ಮಾರು ಹೋಗದವರುಂಟೆ ಕೇಶವಿನ್ಯಾಸಕ್ಕೆ!


Team Udayavani, Jan 11, 2020, 6:16 AM IST

19

– ಚಿತ್ತ ಸೆಳೆಯುವ ಕ್ರಿಕೆಟಿಗರ ಚಿತ್ರವಿಚಿತ್ರ ಕೇಶವಿನ್ಯಾಸ
– ಅಭಿಮಾನಿಗಳಿಗೆ ಇವರೇ ಅನುಕರಿಸುವ ಆರಾಧ್ಯ ದೈವ

ಅತ್ಯಾಕರ್ಷಕ ಕೇಶವಿನ್ಯಾಸಕ್ಕೆ ಜಗತ್ತಲ್ಲಿ ಯಾರಾದರೂ ಮಾರು ಹೋಗದವರುಂಟೆ?…
ಬಾಲಿವುಡ್‌ ತಾರೆಯರಿಂದ ಹಿಡಿದು ಕ್ರಿಕೆಟಿಗರ ತನಕ ಎಲ್ಲರಿಗೂ ಹೊಸ ವಿನ್ಯಾಸಗಳನ್ನು ಮಾಡಿಸುವುದು, ಒಂದು ಫೋಟೊ ಕ್ಲಿಕ್ಕಿಸಿ ಸಂಭ್ರಮಿಸುವುದೆಂದರೆ ಇಷ್ಟ. ಕ್ರಿಕೆಟಿಗರು ಸ್ಫೋಟಕ ಬ್ಯಾಟಿಂಗ್‌ನಿಂದ ಜನರಿಗೆ ಹತ್ತಿರವಾಗುವುದು ಬೇರೆ, ತಮ್ಮ ಸ್ಟೈಲ್‌ನಿಂದಲೇ ಜನರಿಗೆ ಹತ್ತಿರವಾಗುವುದು ಇನ್ನೊಂದು ರೀತಿ. ಹೌದು, ವಿಶ್ವದ ಖ್ಯಾತ ಆಟಗಾರರು ಕೇಶವಿನ್ಯಾಸದಿಂದಲೂ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ.

ಉದಾಹರಣೆಗೆ ಶ್ರೀಲಂಕಾ ತಂಡದ ನಾಯಕ ಲಸಿತ್‌ ಮಾಲಿಂಗ, ಕ್ರೀಡಾಂಗಣದಲ್ಲಿ ಅವರು ಎಲ್ಲೇ ಫೀಲ್ಡಿಂಗ್‌ಗೆ ನಿಂತರೂ ಗೊತ್ತಾಗುತ್ತದೆ. ಹತ್ತಿಯ ಉಂಡೆಯಂತಿರುವ ವಿಶಿಷ್ಟವಾದ ತಲೆಕೂದಲಿನಿಂದಲೇ ಜನರು ಸುಲಭವಾಗಿ ಗುರುತಿಸುತ್ತಾರೆ. ತಾರೆಯರು ಮಾಡುವ ಇಂತಹ ವಿಚಿತ್ರ ಹೇರ್‌ಸ್ಟೈಲ್‌ಗ‌ಳನ್ನು ನೋಡಿ ವಿಶ್ವದಾದ್ಯಂತ ಇರುವ ಅಭಿಮಾನಿಗಳು ಕೂಡ ಅದನ್ನೇ ಅನುಕರಿಸುತ್ತಾರೆ.

ಸದ್ಯ 2020 ವರ್ಷದ ಕ್ಯಾಲೆಂಡರ್‌ನಲ್ಲಿ ಐಪಿಎಲ್‌ ಹಾಗೂ ವಿಶ್ವಕಪ್‌ ಕೂಟಗಳ ಮಹಾಕದನ ನಡೆಯುವುದಿದೆ. ಈ ಕೂಟದಲ್ಲಿ ಕ್ರೀಡಾಂಗಣದಲ್ಲಿ ಆಟಗಾರ ಹೊಡೆಯುವ ಸಿಕ್ಸರ್‌, ಬೌಂಡರಿ ಜತೆ ಅವರ ಚಿತ್ರವಿಚಿತ್ರವಾದ ಕೇಶವಿನ್ಯಾಸಗಳು ಕೂಡ ಸದ್ದು ಮಾಡಲಿದೆ. ಆಟಗಾರರ ಕೇಶವಿನ್ಯಾಸ ಹೇಗಿರುತ್ತದೆ? ಕೇಶವಿನ್ಯಾಸ ಮಾಡಿಸಿಕೊಳ್ಳಲು ಅತೀವ ಆಸಕ್ತಿ ಹೊಂದಿರುವ ಕ್ರಿಕೆಟಿಗರು ಯಾರ್ಯಾರು? ಎನ್ನುವ ಬಗೆಗಿನ ವಿವರ ಇಲ್ಲಿದೆ.

ಧೋನಿ ಉದ್ದ ಕೂದಲು ಕಟ್‌
ಎಂ.ಎಸ್‌. ಧೋನಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಮಯದಲ್ಲಿ ಉದ್ದಕೂದಲು ಬಿಟ್ಟಿದ್ದರು. ಲಕ್ಷಾಂತರ ಯುವಕರು ಧೋನಿ ಕೇಶವಿನ್ಯಾಸಕ್ಕೆ ಮಾರುಹೋಗಿದ್ದಂಟು. ಮುಂದೆ ಐಪಿಎಲ್‌ ಆರಂಭವಾಗುತ್ತಿದ್ದಂತೆ ಧೋನಿ ಉದ್ದಕೂದಲಿಗೆ ಕತ್ತರಿ ಬಿತ್ತು. ಮತ್ತೂಂದು ವಿಶೇಷ ರೀತಿಯಲ್ಲಿ ಕೇಶವಿನ್ಯಾಸ ಮಾಡಿಸಿಕೊಂಡು ಧೋನಿ ಗಮನ ಸೆಳೆದರು.

ಸ್ಟೈಲ್‌ಗೇ ಗುರು ನಮ್ಮ ಕೊಹ್ಲಿ
ಜಿಮ್‌ನಲ್ಲಿ ಗಂಟೆಗಟ್ಟಲೆ ವರ್ಕೌಟ್‌ ಮಾಡಿ ದೇಹವನ್ನು ಫಿಟ್‌ ಆಗಿ ನೋಡಿಕೊಳ್ಳುವ ಕೊಹ್ಲಿ ಕೂಡ ಕೇಶವಿನ್ಯಾಸ ಪ್ರಿಯ. ವಿನ್ಯಾಸವನ್ನು ಮಾಡಿಸಿಕೊಳ್ಳುವುದರಲ್ಲೂ ಕೊಹ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದು. ತಮ್ಮ ಅಚ್ಚುಮೆಚ್ಚಿನ ಕೇಶ ವಿನ್ಯಾಸಕಾರನ ಬಳಿ ಪಂದ್ಯಕ್ಕೂ ಮುನ್ನ ಹೋಗುವ ಕೊಹ್ಲಿ ತಮಗೆ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಿಸಿಕೊಳ್ಳುತ್ತಾರೆ.

ಜಡ್ಡು ಸಿಎಸ್‌ಕೆ ಲುಕ್‌
ಆಲ್‌ರೌಂಡರ್‌ ರವೀಂದ್ರ ಜಡೇಜ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಹೇರ್‌ಸ್ಟೈಲ್‌ಗ‌ಳನ್ನು ಬದಲಾಯಿಸುತ್ತಲೇ ಇರುತ್ತಾರೆ. ಐಪಿಎಲ್‌ನಲ್ಲಿ ಒಂದು ರೀತಿ ಇದ್ದರೆ ಏಕದಿನ ಅಥವಾ ಟಿ20 ಅಂತಾರಾಷ್ಟ್ರೀಯ ಕೂಟಕ್ಕೆ ಬಂದಾಗ ಬದಲಾದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿಎಸ್‌ಕೆ ಆಟಗಾರ 2020 ಐಪಿಎಲ್‌ನಲ್ಲಿ ಹೇಗೆ ಕಾಣಿಸಿಕೊಳ್ಳುವರು ಎನ್ನುವ ಬಗ್ಗೆ ಕುತೂಹಲವಿದೆ.

ಸ್ಟೈಲ್‌ಗೆ ಹಾರ್ದಿಕ್‌ ಸವಾಲು
ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಫೀಲ್ಡ್‌ನಲ್ಲಿ ಮಾಡುವಷ್ಟೇ ಸದ್ದನ್ನು ಅದರಿಂದ ಆಚಿಗೂ ಮಾಡುತ್ತಾರೆ. ಅದು ವಿವಿಧ ವಿನ್ಯಾಸದ ಹೇರ್‌ಸ್ಟೈಲ್‌ನಿಂದ. ಮಿಲಿಟರಿ ಕಟ್ಟಿಂಗ್‌ನಿಂದ ಹಿಡಿದು ಎಲ್ಲ ರೀತಿಯ ಕಟ್ಟಿಂಗ್‌ಗಳೂ ಹಾರ್ದಿಕ್‌ಗೆ ಚೆನ್ನಾಗಿ ಕಾಣಿಸುತ್ತದೆ. ಅಂತಹ ಅಪರೂಪದ ಆಟಗಾರ ಪಾಂಡ್ಯ ಎನ್ನುವುದು ಕೇಶವಿನ್ಯಾಸಕಾರ ಆಲಿಮ್‌ ಅಭಿಪ್ರಾಯ.

ಕೆ.ಎಲ್‌ ರಾಹುಲ್‌ಗ‌ೂ ಇಷ್ಟ ಕೇಶವಿನ್ಯಾಸ
ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಕೂಡ ಕೇಶ ವಿನ್ಯಾಸ ಮಾಡಿಸಿಕೊಳ್ಳುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಜತೆಗೆ ಮೈಮೆಲೆಲ್ಲ ಟ್ಯಾಟು ಹಾಕಿಸಿಕೊಳ್ಳುವುದೂ ಕೂಡ ಅವರಿಗೆ ಇಷ್ಟ.

ಸಣ್ಣ ಕೂದಲಿನ ಶಿಖರ್‌ ಧವನ್‌
ಶಿಖರ್‌ ಧವನ್‌ ಭಾರತ ತಂಡದ ನ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌. ಧವನ್‌ಗೆ ತಲೆಕೂದಲನ್ನು ಸಣ್ಣಗೆ ಕಟ್‌ ಮಾಡಿಸಿಕೊಳ್ಳುತ್ತಾರೆ. ಹಿಂದೆ ಸ್ವಲ್ಪ ಉದ್ದವಾಗಿ ಇರುವಂತೆ ತಲೆಕೂದಲು ಬಿಡುವುದೆಂದರೆ ಬಲು ಇಷ್ಟ. ಅದರಿಂದಲೇ ಜನಪ್ರಿಯರಾಗಿದ್ದರು.

ಕೇಶವಿನ್ಯಾಸ ಪ್ರಿಯ ವಿದೇಶಿ ಕ್ರಿಕೆಟಿಗರು
ಕೋಳಿ ಜುಟ್ಟು ರಸೆಲ್‌!
ವಿಂಡೀಸ್‌ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಕೆರಿಬಿಯನ್‌ ಪರ ಟಿ20, ಏಕದಿನ ಕ್ರಿಕೆಟ್‌ ಕೂಟಗಳಲ್ಲಿ ಮಿಂಚಿದ್ದಾರೆ. ಐಪಿಎಲ್‌ ಟಿ20ನಲ್ಲೂ ಕೆಕೆಆರ್‌ ಪರ ಬಿರುಸಿನ ಬ್ಯಾಟಿಂಗ್‌, ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ. ಕೋಳಿಯ ಜುಟ್ಟಿನಂತೆ ರಸೆಲ್‌ ಕೇಶವಿನ್ಯಾಸ ಕಾಣುತ್ತದೆ.

ಕ್ರಿಸ್‌ ಗೇಲ್‌ ವಿಚಿತ್ರ ವಿನ್ಯಾಸ
ಗೇಲ್‌ ವಿಂಡೀಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌. ಅತ್ಯಂತ ತಮಾಷೆಯ ವ್ಯಕ್ತಿತ್ವ. ಒಂದು ಸರಣಿಯಲ್ಲಿ ಉದ್ದ ಕೂದಲು ಬಿಟ್ಟಿದ್ದರೆ ಮತ್ತೂಂದು ಸರಣಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿರುವ ರೀತಿಯಲ್ಲಿ ಗೇಲ್‌ ಕಾಣಿಸುತ್ತಾರೆ. ಚಿಕ್ಕಮಕ್ಕಳಿಂದ ಹಿಡಿದು ಮುದುಕರವರೆಗಿನ ಗೇಲ್‌ ಮನ ಗೆದ್ದಿದ್ದಾರೆ.

ಹತ್ತಿಯುಂಡೆಯ ಲಸಿತ್‌ ಮಾಲಿಂಗ
ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆರಂಭದಿಂದಲೂ ಲಂಕಾದ ವೇಗದ ಬೌಲರ್‌ ಲಸಿತ್‌ ಮಾಲಿಂಗ ಸದ್ದು ಮಾಡಿದ್ದಾರೆ. ವಿಕೆಟ್‌ ಕೀಳುವುದರ ಜತೆಗೆ ಗುಂಗುರು ಕೂದಲಿನಿಂದ. ನೋಡುಗರಿಗೆ ಇದು ಹತ್ತಿಯ ಉಂಡೆಯಂತೆ ಕಾಣುತ್ತದೆ.

ಟಾಪ್ ನ್ಯೂಸ್

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.