ನೂತನ ಮೈತ್ರಿ ಸರ್ಕಾರ ಸಾರ್ವಜನಿಕರ ನಿರೀಕ್ಷೆ


Team Udayavani, May 23, 2018, 12:08 PM IST

nootana-jana.jpg

ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟದಲ್ಲಿ ನೂತನ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿರುವ ಕುಮಾರಸ್ವಾಮಿಯವರ ಮೇಲೆ ರೈತ ಸಾಲಮನ್ನಾ, ಉದ್ಯೋಗ ಸೃಷ್ಟಿ, ನೀರಾವರಿ ಯೋಜನೆ, ಪ್ರಣಾಳಿಕೆಯ ಭರವಸೆಗಳ ಈಡೇರಿಕೆ ಸೇರಿದಂತೆ ನಾಗರಿಕರಿಂದ ಹಲವು ನಿರೀಕ್ಷೆಗಳು ವ್ಯಕ್ತವಾಗುತ್ತಿವೆ. ಈ ಸಮಯದಲ್ಲಿ ನಗರದ ಜನರನ್ನು ಉದಯವಾಣಿ ಸಂಪರ್ಕಿಸಿದಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಹೀಗೆ..

ರಾಜ್ಯದ ರೈತರು ಸಂಕಷ್ಟದಲ್ಲಿ ಇದ್ದಾರೆ. ಸಾಲಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಕುಮಾರ ಸ್ವಾಮಿ ಬರುತ್ತಾರೆ ಎಂಬ ನಿರೀಕ್ಷೆ ಇದೆ.
-ಕೃಷ್ಣ, ಚಿಕ್ಕಲ್ಲಸಂದ್ರದ ನಿವಾಸಿ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕುಮಾರ ಸ್ವಾಮಿ ಅವರು ದಕ್ಷ ಆಡಳಿತ ನೀಡಿದ್ದಾರೆ. ಉತ್ತಮ ವ್ಯಕ್ತಿತ್ವದ ಮನುಷ್ಯ. ಕಾಂಗ್ರೆಸ್‌-ಬಿಜೆಪಿ ಅವರ ಮಾತು ಕೇಳದೆ ಅಧಿಕಾರ ಪೂರ್ಣಗೊಳಿಸಲಿ.
-ಚಂದ್ರಶೇಖರ್‌,ಬಸವನಗುಡಿ.

ಕುಮಾರಸ್ವಾಮಿ ಅವರು ಕೆಲಸ ಮಾಡುವಂತ ವ್ಯಕ್ತಿ. ಅವರ ಆಡಳಿತ ಅವಧಿಯಲ್ಲಿ ಇಡೀ ರಾಜ್ಯ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂಬ ನಿರೀಕ್ಷೆ ಇದೆ.
-ಸತೀಶ್‌, ರಾಮನಗರ.

ಕುಮಾರಸ್ವಾಮಿ ಅವರ ಆಡಳಿತದ ಬಗ್ಗೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟಿಕೊಂಡಿದ್ದೇನೆ. ಅಧಿಕಾರಿಗಳ ನಿರ್ಲಕ್ಷ ಕಾರಣದಿಂದಾಗಿ ಹಲವು ಸವಲತ್ತುಗಳು ಹಿರಿಯರ ಕೈ ಸೇರುತ್ತಿಲ್ಲ. ಇದನ್ನು ಸರಿಪಡಿಸುತ್ತಾರೆ ಎಂಬ ನಂಬಿಕೆಯಿದೆ.
-ಸುಲೋಚನಾ ಶೇಷಾದ್ರಿಪುರ ನಿವಾಸಿ.

ಕುಮಾರಣ್ಣ ಅವರು ಬಡವರ ಆಶಾಕಿರಣ ಎಂದು ಬಣ್ಣಿಸಿಕೊಂಡಿದ್ದಾರೆ. ಬಿಬಿಎಂಪಿ ಸೇರಿದಂತೆ ಹಲವು ಇಲಾಖೆಯಲ್ಲಿ  ಹೊರ ಗುತ್ತಿಗೆಯಲ್ಲಿ ದುಡಿಯುತ್ತಿದ್ದಾರೆ. ಅವರ ನೆರವಿಗೆ ಬರುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ.
-ವಿಜಯಮ್ಮ, ಮಲ್ಲೇಶ್ವರ ನಿವಾಸಿ. 

ನಾವು ಬಡವರು, ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಆದರೆ ನಮ್ಮ ಮಕ್ಕಳನ್ನು ಓದಿಸುವಂತಹ ಪರಿಸ್ಥಿತಿಯಲ್ಲಿ ನಾವು ಇಲ್ಲ. ಕುಮಾರ ಸ್ವಾಮಿ ಅವರು ಬಡ ಮಕ್ಕಳ ಓದಿನ ಸಹಾಯಕ್ಕೆ ಬರಲಿ.
-ನಾಗಮ್ಮ, ಸಂಪಿಗೆ ರಸ್ತೆ ನಿವಾಸಿ.

ನಾನು ಸರ್ಕಾರಿ ಇಲಾಖೆಯೊಂದರಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇನೆ. ಆದರೆ ನನಗೂ ಸೇರಿದಂತೆ ಹಲವರಿಗೆ ಉದ್ಯೋಗ ಭದ್ರತೆಯ ಭಯ ಕಾಡುತ್ತಿದೆ. ಇದನ್ನು ಕುಮಾರಸ್ವಾಮಿ ಅವರು ಸಿಎಂ ಆದ ಮೇಲೆ ಸರಿಪಡಿಸುತ್ತಾರೆ  ಎಂಬ ನಿರೀಕ್ಷೆಯಿದೆ.
-ಪದ್ಮಾವತಿ, ಶೇಷಾದ್ರಿ ಪುರದ ನಿವಾಸಿ. 

ಯುವಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ಭವಿಷ್ಯದ ಯೋಜನೆಗಳನ್ನು ರೂಪಿಸಬೇಕು. ಉದ್ಯೋಗಕ್ಕಾಗಿ ಅಲೆಯುವುದನ್ನು ತಪ್ಪಿಸಬೇಕು.
-ಸೈಫ‌ುದ್ದೀನ್‌, ಅತ್ತಿಬೆಲೆ ನಿವಾಸಿ.

ಕುಮಾರಸ್ವಾಮಿ ಅವರ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವರು ಎಂಬ ನಂಬಿಕೆ ಇದೆ.
-ಅಭಿಷೇಕ, ಸೇವಾನಗರದ ನಿವಾಸಿ.

ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗ್ಬೇಕು ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಅದು, ಈಗ ಮತ್ತೆ ಈಡೇರಿದೆ. ನಾಡಿನ ಒಳಿತಿಗಾಗಿ ಹೊಸ ಯೋಜನೆಗಳನ್ನು ತರುತ್ತಾರೆ ಎಂಬ ನಿರೀಕ್ಷೆ ಇದೆ.
-ಅವಿನಾಶ್‌.

ಟಾಪ್ ನ್ಯೂಸ್

1-wew-ewe

Gujarat; ಗೇಮಿಂಗ್‌ ಸೆಂಟರ್‌ ಬೆಂಕಿ ದುರಂತ ಸಾವಿನ ಸಂಖ್ಯೆ 33ಕ್ಕೆ : ಹೈಕೋರ್ಟ್‌ ವಿಚಾರಣೆ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

rahul gandhi

Adani ಗಾಗಿ ಕೆಲಸ ಮಾಡುವಂತೆ ಮೋದಿಗೆ ಬಹುಶಃ ದೇವರು ಹೇಳಿರಬೇಕು: ರಾಹುಲ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Rave Party: ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್‌

Arrested: 34.82 ಕೋಟಿ ರೂ.ನ ಬಿಟ್‌ಕಾಯಿನ್‌ ಕಳ್ಳತನ; ಆರೋಪಿಯ ಬಂಧನ

Arrested: 34.82 ಕೋಟಿ ರೂ.ನ ಬಿಟ್‌ಕಾಯಿನ್‌ ಕಳ್ಳತನ; ಆರೋಪಿಯ ಬಂಧನ

5

ಕೌಟುಂಬಿಕ ವಿಚಾರಕ್ಕೆ ಐಎಎಸ್‌ಅಧಿಕಾರಿ ಫೋನ್‌ ಕದ್ದಾಲಿಕೆ: ಮಾಜಿ ಐಪಿಎಸ್‌ ವಿರುದ್ಧ ಕೇಸ್‌

Bengaluru: ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ರೋಗಿ ಮೇಲೆ ಹಲ್ಲೆ?

Bengaluru: ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ರೋಗಿ ಮೇಲೆ ಹಲ್ಲೆ?

3

Snakes: ಹುಷಾರ್‌! ಮನೆಗೂ ಬರಬಹುದು ಹಾವುಗಳು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Maldives Muizzu

ಮುಕ್ತ ವ್ಯಾಪಾರಕ್ಕೆ ಭಾರತ- ಮಾಲ್ದೀವ್ಸ್‌ ಒಪ್ಪಂದ

1-wew-ewe

Gujarat; ಗೇಮಿಂಗ್‌ ಸೆಂಟರ್‌ ಬೆಂಕಿ ದುರಂತ ಸಾವಿನ ಸಂಖ್ಯೆ 33ಕ್ಕೆ : ಹೈಕೋರ್ಟ್‌ ವಿಚಾರಣೆ

1-qwu

Qatar ವಿಮಾನ ಆಗಸ‌ದಲ್ಲಿ ಓಲಾಡಿ 12 ಮಂದಿಗೆ ಗಾಯ

Vimana 2

Bird hit; ಲೇಹ್‌ಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ: ದಿಲ್ಲಿಗೆ ವಾಪಸ್‌

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.