“ಸ್ಯಾಮ್‌’ ಸಂಗ; ತೃಪ್ತಿಕರ ರ್ಯಾಮ್‌ ಅಂಡ್‌ ರೋಮ್‌!

Team Udayavani, Mar 9, 2020, 5:41 AM IST

samsung-mobile

ಸ್ಯಾಮ್‌ಸಂಗ್‌ ಮಿಡ್ಲ್ ರೇಂಜ್‌ನಲ್ಲಿ ತನ್ನ ಹೊಸ ಮೊಬೈಲ್‌ ಬಿಡುಗಡೆ ಮಾಡಿದೆ. ಭರ್ಜರಿ ಬ್ಯಾಟರಿ, ಫಾಸ್ಟ್‌ ಚಾರ್ಜಿಂಗ್‌, ಉತ್ತಮ ಕ್ಯಾಮರಾ, ಅಮೋಲೆಡ್‌ ಪರದೆಯ ವೀಕ್ಷಣೆ, ತೃಪ್ತಿಕರ ರ್ಯಾಮ್‌ ಮತ್ತು ರೋಮ್‌ ಅನ್ನು ಈ ಹೊಸ ಮೊಬೈಲ್‌ ಹೊಂದಿದೆ.

ಕೆಲವು ಮೊಬೈಲ್‌ ಫೋನ್‌ ಕೊಳ್ಳುವಾಗ ಗ್ರಾಹಕರು ಈ ಕಂಪೆನಿ ಒಳ್ಳೆಯದೇ? ಗುಣಮಟ್ಟ ಚೆನ್ನಾಗಿದೆಯೇ? ಅಯ್ಯೋ! ಅದರ ಸಹವಾಸ ಬೇಡಪ್ಪ ಎಂದೆಲ್ಲಾ ತಕರಾರು ತೆಗೆಯುತ್ತಾರೆ. ಆದರೆ ಸ್ಯಾಮ್‌ಸಂಗ್‌ ಹೆಸರು ಹೇಳಿದರೆ ಸಾಮಾನ್ಯ ಗ್ರಾಹಕ ಅನುಮಾನ ವ್ಯಕ್ತಪಡಿಸುವುದಿಲ್ಲ. ಹಲವಾರು ಮಂದಿ, ಫೀಚರ್‌ ಕಡಿಮೆ ಇದ್ದರೂ ಪರವಾಗಿಲ್ಲ ನನಗೆ ಸ್ಯಾಮ್‌ಸಂಗ್‌ ಆದರೆ ಓಕೆ ಎನ್ನುತ್ತಾರೆ. ಕೊರಿಯಾದ ಸ್ಯಾಮ್‌ಸಂಗ್‌ ಹೀಗೆ ತನ್ನ ಹೆಸರು ಉಳಿಸಿಕೊಂಡು ಬಂದಿದೆ.

ಚೀನಾದ ಕೆಲವು ಕಂಪೆನಿಗಳ ಪೈಪೋಟಿಯಿಂದ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸ್ವಲ್ಪ ಕಳೆಗುಂದಿದ್ದ ಸ್ಯಾಮ್‌ಸಂಗ್‌ ಎಚ್ಚೆತ್ತುಕೊಂಡು ತಾನು ಸಹ ಸ್ಪರ್ಧಾತ್ಮಕ ದರದಲ್ಲಿ ಹೆಚ್ಚು ಫೀಚರ್ ಇರುವ ಮೊಬೈಲ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಮಿಡ್ಲ್ ರೇಂಜಿನಲ್ಲಿ ಅದು ಬಿಡುಗಡೆ ಮಾಡಿರುವ ಎಂ ಸರಣಿಯ ಮೊಬೈಲ್‌ಗ‌ಳು ಯಶಸ್ವಿಯಾಗಿವೆ. ಈಗ ಕಳೆದ ಗುರುವಾರವಷ್ಟೇ ತನ್ನ ಎಂ ಸರಣಿಯ ಇನ್ನೊಂದು ಫೋನನ್ನು ಬಿಡುಗಡೆ ಮಾಡಿದೆ. ಅದುವೇ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ31.

ರ್ಯಾಮ್‌, ರೋಮ್‌ ಮತ್ತು ರೂ.: ಈ ಫೋನು ಎರಡು ಆವೃತ್ತಿಯಲ್ಲಿ ದೊರಕುತ್ತದೆ. 6 ಜಿಬಿ ರ್ಯಾಮ್‌ ಗೆ 64 ಜಿಬಿ ಆಂತರಿಕ ಸಂಗ್ರಹ (ದರ:15 ಸಾವಿರ ರೂ.), ಅದೇ 6 ಜಿಬಿ ರ್ಯಾಮ್‌ಗೆ 128 ಜಿಬಿ ಆಂತರಿಕ ಸಂಗ್ರಹ (ದರ: 16 ಸಾವಿರ ರೂ.) ಎರಡನೇ ಆವೃತ್ತಿಯಲ್ಲಿ ಒಂದು ಸಾವಿರ ಹೆಚ್ಚು ನೀಡಿದರೆ ಆಂತರಿಕ ಸಂಗ್ರಹ ದ್ವಿಗುಣ ದೊರಕುತ್ತದೆ. ಯಾವುದೇ ಗೊಂದಲವಿಲ್ಲದೇ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕಂಪೆನಿ ನೀಡಿದೆ.

ಕ್ಯಾಮರಾ:
ಹಿಂಬದಿ ಕ್ಯಾಮರಾ ನಾಲ್ಕು ಲೆನ್ಸ್‌ಗಳನ್ನು ಹೊಂದಿದೆ. 64 ಮೆಗಾ ಪಿಕ್ಸಲ್‌ ಮುಖ್ಯ ಕ್ಯಾಮರಾ. 8 ಮೆ.ಪಿ + 5 ಮೆಪಿ. +5 ಮೆ.ಪಿ. ಹೆಚ್ಚುವರಿ ಲೆನ್ಸ್‌ಗಳಿವೆ. ಮುಂಬದಿ ಸೆಲ್ಫಿà ಕ್ಯಾಮರಾ 32 ಮೆಗಾಪಿಕ್ಸಲ್‌ಗ‌ಳನ್ನು ಹೊಂದಿದೆ.

ಪರದೆ:
6.4 ಇಂಚಿನ ಅಮೋಲೆಡ್‌ ಪರದೆಯನ್ನು ಈ ಮೊಬೈಲ್‌ ಹೊಂದಿದೆ. ಎಫ್ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ ಇದ್ದು, ಪರದೆಯ ಮಧ್ಯದಲ್ಲಿ ಸೆಲ್ಫಿà ಕ್ಯಾಮರಾಕ್ಕಾಗಿ ನೀರಿನ ಹನಿ ಹೋಲುವ ಜಾಗವನ್ನು ಖಾಲಿ ಬಿಡಲಾಗಿದೆ. ಪರದೆಗೆ ಗೊರಿಲ್ಲಾ ಗಾಜಿನ ರಕ್ಷಣೆಯನ್ನು ನೀಡಿದೆ.

ಪ್ರೊಸೆಸರ್‌:
ಈ ಮೊಬೈಲ್‌ಗೆ ಸ್ಯಾಮ್‌ಸಂಗ್‌ನ ಸ್ವಂತ ತಯಾರಿಕೆಯಾದ ಎಕ್ಸಿನಾಸ್‌ 9611 ಎಂಟು ಕೋರ್‌ಗಳ ಪ್ರೊಸೆಸರ್‌ ಅಳವಡಿಸಲಾಗಿದೆ. ಅಂಡ್ರಾಯ್ಡ 10 ಕಾರ್ಯಾಚರಣೆ ವ್ಯವಸ್ಥೆ ಒಳಗೊಂಡಿದೆ.

ಭರ್ಜರಿ ಬ್ಯಾಟರಿ:
ಒಂದು ಮೊಬೈಲ್‌ನಲ್ಲಿ 4 ಸಾವಿರ ಎಂಎಎಚ್‌ ಬ್ಯಾಟರಿ ಇದ್ದರೆ ಗ್ರಾಹಕನಿಗೆ ಸ್ವಲ್ಪ ಸಮಾಧಾನ. ಸ್ಯಾಮ್‌ಸಂಗ್‌ ಎಂ.31 ಮೊಬೈಲು 6 ಸಾವಿರ ಎಂಎಎಚ್‌ ಬ್ಯಾಟರಿ ಹೊಂದಿದೆ!ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಅನ್ನು ಹೊಂದಿದ್ದು, ಇದಕ್ಕೆ 15 ವ್ಯಾಟ್ಸ್‌ನ ವೇಗದ ಚಾರ್ಜರ್‌ ನೀಡಲಾಗಿದೆ. 6 ಸಾವಿರ ಎಂಎಎಚ್‌ ಬ್ಯಾಟರಿ ಕೊಟ್ಟು ಅದಕ್ಕೆ ವೇಗದ ಚಾರ್ಜಿಂಗ್‌ ಸೌಲಭ್ಯ ನೀಡದಿದ್ದರೆ, ಗ್ರಾಹಕ ರಾತ್ರಿಯಿಡೀ ಮೊಬೈಲ್‌ ಚಾರ್ಜ್‌ ಮಾಡಬೇಕಾಗುತ್ತದೆ! ಸದ್ಯ! ಸ್ಯಾಮ್‌ಸಂಗ್‌ ವೇಗದ ಚಾರ್ಜರ್‌ ನೀಡಿದೆ!

ಮೊಬೈಲ್‌ನ ಹಿಂಬದಿ ಬೆರಳಚ್ಚು ಸ್ಕ್ಯಾನರ್‌ ನೀಡಲಾಗಿದೆ. ಈ ಮೊಬೈಲ್‌ ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ. ಅಮೆಜಾನ್‌.ಇನ್‌ ಮತ್ತು ಸ್ಯಾಮ್‌ಸಂಗ್‌ ಸ್ಟೋರ್‌ಗಳಲ್ಲಿ ಲಭ್ಯ. ನೀಲಿ ಬಣ್ಣದ ಸ್ಯಾಮ್‌ಸಂಗ್‌ ಮೊಬೈಲನ್ನು ನೀಲ ಮೇಘ ಸ್ಯಾಮ ಎನ್ನಬಹುದೇ?!!

ಮನೆ ಬಾಗಿಲಿಗೇ ಮೊಬೈಲ್‌ ರಿಪೇರಿ!
ಒನ್‌ ಪ್ಲಸ್‌ ಒಂದು ಹೆಜ್ಜೆ..
ಗ್ರಾಹಕರು ಮೊಬೈಲ್‌ ಕೊಳ್ಳುವಾಗ ಮುಖ್ಯವಾಗಿ ಗಮನಿಸಬೇಕಾದ್ದು ತಾನು ಕೊಳ್ಳುವ ಮೊಬೈಲ್‌ ಕಂಪೆನಿಯ ಸರ್ವೀಸ್‌ ಸೆಂಟರ್‌ (ರಿಪೇರಿ ಸೇವಾ ಕೇಂದ್ರ) ತನಗೆ ಹತ್ತಿರವಾದ ಊರಿನಲ್ಲಿದೆಯೇ? ಎಂದು. ಇಂದು ಅನೇಕ ಕಂಪೆನಿಗಳು ಜಿಲ್ಲಾ ಕೇಂದ್ರಗಳಲ್ಲಿ ಸರ್ವೀಸ್‌ ಸೆಂಟರ್‌ ಹೊಂದಿವೆ. ಪ್ರೀಮಿಯಂ ಮೊಬೈಲ್‌ ಮಾರಾಟದಲ್ಲಿ ಭಾರತದಲ್ಲಿ ನಂ.1 ಆಗಿರುವ ಒನ್‌ಪ್ಲಸ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಹೋಗಿ ರಿಪೇರಿ ಮಾಡುವ ಸೇವೆಯನ್ನು ಘೋಷಿಸಿದೆ!

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಒನ್‌ಪ್ಲಸ್‌ ಕೇರ್‌ ಆ್ಯಪ್‌ ಅನ್ನು ಗ್ರಾಹಕರು ಡೌನ್‌ಲೋಡ್‌ ಮಾಡಿಕೊಂಡು ಈ ಸೇವೆಯನ್ನು ಪಡೆಯಬಹುದಾಗಿದೆ. ಅದರಲ್ಲಿ ಗ್ರಾಹಕರು ತಮ್ಮ ಡಿವೈಸ್‌ಗಳನ್ನು ರಿಪೇರಿ ಮಾಡಲು ಇಂಜಿನಿಯರ್‌ ಭೇಟಿ ನೀಡಬೇಕಾದ ಸಮಯವನ್ನು ನಮೂದು ಮಾಡುವ ಅವಕಾಶವಿದೆ. ಇದಲ್ಲದೇ, ಒನ್‌ಪ್ಲಸ್‌ ತನ್ನ ಗ್ರಾಹಕರಿಗೆ ಉಚಿತ ಪಿಕ್‌-ಅಪ್‌ ಮತ್ತು ಡ್ರಾಪ್‌-ಆಫ್ ಸೇವೆಯನ್ನೂ ನೀಡುತ್ತಿದೆ.

-ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.