ಕಾಯಿಪಲ್ಲೆಗಳ ಕಲರ್‌ ಕಲರ್‌ ತಿಂಡಿಗಳು


Team Udayavani, Dec 12, 2018, 6:00 AM IST

d-417.jpg

ಹಾಗಲಕಾಯಿ, ಬದನೆಕಾಯಿ, ಗೆಣಸಿನ ಸೊಪ್ಪು, ಎಲ್ಲರೂ ದಿನನಿತ್ಯ ಬಳಸುವ ತರಕಾರಿಗಳೇ. ಅವುಗಳನ್ನು ಬಳಸಿ ಮಾಡಬಹುದಾದ ಸ್ವಾದಿಷ್ಟಕರ ಅಡುಗೆಗಳ ರೆಸಿಪಿ ಇಲ್ಲಿವೆ. ಇನ್ನೇನು ಹಲಸಿನ ಕಾಯಿ ಸೀಸನ್‌ ಶುರುವಾಗುತ್ತದೆ. ಚಿಪ್ಸ್‌, ಹಪ್ಪಳದ ಜೊತೆಗೆ, ಹಲಸಿನ ಕಾಯಿಯಿಂದ ಬೋಂಡವನ್ನೂ ಮಾಡಬಹುದು. ಅದರ ವಿವರವೂ ಇಲ್ಲಿದೆ.

1.ಹಾಗಲಕಾಯಿ ಕಿಸ್ಮುರಿ
ಬೇಕಾಗುವ ಸಾಮಗ್ರಿ: ಹಾಗಲಕಾಯಿ-3, ಸಣ್ಣಗೆ ಹೆಚ್ಚಿದ ಈರುಳ್ಳಿ- 1 ಕಪ್‌, ತೆಂಗಿನತುರಿ- 1 ಕಪ್‌, ಕರಿದ ಬ್ಯಾಡಗಿ ಮೆಣಸು- 6, ಹುಣಸೆ ಹಣ್ಣು- ಸ್ವಲ್ಪ, ಎಣ್ಣೆ-ಕರಿಯಲು, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ (ಹೆಚ್ಚಿದ ಹೋಳುಗಳನ್ನು ಸ್ವಲ್ಪ ಹೊತ್ತು ಉಪ್ಪು ಬೆರೆಸಿದ ನೀರಿನಲ್ಲಿ ನೆನೆಸಿಟ್ಟರೆ ಕಹಿ ಕಡಿಮೆಯಾಗುತ್ತದೆ) ನಂತರ, ಕಾಯಿಸಿದ ಎಣ್ಣೆಯಲ್ಲಿ ಹೋಳುಗಳನ್ನು ಹಾಕಿ ನೀರಿನಂಶ ಹೋಗುವವರೆಗೆ, ಚೆನ್ನಾಗಿ ಹುರಿಯಿರಿ. ತೆಂಗಿನತುರಿ, ಮೆಣಸು, ಹುಣಸೆ ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ, ನೀರು ಹಾಕದೇ ತರಿ ತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಸಾಲೆ ಪುಡಿಗೆ ಉಪ್ಪು, ಹೆಚ್ಚಿದ ಈರುಳ್ಳಿ ಮತ್ತು ಕರಿದ ಹಾಗಲಕಾಯಿಯನ್ನು ಸೇರಿಸಿದರೆ ಹಾಗಲಕಾಯಿ ಕಿಸ್ಮುರಿ ಸವಿಯಲು ಸಿದ್ಧ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ 1 ವಾರವಾದರೂ ಇದು ಹಾಳಾಗುವುದಿಲ್ಲ. 

2. ಬದನೆ ಕಾಯಿ ರವಾ ಫ್ರೈ:
ಬೇಕಾಗುವ ಸಾಮಗ್ರಿ:
ಬದನೆ ಕಾಯಿ-5, ಮೆಣಸಿನ ಪುಡಿ- 3 ಚಮಚ, ಅಕ್ಕಿ ಹಿಟ್ಟು-6 ಚಮಚ, ಇಂಗು-ಸ್ವಲ್ಪ, ಸೂಜಿ ರವೆ-1ಕಪ್‌, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಬದನೆ ಕಾಯಿಯನ್ನು ಚೆನ್ನಾಗಿ ತೊಳೆದು, ತೆಳ್ಳನೆಯ ಬಿಲ್ಲೆಗಳಾಗಿ ಕತ್ತರಿಸಿ ಒಂದು ಪಾತ್ರೆಗೆ ಸ್ವಲ್ಪ ನೀರು, ಮೆಣಸಿನ ಪುಡಿ, ಅಕ್ಕಿ ಹಿಟ್ಟು, ಉಪ್ಪು ಸೇರಿಸಿ ಮಿಶ್ರಣವನ್ನು ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಕತ್ತರಿಸಿದ ಬಿಲ್ಲೆಗಳನ್ನು ಮಿಶ್ರಣದಲ್ಲಿ ಅದ್ದಿ, ಸೂಜಿ ರವೆಯಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕರಿಯಿರಿ.

3. ಹಲಸಿನಕಾಯಿ ಪೋಡಿ (ಬೋಂಡಾ):
   ಬೇಕಾಗುವ ಸಾಮಗ್ರಿ:
ಬಿಡಿಸಿದ ಹಲಸಿನ ಕಾಯಿ- 1 ಕಪ್‌, ಬೆಳ್ತಿಗೆ ಅಕ್ಕಿ (ದೋಸೆ ಅಕ್ಕಿ)- 1/4 ಕಪ್‌, ಕಡ್ಲೆ ಬೇಳೆ- 2 ಚಮಚ, ಕೊತ್ತಂಬರಿ ಬೀಜ- 1 ಚಮಚ, ಕರಿದ ಬ್ಯಾಡಗಿ ಮೆಣಸು- 5,ಅರಿಶಿಣ ಪುಡಿ -1/2 ಚಮಚ, ಹುಣಸೆ ಹಣ್ಣು-ಸ್ವಲ್ಪ, ಎಣ್ಣೆ-ಕರಿಯಲು, ಉಪ್ಪು- ರುಚಿಗೆ. 

ಮಾಡುವ ವಿಧಾನ: ಅಕ್ಕಿ ಹಾಗೂ ಕಡ್ಲೆ ಬೇಳೆಯನ್ನು ಅರ್ಧ ಗಂಟೆ ನೆನೆ ಹಾಕಿ. ಹಲಸಿನ ತೊಳೆಗಳನ್ನು ಬಿಡಿಸಿ, ತೆಳ್ಳನೆಯ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ. ಬಿಲ್ಲೆಗಳನ್ನು ಒಂದು ಪಾತ್ರೆಯಲ್ಲಿ ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಅಕ್ಕಿ, ಕಡ್ಲೆಬೇಳೆ, ಕೊತ್ತಂಬರಿ ಬೀಜ, ಮೆಣಸು, ಅರಿಶಿಣ ಪುಡಿ ಮತ್ತು ಹುಣಸೆ ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ತರಿ ತರಿಯಾಗಿ ಚೆನ್ನಾಗಿ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಬೇಯಿಸಿದ ಬಿಲ್ಲೆಗಳನ್ನು ನೀರಿನಿಂದ ಸೋಸಿ, ರುಬ್ಬಿಕೊಂಡ ಮಸಾಲೆಯನ್ನು ಪ್ರತಿಯೊಂದು ಬಿಲ್ಲೆಗೂ ಪ್ರತ್ಯೇಕವಾಗಿ ಸಾರಿಸಿ 1/2 ಗಂಟೆಗಳ ಕಾಲ ಇಡಿ. ನಂತರ ಕಾಯಿಸಿದ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕರಿಯಿರಿ.

4. ಗೆಣಸಿನ ಸೊಪ್ಪಿನ ಇಡ್ಲಿ:
ಬೇಕಾಗುವ ಸಾಮಗ್ರಿ:
ಕತ್ತರಿಸಿದ ಗೆಣಸಿನ ಸೊಪ್ಪು-1ಕಪ್‌, ದೋಸೆ ಅಕ್ಕಿ-1ಕಪ್‌, ತೆಂಗಿನತುರಿ-1ಕಪ್‌, ಕರಿದ ಬ್ಯಾಡಗಿ ಮೆಣಸು-7, ಇಂಗು-ಸ್ವಲ್ಪ, ಹುಣಸೆ ಹಣ್ಣು-ಸ್ವಲ್ಪ.

ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿ. ಗೆಣಸಿನ ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು, ಸೋಸಿ, ಅದಕ್ಕೆ ತೆಂಗಿನತುರಿ, ಮೆಣಸು, ಇಂಗು ಹಾಗೂ ಹುಣಸೆ ಹಣ್ಣು ಹಾಕಿ, ತರಿ ತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಸಾಲೆಗೆ, ಹೆಚ್ಚಿದ ಸೊಪ್ಪನ್ನು ಸೇರಿಸಿ, ಆ ಮಿಶ್ರಣವನ್ನು ಇಡ್ಲಿ ತಟ್ಟೆಯಲ್ಲಿ ಹಾಕಿ, ಇಪ್ಪತ್ತು ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. 

ಸುಷ್ಮಾ ಪೈ, ಬೆಂಗಳೂರು 

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.