ಕೋಚಿಮುಲ್: 67 ನಾಮಪತ್ರ ಸ್ವೀಕೃತ

54 ಮಂದಿಯಿಂದ 67 ಉಮೇದುವಾರಿಕೆ • ರಂಗೇರಿದ ಹಾಲು ಒಕ್ಕೂಟದ ಚುನಾವಣೆ

Team Udayavani, May 8, 2019, 3:08 PM IST

kolar-tdy-2…

ಕೋಲಾರ: ಕೋಚಿಮುಲ್(ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ) ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ರಂಗೇರಿದ್ದು, ಒಟ್ಟು 54 ಮಂದಿ ಅಭ್ಯರ್ಥಿಗಳಿಂದ 67 ನಾಮಪತ್ರ ಸಲ್ಲಿಕೆಯಾಗಿದ್ದು, ಮಂಗಳವಾರ ನಡೆದ ಪರಿಶೀಲನೆಯಲ್ಲಿ ಎಲ್ಲವೂ ಸ್ವೀಕೃತಗೊಂಡವು.

ನಾಮಪತ್ರ ಸಲ್ಲಿಸಲು ಕಡೆ ದಿನವಾದ ಸೋಮವಾರ 39 ಮಂದಿ 53 ಉಮೇದುವಾರಿಕೆ ಸಲ್ಲಿಕೆಯಾಗಿದ್ದು, ಮಂಗಳವಾರ ಚುನಾವಣಾಧಿ ಕಾರಿ ಸೋಮಶೇಖರ್‌ ನಾಮಪತ್ರಗಳ ಪರಿಶೀಲನೆ ನಡೆಸಿದ್ದು, ಒಟ್ಟು 54 ಮಂದಿ ಸಲ್ಲಿಸಿದ್ದ 67 ಉಮೇದುವಾರಿಕೆ ಸ್ವೀಕೃತಗೊಂಡಿವೆ.

ಕೊನೆ ದಿನ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸುವ ಕೊನೆ ದಿನವಾದ ಮಂಗಳವಾರ ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣವು ಕಣಕ್ಕಿಳಿ ಯುವವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿ ಯಾಯಿತು. ಬೆಳಗ್ಗೆಯಿಂದಲೆ ಚುನಾ ವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಕಚೇರಿ ಸಮೀಪ ಹಲವು ಮಂದಿ ಜಮಾಯಿಸಿದ್ದರು. ಕಣಕ್ಕಿಳಿಯುವ ಅಭ್ಯ ರ್ಥಿಗಳ ಬೆಂಬಲಿಗರು ಹಾಜರಾಗಿದ್ದರು. ಕೋಲಾರ ಮಾತ್ರವಲ್ಲದೆ ಅವಳಿ ಜಿಲ್ಲೆ ಚಿಕ್ಕಬಳ್ಳಾಪುರ ದಿಂದ ಆಗಮಿಸಿದ್ದ ಜನತೆ ಅಭ್ಯರ್ಥಿ ಹಾಗೂ ಅಭ್ಯರ್ಥಿಗೆ ಸಾಥ್‌ ನೀಡಿದ ನಾಯಕರಿಗೆ ಜೈಕಾರ ಹಾಕಿದರು.

ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಾಮಪತ್ರ ಸಲ್ಲಿಸುವವರೊಂದಿಗೆ ಕೆಲವರಿಗಷ್ಟೇ ಕಚೇರಿ ಆವರಣದೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಹೆಗಲ ಮೇಲೆ ಎತ್ತಿಕೊಂಡು ಜೈಕಾರ ಹಾಕಿದರಲ್ಲದೆ, ಮತ್ತೂಮ್ಮೆ ಕಣಕ್ಕಿಳಿದಿರುವ ಹಾಲಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಅವರು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು.

ಕೋಚಿಮುಲ್ ಅಧ್ಯಕ್ಷರಾದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರಲ್ಲದೆ, ಹಾಲಿ ನಿರ್ದೇಶಕರ ಪೈಕಿ ಬಹುತೇಕ ಮಂದಿ ಮತ್ತೂಮ್ಮೆ ಕಣಕ್ಕಿಳಿದಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಮಾತ್ರವಲ್ಲದೆ, ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಮಂಜುನಾಥ್‌, ಮಾಜಿ ಅಧ್ಯಕ್ಷ ಪಿ.ಎನ್‌. ಕೇಶವರೆಡ್ಡಿ, ಮುಖಂಡರಾದ ಕೇಶವರೆಡ್ಡಿ, ಯಲುವಹಳ್ಳಿ ರಮೇಶ್‌, ಚಿಕ್ಕಬಳ್ಳಾಪುರ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಸೇರಿದಂತೆ ಹಲವು ಮಂದಿ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ವೇಳೆ ಸಾಥ್‌ ನೀಡಿದರು.

ಉಪವಿಭಾಗಾಧಿಕಾರಿ ಕಚೇರಿ ಆವರಣದ ಹೊರಭಾಗದಲ್ಲಿ ನಾಮಪತ್ರ ಸಲ್ಲಿಸುವ ಹಾಗೂ ಅವರಿಗೆ ಸಾಥ್‌ ನೀಡಿದ ನಾಯಕರ ಬೆಂಬಲಿಗರು ಜಮಾಯಿಸಿದ್ದರು. ಜತೆಗೆ, ಕಾರುಗಳ ಕಾರುಬಾರು ಹೆಚ್ಚಿನ ಪ್ರಮಾಣದಲ್ಲಿತ್ತು. ಇದರಿಂದ ಸಂಚಾರ ಅಸ್ತವ್ಯವಸ್ಥಗೊಂಡಿತ್ತು. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಗಿಂತಲೂ ರಂಗೇರಿರುವ ಕೋಚಿಮುಲ್ ನಿರ್ದೇಶಕ ಸ್ಥಾನ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಕೆಲ ನಾಯಕರು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದು, ಒಕ್ಕೂಟದ ಅಕಾರ ಚುಕ್ಕಾಣಿ ಹಿಡಿಯುವ ಹಂಬಲ ಇದಕ್ಕೆ ಕಾರಣವಾಗಿದೆ.

ನಾಮಪತ್ರ ಸಲ್ಲಿಕೆಗೆ ಯಮಗಂಡಕಾಲ ಅಡ್ಡಿ: ಉಮೇದುವಾರಿಕೆ ಸಲ್ಲಿಸಲು ಒಳ್ಳೆ ಕಾಲಾಕ್ಕಾಗಿ ಕಾದರು ನಾಮಪತ್ರ ಸಲ್ಲಿಸುವ ಅಭ್ಯರ್ಥಿ, ನಾಯಕರಿಗೆ ಯಮಗಂಡಕಾಲವೂ ಕಾಡ ತೊಡಗಿತು. ಮಂಗಳವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಯಮಗಂಡಕಾಲವಿದೆ. ಬಳಿಕ ಒಳ್ಳೆ ಕಾಲ ಕೂಡಿಬರಲಿದೆ ಎಂದು ಕೆಲ ಅಭ್ಯರ್ಥಿಗಳು ಹಾಗೂ ಅವರಿಗೆ ಸಾಥ್‌ ನೀಡಿದ ನಾಯಕರು ಕಾದಿದ್ದ ದೃಶ್ಯ ಕಂಡುಬಂತು. ಮಧ್ಯಾಹ್ನ 12ರ ಬಳಿಕ ನಾಮಪತ್ರ ಸಲ್ಲಿಸಲು ಮುಗಿಬಿದ್ದರು.

ಟಾಪ್ ನ್ಯೂಸ್

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sadananda Gowda ಭಾಗ್ಯಗಳ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ

Sadananda Gowda ಭಾಗ್ಯಗಳ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

court

Equestrian: ಆಡಳಿತ ನಿರ್ವಹಣೆಗೆ ಸಮಿತಿ

pvs

Malaysia Master ಬ್ಯಾಡ್ಮಿಂಟನ್‌: ಸೆಮಿಫೈನಲ್‌ ಪ್ರವೇಶಿಸಿದ ಸಿಂಧು

Sunil Chhetri

FIFA ವಿಶ್ವಕಪ್‌ ಕ್ವಾಲಿಫೈಯರ್‌; ಭಾರತ ಫುಟ್‌ಬಾಲ್‌ ತಂಡ ಪ್ರಕಟ: ಛೇತ್ರಿಗೆ ವಿದಾಯ ಪಂದ್ಯ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.