ಬಸ್ಸಿನಲ್ಲಿದ್ದ ಎಲ್ಲರ ಜೀವ ಉಳಿಸಿದ

Team Udayavani, Feb 18, 2020, 4:56 AM IST

ben-1

ತಿಂಗಳಿಗೊಮ್ಮೆಯಾದರೂ ಕಾರಣ ನಿಮಿತ್ತ ನಾನು ಬೆಂಗಳೂರಿಗೆ ಹೋಗುವುದು ರೂಢಿ. ಅಂದು ಕೂಡ ನಮ್ಮೂರಿನಿಂದ ಮಹಾನಗರಿಗೆ ಹೊರಡಲು ಸ್ಲಿಪರ್‌ ಕೋಚ್‌ ಬಸ್‌ ಹತ್ತಿದ್ದೆ. ಸೀಟ್‌ ಬುಕ್‌ ಮಾಡುವಾಗ, ಬಸ್ಸಿನ ಸ್ಥಿತಿಗತಿ ತಿಳಿಯುವಂತಿದ್ದರೆ ಚೆನ್ನಾಗಿರುತ್ತದೆ ಅಂತ ಅನಿಸಿದ್ದೇ ಆವತ್ತು. ಈ ಮಾತು ಏಕೆ ಅನ್ನೋಕ್ಕಿಂತ ಮುಂದೆ ಏನಾಯ್ತು ಅಂತ ನೋಡಿ…ಆ ಬಸ್ಸೋ ಹಳೆಯದು. ಅದನ್ನು ಹತ್ತಿದ ಮೇಲೆಯೇ ನಮಗೆ ತಿಳಿದದ್ದು. ಅದರ ಬಿಡಿ ಬಾಗಗಳೆಲ್ಲ ಗಡಗಡ ಅಲುಗಾಡುತಿದ್ದವು. ಹೀಗಾಗಿ, ರಾತ್ರಿ ಪೂರಾ ನಿದ್ರೆ ಇಲ್ಲ. ನೂರು ಕಿ.ಮೀ ಹೋಗುವಷ್ಟರಲ್ಲಿ ಎರಡು ಮೂರು ಸಲ ಅಲ್ಲಲ್ಲಿ ಕೆಟ್ಟು ನಿಂತಿತು. ಕಂಡಕ್ಟರ್‌, ಡ್ರೈವರ್‌ ತಮಗೆ ಗೊತ್ತಿದ್ದ ಬುದ್ಧಿಮತ್ತೆಯಿಂದ ರಿಪೇರಿ ಮಾಡಿದರಾದರೂ ಬಸ್‌ ವೇಗವಾಗಿ ಏನೂ ಹೋಗುತ್ತಿರಲಿಲ್ಲ. ಹೀಗೆ ಹೋದರೆ, ಬೆಂಗಳೂರು ತಲುಪುವುದು ಯಾಕೋ ಕಷ್ಟವೆನಿಸತೊಡಗಿತು.

ಯಾವ ಮಟ್ಟಕ್ಕೆ ಎಂದರೆ, ಈ ಬಸ್ಸಲ್ಲಿ ಕೂತರೂ ಎತ್ತಿನ ಗಾಡಿಯ ಪ್ರಯಾಣದ ಅನುಭವವಾಗತೊಡಗಿತು. ಹಾಗೂ ಹೀಗೂ, ನಸುಕಿನ ಐದು ಗಂಟೆ ಹೊತ್ತಿಗೆ ಬಸ್‌ ತುಮಕೂರು ತಲುಪಿತು. ಈ ಸಮಯದಲ್ಲಿ ಪ್ರಯಾಣಿಕರೆಲ್ಲರೂ ಗಾಡ ನಿದ್ದೆಯಲ್ಲಿದ್ದರು. ಹಿಂದೆ ಮಲಗಿದ್ದ ಸಹ ಪ್ರಯಾಣಿನೊಬ್ಬನಿಗೆ ತಾನು ಮಲಗಿದ ಬೆಡ್ಡಿನ ಕೆಳಗೆ ಏನೋ ಬಿಸಿ ಬಿಸಿ ಆದಂತಾಯಿತು. ಅವನಿಗೆ ಏನನಿಸಿತೋ, ಏನು ಊಹಿಸಿದನೋ… ಎದ್ದವನೇ ದೊಡ್ಡ ದನಿಯಲ್ಲಿ, “ಎಲ್ಲರು ಇಳೀರಿ. ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಬೇಗ ಇಳೀರಿ’ ಎಂದು ಚೀರತೊಡಗಿದ. ನಿದ್ದೆಯಲ್ಲಿದ್ದ ನನಗೆ ಸಣ್ಣಗೆ ಯಾರೋ ಕೂಗಿದಂತೆ ಕೇಳುತ್ತಿತ್ತು. ಮರುಕ್ಷಣವೇ ಎಲ್ಲರೂ ದಡಬಡಿಸಿ ಎದ್ದರು. ಕೊನೆಗೆ ಎದ್ದೆನೊ…ಬಿದ್ದೆನೋ ಅಂತ ಕಿರುಚುತ್ತಾ ತಮ್ಮ ವಸ್ತುಗಳನ್ನು ಅಲ್ಲಿಯೆ ಬಿಟ್ಟು, ಕೆಳಗಿಳಿದು ಓಡಲು ಶುರುಮಾಡಿದರು.

ಎಲ್ಲರೂ ಇಳಿದು, ಒಂದಷ್ಟು ಮೀಟರ್‌ಗಳಷ್ಟು ದೂರದಲ್ಲಿ ನಡೆದು ಹೋಗುತ್ತಿರುವಾಗಲೇ ಬೆಂಕಿಯ ಜ್ವಾಲೆಯಲ್ಲಿ ಬಸ್ಸೇ ಉರಿಯತೊಡಗಿತು. ಕೆಂಪು ಕೆನ್ನಾಲಿಗೆಯಲ್ಲಿ ಆಕಾಶದೆತ್ತರಕ್ಕೆ ಹೊಗೆ ಸೂಸುತ್ತಿದ್ದ ಅವಘಡವನ್ನು ಕಣ್ಣ ಮುಂದೆಯೇ ಕಂಡವರು ಅವಾಕ್ಕಾದರು. ಆವತ್ತು ಅಪಾಯವನ್ನು ಗ್ರಹಿಸಿ, ಪದೇ ಪದೆ ಕೂಗು ಹಾಕಿ ಎಲ್ಲರನ್ನೂ ಎಬ್ಬಿಸಿ, ಬಸ್‌ನಲ್ಲಿದ್ದ ಎಲ್ಲರ ಜೀವ ಉಳಿಸಿದ ಆ ಅನಾಮಿಕ ಸಹ ಪ್ರಯಾಣಿಕನಿಗೆ ಶರಣು.

ಅಂಬಿ ಎಸ್‌ ಹೈಯ್ನಾಳ್‌,ಮುದನೂರ .ಕೆ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.