ಟ್ಯಾಟೂ ಮೇಕಿಂಗ್‌ ಅವಕಾಶಗಳ ಆಗರ


Team Udayavani, Feb 19, 2020, 5:15 AM IST

skin-18

ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು ತಮ್ಮ ಬೆಲೆಯನ್ನು ಕಳೆದುಕೊಂಡು ವಿದ್ಯಾರ್ಥಿಗಳು ಬಗೆ ಬಗೆಯ ಕೋರ್ಸ್‌ಗಳತ್ತ ಮುಖ ಮಾಡುತ್ತಿರುವ ಕಾಲ. ಅಂತಹ ಕೋಸ್‌ಗಳಲ್ಲಿ ಟ್ಯಾಟೂ ಕೋರ್ಸ್‌ ಒಂದು.

ಟ್ಯಾಟೂ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ತಮಗೆ ಇಷ್ಟವಿರುವ ಒಂದು ವಸ್ತು ಅಥವಾ ವಾಕ್ಯ ಅಥವಾ ಸುಂದರವಾರ ಚಿತ್ರಗಳನ್ನು ತಮ್ಮ ಮೈಯಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಎಲ್ಲರಿಗೂ ಇಷ್ಟ. ಹಿಂದೆ ಭಾರತ ದಲ್ಲಿ ಚಾಲ್ತಿಯಲ್ಲಿದ್ದ ಹಚ್ಚೆ ಹಾಕುವಿಕೆಯೇ ಇಂದು ಆಧುನಿಕತೆಯಲ್ಲಿ ಟ್ಯಾಟೂ ಎಂದು ಮಾರ್ಪಟ್ಟಿದೆ. ಮೈಗೆಲ್ಲ ಟ್ಯಾಟೂ ಹಾಕಿಸಿಕೊಂಡವರು ನಮ್ಮ ಕಣ್ಣಿಗೆ ಕಾಣಸಿಗುತ್ತಾರೆ. ಟ್ಯಾಟೂ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಇರುವವರಿಗೆ ಈ ಟ್ಯಾಟೂ ಕೋರ್ಸ್‌ ಒಂದು ಉತ್ತಮ ಶಿಕ್ಷಣವಾಗಿದೆ.

ಈ ಟ್ಯಾಟೂ ಕೋರ್ಸ್‌ ಅನ್ನುವುದು ಎಲ್ಲರಿಗೂ ಅಷ್ಟು ಸುಲಭದಲ್ಲಿ ಒಲಿದು ಬರುವುದಿಲ್ಲ. ಇದಕ್ಕೆ ಉತ್ತಮ ಚಿತ್ರ ಕಲಾಕಾರನಾಗಿದ್ದರೆ ಮಾತ್ರ ಸಾಧ್ಯವಿರುತ್ತದೆ. ಮುಂದುವರಿದ ಎಲ್ಲ ದೇಶಗಳಲ್ಲೂ ಈ ಟ್ಯಾಟೂಗೆ ಅತೀವ ಬೇಡಿಕೆ ಇದೆ. ಅಂದ ಹಾಗೆ ಈ ಟ್ಯಾಟೂ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಅದರ ಬಗ್ಗೆ ಇನ್ನಷ್ಟು ಕಲಿಯ ಬೇಕೆನ್ನುವವರಿಗೆ ಟ್ಯಾಟೂ ಕೋರ್ಸ್‌ಗಳ ಮಾಹಿತಿ ಇಲ್ಲಿದೆ.

ಕೋರ್ಸ್‌ನಲ್ಲಿ ಏನೇನಿದೆ?
ಇದರಲ್ಲಿ ಪ್ರಮುಖವಾಗಿ ಡ್ರಾಯಿಂಗ್‌ನ ಮೂಲ ಅಂಶಗಳು, ಟ್ಯಾಟೂ ಆರ್ಟ್‌ ಪರಿಚಯ, ಹಚ್ಚೆ ಪ್ರಕ್ರಿ ಯೆಯ ತಿಳವಳಿಕೆ, ಹಚ್ಚೆ ಉಪಕರಣಗಳ ಪರಿಚಯ, ವಿವಿಧ ರೀತಿಯ ಸೂಜಿಗಳನ್ನು ಅರ್ಥೈಸಿಕೊಳ್ಳುವುದು, ವಿವಿಧ ರೀತಿಯ ಹಚ್ಚೆ ಯಂತ್ರಗಳ ಪರಿಚಯ. ಸುರಕ್ಷತೆ, ನೈರ್ಮಲ್ಯ ಮಾನದಂಡಗಳು, ಉಪಕರಣಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ನಿರ್ವಹಿಸುವುದು, ಚರ್ಮದ ಪ್ರಕಾರಗಳು, ಸಾಂಕ್ರಾಮಿಕ ರೋಗಗಳು ಮತ್ತು ತಡೆಗಟ್ಟುವಿಕೆಗಳು ಹಚ್ಚೆ ತರಬೇತಿ ಪಠ್ಯಕ್ರಮದ ಭಾಗವಾಗಿದೆ.

ಈ ಟ್ಯಾಟೂ ಕೋರ್ಸ್‌ 18 ವರ್ಷ ಮೇಲ್ಪಟ್ಟವರಿಗೆ ಲಭ್ಯವಿದ್ದು. ಇದು 2 ತಿಂಗಳು, ನಾಲ್ಕು ತಿಂಗಳು ಮತ್ತು ಕೆೆಲವು ಕಡೆ ಒಂದು ವರ್ಷದವರೆಗೆ ಲಭ್ಯವಿದೆ. ಈ ಕೋರ್ಸ್‌ ಗುಣಮಟ್ಟದ ಆಧಾರದ ಮೇಲೆ ಫೀಸ್‌ಗಳು ಅಂದಾಜು 60,000 ರೂ.ಗಳಿಂದ ಆರಂಭಗೊಂಡು, 1. ಲಕ್ಷ ರೂ. ಗಳ ವರೆಗೆ ಇದೆ. ಈ ಟ್ಯಾಟೂ ತರಬೇತಿ ಯಶಸ್ವಿಯಾಗಿ ಮುಗಿದ ಅನಂತರ ಹಚ್ಚೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸ್ವತಃ ಟ್ಯಾಟೂ ಶಾಪ್‌ ಹಾಕಿಕೊಳ್ಳುವುದಾದರೆ ಈ ಪ್ರಮಾಣ ಪತ್ರ ಅತೀ ಮುಖ್ಯವಾಗಿದೆ.

ಸಂಭಾವನೆಗೆ ಬರವಿಲ್ಲ
ವಿದೇಶಗಳಲ್ಲಿ ಹೆಚ್ಚಿನ ಹಚ್ಚೆ ಕಲಾವಿದರು ಸುಮಾರು 30,000 ಮತ್ತು 50,000 ಡಾಲರ್‌ ಗಳವರೆಗೆ ಗಳಿಸುತ್ತಾರೆ. ಸ್ವತಃ ಉದ್ಯಮ ಮಾಡುವುದಾದರೆ ಇದೊಂದು ಲಾಭದಾಯಕವೂ ಹೌದು. ನಿಮ್ಮ ಟ್ಯಾಟೂ ಗುಣಮಟ್ಟದ ಮೇಲೆ ನಿಮ್ಮ ಸಂಪಾದನೆಯಿರುತ್ತದೆ. ನಗರಗಳಲ್ಲಿ ಈ ಉದ್ಯಮ ಆರಂಭಿಸುವುದಾದರೆ ಅತೀ ಹೆಚ್ಚಿನ ಲಾಭ ಗಳಿಸಬಹುದು. ವಿದೇಶದಲ್ಲೂ ಹೆಚ್ಚಿನ ಬೇಡಿಕೆಯಿದೆ. ಕೆಲವೊಂದು ಟ್ಯಾಟೂ ಕೋರ್ಸ್‌ ಸೆಂಟರ್‌ಗಳು ಅವರೇ ಕೆಲಸವನ್ನು ತೆಗೆದುಕೊಡುತ್ತಾರೆ. ಫ್ಯಾಷನ್‌ ಲೋಕದ ಮಾಡೆಲಿಂಗ್‌ ಕ್ಷೇತ್ರಗಳಲ್ಲಿ ಈ ಟ್ಯಾಟೂ ಕಲಾವಿದರಿಗೆ ಉನ್ನತ ಸ್ಥಾನಮಾನವಿದೆ.

ಟಾಪ್ ನ್ಯೂಸ್

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

DKSHI (2)

Pen drive case; ಮುಗಿಸೋದೇ ಕುಮಾರಸ್ವಾಮಿ ಕೆಲಸ: ಡಿ.ಕೆ.ಶಿವಕುಮಾರ್ ಆಕ್ರೋಶ

2–sscl-result

SSLC Result: ಮೇ.9 ರಂದು ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

1-qweqweqw

Charmadi Ghat; ಎರಡನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷ

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.