂ ಒಂದೇ ರೀತಿಯ ನಾದವನ್ನು ಹೊರಹೊಮ್ಮಿಸಿವೆ. ಇದು ಸಮಾಜಕ್ಕೂ ಏಕತೆಯ ಸಂದೇಶ ಸಾರುವಂತಿದೆ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. 

 ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.